ಕರಾವಳಿ

ತುಳುನಾಡು ಪಂಚಾಂಗ ಕ್ಯಾಲೆಂಡರ್ 2024 ಬಿಡುಗಡೆ

ಸಮಗ್ರ ನ್ಯೂಸ್: ಗ್ಲೋಬಲ್ ಮೀಡಿಯಾದ 2024ರ ತುಳುನಾಡು ಪಂಚಾಂಗ ಕ್ಯಾಲೆಂಡರ್‌ನ್ನು ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದ ಶ್ರೀ ಡಾ. ಸುದೇಶ ಶಾಸ್ತ್ರಿ ಅವರು ಬಿಡುಗಡೆ ಮಾಡಿದರು. ಕರ್ನಾಟಕ ರಾಜ್ಯದ ತುಳುನಾಡು ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಪ್ರಮುಖ ಯಾತ್ರಾ ಕೇಂದ್ರವಾಗಿದ್ದು ಅನೇಕ ಇತಿಹಾಸ ಪ್ರಸಿದ್ಧ ಪೌರಾಣಿಕ ಶ್ರದ್ಧಾಕೇಂದ್ರಗಳಾಗಿವೆ. 2024ರ ಕ್ಯಾಲೆಂಡರನ್ನು ಶಿವನ ದೇವಸ್ಥಾನಗಳಾದಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕರ್ಜೆ, ಉಡುಪಿ, ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನ, ಪಾಣೆಮಂಗಳೂರು, ಬಂಟ್ವಾಳ, ಶ್ರೀ

ತುಳುನಾಡು ಪಂಚಾಂಗ ಕ್ಯಾಲೆಂಡರ್ 2024 ಬಿಡುಗಡೆ Read More »

ಸುಳ್ಯ: ಸಪ್ತಪದಿ ತುಳಿದ ಮಜಾಭಾರತ ಖ್ಯಾತಿಯ ಪ್ರಿಯಾಂಕಾ ಕಾಮತ್

ಸಮಗ್ರ ನ್ಯೂಸ್: ಮಜಾಭಾರತ’ ರಿಯಾಲಿಟಿ ಶೋ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದ ಪ್ರಿಯಾಂಕಾ ಕಾಮತ್ ಸಿಹಿ ಸುದ್ದಿಯನ್ನು ನೀಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಅಮಿತ್ ನಾಯಕ್ ಅವರೊಂದಿಗೆ ಪ್ರಿಯಾಂಕಾ ಕಾಮತ್ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಪ್ರಿಯಾಂಕಾ ಹಾಗೂ ಅಮಿತ್ ಅವರ ವಿವಾಹ ಅದ್ಧೂರಿಯಾಗಿ ನಡೆದಿದೆ. ಮದುವೆಯ ಫೋಟೋಗಳನ್ನು ಪ್ರಿಯಾಂಕಾ ಕಾಮತ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಕಾಮತ್ ಅವರ ಮದುವೆಯ ಫೋಟೋವನ್ನು ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದು ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಸುಳ್ಯದವರಾದ ಪ್ರಿಯಾಂಕ ಇಲ್ಲೇ ಹಸೆಮಣೆ ಏರಿದರು.

ಸುಳ್ಯ: ಸಪ್ತಪದಿ ತುಳಿದ ಮಜಾಭಾರತ ಖ್ಯಾತಿಯ ಪ್ರಿಯಾಂಕಾ ಕಾಮತ್ Read More »

ಮಂಗಳೂರು: ಇಬ್ಬರು ದನಗಳ್ಳರ ಸೆರೆ

ಸಮಗ್ರ ನ್ಯೂಸ್: ಕಾರುಗಳಲ್ಲಿ ತೆರಳಿ ಮಂಗಳೂರಿನ ವಿವಿಧ ಕಡೆಗಳಿಂದ ದನಗಳನ್ನು ಕಳವು ಮಾಡುತ್ತಿದ್ದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಮೂಡುಬಿದಿರೆ ಪಡುಕೊಣಾಜೆ ಗ್ರಾಮದ ನೀರಳಿಕೆ ಹೌಸ್‌ನ ಇಮ್ರಾನ್‌ ಇಬ್ರಾಹಿಂ (24) ಮತ್ತು ಕಲ್ಲಬೆಟ್ಟು ಗ್ರಾಮದ ಗಂಟಲಕಟ್ಟೆ ಮಸೀದಿಯ ಬಳಿಯ ನಾಸಿರ್‌ ಯಾನೆ ನಾಚಿ (26) ಅವರನ್ನು ಬೆಳಗಿನ ಜಾವ ಸುಮಾರು 3.30ಕ್ಕೆ ಬಜಪೆ ಎಸ್‌ಐ ಕುಮಾರೇಶನ್‌ ನೇತೃತ್ವದ ತಂಡ ತೆಂಕ ಎಡಪದವು ಗ್ರಾಮದ ದಡ್ಡಿ ಚೆಕ್‌ಪೋಸ್ಟ್‌ನಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ದನ ಕಳವು ಮಾಡಲು ಬಳಸಿರುವ

ಮಂಗಳೂರು: ಇಬ್ಬರು ದನಗಳ್ಳರ ಸೆರೆ Read More »

ಮಂಗಳೂರು ಏರ್ಪೋರ್ಟ್ ನಲ್ಲಿ ಬಾಂಬ್ ಬೆದರಿಕೆ ಸಂದೇಶ…! FIR ದಾಖಲು

ಸಮಗ್ರ ನ್ಯೂಸ್: ಡಿಸೆಂಬರ್ 26ರಂದು ಮಂಗಳೂರು ಏರ್ಪೋರ್ಟ್ ನಲ್ಲಿ ಬಾಂಬ್ ಇಟ್ಟಿರುವುದಾಗಿ [email protected] ಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿತ್ತು. ಈ ಸಂಬಂಧ ಅದಾನಿ ಆಡಳಿತದ ಮಂಗಳೂರು ಏರ್ಪೋರ್ಟ್ ಸಂಸ್ಥೆ ಬಜಪೆ ಠಾಣೆಗೆ ದೂರು ನೀಡಿತ್ತು. ಇದೀಗ ಹುಸಿ ಬಾಂಬ್ ಇ-ಮೇಲ್​ ಸಂದೇಶಕ್ಕೆ ಸಂಬಂಧಿಸಿದಂತೆ ಎಫ್​ಐಆರ್ ದಾಖಲಾಗಿದೆ, ನ್ಯಾಯಾಲಯದ ಅನುಮತಿ ಪಡೆದುಕೊಂಡು ಐಪಿಸಿ 507 ಅಡಿ‌ ಪ್ರಕರಣ ದಾಖಲಾಗಿದೆ. ‘FUNING’ ಎಂಬ ಉಗ್ರಗಾಮಿ ಸಂಘಟನೆ ಎಂದು ಘೋಷಿಸಿಕೊಂಡು ಬೆದರಿಕೆ ಹಾಕಲಾಗಿತ್ತು. ಆದ್ರೆ, ಮಂಗಳೂರು ಏರ್​​ಪೋರ್ಟ್ ಆಡಳಿತ ಮಂಡಳಿ

ಮಂಗಳೂರು ಏರ್ಪೋರ್ಟ್ ನಲ್ಲಿ ಬಾಂಬ್ ಬೆದರಿಕೆ ಸಂದೇಶ…! FIR ದಾಖಲು Read More »

ಪುತ್ತೂರು: ಶ್ರೀ ವೆಂಕಟರಮಣ ಸೊಸೈಟಿಯ ‌ಉಪ್ಪಿನಂಗಡಿ‌ ಶಾಖೆ ಸ್ಥಳಾಂತರಗೊಂಡು ಶುಭಾರಂಭ

ಸಮಗ್ರ ನ್ಯೂಸ್: ಸುಳ್ಯದಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ರಾಜ್ಯಾದ್ಯಂತ ಶಾಖೆಗಳನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ವತಿಯಿಂದ ಉಪ್ಪಿನಂಗಡಿಯ ಸರ್ವೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ 15ನೇ‌ ಉಪ್ಪಿನಂಗಡಿ ಶಾಖೆಯು ಗುರುವಾಯನಕೆರೆ ರಸ್ತೆಯ ಎಚ್.ಎಂ ಆಡಿಟೋರಿಯಂ ಬಳಿಯಿರುವ ಬಿ.ಎಂ ಆರ್ಕೇಡ್ ಗೆ ಸ್ಥಳಾಂತರಗೊಂಡು ಡಿ.28ರಂದು ಶುಭಾರಂಭಗೊಂಡಿತು. ಕೆಎಸ್ಆರ್ ಟಿಸಿ ನಿವೃತ್ತ ಸಂಚಾರ ನಿಯಂತ್ರಕ ಬೆಳ್ಯಪ್ಪ ಗೌಡ ಕಣಿಯ ದೀಪ ಬೆಳಗಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪಿ.ಸಿ ಜಯರಾಮ ವಹಿಸಿದ್ದರು. ಅತಿಥಿಗಳಾಗಿ

ಪುತ್ತೂರು: ಶ್ರೀ ವೆಂಕಟರಮಣ ಸೊಸೈಟಿಯ ‌ಉಪ್ಪಿನಂಗಡಿ‌ ಶಾಖೆ ಸ್ಥಳಾಂತರಗೊಂಡು ಶುಭಾರಂಭ Read More »

ಕಡಬ: ಭಾರತೀಯ ರಾಷ್ಟ್ರಿಯ ಕಾಂಗ್ರೆಸ್‌ ನ 139 ನೇ ಸಂಸ್ಥಾಪನಾ ದಿನಾಚರಣೆ

ಸಮಗ್ರ ನ್ಯೂಸ್: ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಭಾರತೀಯ ರಾಷ್ಟ್ರಿಯ ಕಾಂಗ್ರೆಸ್‌ ನ 139 ನೇ ಸಂಸ್ಥಾಪನಾ ದಿನಾಚರಣೆಯನ್ನು ಕಡಬ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಡಿ.28 ರಂದು ಆಚರಿಸಲಾಯಿತು. ಈ ಸಭೆಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಯವರು ಕಾಂಗ್ರೆಸ್ ನ ತತ್ವ ಸಿದ್ಧಾಂತ ಹಾಗೂ ದೇಶ ಕಟ್ಟುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವನ್ನು ತಿಳಿಸಿದರು. ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಗಳಾದ ಭೂಮಿಕಾ ಸತೀಶ್ ರವರು ಸ್ವಾಗತಿಸಿ ವಂದನೆಗಳನ್ನು ಸಲ್ಲಿಸಿದರು. ಸಭೆಯಲ್ಲಿ ಬ್ಲಾಕ್

ಕಡಬ: ಭಾರತೀಯ ರಾಷ್ಟ್ರಿಯ ಕಾಂಗ್ರೆಸ್‌ ನ 139 ನೇ ಸಂಸ್ಥಾಪನಾ ದಿನಾಚರಣೆ Read More »

ಕಾಣಿಯೂರು: ನೇಣು ಬಿಗಿದ ಸ್ಥಿತಿಯಲ್ಲಿ ರಿಕ್ಷಾ ಚಾಲಕನ ಮೃತ ದೇಹ ಪತ್ತೆ

ಸಮಗ್ರ ನ್ಯೂಸ್:ಕಾಣಿಯೂರಿನ ಎಲುವೆ ಎಂಬಲ್ಲಿ ರಿಕ್ಷಾ ಚಾಲಕರೋರ್ವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಣಿಯೂರಿನ ಬೆದ್ರಾಜೆ ನಿವಾಸಿ ವಸಂತ (42) ಎಂಬವರ ರಿಕ್ಷಾ ಕಾಣಿಯೂರು ರಸ್ತೆಯ ಎಲುವೆ ಎಂಬಲ್ಲಿ ನಿಲ್ಲಿಸಿತ್ತು. ಅಲ್ಲೇ ಸಮೀಪದ ಕಾಡಿನಲ್ಲಿ ವಸಂತ ಅವರ ಮೃತದೇಹ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣಿಯೂರು: ನೇಣು ಬಿಗಿದ ಸ್ಥಿತಿಯಲ್ಲಿ ರಿಕ್ಷಾ ಚಾಲಕನ ಮೃತ ದೇಹ ಪತ್ತೆ Read More »

ಸುಳ್ಯ: ಕುರುಂಜಿಯವರ 95ನೇ ಹುಟ್ಟು ಹಬ್ಬದ ಪ್ರಯುಕ್ತ ಜಯನಗರ ಚೆಂಡೆಮೂಲೆ ಸರೋಜಾ ಆರ್ ಇವರಿಗೆ ಮನೆ ಹಸ್ತಾಂತರ

ಸಮಗ್ರ ನ್ಯೂಸ್: ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಸಂಘದ ವತಿಯಿಂದ ಕುರುಂಜಿಯವರ 95ನೇ ಹುಟ್ಟು ಹಬ್ಬದ ಪ್ರಯುಕ್ತ ಜಯನಗರ ಚೆಂಡೆಮೂಲೆ ಸರೋಜಾ ಆರ್ ಇವರಿಗೆ ಮನೆ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು. ಕೆವಿಜಿ ಹಬ್ಬದ ಅಧ್ಯಕ್ಷರು ಆದ ಚಂದ್ರಶೇಖರ್ ಪೇರಾಲ್ ಅಧ್ಯಕ್ಷತೆಯಲ್ಲಿ ಮನೆಯ ಹಸ್ತಾಂತರವನ್ನು ದೀಪ ಬೆಳಗಿಸುವ ಮೂಲಕ ಪದ್ಮಶ್ರೀ ಪುರಸ್ಕ್ರತ ಗಿರಿಶ್ ಭಾರದ್ವಾಜ್ ಇವರು ನೇರವೆರಿಸಿದರು. ಹರಿಶ್ ಬಂಟ್ವಾಳ್ ಇವರು ಪ್ರಸ್ತಾವನೆಗೈದರು. ಮುಖ್ಯ ಅಥಿತಿಗಳಾಗಿ ಸುಧಾಕರ ನಗರ ಪಂಚಾಯತ್ ಮುಖ್ಯಾಧಿಕಾರಿ, ನಗರ ಪಂಚಾಯತ್

ಸುಳ್ಯ: ಕುರುಂಜಿಯವರ 95ನೇ ಹುಟ್ಟು ಹಬ್ಬದ ಪ್ರಯುಕ್ತ ಜಯನಗರ ಚೆಂಡೆಮೂಲೆ ಸರೋಜಾ ಆರ್ ಇವರಿಗೆ ಮನೆ ಹಸ್ತಾಂತರ Read More »

ಸುಳ್ಯ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಶ್ರೀ ಕ್ಷೇತ್ರ ಬ್ರಹ್ಮರಗಯ ಇದರ 46ನೇ ವರ್ಷದ ದೀಪೋತ್ಸವಕ್ಕೆ ಧ್ವಜರೋಹಣ

ಸಮಗ್ರ ನ್ಯೂಸ್: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಶ್ರೀ ಕ್ಷೇತ್ರ ಬ್ರಹ್ಮರಗಯ, ಕೊಡಿಯಾಲಬೈಲ್ ಸುಳ್ಯ ಇದರ 46ನೇ ವರ್ಷದ ದೀಪೋತ್ಸವಕ್ಕೆ ಧ್ವಜರೋಹಣ ಕಾರ್ಯಕ್ರಮವು ಡಿ. 26 ಮಂಗಳವಾರದಂದು ಬೆಳಿಗ್ಗೆ 7 ಗಂಟೆಗೆ ಪೆರಾಜೆ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಊರ ಹಾಗೂ ಪರ ಊರ ಭಕ್ತಾಭಿಮಾನಿಗಳು ಮತ್ತು ಶ್ರೀ ಅಯ್ಯಪ್ಪ ಮಾಲಾಧಾರಿಗಳು ಭಾಗವಹಿಸಿ ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿದರು. ಜ.1 ರಂದು ನಡೆಯುವ ದೀಪೋತ್ಸವದಂದು ಪೂರ್ವಾಹ್ನ 7ಕ್ಕೆ 18 ತೆಂಗಿನಕಾಯಿ ಮಹಾಗಣಪತಿ

ಸುಳ್ಯ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಶ್ರೀ ಕ್ಷೇತ್ರ ಬ್ರಹ್ಮರಗಯ ಇದರ 46ನೇ ವರ್ಷದ ದೀಪೋತ್ಸವಕ್ಕೆ ಧ್ವಜರೋಹಣ Read More »

ಸೇವಾಸಂಸ್ಥೆ ಯುವಶಕ್ತಿ ಸೇವಾಪಥ ತೃತೀಯ ವರ್ಷಕ್ಕೆ ಯಶಸ್ವಿಯಾಗಿ‌ ಪಾದಾರ್ಪಣೆಗೈದಿದೆ

ಸಮಗ್ರ ನ್ಯೂಸ್: ಅಶಕ್ತರಿಗೆ ನೆರಳಾಗುವ ವೃಕ್ಷದಂತೆ ಕಳೆದ ಎರಡು ವರ್ಷಗಳಲ್ಲಿ 45 ಲಕ್ಷಕ್ಕೂ ಅಧಿಕ ಸೇವಾಧನವನ್ನು ಸಮಾಜಕ್ಕೆ ಅರ್ಪಿಸಿದೆ. ಧಾರ್ಮಿಕ ಕ್ಷೇತ್ರಗಳ ಸೇವಾನಿಧಿ ಯೋಜನೆ ತುರ್ತು ಅಪಘಾತ, ನಿಧಿ, ಕಾರ್ಯಕರ್ತರಿಗೆ ಕ್ಷೇಮನಿಧಿ, ಹಾಗೂ ಮಹಾಯೋಜ‌ನೆಗಳ ಮೂಲಕ ಸಮಾಜ‍ದ ಕಟ್ಟಕಡೆಯ ವ್ಯಕ್ತಿಗೆ ತಲುಪುವ ಪ್ರಯತ್ನ ಮಾಡುತ್ತಿದೆ. ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಯೋಜನೆ ಯಶಸ್ವೀಯಾಗಿ ಮುನ್ನಡೆಯುತ್ತಿದ್ದು 5 ಜನ ಫಲಾನುಭವಿಗಳಿಗೆ ಕೂದಲ ಕುಲಾವಿ(ವಿಗ್) ಹಸ್ತಾಂತರಿಸಲಾಗಿದೆ. ಯುವಶಕ್ತಿ ರಕ್ತನಿಧಿ 10,000 ಯುನಿಟ್ ರಕ್ತ ಪೂರೈಕೆಯ ಸಮೀಪದಲ್ಲಿದ್ದು ಕೆಲವೇ ದಿನಗಳಲ್ಲಿ ಹತ್ತು ಸಾವಿರ‍ದ

ಸೇವಾಸಂಸ್ಥೆ ಯುವಶಕ್ತಿ ಸೇವಾಪಥ ತೃತೀಯ ವರ್ಷಕ್ಕೆ ಯಶಸ್ವಿಯಾಗಿ‌ ಪಾದಾರ್ಪಣೆಗೈದಿದೆ Read More »