ಸಮಗ್ರ ಸಮಾಚಾರ

ಇಂದಿನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್ ಸಂಚಾರ

ಸಮಗ್ರ ನ್ಯೂಸ್: ಮಂಗಳೂರು ನಗರದ ಬಿಜೈ ಸರಕಾರಿ ಬಸ್ ನಿಲ್ದಾಣ ಮತ್ತು ಮಣಿಪಾಲದಿಂದ ಬಜ್ಪೆ ಕೆಂಜಾರಿನಲ್ಲಿರುವ ‘ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ಕ್ಕೆ ಅ.27ರಿಂದ ಸರಕಾರಿ ವೋಲ್ವೊ ಬಸ್ ಸಂಚಾರ ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ. ಹಲವು ವರ್ಷಗಳಿಂದಲೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಸರಕಾರಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಯು ಇತ್ತು. ಅದರಂತೆ ಸಂಚಾರ ಆರಂಭಿಸಿದ್ದರೂ ಕೂಡ ಆದಾಯದ ಕೊರತೆಯ ನೆಪದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಬೇಡಿಕೆ ಮತ್ತಷ್ಟು ತೀವ್ರಗೊಂಡ ಹಿನ್ನಲೆಯಲ್ಲಿ ಸಾರಿಗೆ ಸಚಿವ

ಇಂದಿನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್ ಸಂಚಾರ Read More »

ಬಿಸಿಸಿಐ ನಿಂದ ಸಮಾನ ವೇತನ| ಪುರುಷ, ಮಹಿಳಾ ಕ್ರಿಕೆಟರ್ ಗಳಿಗೆ ಏಕರೂಪ ವೇತನ ಘೋಷಣೆ

ಸಮಗ್ರ ನ್ಯೂಸ್: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನವನ್ನು ಘೋಷಿಸಿದ್ದಾರೆ. ವೇತನ ತಾರತಮ್ಯವನ್ನು ಎದುರಿಸಲು BCCI ಯ ಮೊದಲ ಹೆಜ್ಜೆಯನ್ನು ಘೋಷಿಸಲು ನನಗೆ ಸಂತೋಷವಾಗಿದೆ. ನಾವು ನಮ್ಮ ಒಪ್ಪಂದದ ಮಹಿಳಾ ಕ್ರಿಕೆಟಿಗರಿಗೆ ವೇತನ ಇಕ್ವಿಟಿ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ನಾವು ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯ ಹೊಸ ಯುಗಕ್ಕೆ ಸಾಗುತ್ತಿರುವಾಗ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಒಂದೇ ಆಗಿರುತ್ತದೆ. ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಬಿಸಿಸಿಐ ನಿಂದ ಸಮಾನ ವೇತನ| ಪುರುಷ, ಮಹಿಳಾ ಕ್ರಿಕೆಟರ್ ಗಳಿಗೆ ಏಕರೂಪ ವೇತನ ಘೋಷಣೆ Read More »

ಫ್ಯಾನ್‍ಗೆ ನೇಣು ಹಾಕಿಕೊಳ್ಳುತ್ತಿದ್ದ ಪತ್ನಿಯ ವೀಡಿಯೋ ಮಾಡಿಕೊಂಡ ಪತಿ..!!!
ಮುಂದೇನಾಯಿತು?

ಲಕ್ನೋ: ಮಹಿಳೆಯೊಬ್ಬಳು ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ನೋಡಿದ ಪತಿ ಆಕೆಯನ್ನು ಉಳಿಸುವ ಬದಲು ಅದನ್ನು ವೀಡಿಯೋ ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಗುಲ್ಮೊಹರ್ ನಗರದಲ್ಲಿ ಈ ಘಟನೆ ನಡೆದಿದೆ. ಶೋಭಿತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಹಾಗೂ ಸಂಜೀವ್ ಗುಪ್ತಾ ವೀಡಿಯೋ ಮಾಡಿದ ಆಕೆ ಪತಿ. ಶೋಭೀತಾ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ಆಕೆಯನ್ನು ಉಳಿಸುವ ಯಾವುದೇ ಪ್ರಯತ್ನವನ್ನು ಮಾಡಿರಲಿಲ್ಲ. ಬದಲಿಗೆ ವೀಡಿಯೋ ಮಾಡುತ್ತಾ ನಿಂತಿದ್ದ. ಈ ವೇಳೆ ಶೋಭಿತಾ ತನ್ನ ಮೊದಲ ಪ್ರಯತ್ನದಲ್ಲಿ ವಿಫಲಳಾದರೂ

ಫ್ಯಾನ್‍ಗೆ ನೇಣು ಹಾಕಿಕೊಳ್ಳುತ್ತಿದ್ದ ಪತ್ನಿಯ ವೀಡಿಯೋ ಮಾಡಿಕೊಂಡ ಪತಿ..!!!
ಮುಂದೇನಾಯಿತು?
Read More »

ಪುತ್ತೂರು: ನಡುರಸ್ತೆಯಲ್ಲಿ ರಿಕ್ಷಾ ನಿಲ್ಲಿಸಿ ಮದ್ಯಪಾನ ಮಾಡಿ ನಿದ್ರಿಸಿದ ಚಾಲಕ.!

ಸಮಗ್ರ ನ್ಯೂಸ್: ಪುತ್ತೂರು-ದರ್ಬೆ ರಸ್ತೆಯ ಕಲ್ಲಾರೆ ಎಂಬಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ವಾಹನವನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಮದ್ಯಪಾನ ಮಾಡಿ ಮಲಗಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಕಲ್ಲಾರೆ ಧನ್ವಂತ್ರಿ ಆಸ್ಪತ್ರೆ ಎದುರು ಆಟೋ ಚಾಲಕ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕುಡಿದು ಮಲಗಿದ್ದನ್ನು ಗಮನಿಸಿದ ಸಾರ್ವಜನಿಕರು ಪುತ್ತೂರು ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿ ಅಪಾಯ ತಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ ಆಟೋ ಚಾಲಕ ಪಾನಮತ್ತನಾಗಿದ್ದ. ಸಂಚಾರ ಪೊಲೀಸರು ಆಟೊ

ಪುತ್ತೂರು: ನಡುರಸ್ತೆಯಲ್ಲಿ ರಿಕ್ಷಾ ನಿಲ್ಲಿಸಿ ಮದ್ಯಪಾನ ಮಾಡಿ ನಿದ್ರಿಸಿದ ಚಾಲಕ.! Read More »

ಬ್ಯಾಂಕಾಕ್‍ನಿಂದ ಚೆನ್ನೈಗೆ ಬ್ಯಾಗ್‍ನಲ್ಲಿ ಮುಂಗುಸಿ ಸಾಗಾಟ|ಪ್ರಯಾಣಿಕ ಅರೆಸ್ಟ್

ಚೆನ್ನೈ: ಚೆಕ್ ಇನ್ ಬ್ಯಾಗೇಜ್‍ನಲ್ಲಿ ಬ್ಯಾಂಕಾಕ್‍ನಿಂದ ಅಕ್ರಮವಾಗಿ ಸಾಗಿಸಲಾಗಿದ್ದ 5 ವಿದೇಶಿ ಪ್ರಾಣಿಗಳನ್ನು ಚೆನ್ನೈನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಮುಂಗುಸಿ ಹಾಗೂ ಕ್ಯೂಕಸ್ ಅನ್ನು ಚೀಲದಲ್ಲಿ ಮರೆ ಮಾಡಲಾಗಿತ್ತು. ಈ ಎಲ್ಲಾ ಪ್ರಾಣಿಗಳು ಬ್ಯಾಂಕಾಕ್‍ನಿಂದ ಬಂದ ಪ್ರಯಾಣಿಕನ ಬ್ಯಾಗ್‍ನಲ್ಲಿತ್ತು. ಅದನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡು ಥೈಲ್ಯಾಂಡ್‍ಗೆ ಕಳುಹಿಸಿದ್ದಾರೆ. ಮುಂಗುಸಿ ಅಂಗೋಲಾ, ಉತ್ತರ ನಮೀಬಿಯಾ, ದಕ್ಷಿಣ ಆಫ್ರಿಕಾದ ಕ್ವಾಝುಲು-ನಟಾಲ್, ಜಾಂಬಿಯಾ ಮತ್ತು ಪೂರ್ವ ಆಫ್ರಿಕಾಕ್ಕೆ ಸ್ಥಳೀಯವಾಗಿರುವ ಮುಂಗುಸಿ

ಬ್ಯಾಂಕಾಕ್‍ನಿಂದ ಚೆನ್ನೈಗೆ ಬ್ಯಾಗ್‍ನಲ್ಲಿ ಮುಂಗುಸಿ ಸಾಗಾಟ|ಪ್ರಯಾಣಿಕ ಅರೆಸ್ಟ್ Read More »

ಮಂಗಳೂರು: ವಾಕಿಂಗ್ ವೇಳೆ ಲಾರಿ ಢಿಕ್ಕಿಯಾಗಿ ವ್ಯಕ್ತಿ ಸಾವು

ಸಮಗ್ರ ನ್ಯೂಸ್: ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ , ಮುಂಜಾನೆ ಲಾರಿಯೊಂದು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಅ.೨೬ ರ ಮುಂಜಾನೆ ಅಶೋಕನಗರದ ನಿವಾಸಿ ಎನ್ನಲಾದ ಸುಮಾರು 40-45 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ತನ್ನ ಆ್ಯಕ್ಟಿವಾ ದ್ವಿಚಕ್ರ ವಾಹನವನ್ನು ಕೊಟ್ಟಾರ ಚೌಕಿಯಲ್ಲಿ ರಸ್ತೆ ಪಕ್ಕ ನಿಲ್ಲಿಸಿ ವಾಕಿಂಗ್ ನಿರತರಾಗಿದ್ದರು. ಈ ವೇಳೆ ಹರ್ಯಾಣದ ನೋಂದಣಿ ಹೊಂದಿದ ಲಾರಿ ಢಿಕ್ಕಿ ಹೊಡೆಯಿತು ಎಂದು ತಿಳಿದುಬಂದಿದೆ. ಇದರಿಂದ ಪಾದಚಾರಿ ವ್ಯಕ್ತಿಯು ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಮಂಗಳೂರು: ವಾಕಿಂಗ್ ವೇಳೆ ಲಾರಿ ಢಿಕ್ಕಿಯಾಗಿ ವ್ಯಕ್ತಿ ಸಾವು Read More »

ಕೇತುಗ್ರಸ್ತ ಸೂರ್ಯಗ್ರಹಣ| ಎಲ್ಲೆಲ್ಲಿ ಹೇಗೆ ಸಂಭವಿಸುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ದೀಪಾವಳಿ ಹೊತ್ತಲ್ಲೇ, ಇಂದು (ಅ.25) ಈ ವರ್ಷದ ಕೊನೆಯ ಹಾಗೂ 27 ವರ್ಷಗಳ ಬಳಿಕ ಕೇತುಗ್ರಸ್ತ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಇಪ್ಪತ್ತೇಳು ವರ್ಷಗಳ ಹಿಂದೆ ದೀಪಾವಳಿ ಹಬ್ಬದಂದು ಕೇತುಗ್ರಸ್ತ ಸೂರ್ಯಗ್ರಹಣವು ಸಂಭವಿಸಿತ್ತು. ಇದೀಗ ಮತ್ತೆ ಆ ಸಮಯ ಬಂದಿದ್ದು, ಬಾನಂಗಳದಲ್ಲಿ ಸೂರ್ಯ ಬಳೆ ತೊಟ್ಟಂತೆ ಗೋಚರಿಸಲಿದ್ದಾನೆ. ಸೌರಮಂಡಲದ ವಿಸ್ಮಯಕಾರಿ ಪ್ರಕ್ರಿಯೆ ಕಣ್ತುಂಬಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಸೂರ್ಯ ಗ್ರಹಣ ಸಮಯಗ್ರಹಣ ಸ್ಪರ್ಶಕಾಲ – ಮಧ್ಯಾಹ್ನ 2:15ಗ್ರಹಣ ಮಧ್ಯಕಾಲ – ಮಧ್ಯಾಹ್ನ 4:18ಗ್ರಹಣ ಮೋಕ್ಷಕಾಲ –

ಕೇತುಗ್ರಸ್ತ ಸೂರ್ಯಗ್ರಹಣ| ಎಲ್ಲೆಲ್ಲಿ ಹೇಗೆ ಸಂಭವಿಸುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ… Read More »

ಉಪ್ಪಿನಂಗಡಿ: ಬಸ್ ನಿಲ್ಲಿಸಿಲ್ಲವೆಂದು‌ ಬಸ್ ಗೆ ಕಲ್ಲೆಸೆದ ಕುಡುಕ ಮಹಾಶಯ!!

ಸಮಗ್ರ ನ್ಯೂಸ್: ಕೆಎಸ್‌ಆರ್‌ಟಿಸಿ ಚಾಲಕ ಬಸ್ಸನ್ನು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನ ಗಾಜಿಗೆ ಕಲ್ಲೆಸೆದು ಪುಡಿಗಟ್ಟಿದ ಘಟನೆ ಸೋಮವಾರದಂದು ಸಂಜೆ ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೋರ್ವ ಮದ್ಯದ ಅಮಲಿನಲ್ಲಿದ್ದು ಬಸ್ ನಿಲ್ಲಿಸಲು ಸೂಚಿಸಿದ್ದಾನೆ. ಆದರೆ, ಬಸ್ ನಿಲ್ಲಿಸದೇ ಮುಂದೆ ಸಾಗಿದ್ದು, ತದನಂತರ ಬಸ್‌ನಿಂದ ಕೆಳಗಿಳಿದ ಕೂಡಲೇ ಬಸ್‌ನ ಗಾಜುಗೆ ಕಲ್ಲು ಎಸೆದು ಹಾನಿ ಮಾಡಿದ್ದಾನೆ ಎನ್ನಲಾಗಿದೆ.

ಉಪ್ಪಿನಂಗಡಿ: ಬಸ್ ನಿಲ್ಲಿಸಿಲ್ಲವೆಂದು‌ ಬಸ್ ಗೆ ಕಲ್ಲೆಸೆದ ಕುಡುಕ ಮಹಾಶಯ!! Read More »

ಕಾಂತಾರದ ವಿರುದ್ದ ಕಾನೂನು ಸಮರಕ್ಕೆ ಸಿದ್ಧತೆ| ‘ವರಾಹರೂಪಂ’ ಮೇಲೆ ಕೃತಿಚೌರ್ಯದ ಕರಿನೆರಳು

ಸಮಗ್ರ ನ್ಯೂಸ್: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಭರ್ಜರಿ ಯಶಸ್ಸು ಕಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಹೀಗಿರುವಾಗಲೇ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ಬಗ್ಗೆ ಕಾನೂನು ಹೋರಾಟಕ್ಕೆ ಕೇರಳದ ತೈಕುಡಂ ಬ್ರಿಗೇಡ್ ಸಂಸ್ಥೆ ಮುಂದಾಗಿದೆ. ಮಲಯಾಳಂ ‘ನವರಸಂ’ ಹಾಡು ಹೋಲುವಂತೆ ‘ವರಾಹ ರೂಪಂ’ ಹಾಡಿನ ಸಾಮ್ಯತೆ ಇದೆ. 5 ವರ್ಷಗಳ ಹಿಂದೆ ‘ನವರಸಂ’ ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು, ಅದರ ಟ್ಯೂನ್ ಕಾಪಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಕಾಪಿ ರೈಟ್ ಉಲ್ಲಂಘನೆಯಾಗಿದ್ದು, ‘ಕಾಂತಾರ’ ಚಿತ್ರತಂಡದ

ಕಾಂತಾರದ ವಿರುದ್ದ ಕಾನೂನು ಸಮರಕ್ಕೆ ಸಿದ್ಧತೆ| ‘ವರಾಹರೂಪಂ’ ಮೇಲೆ ಕೃತಿಚೌರ್ಯದ ಕರಿನೆರಳು Read More »

ಬಂಟ್ವಾಳ: ತಲೆನೋವಿನಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೃತ್ಯು

ಸಮಗ್ರ ನ್ಯೂಸ್: ತಲೆನೋವಿನಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಅ.24 ರಂದು ಮಂಚಿಯಲ್ಲಿ ನಡೆದಿದೆ. ಮಂಚಿ ಗ್ರಾಮದ ಮಣ್ಣಗುಳಿ ನಿವಾಸಿ ರತಿ ಕುಲಾಲ್ ಅವರ ಮಗಳು ಭವ್ಯಾ (20) ಮೃತಪಟ್ಟ ವಿದ್ಯಾರ್ಥಿನಿ. ಇವರು ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕೆಲ ದಿನಗಳಿಂದ ತಲೆನೋವು ಎಂದು ಸ್ಥಳೀಯ ಖಾಸಗಿ ವೈದ್ಯರ ಬಳಿ ಪರೀಕ್ಷೆ ಮಾಡಿ ಮದ್ದು ಪಡೆಯುತ್ತಿದ್ದಳು. ಆದರೆ ಆದಿತ್ಯವಾರ ರಾತ್ರಿ ಸುಮಾರು 7 ಗಂಟೆ ವೇಳೆ ತಲೆ ನೋವು

ಬಂಟ್ವಾಳ: ತಲೆನೋವಿನಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೃತ್ಯು Read More »