14ರ ಬಾಲಕ ಓಡಿಸುತ್ತಿದ್ದ ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸಾವು
ಸಮಗ್ರ ನ್ಯೂಸ್: ಕುಂಬಳೆ ಪೇಟೆಯಲ್ಲಿ 14 ವಯಸ್ಸಿನ, 9ನೇ ತರಗತಿಯ ವಿದ್ಯಾರ್ಥಿ ಚಲಾಯಿಸುತ್ತಿದ್ದ ಬೈಕ್ ಗುದ್ದಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಅಪಘಾತದಲ್ಲಿ ಅಂಗಡಿಮೊಗರು ಪೆರ್ಲಾಡ ನಿವಾಸಿ ಮೈಕ್ ಆಪರೇಟರ್ ಅಬ್ದುಲ್ಲ ಕುಂಞಿ (60) ಅವರು ಕುಂಬಳೆ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ಪೇಟೆಗೆ ತೆರಳುತ್ತಿದ್ದ ವೇಳೆ ಅವರಿಗೆ ಬಾಲಕ ವೇಗವಾಗಿ ಒಡಿಸುತ್ತಿದ್ದ ಬೈಕ್ ಗುದ್ದಿದೆ. ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದ್ದಾರೆ.
14ರ ಬಾಲಕ ಓಡಿಸುತ್ತಿದ್ದ ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸಾವು Read More »









