Editor

ಮಂಗಳೂರು: ಅಳಿವೆ ಬಾಗಿಲಲ್ಲಿ ಪತ್ತೆಯಾಯ್ತು ಯುವಕನ ಹೆಣ| ಅಷ್ಟಕ್ಕೂ ಅಲ್ಲಿ ಸತ್ತವ ಯಾರು ಗೊತ್ತಾ?

ಮಂಗಳೂರು ಅಗಸ್ಟ್ 22: ಉಳ್ಳಾಲ ನೇತ್ರಾವತಿ ನದಿ ಸಮೀಪದಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಕೋಟೆಪುರ – ಬೆಂಗ್ರೆಯ ಅಳಿವೆ ಬಾಗಿಲಿನಲ್ಲಿ ಇಂದು ಪತ್ತೆಯಾಗಿದೆ. ಮೃತ ಯುವಕನನ್ನು ಉಳ್ಳಾಲದ ಬಸ್ತಿಪಡ್ಪು ನಿವಾಸಿ ಹಫೀಝ್ ಎಂದು ಗುರುತಿಸಲಾಗಿದ್ದು, ಇತನ ದ್ವಿಚಕ್ರ ವಾಹನ ಉಳ್ಳಾಲದ ನೇತ್ರಾವತಿ ನದಿಯ ಸೇತುವೆ ಬಳಿ ಪತ್ತೆಯಾಗಿತ್ತು. ಕೂಲಿ ಕೆಲಸ ಮಾಡಿಕೊಂಡಿದ್ದ ಹಫೀಝ್ ಶುಕ್ರವಾರ ಬೆಳಗ್ಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳಿದ್ದ. ರಾತ್ರಿಯಾದರೂ ಮರಳಿ ಬಾರದ ಕಾರಣ ಮನೆಮಂದಿ ಹುಡುಕಾಟ ಆರಂಭಿಸಿದ್ದರು. ಶನಿವಾರ ಬೆಳಗ್ಗೆ ನೇತ್ರಾವತಿ ಸೇತುವೆ […]

ಮಂಗಳೂರು: ಅಳಿವೆ ಬಾಗಿಲಲ್ಲಿ ಪತ್ತೆಯಾಯ್ತು ಯುವಕನ ಹೆಣ| ಅಷ್ಟಕ್ಕೂ ಅಲ್ಲಿ ಸತ್ತವ ಯಾರು ಗೊತ್ತಾ? Read More »

ದೇಶಾದ್ಯಂತ ರಕ್ಷಾಬಂಧನ ಸಂಭ್ರಮ| ಗಣ್ಯರಿಂದ ಶುಭಾಶಯ

ನವದೆಹಲಿ: ದೇಶದಾದ್ಯಂತ ಜನರು ಅಣ್ಣ-ತಂಗಿಯರ ಪವಿತ್ರ ಹಬ್ಬವಾದ ರಕ್ಷಾ ಬಂಧನದ ಸಂಭ್ರಮದಲ್ಲಿದ್ದಾರೆ. ಆಗಸ್ಟ್​ 22ರಂದು ಈ ಬಾರಿ ದೇಶದಲ್ಲಿ ರಾಖಿ ಹಬ್ಬ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಮ ಟ್ವಿಟರ್ ಟ್ವೀಟ್ ಮಾಡಿರುವ ಪ್ರದಾನಿ ಮೋದಿಯವರು, ರಕ್ಷಾ ಬಂಧನದ ಪವಿತ್ರ ಹಬ್ಬದಂದು ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವೀೂಟ್ ಮಾಡಿ, ಜನತೆಗೆ ರಕ್ಷಾಬಂಧನದ ಪವಿತ್ರ ಹಬ್ಬದಂದು ಎಲ್ಲಾ

ದೇಶಾದ್ಯಂತ ರಕ್ಷಾಬಂಧನ ಸಂಭ್ರಮ| ಗಣ್ಯರಿಂದ ಶುಭಾಶಯ Read More »

ದ್ವಾದಶ ರಾಶಿಗಳ ವಾರಭವಿಷ್ಯ. ಆ.22ರಿಂದ 28ರವರೆಗೆ

ಜಗತ್ತಿನ ಪ್ರತೀ ಚಲನೆಗೂ ಗ್ರಹಗತಿಗಳೇ ಕಾರಣ ಎಂಬುದು ಶಾಸ್ತ್ರಸಮ್ಮತ ನಂಬಿಕೆ. ಭಾರತೀಯ ಶಾಸ್ತ್ರಗಳ ಪ್ರಕಾರ ಗ್ರಹಚಾರಗಳು ವ್ಯಕ್ತಿಯ ರಾಶಿಗಳ ಚಲನೆಗೆ ಅನುಸಾರವಾಗಿ ನಡೆಯುತ್ತವೆ. ಒಬ್ಬ ವ್ಯಕ್ತಿ ಆತ ಏನೇ ಕೆಲಸ ಕಾರ್ಯ‌ಮಾಡಲು ಆತ ಹುಟ್ಟಿದ ಜನ್ಮ ನಕ್ಷತ್ರ, ರಾಶಿಗಳ ಪ್ರಭಾವ ಕಾರಣ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.ರಾಶಿ‌ ಮತ್ತು ಗ್ರಹಗಳ ಚಲನಗೆ ಅನುಸಾರವಾಗಿ ಆ.22ರಿಂದ 28ರವರೆಗಿನ ಒಂದಿಡೀ ವಾರದ ರಾಶಿಫಲವನ್ನು ನೀಡಲಾಗಿದೆ. ಜೊತೆಗೆ ದೋಷ ಪರಿಹಾರಗಳನ್ನು ತಿಳಿಸಲಾಗಿದೆ. ನಿಮ್ಮ ಈ ವಾರದ ರಾಶಿಭವಿಷ್ಯ ತಿಳಿದುಕೊಂಡು, ವಾರವನ್ನು ಉತ್ತಮಗೊಳಿಸಿಕೊಳ್ಳಿ. ಶುಭವಾಗಲಿ…

ದ್ವಾದಶ ರಾಶಿಗಳ ವಾರಭವಿಷ್ಯ. ಆ.22ರಿಂದ 28ರವರೆಗೆ Read More »

‘ ಲಾ’ ಮರೆತು‌ ಮೈಮುಟ್ಟುತ್ತಿದ್ದ ಲಾಯರ್| ಕಂಬಿ ರುಚಿ ತೋರಿಸಿದ ಯುವತಿ|

ಪುತ್ತೂರು: ತನ್ನ ಕಚೇರಿಯಲ್ಲಿ ಕೆಲಸಕ್ಕಿದ್ದ ಯುವತಿಯೊಬ್ಬಳನ್ನು ಕೆಲಸದ ನೆಪದಲ್ಲಿ ಆಗಾಗ್ಗೆ ಮುಟ್ಟುತ್ತಿದ್ದ ಲಾಯರ್ ಒಬ್ಬಾತನಿಗೆ ಕಾನೂನು ಪಾಠ ಕಲಿಸಿದ ಘಟನೆ ‌ಬಂಟ್ವಾಳದ ವಿಟ್ಲದಲ್ಲಿ ನಡೆದಿದೆ. ವಕೀಲ ಉಮ್ಮರ್ ಎಂಬಾತ ನಗರದ ವಿ.ಹೆಚ್ ಕಾಂಪ್ಲೆಕ್ಸ್ ನಲ್ಲಿ ಕಚೇರಿ ನಡೆಸುತ್ತಿದ್ದು, ಕೆಲಸಕ್ಕಾಗಿ ಹಿಂದೂ ಯುವತಿಯೋರ್ವಳನ್ನು ಕೆಲಸಕ್ಕೆ ಇರಿಸಿದ್ದ. ಕಳೆದ ಸೋಮವಾರ ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ಈತ ಆಕೆಯೊಂದಿಗೆ ಕಾಮ ಪ್ರಚೋದನೆಗೆ ತೊಡಗಿದ್ದು, ಆಕೆಯನ್ನು ಮೈ ಮುಟ್ಟಿ, ತಬ್ಬಿಕೊಳ್ಳಲು ಯತ್ನಿಸಿದ್ದನೆಂದೂ, ಇದರಿಂದ ಭಯಗೊಂಡ ಆಕೆ ಆತನನ್ನು ದೂರ ತಳ್ಳಿರುವುದಾಗಿಯೂ ಹೇಳಲಾಗಿದೆ.

‘ ಲಾ’ ಮರೆತು‌ ಮೈಮುಟ್ಟುತ್ತಿದ್ದ ಲಾಯರ್| ಕಂಬಿ ರುಚಿ ತೋರಿಸಿದ ಯುವತಿ| Read More »

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ವಿಧಿವಶ

ನವದೆಹಲಿ : ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಕೆಲ ನಿಮಿಷಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಕಲ್ಯಾಣ್ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಸೇರಿದಂತೆ ಹಲವು ನಾಯಕರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಕಲ್ಯಾಣ್ ಸಿಂಗ್ ಅವರು ಹಲವು ತಿಂಗಳುಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗೆ ನವದೆಹಲಿಯ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಎಸ್‌ಜಿಪಿಜಿಐ)

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ವಿಧಿವಶ Read More »

ಕಾಬೂಲ್​ನಲ್ಲಿ ಸಿಲುಕಿಕೊಂಡಿದ್ದಾರೆ ಕರ್ನಾಟಕದ ದಕ್ಷ ಅಧಿಕಾರಿ

ಬೆಂಗಳೂರು: ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ಐಪಿಎಸ್ ಅಧಿಕಾರಿ ಸವಿತಾ ಹಂಡೆ ಕಾಬೂಲ್​ನಲ್ಲಿದ್ದು, ಅವರು ಸುರಕ್ಷಿತವಾಗಿ ಭಾರತಕ್ಕೆ ಮರಳಲಿ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಐಪಿಎಸ್ ಅಧಿಕಾರಿ ಸವಿತಾ ಹಂಡೆ ಹೊಳೆನರಸೀಪುರ, ಬೀದರ್​​ನಲ್ಲಿ ಎಎಸ್​ಪಿ ಆಗಿ‌, ಉಡುಪಿ ಮತ್ತು ಹಾಸನ ಜಿಲ್ಲೆಯಲ್ಲಿ ಎಸ್.ಪಿ ಆಗಿ , ಬಳಿಕ ಬೆಂಗಳೂರಿನಲ್ಲಿ ಅಡ್ಮಿನ್ ವಿಭಾಗದ ಡಿಸಿಪಿಯಾಗಿ ಸೇವೆ ಸಲ್ಲಿಸಲ್ಲಿಸಿದ್ದರು. ಇದಾದ ಬಳಿಕ 2000 ಇಸವಿಯಲ್ಲಿ ಮುಂಬಡ್ತಿ ಪಡೆದು ಕೇಂದ್ರದ ಸೇವೆಗೆ ನಿಯೋಜನೆಯಾಗಿದ್ದರು. ಬಳಿಕ ಯು.ಎನ್

ಕಾಬೂಲ್​ನಲ್ಲಿ ಸಿಲುಕಿಕೊಂಡಿದ್ದಾರೆ ಕರ್ನಾಟಕದ ದಕ್ಷ ಅಧಿಕಾರಿ Read More »

ಮಂಗಳೂರು: ಮಹಿಳೆಯರ ಹೇರ್ಬ್ಯಾಂಡ್‌ನಲ್ಲಿಟ್ಟು ಚಿನ್ನ ಸಾಗಟ – ಆರೋಪಿ ವಶಕ್ಕೆ

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ 5,58,900 ಲಕ್ಷದ ಚಿನ್ನ ಸಾಗಟ ಮಾಡುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಇಂದು ನಡೆದಿದೆ. ದುಬೈನಿಂದ ಮಂಗಳೂರಿಗೆ ಆಗಮಿಸಿದ ಮುರುಡೇಶ್ವರ ನಿವಾಸಿಯನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಸಿದಾಗ ಆರೋಪಿಯು ದುಬೈನಿಂದ ಮಹಿಳೆಯರ ಹೇರ್ಬ್ಯಾಂಡ್ ಇನ್ನಿತರ ವಸ್ತುಗಳ ಮೂಲಕ ಚಿನ್ನ ಸಾಗಟ ಮಾಡುತ್ತಿರುವುದು ಪತ್ತೆಯಾಗಿದೆ. ಇನ್ನು ಒಟ್ಟು 115 ಗ್ರಾಂ ನ 558900 ಲಕ್ಷ ಮೌಲ್ಯದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಮಂಗಳೂರು: ಮಹಿಳೆಯರ ಹೇರ್ಬ್ಯಾಂಡ್‌ನಲ್ಲಿಟ್ಟು ಚಿನ್ನ ಸಾಗಟ – ಆರೋಪಿ ವಶಕ್ಕೆ Read More »

ಪರಪುರುಷನೊಂದಿಗೆ ಸಂಬಂಧ – ಮಹಿಳೆಯ ಬಟ್ಟೆಕಳಚಿ ಮೆರವಣಿಗೆ‌ ಮಾಡಿ ಅನಾಗರಿಕ ‌ವರ್ತನೆ

ಜಾರ್ಖಂಡ್‌: ವಿವಾಹಿತ ಪುರುಷನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿವಾಹಿತ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದ ಜಾರ್ಖಂಡ್‌ನ ಡುಮ್ಕಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳನ್ನು ಆಕೆಯ ಕುತ್ತಿಗೆಗೆ ಶೂಗಳ ಮಾಲೆ ಹಾಕಿ ವಿವಸ್ತ್ರಗೊಳಿಸಿದ್ದಾರೆ ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ. ಈ ಘಟನೆ ಡುಮ್ಕಾ ಜಿಲ್ಲೆಯ ರಣೀಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಈ ಘಟನೆಯ ವಿರುದ್ಧ ಪ್ರಕರಣ

ಪರಪುರುಷನೊಂದಿಗೆ ಸಂಬಂಧ – ಮಹಿಳೆಯ ಬಟ್ಟೆಕಳಚಿ ಮೆರವಣಿಗೆ‌ ಮಾಡಿ ಅನಾಗರಿಕ ‌ವರ್ತನೆ Read More »

ಬ್ರಹ್ಮಾವರ: ವಿಶಾಲಾ ಗಾಣಿಗ ಕೊಲೆ ಪ್ರಕರಣ – ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿದ ಪೊಲೀಸರು

ಬ್ರಹ್ಮಾವರ: ಉಪ್ಪಿನಕೋಟೆಯ ಕುಮ್ರಗೋಡು ಎಂಬಲ್ಲಿ ಫ್ಲ್ಯಾಟ್ ನಲ್ಲಿ ವಿಶಾಲಾ ಗಾಣಿಗ ಕೊಲೆಯಾಗಿ ಒಂದೂವರೆ ತಿಂಗಳು ಕಳೆದಿದೆ. ಕೊಲೆಯಾದ ಕೆಲವೇ ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವಿಶಾಲಾಳ ಪತಿ ಸಮೇತ ಇಬ್ಬರನ್ನು ಬಂಧಿಸಲಾಯಿತು. ಇದೀಗ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ, ತಲೆಮರೆಸಿಕೊಂಡಿರುವ ಮೂರನೇ ವ್ಯಕ್ತಿ ಗೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದ ಬಯಲಿಗೆಳೆಯಲು ಸಾಕಷ್ಟು ಶ್ರಮ ಪಟ್ಟಿದ್ದ ಪೊಲೀಸರು, ನೇಪಾಳ ಗಡಿಯ ಸಮೀಪದಿಂದ ಸ್ವಾಮಿಂತ್ ನಿಶಾದ್ ಎಂಬಾತನನ್ನು ಬಂಧಿಸಿದ್ದರು. ವಿಶಾಲಾಳ ಪತಿ ರಾಮಕೃಷ್ಣ ಗಾಣಿಗ ತನ್ನ ಪತ್ನಿಯ ಮೇಲೆ ತುಂಬಾ

ಬ್ರಹ್ಮಾವರ: ವಿಶಾಲಾ ಗಾಣಿಗ ಕೊಲೆ ಪ್ರಕರಣ – ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿದ ಪೊಲೀಸರು Read More »

ಮಂಗಳೂರು: ರೈಲಿನಡಿಗೆ ಸಿಲುಕಿ ಮಹಿಳೆಯರಿಬ್ಬರು ದುರ್ಮರಣ

ಮಂಗಳೂರು: ಹಳಿ ದಾಟುವಾಗ ರೈಲಿನಡಿಗೆ ಸಿಲುಕಿ ಮಹಿಳೆಯರಿಬ್ಬರು ಸಾವನಪ್ಪಿದ ಘಟನೆ ನಗರದ ಮಹಾಕಾಳಿ ಪಡ್ಪು ಎಂಬಲ್ಲಿ ಆ. 21 ರ ಶನಿವಾರ ಬೆಳಿಗ್ಗೆ ಸಂಭವಿಸಿದ. ಮೃತರನ್ನು ಸ್ಥಳೀಯ ನಿವಾಸಿಗಳಾದ ವಸಂತಿ (50) ಮತ್ತು ಪ್ರೇಮಾ (48) ಎಂದು ಗುರುತಿಸಲಾಗಿದೆ. ಬೀಡಿ ಕಾರ್ಮಿಕರಾಗಿದ್ದ ಇವರಿಬ್ಬರು ದಿನಿತ್ಯ ಕುಡುಪ್ಪಾಡಿ ದೋಟ ಎಂಬಲ್ಲಿಂದ ಮಹಾಕಾಳಿಪಡ್ಪುವಿನಲ್ಲಿರುವ ಬ್ರ್ಯಾಂಚ್ ಗೆ ರೈಲು ಹಳಿಯನ್ನು ದಾಟಿ ಬೀಡಿ ಕೊಂಡೊಯ್ಯುತ್ತಿದ್ದರು. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಪಾರ್ಥಿವ ಶರೀರವನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.

ಮಂಗಳೂರು: ರೈಲಿನಡಿಗೆ ಸಿಲುಕಿ ಮಹಿಳೆಯರಿಬ್ಬರು ದುರ್ಮರಣ Read More »