ವಿಮಾನದ ಲ್ಯಾಂಡಿಂಗ್ ಗೇರ್ ನಲ್ಲಿ ಕುಳಿತು ಅಪ್ಘಾನ್ ನಿಂದ ಭಾರತಕ್ಕೆ ಬಂದಿಳಿದ ಬಾಲಕ
ಸಮಗ್ರ ನ್ಯೂಸ್: ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿ ಕುಳಿತು ಬಾಲಕನೊಬ್ಬ ಅಫ್ಗಾನಿಸ್ತಾನದ ಕಾಬೂಲ್‌ನಿಂದ ದೆಹಲಿಗೆ ಬಂದಿದ್ದಾನೆ. ಭಾನುವಾರ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಘಟನೆ ನಡೆದಿದೆ. ಎರಡು ಗಂಟೆಯ ಪ್ರಯಾಣದ ಬಳಿಕ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಬಂದಿಳಿದಾಗ ಬಾಲಕ ಇರುವುದು ಗೊತ್ತಾಗಿದ್ದು, ಅದೇ ವಿಮಾನದಲ್ಲಿ ಆತನನ್ನು ವಾಪಸ್ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ವಿಮಾನ ಲ್ಯಾಂಡ್ ಆದ ಬಳಿಕ ಬಾಲಕನೊಬ್ಬ ವಿಮಾನದ ಸುತ್ತ ಓಡಾಡುತ್ತಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. […]
ವಿಮಾನದ ಲ್ಯಾಂಡಿಂಗ್ ಗೇರ್ ನಲ್ಲಿ ಕುಳಿತು ಅಪ್ಘಾನ್ ನಿಂದ ಭಾರತಕ್ಕೆ ಬಂದಿಳಿದ ಬಾಲಕ Read More »










