ಮಡಿಕೇರಿ ದಸರಾ ಕವಿಗೋಷ್ಠಿಗೆ ಡಾ. ಅನುರಾಧಾ ಕುರುಂಜಿ ಆಯ್ಕೆ

ಸಮಗ್ರ ನ್ಯೂಸ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ವ್ಯಕ್ತಿತ್ವ ವಿಕಸನ ತರಬೇತುದಾರರೂ ಆದ ಲೇಖಕಿ, ಕವಯತ್ರಿ  ಡಾ. ಅನುರಾಧಾ ಕುರುಂಜಿಯವರು 2025 ರ ಮಡಿಕೇರಿ ದಸರ ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಯ್ಕೆಯಾಗಿರುತ್ತಾರೆ.  

Ad Widget . Ad Widget . Ad Widget . Ad Widget . Ad Widget . Ad Widget .

ಸೆಪ್ಟೆಂಬರ್  25 ರಂದು ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯಲಿರುವ ಬಹುಭಾಷಾ ಕವಿಗೋಷ್ಠಿಯಲ್ಲಿ ಇವರು ಕವನ ವಾಚಿಸಲಿದ್ದು ಈ ಹಿಂದೆ ಹಂಪಿ ಉತ್ಸವ ಹಾಗೂ ತಾಲೂಕು, ಜಿಲ್ಲೆ, ರಾಜ್ಯ, ಕೇರಳ ರಾಜ್ಯ, ಕಾಸರಗೋಡು ಮೊದಲಾದ ಕಡೆಗಳಲ್ಲಿ ಕವನ, ಚುಟುಕು ವಾಚನಗಳನ್ನು ಮಾಡಿದುದಲ್ಲದೇ ಮಂಗಳೂರು, ಮಡಿಕೇರಿ ಆಕಾಶವಾಣಿಗಳಲ್ಲೂ ಕವನ ವಾಚಿಸಿದ್ದರು. 

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇವರು ಈಗಾಗಲೇ “ಮೌನವನು ಮುರಿದಾಗ” ಎಂಬ ಕವನ ಸಂಕಲನವನ್ನು ಹೊರತಂದಿದ್ದು, “ಜೀವನ ಪಯಣ” ಕವನ ಸಂಕಲನ ಪ್ರಕಟಣಾ ಹಂತದಲ್ಲಿದೆ. ಇವರು ಪದ್ಮಯ್ಯ ಗೌಡ  ಕುರುಂಜಿ ಮತ್ತು ಸೀತಮ್ಮ ಕುರುಂಜಿ ದಂಪತಿಗಳ ಪುತ್ರಿ ಹಾಗೂ ಕೆ ವಿ ಜಿ ಪಾಲಿಟೆಕ್ನಿಕ್ ನ ಶಿಕ್ಷಕರು, ವ್ಯಕ್ತಿತ್ವ ವಿಕಸನ ತರಬೇತುದಾರರೂ  ಆದ ಚಂದ್ರಶೇಖರ ಬಿಳಿನೆಲೆಯವರ ಪತ್ನಿ.

Leave a Comment

Your email address will not be published. Required fields are marked *