Editor

ಹರಿಯಾಣ, ಜಮ್ಮು ಮತ್ತು ಕಾಶ್ಮೀರಕ್ಕೆ ವೀಕ್ಷಕರನ್ನು ನೇಮಕ ಮಾಡಿದ ಬಿಜೆಪಿ

ಸಮಗ್ರ ನ್ಯೂಸ್‌: ಹರಿಯಾಣ, ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಯ ಬೆನ್ನಲ್ಲೇ ಬಿಜೆಪಿಯಿಂದ ಈ ಎರಡು ರಾಜ್ಯಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಅವರನ್ನು ಹರಿಯಾಣ ರಾಜ್ಯದ ವೀಕ್ಷಕರಾಗಿ ಬಿಜೆಪಿ ನೇಮಕ ಮಾಡಿದೆ. ಕೇಂದ್ರ ಸಚಿವ ಪ್ರಲ್ಯಾದ್ ಜೋಶಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ವೀಕ್ಷಕರಾಗಿ ಬಿಜೆಪಿ ನೇಮಕ ಮಾಡಿದೆ.

ಹರಿಯಾಣ, ಜಮ್ಮು ಮತ್ತು ಕಾಶ್ಮೀರಕ್ಕೆ ವೀಕ್ಷಕರನ್ನು ನೇಮಕ ಮಾಡಿದ ಬಿಜೆಪಿ Read More »

ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ದಿನ/ ವಿಶ್ವಸಂಸ್ಥೆ ಧ್ವಜವನ್ನು ಹಾರಿಸಲು ಗ್ರಹ ಸಚಿವಾಲಯದಿಂದ ಕೇಂದ್ರ ಇಲಾಖೆಗಳಿಗೆ ನಿರ್ದೇಶನ

ಸಮಗ್ರ ನ್ಯೂಸ್‌: ವಿಶ್ವಸಂಸ್ಥೆಯ ದಿನವನ್ನು ಅಕ್ಟೋಬರ್ 24 ರಂದು ಆಚರಿಸಲಾಗುತ್ತಿದ್ದು. ಈ ದಿನ ವಿಶ್ವಸಂಸ್ಥೆ ಧ್ವಜವನ್ನು ಹಾರಿಸಲು ಗ್ರಹ ವ್ಯವಹಾರಗಳ ಸಚಿವಾಲಯವು ದೇಶದ ಎಲ್ಲಾ ಕೇಂದ್ರ ಇಲಾಖೆಗಳಿಗೆ ನಿರ್ದೇಶನ ನೀಡಿದೆ. ವಿಶ್ವಸಂಸ್ಥೆಯ ದಿನವನ್ನು ಆಚರಿಸಲು ಈ ತಿಂಗಳ ಅಕ್ಟೋಬರ್ 24 ರಂದು ದೇಶದ ಎಲ್ಲಾ ಪ್ರಮುಖ ಕಟ್ಟಡಗಳ ಮೇಲೆ ರಾಷ್ಟ್ರೀಯ ತ್ರಿವರ್ಣ ಧ್ವಜದೊಂದಿಗೆ ವಿಶ್ವಸಂಸ್ಥೆಯ ಧ್ವಜವನ್ನು ಹಾರಿಸುವಂತೆ ಗೃಹ ವ್ಯವಹಾರಗಳ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ಕೇಂದ್ರ ಇಲಾಖೆಗಳಿಗೆ ಹೇಳಿದೆ. ಆದರೆ ವಿಶ್ವಸಂಸ್ಥೆಯ ಧ್ವಜವನ್ನು

ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ದಿನ/ ವಿಶ್ವಸಂಸ್ಥೆ ಧ್ವಜವನ್ನು ಹಾರಿಸಲು ಗ್ರಹ ಸಚಿವಾಲಯದಿಂದ ಕೇಂದ್ರ ಇಲಾಖೆಗಳಿಗೆ ನಿರ್ದೇಶನ Read More »

ಬ್ರಿಕ್ಸ್ ಶೃಂಗಸಭೆ/ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ 34 ದೇಶಗಳು

ಸಮಗ್ರ ನ್ಯೂಸ್‌: ಕಜಾನ್‌ನಲ್ಲಿ ಅಕ್ಟೋಬರ್ 22 ಮತ್ತು ಅಕ್ಟೋಬರ್ 24ರಂದು ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಬ್ರಿಕ್ಸ್ ಸದಸ್ಯತ್ವಕ್ಕಾಗಿ 34 ದೇಶಗಳು ಅಧಿಕೃತವಾಗಿ ಅರ್ಜಿ ಸಲ್ಲಿಸಿದೆ. ಕಜಾನ್‌ನಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ 10 ಹೊಸ ಸದಸ್ಯರು ಮತ್ತು 10 ಪಾಲುದಾರರನ್ನು ಘೋಷಿಸಲಾಗುತ್ತದೆ. ಸಂಘರ್ಷ ಪೀಡಿತ ರಾಷ್ಟ್ರಗಳಾದ ಪ್ಯಾಲೆಸ್ತೀನ್, ಸಿರಿಯಾ ಮತ್ತು ಮ್ಯಾನ್ಮಾರ್ ಕೂಡ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು ಒಮ್ಮತದ ಅಭಿಪ್ರಾಯ ನಂತರ ಘೋಷಣೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಮೂರು ತಿಂಗಳ ಅವಧಿಯಲ್ಲಿ

ಬ್ರಿಕ್ಸ್ ಶೃಂಗಸಭೆ/ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ 34 ದೇಶಗಳು Read More »

ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಆಗಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಮರುನೇಮಕ

ಸಮಗ್ರ ನ್ಯೂಸ್‌: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಅವರನ್ನು ಮುಖ್ಯ ಕೋಚ್ ಆಗಿ ಮುಂಬೈ ಇಂಡಿಯನ್ಸ್ ಮರುನೇಮಕ ಮಾಡಿದೆ. 2017-2022 ರವರೆಗೆ ಮುಂಬೈ ತಂಡಕ್ಕೆ ಮಹೇಲಾ ಜಯವರ್ಧನೆ ಕೋಚ್ ಆಗಿದ್ದ ಅವಧಿಯಲ್ಲಿ ಮುಂಬೈ ಇಂಡಿಯನ್ಸ್ ಮೂರು IPL ಟ್ರೋಫಿಗಳನ್ನು ಗೆದ್ದಿದೆ. 2022 ರಲ್ಲಿ ಜಯವರ್ಧನೆ ಅವರನ್ನು ಮುಖ್ಯ ತರಬೇತುದಾರನ ಸ್ಥಾನದಿಂದ MI ಫ್ರಾಂಚೈಸ್‌ಗಾಗಿ ಗ್ಲೋಬಲ್ ಹೆಡ್ ಆಫ್ ಕ್ರಿಕೆಟ್‌ ಗೆ ವರ್ಗಾಯಿಸಲಾಗಿತ್ತು. ಮಹೇಲಾ ಅವರು ಮುಂಬೈ ಇಂಡಿಯನ್ಸ್‌ ಮುಖ್ಯ ಕೋಚ್ ಆಗಿ ಮರಳಿ ಬಂದಿರುವುದಕ್ಕೆ ನಾವು

ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಆಗಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಮರುನೇಮಕ Read More »

ವಿಚ್ಛೇದನದ ಬಳಿಕ ಸೊಸೆ ಅತ್ತೆ-ಮಾವನ ಮನೆಯಲ್ಲಿ ಇರುವಂತಿಲ್ಲ

ಸಮಗ್ರ ನ್ಯೂಸ್: ವಿಚ್ಚೇದನದ ನಂತರ ಸೊಸೆಯು ಅತ್ತೆ-ಮಾವನ ಮನೆಯಲ್ಲಿ ಇರುವಂತಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಈ ಪ್ರಕರಣವು ವಿಚ್ಛೇದಿತ ದಂಪತಿಗಳಾದ ಶೈಲೇಶ್‌ ಜೇಕಬ್ ಮತ್ತು ಮಲ್ಲಿಕಾ ಬಾಲ್ ನಡುವಿನ ವಿವಾದಕ್ಕೆ ಸಂಬಂಧಿಸಿದೆ. ಬಿಲಾಸ್‌ಪುರದ ಜರ್ಹಭಟ ನಿವಾಸಿಗಳಾದ ಶೈಲೇಶ್‌ಬಿಲಾಸ್‌ಪುರದ ಜರ್ಹಭಟ ನಿವಾಸಿಗಳಾದ ಶೈಲೇಶ್ ಜೇಕಬ್ ಮತ್ತು ಮಲ್ಲಿಕಾ ಬಾಲ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಶೈಲೇಶ್ ಅವರ ತಾಯಿ, ಸಹೋದರ ಮತ್ತು ಸಹೋದರಿಯ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿ ಮಲ್ಲಿಕಾ ಮ್ಯಾಜಿಸ್ಟ್ರೇಟ್ ಅವರು ಹೈಕೋರ್ಟ್‌ನಲ್ಲಿ ಕ್ರಿಮಿನಲ್

ವಿಚ್ಛೇದನದ ಬಳಿಕ ಸೊಸೆ ಅತ್ತೆ-ಮಾವನ ಮನೆಯಲ್ಲಿ ಇರುವಂತಿಲ್ಲ Read More »

Helth tips:ಹಸಿರು ದ್ರಾಕ್ಷಿ ಹಣ್ಣಿನ ಉಪಯುಕ್ತ ಗುಣಗಳು

ಇಲ್ಲಿದೆ ಸಂಪೂರ್ಣ ಮಾಹಿತಿ ಸಮಗ್ರ ನ್ಯೂಸ್ :ದ್ರಾಕ್ಷಿ ಹಣ್ಣುಗಳ ಸೇವನೆ ಮಾಡುವುದು ಆರೋಗ್ಯಕ್ಕೆ ಹಿತಕರ. ಅಲ್ಲದೇ ಇದು ಹೃದಯದ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡುತ್ತದೆ.ವ್ಯಾಯಾಮ ಮಾಡಿದ ನಂತರ ಒಂದು ಲೋಟ ದ್ರಾಕ್ಷಿ ಹಣ್ಣಿನ ರಸವನ್ನು ಪ್ರತಿ ದಿನ ಕುಡಿಯುವುದರಿಂದ ಸೊಂಟದ ಭಾಗದಲ್ಲಿರುವ ಬೊಜ್ಜು ಕಡಿಮೆಯಾಗಿ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ. ಆರೋಗ್ಯ ತಜ್ಞರು ಹೇಳುವ ಹಾಗೆ, ಅನಾರೋಗ್ಯ ಸಮಸ್ಯೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಪರೋಕ್ಷವಾಗಿ ನಮಗೆ ಸಹಾಯ ಮಾಡುವುದು ನಮ್ಮ ದೇಹದ ರೋಗನಿರೋಧಕ ಶಕ್ತಿ ಒಂದೇ.ಹಾಗಾಗಿ ರೋಗನಿರೋಧಕ ಶಕ್ತಿ

Helth tips:ಹಸಿರು ದ್ರಾಕ್ಷಿ ಹಣ್ಣಿನ ಉಪಯುಕ್ತ ಗುಣಗಳು Read More »

ಆರು ವರ್ಷಗಳ ಬಳಿಕ ಜಮ್ಮು-ಕಾಶ್ಮೀರದಿಂದ ರಾಷ್ಟ್ರಪತಿ ಆಳ್ವಿಕೆ ಹಿಂದಕ್ಕೆ| ಹೊಸ ಸರ್ಕಾರ ರಚನೆಗೆ ಅನುಮತಿ ನೀಡಿದ ದ್ರೌಪದಿ ಮುರ್ಮು

ಸಮಗ್ರ ನ್ಯೂಸ್: ಜಮ್ಮುಮತ್ತು ಕಾಶ್ಮೀರ ವಿಧಾನಸಭೆಗೆ ಇತ್ತೀಚೆಗೆ ಚುನಾವಣೆ ನಡೆದಿರುವ ಹಿನ್ನೆಲೆಯಲ್ಲಿ ಆರು ವರ್ಷಗಳ ಹಿಂದೆ ಈ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಿಸಲಾಗಿದ್ದ ರಾಷ್ಟ್ರಪತಿ ಆಡಳಿತವನ್ನು ಕೊನೆಗೊಳಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ನೂತನ ಸರ್ಕಾರ ರಚನೆಗೆ ದಾರಿ ಮಾಡಿಕೊಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ, 2019ರ ಸೆಕ್ಷನ್ 73 (2019 ರ 34) ಮತ್ತು ಭಾರತದ ಸಂವಿಧಾನದ 239 ಮತ್ತು 239 ಎ ವಿಧಿಗಳ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸಲು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ

ಆರು ವರ್ಷಗಳ ಬಳಿಕ ಜಮ್ಮು-ಕಾಶ್ಮೀರದಿಂದ ರಾಷ್ಟ್ರಪತಿ ಆಳ್ವಿಕೆ ಹಿಂದಕ್ಕೆ| ಹೊಸ ಸರ್ಕಾರ ರಚನೆಗೆ ಅನುಮತಿ ನೀಡಿದ ದ್ರೌಪದಿ ಮುರ್ಮು Read More »

ಬಾಬಾ ಸಿದ್ದಿಕಿಯ ಭೀಕರ ಮರ್ಡರ್..! ಹತ್ಯೆ ಹೊಣೆ ಹೊತ್ತುಕೊಂಡ ಬೀಷ್ಣೋಯ್ ಗ್ಯಾಂಗ್

ಸಮಗ್ರ ನ್ಯೂಸ್: ಮಹಾರಾಷ್ಟ್ರ NCP ನಾಯಕ ಬಾಬಾ ಸಿದ್ದಿಕಿಯನ್ನ ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಡಿಸಿಎಂ ಅಜಿತ್ ಪವಾರ್ ಬಣದಲ್ಲಿ ಗುರುತಿಸಿಕೊಂಡ ಬಾಬಾ ಸಿಧ್ಧಿಕಿಯನ್ನು ಕಚೇರಿ ಸಮೀಪದ ರಾಮಮಂದಿರ ಬಳಿ ಶೂಟ್ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹರ್ಯಾಣದ ಕರ್ನೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಮೂರನೆಯವರು ಪರಾರಿಯಾಗಿದ್ದಾರೆ. ದಾಳಿಗೂ ಮುನ್ನಾ ಮೂವರು ಆರೋಪಿಗಳು ರಾತ್ರಿ ಆಟೋ ರಿಕ್ಷಾದಲ್ಲಿ ಬಂದಿದ್ದು, ಸ್ವಲ್ಪ ಸಮಯ

ಬಾಬಾ ಸಿದ್ದಿಕಿಯ ಭೀಕರ ಮರ್ಡರ್..! ಹತ್ಯೆ ಹೊಣೆ ಹೊತ್ತುಕೊಂಡ ಬೀಷ್ಣೋಯ್ ಗ್ಯಾಂಗ್ Read More »

‘ಬಿಗ್ ಬಾಸ್’ ನಿರೂಪಣೆಗೆ ಗುಡ್ ಬೈ ಹೇಳಿದ ಕಿಚ್ಚ ಸುದೀಪ್| ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ

ಸಮಗ್ರ ನ್ಯೂಸ್: ಕಿಚ್ಚ ಸುದೀಪ್​ ಅವರು ‘ಬಿಗ್​ ಬಾಸ್​ ಕನ್ನಡ’ ಕಾರ್ಯಕ್ರಮದ ನಿರೂಪಕನ ಸ್ಥಾನಕ್ಕೆ ಗುಡ್‌ ಬೈ ಘೋಷಿಸಿದ್ದಾರೆ. ಬಿಗ್​ ಬಾಸ್​ ಕನ್ನಡ ಸೀಸನ್‌ 11 ನನ್ನ ಕೊನೆಯ ನಿರೂಪಣೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. 10 ವರ್ಷ ಪೂರೈಸಿ 11 ನೇ ವರ್ಷಕ್ಕೆ ಕಾಲಿಟ್ಟಿರುವ ಬಿಗ್‌ಬಾಸ್‌ ಕಾರ್ಯಕ್ರಮವನ್ನು ಇಷ್ಟು ವರ್ಷ ನಡೆಸಿ ಕೊಟ್ಟ ಸುದೀಪ್ ಈಗ ಏಕಾ ಏಕಿ ಅಧಿಕೃತವಾಗಿ ಘೋಷಣೆ ಮಾಡಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. #BBK11 ಗೆ ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ

‘ಬಿಗ್ ಬಾಸ್’ ನಿರೂಪಣೆಗೆ ಗುಡ್ ಬೈ ಹೇಳಿದ ಕಿಚ್ಚ ಸುದೀಪ್| ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ Read More »

ಹವಾಮಾನ ವರದಿ| ವಾಯುಭಾರ ಕುಸಿತ ಪರಿಣಾಮ| ರಾಜ್ಯದಲ್ಲಿ ಅ.16ರವರೆಗೂ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಪೂರ್ವ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿಗಳ ಪರಿಣಾಮ ರಾಜ್ಯದಲ್ಲಿ ಐದು ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ. ಹವಾಮಾನ ಇಲಾಖೆಯು ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಇಂದಿನಿಂದ ಅಕ್ಟೋಬರ್ 16ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕಳೆದ ಎಂಟು ದಿನಗಳಿಂದ ರಾಜ್ಯದಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ಇದೇ ರೀತಿ ಇನ್ನೂ ಐದು ದಿನಗಳ ಕಾಲ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ. ರಾಜ್ಯದ ಒಳನಾಡಿನ ಹಲವು ಭಾಗಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಿದೆ. ಪೂರ್ವ ಅರಬ್ಬೀ ಸಮುದ್ರ

ಹವಾಮಾನ ವರದಿ| ವಾಯುಭಾರ ಕುಸಿತ ಪರಿಣಾಮ| ರಾಜ್ಯದಲ್ಲಿ ಅ.16ರವರೆಗೂ ಮಳೆ ಸಾಧ್ಯತೆ Read More »