ಸಮಗ್ರ ಸಮಾಚಾರ

ಸುಳ್ಯ: ವಿಕಲಚೇತನ ಹೆಸರಿನಲ್ಲಿ ಬಂದಿರುವ ಅನುದಾನ ದುರುಪಯೋಗ|ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಮನವಿ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರಪಣೆಗೆ ವಿಕಲಚೇತನ ಹೆಸರಿನಲ್ಲಿ ಬಂದಿರುವ ಅನುದಾನ ದುರುಪಯೋಗ,ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಮನವಿ. ಅರಂತೋಡು ಗ್ರಾಮದ ಬೆದ್ರಪಣೆ ವಿಕಲಚೇತನ ನಿವಾಸಿಯಾದ ಹೊನ್ನಪ್ಪ .ಬಿ.ಬಿನ್ ಸುಬ್ಬಯ್ಯ ಗೌಡ ಎಂಬವರಿಗೆ ಅರಂತೋಡು ಗ್ರಾಮ ಪಂಚಾಯತ್ ಕ್ರಿಯ ಯೋಜನೆ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಬಂದಿರುವ ಕಾಂಕ್ರೀಟ್ರಿಕರಣವನ್ನು ಸುಬ್ಬಯ್ಯ ಗೌಡರ ಮನೆಯಿಂದ ಒಂದುವರೆ ಕಿಲೋಮೀಟರ್ ದೂರದಲ್ಲಿರುವಂತ ಮೇಲಡ್ತಲೆ ವೆಂಕಪ್ಪ ಗೌಡರ ಮನೆಯ ಬಳಿ ಕಾಂಕ್ರೀಟ್ರಿಕರಣ ಮಾಡಿದ್ದಾರೆ. ವಿಕಲಚೇತನದವರಿಗೆ ಸರಕಾರದಿಂದ ಬರುವಂತ ಸವಲತ್ತುಗಳನ್ನು ಈ ರೀತಿಯಾಗಿ

ಸುಳ್ಯ: ವಿಕಲಚೇತನ ಹೆಸರಿನಲ್ಲಿ ಬಂದಿರುವ ಅನುದಾನ ದುರುಪಯೋಗ|ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಮನವಿ Read More »

ಪುತ್ತೂರು: ‘ರೈಟ್ ಪೋಯಿ’ ಎಂದ ವಿದ್ಯಾರ್ಥಿ|ನಿರ್ವಾಹಕನನ್ನು ಬಿಟ್ಟು ಬಸ್ ಚಲಾಯಿಸಿಕೊಂಡು ಹೋದ ಚಾಲಕ

ಸಮಗ್ರ ನ್ಯೂಸ್: ನಿರ್ವಾಹಕನನ್ನು ನಿಲ್ದಾಣದಲ್ಲಿಯೇ ಬಿಟ್ಟು ಚಾಲಕ ಬಸ್ ಚಲಾಯಿಸಿಕೊಂಡು ಹೋದ ಘಟನೆ ಪುತ್ತೂರಿನಲ್ಲಿ ನ.3ರಂದು ನಡೆದಿದೆ. ಪುತ್ತೂರುನಿಂದ ಮಂಗಳೂರಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಚಾಲಕ ನಿರ್ವಾಹಕನನ್ನು ಪುತ್ತೂರು ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದರು. ನಿಲ್ದಾಣದಿಂದ ಬಸ್ ಹೊರಡುವ ವೇಳೆ ವಿದ್ಯಾರ್ಥಿಯೋರ್ವ ‘ರೈಟ್ ಪೋಯಿ’ ಎಂದು ಹೇಳಿದ್ದ.‌ ನಿರ್ವಾಹಕನೇ ‘ರೈಟ್ ಪೋಯಿ’ ಎಂದು ಹೇಳಿದ್ದಾಗಿ ಭಾವಿಸಿದ ಚಾಲಕ ಬಸ್ ಚಲಾಯಿಸಿದ್ದಾರೆ. ಪುತ್ತೂರು ನಿಲ್ದಾಣದಿಂದ ಹೊರಟ ಬಸ್ ಎಂ.ಟಿ.ರಸ್ತೆಯಾಗಿ ತಾಲೂಕು ಕಛೇರಿ ರಸ್ತೆ ದಾಟಿ ಮುಖ್ಯ ರಸ್ತೆಗೆ ಪ್ರವೇಶಿಸುತ್ತಿದ್ದಂತೆಯೇ

ಪುತ್ತೂರು: ‘ರೈಟ್ ಪೋಯಿ’ ಎಂದ ವಿದ್ಯಾರ್ಥಿ|ನಿರ್ವಾಹಕನನ್ನು ಬಿಟ್ಟು ಬಸ್ ಚಲಾಯಿಸಿಕೊಂಡು ಹೋದ ಚಾಲಕ Read More »

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ| ಆಪ್ತ ಸಹಾಯಕ ಸಾವು

ಸಮಗ್ರ ನ್ಯೂಸ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪಾಕಿಸ್ತಾನದ ಶಹಬಾಜ್ ಷರೀಫ್ ಸರ್ಕಾರದ ವಿರುದ್ಧ ಲಾಹೋರ್‌ ನಿಂದ ಇಸ್ಲಾಮಾಬಾದ್‌ಗೆ ಮೆರವಣಿಗೆ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ. ಇಮ್ರಾನ್ ಖಾನ್ ಗುರುವಾರ ವಜೀರಾಬಾದ್‌ ನಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಮ್ರಾನ್ ಖಾನ್ ಸೇರಿದಂತೆ 6 ಜನರು ಗಾಯಗೊಂಡಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಗುಂಡು ಹಾರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಇಮ್ರಾನ್

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ| ಆಪ್ತ ಸಹಾಯಕ ಸಾವು Read More »

ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ರೇಣುಕಾಚಾರ್ಯ ರವರ ಸಹೋದರ ಪುತ್ರ ಕಾಲುವೆಯೊಂದರಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಇಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ತುಂಗಾ ಕಾಲುವೆ ಬಳಿ ಸಂಭವಿಸಿದೆ. ಶಾಸಕ ರೇಣುಕಾಚಾರ್ಯ ರವರ ಸಹೋದರನ ಮಗ ಚಂದ್ರ ಶೇಖರ್ ಕಳೆದ ಐದು ದಿನಗಳಿಂದ ಕಾಣೆಯಾಗಿದ್ದರು. ಈ ಬಗ್ಗೆ ಎಲ್ಲೆಡೆ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿತ್ತು. ತುಂಗಾ ಕಾಲುವೆಗೆ ಕಾರು ಬಿದ್ದ ಬಗ್ಗೆ ಶಂಕೆ ವ್ಯಕ್ತವಾಗಿತ್ತು ಈ ಹಿನ್ನಲೆಯಲ್ಲಿ ಕಾಲುವೆಯಲ್ಲಿ ಶೋಧ

ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಶವವಾಗಿ ಪತ್ತೆ Read More »

ಕಿನ್ನಿಗೋಳಿ: ಅತಿವೇಗದ ಕಾರ್ ಡಿಕ್ಕಿ, ಮಹಿಳೆ ಗಂಭೀರ

ಸಮಗ್ರ ನ್ಯೂಸ್: ಪಾದಚಾರಿ ಮಹಿಳೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಿಸಿದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಆಕೆ ಗಂಭೀರ ಗಾಯಗೊಂಡ ಘಟನೆ ಕಿನ್ನಿಗೋಳಿಯ ಮುಖ್ಯರಸ್ತೆಯಲ್ಲಿ ಸಂಭವಿಸಿದೆ. ಗಾಯಾಳುವನ್ನು ಕೆಮ್ರಾಲ್ ಮನೋಲಿ ಬಲ್ಲೆ ನಿವಾಸಿ ಜಯಂತಿ ಶೆಟ್ಟಿ ಎಂದು ಗುರುತಿಸಲಾಗಿದೆ. ಜಯಂತಿ ಅವರು ಕಿನ್ನಿಗೋಳಿ ಚರ್ಚ್ ಕಡೆಯಿಂದ ತರಕಾರಿ ಹಿಡಿದುಕೊಂಡು ನಡೆದುಕೊಂಡು ಬರುತ್ತಿದ್ದ ಸಂದರ್ಭ ಕಿನ್ನಿಗೋಳಿ ಕಡೆಯಿಂದ ಮೂರುಕಾವೇರಿ ಕಡೆಗೆ ಸಂಚರಿಸುತ್ತಿದ್ದ ಬ್ರೀಜಾ ಕಾರು ಡಿಕ್ಕಿ ಹೊಡೆದಿದೆ, ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ದೂರಕ್ಕೆ ಹಾರಿದ್ದು ಗಂಭೀರ ಗಾಯಗೊಂಡಿದ್ದಾರೆ.

ಕಿನ್ನಿಗೋಳಿ: ಅತಿವೇಗದ ಕಾರ್ ಡಿಕ್ಕಿ, ಮಹಿಳೆ ಗಂಭೀರ Read More »

ಪ್ರಧಾನಿ ಭಾಷಣದ ವೇಳೆ ಪೆಂಡಾಲ್ ನಿಂದ ಬೋಲ್ಟ್ ತೆಗೆದ ಭೂಪ| ಆರೋಪಿಯನ್ನು ಬಂಧಿಸಿದ ಪೊಲೀಸರು

ಸಮಗ್ರ ನ್ಯೂಸ್: ಗುಜರಾತ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡುತ್ತಿರುವಾಗಲೇ ಸಾರ್ವಜನಿಕವಾಗಿ ಹಾಕಲಾದ ಪೆಂಡಾಲ್‌ನಿಂದ ಬೋಲ್ಟ್ ಅನ್ನು ತೆಗದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕಳೆದ ಅಕ್ಟೋಬರ್ 31ರಂದು ಥರಾಡ್‌ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಯಲ್ಲಿನ ವಿಡಿಯೋವೊಂದು ವೈರಲ್ ಆಗಿತ್ತು. ಒಂದು ಕಡೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದರೆ, ಇನ್ನೊಂದು ಮಗ್ಗಲಿನಲ್ಲಿ ಸಾರ್ವಜನಿಕ ಸಭೆಗಾಗಿ ಹಾಕಿದ್ದ ಮಂಟಪದ ಬೋಲ್ಟ್ ಅನ್ನು ಬಿಚ್ಚಿ, ತೆಗೆಯುತ್ತಿರುವುದು ವಿಡಿಯೋದಲ್ಲಿ ಗೋಚರಿಸಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್

ಪ್ರಧಾನಿ ಭಾಷಣದ ವೇಳೆ ಪೆಂಡಾಲ್ ನಿಂದ ಬೋಲ್ಟ್ ತೆಗೆದ ಭೂಪ| ಆರೋಪಿಯನ್ನು ಬಂಧಿಸಿದ ಪೊಲೀಸರು Read More »

ಸುಳ್ಯ ಕೆ.ವಿ.ಜಿ.ಆಸ್ಪತ್ರೆಗೆ ಸೇರಿದ ‌ಆಂಬ್ಯುಲೆನ್ಸ್ ಗೆ ಲಾರಿ ಡಿಕ್ಕಿ

ಸಮಗ್ರ ನ್ಯೂಸ್: ಟಿಪ್ಪರ್ ಲಾರಿಯೊಂದು ಅಂಬ್ಯುಲೆನ್ಸ್ ವಾಹನಕ್ಕೆ ಡಿಕ್ಕಿಯಾದ ಘಟನೆ ಮೆಲ್ಕಾರ್ ಸಮೀಪದ ನರಹರಿ ಎಂಬಲ್ಲಿ ನ.2ರ ರಾತ್ರಿ ವೇಳೆ ಸಂಭವಿಸಿದೆ. ಸುಳ್ಯ ಕೆ.ವಿ.ಜಿ.ಆಸ್ಪತ್ರೆಗೆ ಸೇರಿದ ‌ಆಂಬ್ಯುಲೆನ್ಸ್ ಇದಾಗಿದ್ದು, ರೋಗಿಯೋರ್ವರನ್ನು ಕೆ.ವಿ.ಜಿ.ಆಸ್ಪತ್ರೆಯಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಈ‌ ಘಟನೆ ನಡೆದಿದೆ. ದಿವ್ಯ ರೂಪ ಗುತ್ತಿಗೆ ಸಂಸ್ಥೆಗೆ ಸೇರಿದ ಲಾರಿ‌ ಇದಾಗಿದ್ದು, ಅಪಘಾತದಲ್ಲಿ ಚಾಲಕ ಸಹಿತ ರೋಗಿಗೆ ಯಾವುದೇ ಅಪಾಯವಾಗಿಲ್ಲ.

ಸುಳ್ಯ ಕೆ.ವಿ.ಜಿ.ಆಸ್ಪತ್ರೆಗೆ ಸೇರಿದ ‌ಆಂಬ್ಯುಲೆನ್ಸ್ ಗೆ ಲಾರಿ ಡಿಕ್ಕಿ Read More »

ಮಂಗಳೂರು: ಕಾಂತಾರ ಸಿನಿಮಾ ನೋಡಿ ಪ್ರೇರಿತಗೊಂಡ ಯುವತಿ|ಪಂಜುರ್ಲಿಯಂತೆ ವೇಷ ಧರಿಸಿದ ವೀಡಿಯೋ ವೈರಲ್

ಸಮಗ್ರ ನ್ಯೂಸ್: ಕಾಂತಾರ ಸಿನೇಮಾ ನೋಡಿ ಪ್ರೇರಿತಗೊಂಡ ಯುವತಿಯೊಬ್ಬಳು ಚಿತ್ರದಲ್ಲಿರುವಂತೆ ಪಂಜುರ್ಲಿಯಂತೆ ವೇಷ ಧರಿಸಿ ವೀಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಕಾಂತಾರ ಸಿನಿಮಾವನ್ನು ನೋಡಿದ ಈ ಯುವತಿ ​ ಪಂಜುರ್ಲಿಯಂತೆ ವೇಷ ಧರಿಸಿ ಕುಣಿದು ಕುಪ್ಪಳಿಸಿ ರೀಲ್ಸ್​ ಮಾಡಿದ್ದಾಳೆ. ವೃತ್ತಿಯಲ್ಲಿ ಮೇಕಪ್​ ಆರ್ಟಿಸ್ಟ್​ ಆಗಿರುವ ಶ್ವೇತಾ ರೆಡ್ಡಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊ ಹಂಚಿಕೊಂಡ ಬಳಿಕ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ

ಮಂಗಳೂರು: ಕಾಂತಾರ ಸಿನಿಮಾ ನೋಡಿ ಪ್ರೇರಿತಗೊಂಡ ಯುವತಿ|ಪಂಜುರ್ಲಿಯಂತೆ ವೇಷ ಧರಿಸಿದ ವೀಡಿಯೋ ವೈರಲ್ Read More »

ಮೂಡಿಗೆರೆ: ರಾಕೆಟ್ ಬಿಟ್ಟಎಡವಟ್ಟು ಬೆಂಕಿಗಾಹುತಿಯಾದ ಮನೆ

ಸಮಗ್ರ ನ್ಯೂಸ್: ಪಟಾಕಿಯಿಂದ ಸಿಡಿದ ಕಿಡಿ ತಗುಲಿ ಮನೆಯೊಂದಕ್ಕೆ‌ ಬೆಂಕಿ ಹತ್ತಿಕೊಂಡ ಘಟನೆ ಮೂಡಿಗೆರೆ ಪಟ್ಟಣದ ಛತ್ರ ಮೈದಾನದಲ್ಲಿ ನಡೆದಿದೆ. ರಾತ್ರಿ ಸಮಯದಲ್ಲಿ ಛತ್ರಮೈದಾನದಲ್ಲಿ ಪಟಾಕಿ‌ ಸಿಡಿಸುತ್ತಿದ್ದ ವೇಳೆ ಹಾರಿದ ರಾಕೆಟ್ ವೊಂದು‌ ಮನೆಯೊಂದರ ಮಹಡಿಯಲ್ಲಿ ಒಣ ಹಾಕಿದ್ದ ಬಟ್ಟೆಗೆ ತಗುಲಿದ್ದು ಬಟ್ಟೆಗೆ ಬೆಂಕಿ ಹಿಡಿದುಕೊಂಡು ಆ ಬೆಂಕಿ ಇಡಿ‌ ಮನೆಗೆ ಆವರಿಸಿದೆ. ಕೂಡಲೇ ಸ್ಥಳೀಯರು ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ‌. ಮನೆಯಲ್ಲಿ ಆ ಸಮಯದಲ್ಲಿ ಯಾರು ಇಲ್ಲದೆ ‌ಇರುವುದರಿಂದ ಪ್ರಾಣಾಪಾಯ ಆಗುವುದು ತಪ್ಪಿದಂತಾಗಿದೆ.

ಮೂಡಿಗೆರೆ: ರಾಕೆಟ್ ಬಿಟ್ಟಎಡವಟ್ಟು ಬೆಂಕಿಗಾಹುತಿಯಾದ ಮನೆ Read More »

ಮಂಗಳೂರು: ಅತಿಯಾದ ಸಂಶಯ| ಪತ್ನಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿದ ಪತಿ

ಸಮಗ್ರ ನ್ಯೂಸ್: ಪತ್ನಿಯ ಮೇಲೆ ಅತಿಯಾದ ಸಂಶಯದಿಂದ ವ್ಯಕ್ತಿಯೊಬ್ಬ ಪತ್ನಿಯನ್ನ ಕತ್ತು ಹಿಸುಕಿ ಕೊಂದು ನಂತರ ತಾನೂ ತೋಟದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಪಿಲಾರು ಪಂಜಂದಾಯ ದೈವಸ್ಥಾನದ ಬಳಿ ನಡೆದಿದೆ. ಪಿಲಾರು ನಿವಾಸಿಗಳಾದ ಶೋಭಾ ಪೂಜಾರಿ (45) ಕೊಲೆಯಾದ ಮಹಿಳೆ ಮತ್ತು ಅಕೆಯ ಪತಿ ಶಿವಾನಂದ ಪೂಜಾರಿ (55)ಆತ್ಮಹತ್ಯೆ ಮಾಡಿಕೊಂಡವರು. ಬೆಳಗ್ಗೆ ಹತ್ತು ಗಂಟೆ ವೇಳೆಗೆ ಶೋಭಾ ಅವರು ಮನೆ ಹತ್ತಿರದ ಇನ್ನೂರು ಗುತ್ತು ಕುಟುಂಬಸ್ಥರ ಮನೆಯಿಂದ ಗೊಬ್ಬರ

ಮಂಗಳೂರು: ಅತಿಯಾದ ಸಂಶಯ| ಪತ್ನಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿದ ಪತಿ Read More »