ಸಮಗ್ರ ಸಮಾಚಾರ

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ| ಆರೋಪಿ ಶಾರೀಕ್ ಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ NIA ಕೋರ್ಟ್ ಆದೇಶ

ಸಮಗ್ರ ನ್ಯೂಸ್: ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಹಮ್ಮದ್ ಶಾರಿಕ್ ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಎನ್ ಐಎ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. 2022ರ ನವೆಂಬರ್ 19ರಂದು ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎನ್ ಐಎ ವಿಶೇಷ ನ್ಯಾಯಾಲಯ ಇಂದು ಅಪರಾಧಿ ಮೊಹಮ್ಮದ್ ಶಾರಿಕ್ ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. 2024ರ ಏಪ್ರಿಲ್ ನಲ್ಲಿ

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ| ಆರೋಪಿ ಶಾರೀಕ್ ಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ NIA ಕೋರ್ಟ್ ಆದೇಶ Read More »

ಪೇಟಿಎಂ ಬ್ಯಾಂಕಿಂಗ್ ಪರವಾನಗಿ ರದ್ದುಗೊಳಿಸಿದ ಆರ್ ಬಿಐ

ಸಮಗ್ರ ನ್ಯೂಸ್: ದೇಶದ ಪ್ರಮುಖ ಫಿನ್‌ಟೆಕ್ ಸಂಸ್ಥೆಯಾದ ಪೇಟಿಎಂಗೆ ದೊಡ್ಡ ಆಘಾತ ಎದುರಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ ಬ್ಯಾಂಕಿಂಗ್ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 24, 2026 ರಿಂದ ಜಾರಿಗೆ ಬರುವಂತೆ ತಕ್ಷಣದಿಂದ ರದ್ದುಗೊಳಿಸಿದೆ. ಆರ್‌ಬಿಐ ಆದೇಶದಂತೆ ಏಪ್ರಿಲ್ 24ರ ವ್ಯವಹಾರದ ಅಂತ್ಯದ ವೇಳೆಗೆ ಪೇಟಿಎಂ ಬ್ಯಾಂಕ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 22(4) ರ ಅಡಿಯಲ್ಲಿ ನೀಡಲಾಗಿದ್ದ ಪರವಾನಗಿಯನ್ನು ರದ್ದುಪಡಿಸಲಾಗಿದೆ. ಬ್ಯಾಂಕ್ ನಡೆಸುತ್ತಿರುವ ವ್ಯವಹಾರದ ಶೈಲಿಯು ಠೇವಣಿದಾರರ

ಪೇಟಿಎಂ ಬ್ಯಾಂಕಿಂಗ್ ಪರವಾನಗಿ ರದ್ದುಗೊಳಿಸಿದ ಆರ್ ಬಿಐ Read More »

ಬಂಟ್ವಾಳ: ಚಲಿಸುತ್ತಿದ್ದ ರೈಲಿನಲ್ಲೇ ಮಗುವಿನ ಜನ್ಮ ನೀಡಿದ ಮಹಿಳೆ| ಸಹ ಪ್ರಯಾಣಿಕ ಮಹಿಳೆಯರಿಂದಲೇ ನಡೆಯಿತು ಹೆರಿಗೆ!!

ಸಮಗ್ರ ನ್ಯೂಸ್: ಅಪರೂಪದಲ್ಲೇ ಅಪರೂಪದ ಮತ್ತು ಮಾನವೀಯತೆಯ ದೃಶ್ಯವೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲ್ವೇ ನಿಲ್ದಾಣ ಸಾಕ್ಷಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಯಶವಂತಪುರಕ್ಕೆ ತೆರಳುತ್ತಿದ್ದ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಸೂಕ್ತ ವೈದ್ಯಕೀಯ ನೆರವು ಸಿಗದ ಕಾರಣ ಸಹಪ್ರಯಾಣಿಕ ಮಹಿಳೆಯರೇ ದಾದಿಯರಾಗಿ ಬದಲಾಗಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಮೈಸೂರು ಮೂಲದ ಗರ್ಭಿಣಿಯೊಬ್ಬರು ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳುವ ರೈಲನ್ನೇರಿದ್ದರು. ರೈಲು ಬಿಸಿ ರೋಡ್ ಬಳಿ ತಲುಪುತ್ತಿದ್ದಂತೆ ಮಹಿಳೆಗೆ ತೀವ್ರ ಹೆರಿಗೆ ನೋವು

ಬಂಟ್ವಾಳ: ಚಲಿಸುತ್ತಿದ್ದ ರೈಲಿನಲ್ಲೇ ಮಗುವಿನ ಜನ್ಮ ನೀಡಿದ ಮಹಿಳೆ| ಸಹ ಪ್ರಯಾಣಿಕ ಮಹಿಳೆಯರಿಂದಲೇ ನಡೆಯಿತು ಹೆರಿಗೆ!! Read More »

ಉಪ್ಪಿನಂಗಡಿ: ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಸವಾರ ಚಿಕಿತ್ಸೆ ಫಲಿಸದೇ ಸಾವು

ಸಮಗ್ರ ನ್ಯೂಸ್: ಉಪ್ಪಿನಂಗಡಿ- ಕೊಯಿಲಾ ರಸ್ತೆಯ ಹಿರೇಬಂಡಾಡಿ ಶಾಖೆಪುರ ಎಂಬಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ​ಮೃತರನ್ನು ಹಿರೇಬಂಡಾಡಿಯ ರವೀಂದ್ರ ರೈ ಮುರದಮೇಲುರವರ ಪುತ್ರ ಕಾಲೇಜ್ ವಿದ್ಯಾರ್ಥಿ ಲಿಖಿತ್ ರೈ ಎಂದು ಗುರುತಿಸಲಾಗಿದೆ. ಏ 22ರಂದು ಸಂಜೆ ಲಿಖಿತ್ ರೈ ಅವರು ತಮ್ಮ ಕೆಎ-21-ಇಸಿ-7292 ಸಂಖ್ಯೆಯ ಮೋಟಾರ್ ಸೈಕಲ್‌ನಲ್ಲಿ ಉಪ್ಪಿನಂಗಡಿ – ಕೊಯಿಲ ಸಾರ್ವಜನಿಕ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಹಿರೇಬಂಡಾಡಿ ಶಾಖೆಪುರ ಎಂಬಲ್ಲಿ ತಲುಪಿದಾಗ ಬೈಕ್ ಸವಾರನ ನಿಯಂತ್ರಣ

ಉಪ್ಪಿನಂಗಡಿ: ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಸವಾರ ಚಿಕಿತ್ಸೆ ಫಲಿಸದೇ ಸಾವು Read More »

ಭಾರತಕ್ಕೆ ಈ ವರ್ಷ ‌ಎಲ್ ನಿನೋ ಭೀತಿ| ಮಳೆ ಕೊರತೆಯ ಆತಂಕ

ಸಮಗ್ರ ನ್ಯೂಸ್: ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚಿನ ತಾಪಮಾನ ಮತ್ತು ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಸಿದೆ. ಪೆಸಿಫಿಕ್ ಸಾಗರದಲ್ಲಿ ಸೃಷ್ಟಿಯಾಗುತ್ತಿರುವ ‘ಎಲ್ ನಿನೋ’ ವಿದ್ಯಮಾನವು ಮೇ ತಿಂಗಳಿನಿಂದಲೇ ಪ್ರಭಾವ ಬೀರಲಿದ್ದು, ಇದು ಭಾರತದ ಮುಂಗಾರು ಮಳೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಆತಂಕ ಮೂಡಿಸಿದೆ. ಮೇ, ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಭಾರತದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಲಿದೆ. ಉತ್ತರ ಮತ್ತು

ಭಾರತಕ್ಕೆ ಈ ವರ್ಷ ‌ಎಲ್ ನಿನೋ ಭೀತಿ| ಮಳೆ ಕೊರತೆಯ ಆತಂಕ Read More »

ಪೊನ್ನಂಪೇಟೆ: ವಿದೇಶಿ ಮಹಿಳೆ ಮೇಲೆ‌ ಲೈಂಗಿಕ ದೌರ್ಜನ್ಯ| ಹೋಂ ಸ್ಟೇ ಮಾಲೀಕ ಸೇರಿ‌ ಇಬ್ಬರು ಅರೆಸ್ಟ್

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದಲ್ಲಿ ವಿದೇಶಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಹೋಂ ಸ್ಟೇ ಮಾಲೀಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಾಷಿಂಗ್ಟನ್ ಮೂಲದ ಮಹಿಳೆಯೊಬ್ಬರು ಪ್ರವಾಸಕ್ಕಾಗಿ ಕೊಡಗಿಗೆ ಆಗಮಿಸಿದ್ದರು. ಅವರು ಕುಟ್ಟ ಗ್ರಾಮದಲ್ಲಿರುವ ‘ದೇವಿ ವಿಲ್ಲಾ ಹೋಮ್ ಸ್ಟೇ’ ನಲ್ಲಿ ತಂಗಿದ್ದರು. ವರದಿಗಳ ಪ್ರಕಾರ, ಕಳೆದ ಏಪ್ರಿಲ್ 19 ರಂದು ಈ ಘಟನೆ ನಡೆದಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆ ನೀಡಿದ

ಪೊನ್ನಂಪೇಟೆ: ವಿದೇಶಿ ಮಹಿಳೆ ಮೇಲೆ‌ ಲೈಂಗಿಕ ದೌರ್ಜನ್ಯ| ಹೋಂ ಸ್ಟೇ ಮಾಲೀಕ ಸೇರಿ‌ ಇಬ್ಬರು ಅರೆಸ್ಟ್ Read More »

ತಾನು ದುಡಿಯುತ್ತಿರುವ ಸರ್ಕಾರಿ ಶಾಲೆಯಲ್ಲಿ ಓದಿಸಿ ಮಗಳನ್ನು ರಾಜ್ಯಕ್ಕೆ ಟಾಪರ್ ಮಾಡಿದ ಶಿಕ್ಷಕ

ಸಮಗ್ರ ನ್ಯೂಸ್: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಪ್ರಾರ್ಥನಾ ಬಿರಾದಾರ್ ಅವರ ತಂದೆ ನಾಗಪ್ಪ ಬಿರಾದಾರ್ ಸರ್ಕಾರಿ ಶಾಲೆಯ ಶಿಕ್ಷಕ. ಮಗಳನ್ನು ತಮ್ಮ ಶಾಲೆಯಲ್ಲಿಯೇ ಓದಿಸಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸುವಂತೆ ಮಾರ್ಗದರ್ಶನ ಮಾಡಿ ಸಾಕಷ್ಟು ಪೋಷಕರಿಗೆ ಸ್ಫೂರ್ತಿಯಾಗಿದ್ದಾರೆ. ಮಕ್ಕಳು ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರವೇ ಉತ್ತಮ ಅಂಕ ಗಳಿಸುತ್ತಾರೆ ಎಂಬ ಭ್ರಮೆ ಬಹುತೇಕ ಪೋಷಕರಲ್ಲಿದೆ. ಇನ್ನೂ ಸಾಕಷ್ಟು ಸರ್ಕಾರಿ ನೌಕರರು ಕೂಡ ತಮ್ಮ ಮಕ್ಕಳನ್ನು ದುಬಾರಿ ಶುಲ್ಕ ನೀಡಿ ಖಾಸಗಿ ಶಾಲೆಯಲ್ಲಿ ಓದಿಸುತ್ತಾರೆ.

ತಾನು ದುಡಿಯುತ್ತಿರುವ ಸರ್ಕಾರಿ ಶಾಲೆಯಲ್ಲಿ ಓದಿಸಿ ಮಗಳನ್ನು ರಾಜ್ಯಕ್ಕೆ ಟಾಪರ್ ಮಾಡಿದ ಶಿಕ್ಷಕ Read More »

ಮಂಚಕ್ಕೆ ಕಟ್ಟಿ ಹಾಕಿ‌ ಸೀಮೆಎಣ್ಣೆ ಸುರಿದು ಪ್ರಿಯಕರನ ಕೊಲೆಗೈದ ಪ್ರೇಯಸಿ| ತನಿಖೆಯಲ್ಲಿ ಬಯಲಾಯ್ತು ಹಲವು ರಹಸ್ಯ!!

ಸಮಗ್ರ ನ್ಯೂಸ್: ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದ ಕಿರಣ್ ಕೊಲೆ ಪ್ರಕರಣ ಸಂಬಂಧ ಒಂದೊಂದೇ ಭಯಾನಕ ವಿಚಾರಗಳು ಇದೀಗ ಹೊರಬರುತ್ತಿವೆ. ಸದ್ಯ ಆತನ ಪ್ರೇಯಸಿ ಪ್ರೇಮಾ ಪೊಲೀಸರ ವಶದಲ್ಲಿದ್ದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ. ಕಿರಣ್ ಕೈಕಾಲುಗಳನ್ನು ಮಂಚಕ್ಕೆ ಕಟ್ಟಿ ಹಾಕಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದೆ ಎಂದು ಆಕೆ ನೀಡಿರುವ ಹೇಳಿಕೆ ಕೇಳಿ ಖುದ್ದು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಪೊಲೀಸರ ತನಿಖೆಯ ವೇಳೆ ದೊರೆತ ಮಾಹಿತಿ ಪ್ರಕಾರ, ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರೇಮಾಗೆ ಕಿರಣ್ ಪರಿಚಯವಾಗಿದ್ದ. ಈ ವರ್ಷದ

ಮಂಚಕ್ಕೆ ಕಟ್ಟಿ ಹಾಕಿ‌ ಸೀಮೆಎಣ್ಣೆ ಸುರಿದು ಪ್ರಿಯಕರನ ಕೊಲೆಗೈದ ಪ್ರೇಯಸಿ| ತನಿಖೆಯಲ್ಲಿ ಬಯಲಾಯ್ತು ಹಲವು ರಹಸ್ಯ!! Read More »

ಪಶ್ಚಿಮ ಬಂಗಾಳದ ಮೊದಲನೇ ಹಂತದ ಹಾಗೂ ತಮಿಳುನಾಡಿನ ವಿಧಾನಸಭೆಗೆ ಇಂದು ಚುನಾವಣೆ

ಸಮಗ್ರ ನ್ಯೂಸ್: ದೇಶದಲ್ಲೇ ಅತಿ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಚುನಾವಣೆಯ ಹಂತ-1 ಗುರುವಾರ ನಡೆಯಲಿದೆ. ಅಂತೆಯೇ ತಮಿಳುನಾಡು ಚುನಾವಣೆ ಕೂಡ ಏಕಹಂತದಲ್ಲಿ ಇದೇ ದಿನ ಜರುಗಲಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 234 ಸ್ಥಾನಗಳಿಗೆ 5.73 ಕೋಟಿಗೂ ಹೆಚ್ಚು ಮತದಾರರು 4,023 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಾಡಲಿದ್ದಾರೆ. ಡಿಎಂಕೆ-ಕಾಂಗ್ರೆಸ್‌ ಕೂಟ, ಅಣ್ಣಾಡಿಎಂಕೆ-ಬಿಜೆಪಿ ಕೂಟ ಹಾಗೂ ವಿಜಯ್‌ ಅವರ ಟಿವಿಕೆ ನಡುವೆ ತ್ರಿಕೋನ ಕದನ ಏರ್ಪಟ್ಟಿದೆ. ಇನ್ನು ಪ.ಬಂಗಾಳದ 294 ಸ್ಥಾನಗಳ ಪೈಕಿ 152 ಸ್ಥಾನಗಳಿಗೆ ಗುರುವಾರ ಮತದಾನ

ಪಶ್ಚಿಮ ಬಂಗಾಳದ ಮೊದಲನೇ ಹಂತದ ಹಾಗೂ ತಮಿಳುನಾಡಿನ ವಿಧಾನಸಭೆಗೆ ಇಂದು ಚುನಾವಣೆ Read More »

ತ್ರಿಶೂರ್ ನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಪೋಟ| 13 ಮಂದಿ ಸಾವು

ಸಮಗ್ರ ನ್ಯೂಸ್: ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತ್ತಿಕೋಡ್ ಬಳಿ ಮಂಗಳವಾರ ಮಧ್ಯಾಹ್ನ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಮತ್ತು 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.​ಪ್ರಸಿದ್ಧ ‘ತ್ರಿಶೂರ್ ಪೂರಂ’ ಹಬ್ಬಕ್ಕಾಗಿ ಪಟಾಕಿಗಳನ್ನು ಸಿದ್ಧಪಡಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮಧ್ಯಾಹ್ನ ಸುಮಾರು 3:30ರ ಸುಮಾರಿಗೆ ಎರಡು ಬಾರಿ ದೊಡ್ಡ ಮಟ್ಟದ ಸ್ಫೋಟಗಳು ಕೇಳಿಬಂದಿದ್ದು, ಇದರ ತೀವ್ರತೆಗೆ ಸುತ್ತಮುತ್ತಲ ಪ್ರದೇಶದ ನಿವಾಸಿಗಳು ಭೂಕಂಪ ಸಂಭವಿಸಿದೆ ಎಂದು ಬೆಚ್ಚಿಬಿದ್ದಿದ್ದರು. ಕೇರಳ ರಾಜ್ಯ ವಿಪತ್ತು

ತ್ರಿಶೂರ್ ನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಪೋಟ| 13 ಮಂದಿ ಸಾವು Read More »