Editor

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಇದು ಅಕ್ಟೋಬರ್ ತಿಂಗಳ ಎರಡನೇ ವಾರ. 06 ರಿಂದ 12 ರವರೆಗೆ ಇರಲಿದೆ. ಶುಕ್ರನು ಈ ವಾರದಲ್ಲಿ ಸ್ವಕ್ಷೇತ್ರ ಹಾಗೂ ಬುಧನು ಶುಕ್ರನ ಜೊತೆ ಯೋಗವನ್ನು ಪಡೆಯುವ ಕಾರಣ ಒಳ್ಳೆಯ ಯೋಗವಿದೆ. ಇದೇ ಸಂದರ್ಭದಲ್ಲಿ ನವರಾತ್ರವೂ ಬಂದಿರುವ ಕಾರಣ ಮಹಾಕಾಳಿ, ಮಹಾಲಕ್ಷ್ಮಿ, ‌ಮಹಾಸರಸ್ವತಿಯರನ್ನೂ ಶ್ರದ್ಧಾ ಭಕ್ತಿಯಿಂದ ಆರಾಧಿಸಿದರೆ ಚಿಂತಿತ ಕಾಮನೆಯನ್ನು ಪೂರೈಸುತ್ತಾರೆ. ಒಳ್ಳೆಯ ಮನಸ್ಸಿನಿಂದ ಒಳ್ಳೆಯದನ್ನು ಕೇಳಿಕೊಂಡು, ಒಳ್ಳೆಯ ರೀತಿಯಿಂದ‌ ಬಾಳಿರಿ. ಮೇಷ ರಾಶಿ : ಮೊದಲ ರಾಶಿಯವರಿಗೆ ಬುಧನ ಸಂಚಾರದಿಂದ ಬಂಧುಗಳ ನಡುವೆ […]

ದ್ವಾದಶ ರಾಶಿಗಳ ವಾರಭವಿಷ್ಯ Read More »

ಹೃದಯಾಘಾತದಿಂದ ತೆಲುಗು ನಟ ರಾಜೇಂದ್ರ ಪ್ರಸಾದ್ ಪುತ್ರಿ ಗಾಯಿತ್ರಿ ನಿಧನ

ಸಮಗ್ರ ನ್ಯೂಸ್: ಟಾಲಿವುಡ್ ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರ ಪುತ್ರಿ ಗಾಯತ್ರಿ (38) ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಗಾಯಿತ್ರಿ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಹೈದರಾಬಾದ್ ನ AIG ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಹೃದಯಾಘಾತದಿಂದ ತೆಲುಗು ನಟ ರಾಜೇಂದ್ರ ಪ್ರಸಾದ್ ಪುತ್ರಿ ಗಾಯಿತ್ರಿ ನಿಧನ Read More »

ಕಾರು-ಬೈಕ್ ಡಿಕ್ಕಿ;ಬೈಕ್ ಸವಾರ ಸಾವು

ಸಮಗ್ರ ನ್ಯೂಸ್: ಕಾರು-ಬೈಕ್ ನಡುವೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟ ಘಟನೆ ಅ.05 ರಂದು ಕಡಬದಲ್ಲಿ ನಡೆದಿದೆ. ಮೃತರನ್ನು‌ ಕಡಬ ಹಳೇಸ್ಟೇಷನ್ ನಿವಾಸಿ ಹಸೈನಾರ್ ಎಂದು ಗುರುತಿಸಲಾಗಿದೆ. ಹಸೈನಾರ್ ತನ್ನ ಮನೆಯಿಂದ ಕಡಬ ಕಡೆಗೆ ಬರುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರೊಂದು ಢಿಕ್ಕಿ ಹೊಡೆದ ದುರ್ಘಟನೆ ಸಂಭವಿಸಿದೆ. ಅಪಘಾತದ ದೃಶ್ಯ ಸ್ಥಳೀಯ ಇಂಡಸ್ಟ್ರೀಸ್ ಒಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ

ಕಾರು-ಬೈಕ್ ಡಿಕ್ಕಿ;ಬೈಕ್ ಸವಾರ ಸಾವು Read More »

ಕಾಮನ್‌ವೆಲ್ತ್‌ ಗೇಮ್ಸ್‌/ ನೂತನ ದಾಖಲೆ ನಿರ್ಮಿಸಿದ ದಿಶಾ ಮೋಹನ್‌

ಸಮಗ್ರ ನ್ಯೂಸ್‌: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್‌ಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಬೆಂಗಳೂರು ಮೂಲದ ದಿಶಾ ಮೋಹನ್ ಹೊಸ ದಾಖಲೆಯನ್ನು ಬರೆದಿದ್ದಾರೆ. ಎಕ್ಸಿಪ್ಟ್ ಸಬ್ ಜೂನಿಯರ್ 57 ಕೆಜಿ, ಸಬ್ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ 78 ಕೆಜಿ ತೂಕದ ಬೆಂಚ್ ಪ್ರೆಸ್‌ನಲ್ಲಿ ಯಶಸ್ವಿಯಾಗಿ ಎತ್ತುವುದರ ಮೂಲಕ ನೂತನ ದಾಖಲೆಯನ್ನು ಮಾಡಿದ್ದಾರೆ. ದಿಶಾ ಮೋಹನ್ ಅವರು ಬೆಂಗಳೂರಿನ ಬಾಲರ್ಕ ಫಿಟ್ನಸ್ ಸೆಂಟರ್, ಜೆ.ಪಿ ನಗರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ತರಬೇತುದಾರ ವಿಶ್ವನಾಥ ಭಾಸ್ಕರ್ ಅವರಿಂದ ತರಬೇತಿ

ಕಾಮನ್‌ವೆಲ್ತ್‌ ಗೇಮ್ಸ್‌/ ನೂತನ ದಾಖಲೆ ನಿರ್ಮಿಸಿದ ದಿಶಾ ಮೋಹನ್‌ Read More »

SSLC; ಮಧ್ಯ ವಾರ್ಷಿಕ ಪರೀಕ್ಷಾ ಫಲಿತಾಂಶ ಅ. 25 ಕ್ಕೆ

ಸಮಗ್ರ ನ್ಯೂಸ್: ಹತ್ತನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಅ. 25ರಂದು ಪ್ರಕಟಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚನೆ ನೀಡಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಪ್ರಕಟಿಸುವ ಬಗ್ಗೆ ಈ ಮೊದಲು ಚಿಂತನೆ ನಡೆಸಲಾಗಿತ್ತು.ಆದರೆ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ದಸರಾ ರಜೆಯ ಅವಧಿಯಲ್ಲಿ ಮೌಲ್ಯಮಾಪನ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ರಜಾ ಅವಧಿ ಮುಕ್ತಾಯಗೊಂಡ ಬಳಿಕ ನಡೆಸುವಂತೆ ಮಂಡಳಿ ಸೂಚಿಸಿದೆ.

SSLC; ಮಧ್ಯ ವಾರ್ಷಿಕ ಪರೀಕ್ಷಾ ಫಲಿತಾಂಶ ಅ. 25 ಕ್ಕೆ Read More »

ಸಿಲಿಕಾನ್‌ ಸಿಟಿಯಲ್ಲಿ ದರ ಏರಿಕೆಯ ಬಿಸಿ/ ಸದ್ಯದಲ್ಲೇ ಏರಲಿದೆ ಮೆಟ್ರೋ ದರ

ಸಮಗ್ರ ನ್ಯೂಸ್‌: ಬೆಂಗಳೂರು ನಗರದಲ್ಲಿ ದರ ಏರಿಕೆಯ ಬಿಸಿ ಹೆಚ್ಚುತ್ತಿದ್ದು, ಇದೀಗ ನಮ್ಮ ಮೆಟ್ರೋ ರೈಲು ದರ ಏರಿಕೆ ಬಗ್ಗೆ ಪ್ರಸ್ತಾಪ ಮಾಡಿದೆ. ಹಲವಾರು ಬಾರಿ ಮೆಟ್ರೋ ದರ ಏರಿಕೆ ಬಗ್ಗೆ, ಬಿಎಂಆರ್‌ಸಿಎಲ್ ಪ್ರಸ್ತಾಪಿಸಿದ್ದು, ಶೀಘ್ರದಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆಯಿದೆ. ಮೆಟ್ರೋ ದರ ನಿಗದಿ ಸಮಿತಿಯನ್ನು ರಚಿಸಿದ್ದು 15% ರಿಂದ 20% ರಷ್ಟು ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಈ ಕುರಿತು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಾನ್

ಸಿಲಿಕಾನ್‌ ಸಿಟಿಯಲ್ಲಿ ದರ ಏರಿಕೆಯ ಬಿಸಿ/ ಸದ್ಯದಲ್ಲೇ ಏರಲಿದೆ ಮೆಟ್ರೋ ದರ Read More »

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ/ ಇಂದು ೧೮ನೇ ಕಂತಿನ ಹಣ ಬಿಡುಗಡೆ

ಸಮಗ್ರ ನ್ಯೂಸ್‌: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯ 18 ನೇ ಕಂತನ್ನು ಮಹಾರಾಷ್ಟ್ರದ ವಾಶಿಮ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ. 20,000 ಕೋಟಿ ರೂ.ಗೂ ಹೆಚ್ಚು ಮೊತ್ತದ ಈ ಕಂತನ್ನು ರಾಷ್ಟ್ರವ್ಯಾಪಿ 9.4 ಕೋಟಿಗೂ ಹೆಚ್ಚು ರೈತರಿಗೆ ನೇರ ಲಾಭ ವರ್ಗಾವಣೆ(ಡಿಬಿಟಿ) ಮೂಲಕ ವಿತರಿಸಲಾಗುವುದು. ಫೆಬ್ರವರಿ 2019 ರಲ್ಲಿ ಪ್ರಾರಂಭವಾದ ಪಿಎಂ-ಕಿಸಾನ್ ಯೋಜನೆಯು ಭೂಹಿಡುವಳಿ ರೈತರಿಗೆ ವಾರ್ಷಿಕ 6,000 ರೂಪಾಯಿಗಳ ಆರ್ಥಿಕ ಪ್ರಯೋಜನವನ್ನು ಒದಗಿಸುತ್ತದೆ, ಮೂರು ಸಮಾನ ಕಂತುಗಳಲ್ಲಿ ವಿತರಿಸಲಾಗಿದೆ. ಈ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ/ ಇಂದು ೧೮ನೇ ಕಂತಿನ ಹಣ ಬಿಡುಗಡೆ Read More »

ಬಿಗ್‌ಬಾಸ್‌ ಹೊಸ ಅಧ್ಯಾಯಕ್ಕೆ ಆರಂಭದಲ್ಲೇ ಕಂಟಕ/ ಮಹಿಳಾ ಆಯೋಗಕ್ಕೆ ದೂರು

ಸಮಗ್ರ ನ್ಯೂಸ್‌: ಸ್ವರ್ಗ ಹಾಗೂ ನರಕ ಎಂಬ ಎರಡು ಕಾನ್ಸೆಪ್ಟ್ ಇಟ್ಟುಕೊಂಡು ಅದ್ದೂರಿಯಾಗಿ ಆರಂಭಗೊಂಡ ಕನ್ನಡದ ಬಿಗ್‌ಬಾಸ್ ಸೀಸನ್ ೧೧ಕ್ಕೆ ಮೊದಲ ವಾರದಲ್ಲಿ ಶುರುವಾದ ಕಂಟಕವೊಂದು ಎದುರಾಗಿದೆ. ಬಿಗ್‌ಬಾಸ್ ಶೋ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ವಕೀಲೆ ದೂರು ಕೊಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಹಾಗೂ ನಟ ಸುದೀಪ್ ಅವರು ನಿರೂಪಣೆ ಮಾಡುವ ಬಿಗ್‌ಬಾಸ್ ಸೀಸನ್ 11 ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಪುರುಷ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಬಿಗ್‌ಬಾಸ್ 11ರ ಕಾರ್ಯಕ್ರಮದಲ್ಲಿ ಸ್ವರ್ಗ ಮತ್ತು ನರಕ ಎಂಬ

ಬಿಗ್‌ಬಾಸ್‌ ಹೊಸ ಅಧ್ಯಾಯಕ್ಕೆ ಆರಂಭದಲ್ಲೇ ಕಂಟಕ/ ಮಹಿಳಾ ಆಯೋಗಕ್ಕೆ ದೂರು Read More »

ಮೈಸೂರು ದಸರಾ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ: ಸಾರಿಗೆ ಇಲಾಖೆ ಆದೇಶ

ಸಮಗ್ರ ನ್ಯೂಸ್: ವಿಶ್ವವಿಖ್ಯಾತ ದಸರಾ ಹಬ್ಬದ ಅಂಗವಾಗಿ ಹೊರ ರಾಜ್ಯಗಳಿಂದ ಮೈಸೂರಿಗೆ ಬರುವ ಪ್ರವಾಸಿ ವಾಹನಗಳಿಗೆ ಅಕ್ಟೋಬ‌ರ್ 4 ರಿಂದ 12 ರವರೆಗೆ ಪ್ರವೇಶ ತೆರಿಗೆ ವಿನಾಯಿತಿ ನೀಡಿ ಸಾರಿಗೆ ಇಲಾಖೆ ಆದೇಶಿಸಿದೆ. ಹೊರ ರಾಜ್ಯದ ಹಳದಿ ಬೋರ್ಡ್ ವಾಹನಗಳಿಗೆ ಪ್ರವೇಶ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.ರಾಜ್ಯ ಪ್ರವೇಶಕ್ಕೆ ಮೊದಲು ಗಡಿಭಾಗದಲ್ಲಿ ವಿಶೇಷ ರಹದಾರಿ ಪಡೆಯಬೇಕಿದೆ. ಮೈಸೂರು ನಗರ ಮತ್ತು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಜಲಾಶಯ ವೀಕ್ಷಸಲು ಬರುವ ಪ್ರವಾಸಿ ವಾಹನಗಳಿಗೆ ಮಾತ್ರ ತೆರಿಗೆ ವಿನಾಯಿತಿ

ಮೈಸೂರು ದಸರಾ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ: ಸಾರಿಗೆ ಇಲಾಖೆ ಆದೇಶ Read More »

ಹರ್ಯಾಣ: ವಿಧಾನಸಭಾ ಚುನಾವಣಾ ಮತದಾನ

ಸಮಗ್ರ ನ್ಯೂಸ್:ಹರ್ಯಾಣ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಅ.05 ರಂದು ಬೆಳಗ್ಗೆ ಆರಂಭವಾಗಿದ್ದು, ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಕಾಂಗ್ರೆಸ್‌ನ ಭೂಪಿಂದ‌ರ್ ಸಿಂಗ್ ಹೂಡಾ ಮತ್ತು ಕುಸ್ತಿಪಟು ವಿನೇಶ್ ಫೋಗಟ್, ಬಿಜೆಪಿಯ ದುಶ್ಯಂತ್ ಚೌಟಾಲಾ ಸೇರಿ 1031 ಮಂದಿ ಅಭ್ಯರ್ಥಿಗ ಭವಿಷ್ಯ ನಿರ್ಧಾರವಾಗಲಿದೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 40, ಕಾಂಗ್ರೆಸ್ ಮತ್ತು ಜೆಜೆಪಿ 10 ಸ್ಥಾನ ಗೆದ್ದಿದ್ದವು. ಬಿಜೆಪಿಗೆ ಬಹುಮತ ಬಾರದ ಕಾರಣ ಜೆಜೆಪಿ ಬೆಂಬಲ ನೀಡಿತ್ತು. ಈ ಸಲ ಬಿಜೆಪಿ ಹಾಗೂ ಜೆಜೆಪಿ ಮೈತ್ರಿ

ಹರ್ಯಾಣ: ವಿಧಾನಸಭಾ ಚುನಾವಣಾ ಮತದಾನ Read More »