ಸಮಗ್ರ ಸಮಾಚಾರ

ಗನ್ ತೋರಿಸಿ ಗ್ರಾ.ಪಂ. ಸದಸ್ಯನಿಂದಲೇ ರೇಪ್ | ಈತನ ಮೇಲಿದೆ 10 ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ

ಆನೇಕಲ್: ಮಾಡೆಲಿಂಗ್ ಕೆಲಸದ ಆಮಿಷವೊಡ್ಡಿ ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡ ಗ್ರಾಮ ಪಂಚಾಯತ್ ಸದಸ್ಯನೊಬ್ಬ ಆಕೆಗೆ ಗನ್ ತೋರಿಸಿ ಅತ್ಯಾಚಾರವೆಸಗಿದ್ದಾನೆ.ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ಲವಾರದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಹಮದ್ ಪಾಷಾ ಅತ್ಯಾಚಾರ ಆರೋಪಿ. ಈತನಿಗೆ ಫೇಸ್‌ಬುಕ್ ನಲ್ಲಿ ಬೆಂಗಳೂರಿನ ಹೆಬ್ಬಾಳ ಮೂಲದ ಯವತಿಯೊಬ್ಬಳ ಪರಿಚಯವಾಗಿತ್ತು.ಆಕೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಕೂಡಿಸುವುದಾಗಿ ನಂಬಿಸಿ ಮೊಬೈಲ್ ನಂಬರ್ ಪಡೆದಿದ್ದ. ಅಲ್ಲದೆ ತಾನು ಬನ್ನೇರುಘಟ್ಟ ಕಾರ್ಪೋರೇಟರ್ ಎಂದೂ ಹೇಳಿಕೊಂಡಿದ್ದ. ಲಾಕ್‌ಡೌನ್ ಹಿನ್ನೆಲೆ ಬಡವರಿಗೆ ಆಹಾರ್ ಕಿಟ್ ವಿತರಣೆ ಮಾಡುತ್ತಿರುವ […]

ಗನ್ ತೋರಿಸಿ ಗ್ರಾ.ಪಂ. ಸದಸ್ಯನಿಂದಲೇ ರೇಪ್ | ಈತನ ಮೇಲಿದೆ 10 ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ Read More »

ಜು. 31ಕ್ಕೆ ದ್ವಿತೀಯ ಪಿಯುಸಿ ಸಿಬಿಎಸ್ಸಿ ಫಲಿತಾಂಶ

ನವದೆಹಲಿ: ಪ್ರಸಕ್ತ ವರ್ಷದ ಸಿಬಿಎಸ್ಸಿ ದ್ವಿತೀಯ ಪಿಯುಸಿ ಫಲಿತಾಂಶ ಜುಲೈ ತಿಂಗಳ ಮೂವತ್ತೊಂದಕ್ಕೆ ಪ್ರಕಟವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. 12ನೇ ತರಗತಿ ಫಲಿತಾಂಶ ಘೋಷಿಸಲು, ಪ್ರತಿ ವಿದ್ಯಾರ್ಥಿಯ ಹತ್ತನೇ ತರಗತಿಯ ಅಂಕವನ್ನು 30% ಕ್ಕೆ, 11ನೇ ತರಗತಿಯ ಅಂಕವನ್ನು 30% ಕ್ಕೆ ಮತ್ತು 12ನೇ ತರಗತಿಯ ಆಂತರಿಕ ಮೌಲ್ಯಮಾಪನ ಮತ್ತು ಘಟಕ ಅವಧಿ ಮತ್ತು ಪ್ರಾಯೋಗಿಕ ಪರೀಕ್ಷೆಗಳನ್ನು ಅಂಕಗಳನ್ನು ಒಟ್ಟುಗೂಡಿಸಿ ಅದನ್ನು 40% ಕ್ಕೆ ಪರಿವರ್ತಿಸಿ ಅಂಕಗಳನ್ನು

ಜು. 31ಕ್ಕೆ ದ್ವಿತೀಯ ಪಿಯುಸಿ ಸಿಬಿಎಸ್ಸಿ ಫಲಿತಾಂಶ Read More »

ಲಂಚ ನೀಡಿ ಬಿಜೆಪಿಗೆ ಸೇರಿಸಿಕೊಂಡ ಆರೋಪ | ಸುರೇಂದ್ರನ್ ಮೇಲೆ ಪ್ರಕರಣ ದಾಖಲಿಸಲು ಕೋರ್ಟ್ ಸೂಚನೆ

ವಯನಾಡ್: ಸ್ವ ಪಕ್ಷಕ್ಕೆ ಸೇರಿಸಿಕೊಳ್ಳಲು ಬೇರೊಂದು ಪಕ್ಷದ ನಾಯಕಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿರುವ ಕೇರಳ ಬಿಜೆಪಿ ರಾಜ್ಯಧ್ಯಕ್ಷ ಸುರೇಂದ್ರನ್ ಮೇಲೆ ಪ್ರಕರಣ ದಾಖಲಿಸಲು ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ. ಕಳೆದ ಕೇರಳ ವಿಧಾನಸಭಾ ಚುನಾವಣೆಯಿಂದ ಮೊದಲು ಜೆ ಆರ್ ಎಸ್ ಪಕ್ಷದ ನಾಯಕಿ ಸಿಕೆ ಜಾನು ಎಂಬವರಿಗೆ ಸುರೇಂದ್ರನ್ 10 ಲಕ್ಷ ರೂ ಲಂಚ ನೀಡಿದ್ದರು ಎನ್ನಲಾಗಿದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನ ವಿದ್ಯಾರ್ಥಿ ವಿಭಾಗವಾದ ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್‌ನ ರಾಜ್ಯ ಅಧ್ಯಕ್ಷ

ಲಂಚ ನೀಡಿ ಬಿಜೆಪಿಗೆ ಸೇರಿಸಿಕೊಂಡ ಆರೋಪ | ಸುರೇಂದ್ರನ್ ಮೇಲೆ ಪ್ರಕರಣ ದಾಖಲಿಸಲು ಕೋರ್ಟ್ ಸೂಚನೆ Read More »

ಮೈಕ್ರೋಸಾಫ್ಟ್ ನೂತನ ಅಧ್ಯಕ್ಷರಾಗಿ ಸತ್ಯಾ ನಡೆಲ್ಲಾ

ಸಾಫ್ಟ್ ವೇರ್ ದೈತ್ಯ ಮೈಕ್ರೋಸಾಫ್ಟ್ ನ ನೂತನ ಅಧ್ಯಕ್ಷರಾಗಿ ಸತ್ಯ ನಾಡೆಲ್ಲಾ ಅವರನ್ನು ನೇಮಿಸಲಾಗಿದೆ. ಅದೇ ಕಂಪನಿಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಹೊಸ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇದುವರೆಗೆ ಕಾರ್ಪ್ ಜಾನ್ ಥಾಮ್ಸನ್ ಮೈಕ್ರೋಸಾಫ್ಟ್ ನ ಅಧ್ಯಕ್ಷರಾಗಿದ್ದರು. 2014 ರಲ್ಲಿ ಸ್ಟೀವ್ ಬಾಲ್ಮರ್ ಅವರಿಂದ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಾಡೆಲ್ಲಾ ಲಿಂಕ್ಡ್ ಇನ್, ನುವಾನ್ಸ್ ಕಮ್ಯುನಿಕೇಷನ್ಸ್ ಮತ್ತು ಜೆನಿಮ್ಯಾಕ್ಸ್ ನಂತಹ ಶತಕೋಟಿ ಡಾಲರ್ ಕಂಪನಿಗಳ ಸ್ವಾಧೀನ ಒಳಗೊಂಡಂತೆ ಮೈಕ್ರೋಸಾಫ್ಟ್ ವ್ಯವಹಾರ ಹೆಚ್ಚಿಸುವಲ್ಲಿ

ಮೈಕ್ರೋಸಾಫ್ಟ್ ನೂತನ ಅಧ್ಯಕ್ಷರಾಗಿ ಸತ್ಯಾ ನಡೆಲ್ಲಾ Read More »

ಮರುಕಳಿಸಿತಾ ಮಹಾಭಾರತ….? | ಗಂಗೆಯಲ್ಲಿ ತೇಲಿಬಂದ ಪುಟ್ಟ ಕಂದ

ಉತ್ತರ ಪ್ರದೇಶದ: ಇಲ್ಲಿನ ಘಾಜಿಯಾಬಾದ್ ಜಿಲ್ಲೆಯ ದಾದ್ರಿ ಘಾಟ್ ಪ್ರದೇಶದಲ್ಲಿ 21 ದಿನದ ಹೆಣ್ಣು ಮಗು ಒಂದು ಪತ್ತೆಯಾಗಿದೆ. ಮರದ ಬಾಕ್ಸ್ ಒಂದರಲ್ಲಿ ಹೆಣ್ಣು ಮಗುವನ್ನು ಇರಿಸಿ ನದಿಯಲ್ಲಿ ತೇಲಿ ಬಿಡಲಾಗಿದೆ. ಆ ಮಗುವಿನ ಜನ್ಮಕುಂಡಲಿಯನ್ನೂ ಜೊತೆಯಲ್ಲಿ ಇಟ್ಟಿದ್ದು ಮಗುವಿನ ಹೆಸರು ಗಂಗಾ ಎಂದು ಬರೆಯಲಾಗಿದೆ. ಜೊತೆಯಲ್ಲಿ ಒಂದು ದೇವರ ಫೋಟೋ ಕೂಡ ಅಂಟಿಸಲಾಗಿದೆ. ಇದೀಗ ಮಗುವನ್ನು ಆಶಾ ಜ್ಯೋತಿ ಅನಾಥಾಲಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.ಮಹಾಭಾರತದಲ್ಲಿ ಕೌಂತಯ ದೇಶದ ರಾಜಕುಮಾರಿ ಕುಂತಿ

ಮರುಕಳಿಸಿತಾ ಮಹಾಭಾರತ….? | ಗಂಗೆಯಲ್ಲಿ ತೇಲಿಬಂದ ಪುಟ್ಟ ಕಂದ Read More »

ಉಪ್ಪಿನಂಗಡಿ: ನೆರೆಭಾದಿತ ಪ್ರದೇಶಗಳಲ್ಲಿ ಎನ್ ಡಿ ಆರ್ ಎಫ್ ಪರಿಶೀಲನೆ

ಉಪ್ಪಿನಂಗಡಿ: ರಾಷ್ಟೀಯ ವಿಪತ್ತು ನಿರ್ವಹಣಾ ಪಡೆ ಉಪ್ಪಿನಂಗಡಿಯ ಹಲವು ನೆರೆ ಹಾವಳಿಗೆ ಒಳಗಾಗುವ ಸಂಭವ ಇರುವ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿತು. ಉಪ್ಪಿನಂಗಡಿ ಪ್ರದೇಶವು ಕುಮಾರಧಾರ ಮತ್ತು ನೇತ್ರಾವತಿ ನದಿಗಳ ಸಂಗಮ ಸ್ಥಳವಾಗಿದೆ. ಇಲ್ಲಿ ಪ್ರತಿ ವರ್ಷ ಪಶ್ಚಿಮ ಘಟ್ಟ ಪ್ರದೇಶ ಗಳಲ್ಲಿ ಮಳೆ ಹೆಚ್ಚಾದಾಗ ನೆರೆ ಹಾವಳಿ ಎದುರಾಗುತ್ತದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್ ವಿಜಯವಾಡ ಇನ್‌ಸ್ಪೆಕ್ಟರ್ ಆರ್.ಪಿ. ಚೌಧರಿ ನೇತೃತ್ವದ ಐದು ಮಂದಿಯ ತಂಡ ಪರಿಶೀಲನೆ ನಡೆಸಿದೆ. ಸಹಸ್ರಲಿಂಗೇಶ್ವರ ದೇವಸ್ಥಾನದ

ಉಪ್ಪಿನಂಗಡಿ: ನೆರೆಭಾದಿತ ಪ್ರದೇಶಗಳಲ್ಲಿ ಎನ್ ಡಿ ಆರ್ ಎಫ್ ಪರಿಶೀಲನೆ Read More »

ಸುಳ್ಯ: ನೇಣು ಬಿಗಿದು ಯುವಕ ಆತ್ಮಹತ್ಯೆ

ಸುಳ್ಯ: ಮನೆಯ ಕೊಟ್ಟಿಗೆಯಲ್ಲಿ ಯುವಕರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತೋಡಿಕಾನದಲ್ಲಿ ನಡೆದಿದೆ. ತೋಡಿಕಾನ ಗ್ರಾಮದ ದೇವರಗುಂಡಿ ಬಳಿಯ ನಿವಾಸಿ ಕೇಪಣ್ಣ ನಾಯ್ಕ್ ರ ಪುತ್ರ ಜಯರಾಮ ನೇಣಿಗೆ ಶರಣಾದವರು. ಅವರಿಗೆ 34 ವರ್ಷ ವಯಸ್ಸಾಗಿತ್ತು. ಅವಿವಾಹಿತರಾಗಿದ್ದ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸುಳ್ಯ: ನೇಣು ಬಿಗಿದು ಯುವಕ ಆತ್ಮಹತ್ಯೆ Read More »

ಕಾಂಗ್ರೆಸ್ ಮುಖಂಡರ ನಡುವೆ ಮಾರಾಮಾರಿ

ಚಿಕ್ಕಮಗಳೂರು: ನಡು ರಸ್ತೆಯಲ್ಲಿ ಕಾಂಗ್ರೆಸ್ ನ ನಾಯಕರ ನಡುವೆ ಮಾರಾಮಾರಿ ನಡೆದ ಘಟನೆ ನಿನ್ನೆ ಮದ್ಯಾಹ್ನ ನಡೆದಿದೆ. ಘಟನೆ ಬಳಿಕ ಒಬ್ಬ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ ಮಂಗಳೂರು ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಭೆ ನಿನ್ನೆ ನಡೆದಿತ್ತು. ಸಭೆ ಮುಗಿದ ಬಳಿಕ ನಾಯಕರ ನಡುವೆಯೇ ಹೊಡೆದಾಟ ನಡೆದಿದೆ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಜೊತೆ ಆಗಮಿಸಿದ್ದ ತರೀಕೆರೆ ಐಟಿಸೆಲ್ ಅಧ್ಯಕ್ಷ ದರ್ಶನ್ ಎಂಬವರಿಗೆ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಯಲ್ ಶರೀಫ್

ಕಾಂಗ್ರೆಸ್ ಮುಖಂಡರ ನಡುವೆ ಮಾರಾಮಾರಿ Read More »

ಜೈಶ್ರೀರಾಮ್ ಕೂಗಲು ಹೇಳಿ ಅಜ್ಜನ ಗಡ್ಡ ಬೋಳಿಸಿದ ಪ್ರಕರಣ | ತಂದೆ ತಾಯ್ತ ಮಾರಾಟ ಮಾಡುತ್ತಿರಲಿಲ್ಲ ಎಂದ ಮಗ

ಉತ್ತರ ಪ್ರದೇಶ: ಮುಸಲ್ಮಾನ ವೃದ್ಧರೊಬ್ಬರ ಮೇಲೇ ಯುವಕರ ಗುಂಪೊoದು ಹಲ್ಲೆ ನಡೆಸಿದ ಘಟನೆ ರಾಜ್ಯದ ಗಾಝಿಯಾಬಾದ್ ನಿಂದ ವರದಿಯಾಗಿತ್ತು. ವಿಚಾರಣೆ ಬಳಿಕ ಇದು ತಾಯ್ತ ಕಟ್ಟುವ ವಿಚಾರದಲ್ಲಿ ನಡೆದ ಜಗಳ ಎಂದು ಪೊಲೀಸರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವೃದ್ಧನ ಮಗ, ನನ್ನ ತಂದೆ ತಾಯ್ತ ಮಾರಾಟ ಮಾಡುತ್ತಿರಲಿಲ್ಲ ಎಂದಿದ್ದಾನೆ. ಅಬ್ದುಲ್ ಸಮದ್ ಸೈಫಿ ಎಂಬ ವೃದ್ಧನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವೃದ್ಧನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಲಾಕೆಯಿಂದ ಹಲ್ಲೆ ನಡೆಸಿದ್ದರು.

ಜೈಶ್ರೀರಾಮ್ ಕೂಗಲು ಹೇಳಿ ಅಜ್ಜನ ಗಡ್ಡ ಬೋಳಿಸಿದ ಪ್ರಕರಣ | ತಂದೆ ತಾಯ್ತ ಮಾರಾಟ ಮಾಡುತ್ತಿರಲಿಲ್ಲ ಎಂದ ಮಗ Read More »

ಸುಳ್ಯ : ಹಲವು ವರ್ಷದಿಂದ ಕಾಡುತ್ತಿರುವ ನೆಟ್ವರ್ಕ್ ಸಮಸ್ಯೆ | ಕೊಡೆ ಹಿಡಿದು ತಂದೆಯೊಂದಿಗೆ ವಿದ್ಯಾರ್ಥಿನಿ ನೆಟ್ವರ್ಕ್ ಹುಡುಕಾಟ | ಜನಪ್ರತಿನಿಧಿಗಳು ವ್ಯಾಪ್ತಿ ಪ್ರದೇಶದಿಂದ ಹೊರಗೆ

ಸುಳ್ಯ : ನೆಟ್ವರ್ಕ್‌ ಸಮಸ್ಯೆಯಿಂದ ಗುತ್ತಿಗಾರು ಗ್ರಾಮದ ಮೊಗ್ರ, ಬಳ್ಳಕ್ಕ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಮಳೆಯ ನಡುವೆಯೇ ರಸ್ತೆ ಬದಿಗೆ ತಂದೆಯ ಜೊತೆಗೆ ಬಂದು ಕೊಡೆ ಹಿಡಿದು ಆನ್‌ ಲೈನ್‌ ಕ್ಲಾಸ್‌ ಗೆ ಹಾಜರಾಗುತ್ತಿರುವುದು ಹಲವು ದಿನಗಳಿಂದ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆಗೆ ಹಿಡಿದ ಕೈಗನ್ನಡಿ. ಎಸ್‌ ಎಸ್‌ ಎಲ್‌ ಸಿ. ವಿದ್ಯಾರ್ಥಿನಿಯಾಗಿರುವ ಈಕೆ ನೆಟ್ವರ್ಕ್‌ ಇಲ್ಲ, ಸಿಗ್ನಲ್‌ ಇಲ್ಲ ಎಂದು ಕೂತರೆ ಈಡೀ ಭವಿಷ್ಯವೇ ಹಾಳಾಗುತ್ತದೆ ಎಂದು ರಸ್ತೆ ಬದಿ ನೆಟ್ವರ್ಕ್ ಹುಡುಕಿ‌ ಆನ್ ಲೈನ್

ಸುಳ್ಯ : ಹಲವು ವರ್ಷದಿಂದ ಕಾಡುತ್ತಿರುವ ನೆಟ್ವರ್ಕ್ ಸಮಸ್ಯೆ | ಕೊಡೆ ಹಿಡಿದು ತಂದೆಯೊಂದಿಗೆ ವಿದ್ಯಾರ್ಥಿನಿ ನೆಟ್ವರ್ಕ್ ಹುಡುಕಾಟ | ಜನಪ್ರತಿನಿಧಿಗಳು ವ್ಯಾಪ್ತಿ ಪ್ರದೇಶದಿಂದ ಹೊರಗೆ Read More »