Editor

ಬೆಲೆ ಇಳಿಕೆ ನಿರೀಕ್ಷೆಯಲ್ಲಿ ಅಡುಗೆ ಎಣ್ಣೆ| ಆಮದು ಸುಂಕ ಕಡಿತಕ್ಕೆ ಕೇಂದ್ರ ನಿರ್ಧಾರ

ನವದೆಹಲಿ : ಸಾರ್ವಜನಿಕರಿಗೆ ದೊಡ್ಡ ಪರಿಹಾರ ಸಿಗಲಿದ್ದು, ಹಬ್ಬಗಳಿಗೆ ಮುನ್ನ ಖಾದ್ಯ ತೈಲವನ್ನು ಅಗ್ಗವಾಗಿಸಲು ಕೇಂದ್ರ ಸರ್ಕಾರವು ದೊಡ್ಡ ಹೆಜ್ಜೆಯನ್ನ ಇಟ್ಟಿದೆ. ತೆರಿಗೆ ಕಡಿತಗೊಳಿಸುವುದಾಗಿ ಸರ್ಕಾರ ಘೋಷಿಸಿದೆ. ಕಳೆದ ಹಲವು ತಿಂಗಳುಗಳಿಂದ ಖಾದ್ಯ ತೈಲದ ಬೆಲೆಗಳು ವಿಪಾರೀತ ಏರಿಕೆ ಆಗ್ತಿದ್ದು, ಕೇಂದ್ರ ಸರ್ಕಾರವು ಬೆಲೆಗಳನ್ನ ನಿಯಂತ್ರಿಸುವ ಮೂಲಕ ಸಾಮಾನ್ಯ ಜನರಿಗೆ ಪರಿಹಾರ ನೀಡುವ ದೊಡ್ಡ ನಿರ್ಧಾರಕ್ಕೆ ಬಂದಿದೆ. ಅದರಂತೆ, ಸರ್ಕಾರ ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಆಮದು ಸುಂಕವನ್ನು ಕಡಿಮೆ ಮಾಡಿದೆ. ಇದನ್ನು ಶೇ.15 ರಿಂದ […]

ಬೆಲೆ ಇಳಿಕೆ ನಿರೀಕ್ಷೆಯಲ್ಲಿ ಅಡುಗೆ ಎಣ್ಣೆ| ಆಮದು ಸುಂಕ ಕಡಿತಕ್ಕೆ ಕೇಂದ್ರ ನಿರ್ಧಾರ Read More »

ಸುಳ್ಯ | ಹಿಂದೂ ಯುವತಿಯರ ಜೊತೆ ಮುಸ್ಲಿಂ ಯುವಕನ ಪ್ರಯಾಣ…!? ತಪ್ಪು ಮಾಹಿತಿ‌ಯಿಂದ ಬಸ್ ಅಡ್ಡಗಟ್ಟಿ ಪೇಚಿಗೆ ಸಿಲುಕಿದ ಹಿಂಜಾವೇ | ಇತ್ಯರ್ಥ ಬಳಿಕವೂ ನಿಲ್ಲದ ಆವೇಶ, ಪೊಲೀಸರಿಗೇ ಧಮ್ಕಿ….!

ಸುಳ್ಯ: ರಾತ್ರಿ ಬಸ್ಸಿನಲ್ಲಿ ಹಿಂದೂ ಯುವತಿಯರ ಜೊತೆ ಮುಸ್ಲಿಂ ಯುವಕನೊಬ್ಬ ಪ್ರಯಾಣಿಸುತ್ತಿರುವುದಾಗಿ ತಪ್ಪು ಮಾಹಿತಿ ಪಡೆದ ಹಿಂಜಾವೇ ಕಾರ್ಯಕರ್ತರು ಬಸ್ಸನ್ನು ತಡೆದು ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ಇತ್ಯರ್ಥವಾದ ನಂತರವೂ ಪೊಲೀಸರ ಮೇಲೆಯೇ ಧಮ್ಕಿ ಹಾಕಿದ ಘಟನೆ ನಿನ್ನೆ ರಾತ್ರಿ ಸುಳ್ಯದಲ್ಲಿ ನಡೆದಿದೆ. ಪುತ್ತೂರಿನಿಂದ ನಿನ್ನೆ ರಾತ್ರಿ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್ಸಿನಲ್ಲಿ ಬೆಂಗಳೂರಿನ ಇಬ್ಬರು ಯುವತಿಯರು ಪ್ರಯಾಣಿಸುತ್ತಿದ್ದರು. ಈ ವೇಳೆ ಪುತ್ತೂರಿನಿಂದ ಕುಂಬ್ರಕ್ಕೆ ಟಿಕೆಟ್ ಮಾಡಿದ್ದ ಮುಸ್ಲಿಮ್ ಯುವಕನೋರ್ವನೂ ಪ್ರಯಾಣಿಸುತ್ತಿದ್ದ. ಬಸ್ ಕುಂಬ್ರ ತಲುಪುತ್ತಿದ್ದಂತೆ ಬೆಂಗಳೂರಿನಿಂದ

ಸುಳ್ಯ | ಹಿಂದೂ ಯುವತಿಯರ ಜೊತೆ ಮುಸ್ಲಿಂ ಯುವಕನ ಪ್ರಯಾಣ…!? ತಪ್ಪು ಮಾಹಿತಿ‌ಯಿಂದ ಬಸ್ ಅಡ್ಡಗಟ್ಟಿ ಪೇಚಿಗೆ ಸಿಲುಕಿದ ಹಿಂಜಾವೇ | ಇತ್ಯರ್ಥ ಬಳಿಕವೂ ನಿಲ್ಲದ ಆವೇಶ, ಪೊಲೀಸರಿಗೇ ಧಮ್ಕಿ….! Read More »

ಶೀಘ್ರದಲ್ಲೇ ಪ್ರಾಥಮಿಕ ತರಗತಿಗಳೂ ಪ್ರಾರಂಭ – ಮಕ್ಕಳಿಗೆ ಕೋವಿಡ್ ವರದಿ ಕಡ್ಡಾಯವಲ್ಲ – ಶಿಕ್ಷಣ ಸಚಿವ ಬಿ.ಸಿ ನಾಗೇಶ್.

ಮೈಸೂರು: ವಿದ್ಯಾರ್ಥಿಗಳಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ ಒಂದು ವೇಳೆ ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟರೆ ಒಂದು ವಾರ ತರಗತಿ ಅಮಾನತು ಮಾಡಲಾಗುತ್ತದೆ. ಸ್ಯಾನಿಟೈಸ್ ಮಾಡಿ ವಾರದ ನಂತರ ಮತ್ತೆ ತರಗತಿಗಳನ್ನು ಆರಂಭಿಸಲಾಗುವುದು. ಶಾಲೆ ಆರಂಭಿಸುವುದರಲ್ಲಿ ತೊಂದರೆ ಇದೆ ಆದರೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ತಜ್ಞರ ಅಭಿಪ್ರಾಯದಂತೆ ಶಾಲೆಗಳನ್ನು ಆರಂಭ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಕೊರೋನಾ ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ. ಪ್ರಾಣಹಾನಿಯಂತಹ

ಶೀಘ್ರದಲ್ಲೇ ಪ್ರಾಥಮಿಕ ತರಗತಿಗಳೂ ಪ್ರಾರಂಭ – ಮಕ್ಕಳಿಗೆ ಕೋವಿಡ್ ವರದಿ ಕಡ್ಡಾಯವಲ್ಲ – ಶಿಕ್ಷಣ ಸಚಿವ ಬಿ.ಸಿ ನಾಗೇಶ್. Read More »

ಮಂಗಳೂರು: ಶವದಿಂದಲೇ ಡೈಮಂಡ್ ರಿಂಗ್ ಕಳ್ಳತನ|ಆಸ್ಪತ್ರೆಯಲ್ಲಿದ್ದ ಸೆಕ್ಯುರಿಟಿಯ ಸುತ್ತ ಬೆಳೆದ ಅನುಮಾನದ ಹುತ್ತ…!

ಮಂಗಳೂರು: ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದ ವ್ಯಕ್ತಿಯೋರ್ವರ ಮೃತದೇಹವನ್ನು ರಾತ್ರಿ ಬೆಂದೂರು ವೆಲ್ ಕೊಲೊಸೊ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಆದರೆ, ಇಂದು ಬೆಳಗ್ಗೆ ನೋಡಿದಾಗ ಹರೀಶ್ ಶೆಟ್ಟಿ ಅವರ ಕಿವಿಯಲ್ಲಿದ್ದ ಡೈಮಂಡ್ ರಿಂಗ್ ಕಾಣೆಯಾದ ಬಗ್ಗೆ ಬೆಳಕಿಗೆ ಬಂದಿದೆ.ಸಿಟಿ ಸೆಂಟರ್ ಮಾಲ್‍ನಲ್ಲಿ ಸೆಕ್ಯುರಿಟಿ ವಿಭಾಗದಲ್ಲಿ ಮ್ಯಾನೇಜರ್ ಆಗಿದ್ದ ಹರೀಶ್ ಶೆಟ್ಟಿ (42) ಮೃತ ಪಟ್ಟವರು. ಇವರು ನಿನ್ನೆ ಬೆಳಗ್ಗೆ ತನ್ನ ಪತ್ನಿ, ಮಕ್ಕಳೊಂದಿಗೆ ಕುಂದಾಪುರಕ್ಕೆ ತೆರಳಿದ್ದರು. ಮಧ್ಯಾಹ್ನ ಹೊಟೇಲ್ ಒಂದರಲ್ಲಿ ಊಟ ಮಾಡುತ್ತಿದ್ದಾಗ ದಿಢೀರ್ ಆಗಿ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು

ಮಂಗಳೂರು: ಶವದಿಂದಲೇ ಡೈಮಂಡ್ ರಿಂಗ್ ಕಳ್ಳತನ|ಆಸ್ಪತ್ರೆಯಲ್ಲಿದ್ದ ಸೆಕ್ಯುರಿಟಿಯ ಸುತ್ತ ಬೆಳೆದ ಅನುಮಾನದ ಹುತ್ತ…! Read More »

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ| ರಾಜ್ ಕುಂದ್ರಾ ಕಂಪೆನಿ ನಿರ್ದೇಶಕ ಅರೆಸ್ಟ್

ಮುಂಬೈ : ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಅವರ ಕಂಪನಿಯ ನಿರ್ದೇಶಕ ಅಭಿಜಿತ್ ಬೊಂಬ್ಲೆ ಎಂಬವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಚಿತ್ರ ನಿರ್ಮಾಣದ ಆರೋಪದಲ್ಲಿ ರಾಜ್ ಕುಂದ್ರಾ ಅವರನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ರೂಪದರ್ಶಿಯೊಬ್ಬರು ನೀಡಿದ್ದ ದೂರಿನ ಆಧಾರದಲ್ಲಿ ಮಾಲ್‌ವಾನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕಿರುಚಿತ್ರಗಳು ಮತ್ತು ವೆಬ್ ಸೀರೀಸ್‌ಗಳಲ್ಲಿ ನಟಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿ ಬಳಿಕ ನಗ್ನ ದೃಶ್ಯಗಳಲ್ಲಿ ನಟಿಸುವಂತೆ ಒತ್ತಡ ಹೇರಲಾಗಿತ್ತು ಎಂದು ರೂಪದರ್ಶಿ

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ| ರಾಜ್ ಕುಂದ್ರಾ ಕಂಪೆನಿ ನಿರ್ದೇಶಕ ಅರೆಸ್ಟ್ Read More »

ಚಲಿಸುತ್ತಿದ್ದ ಕಾರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ವಿವಾಹಿತೆ| ಅನಾಮಿಕ ಕರೆಗೆ ಬಲಿಯಾದ ಸಂತ್ರಸ್ತೆ|

ನವದೆಹಲಿ: ಚಲಿಸುತ್ತಿದ್ದ ಕಾರಿನಲ್ಲಿ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಕೃತ್ಯ ದೇಶದ ರಾಜಧಾನಿಯಲ್ಲಿ ನಡೆದಿದೆ.ಕೆಲಸ ಕೊಡಿಸುವುದಾಗಿ ಹೇಳಿ ಕಾರಿನೊಳಗೆ ಹತ್ತಿಸಿಕೊಂಡ ಇಬ್ಬರು ಕಾಮುಕರು ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ದುಷ್ಕೃತ್ಯದ ಬಗ್ಗೆ ಬಾಯ್ಬಿಟ್ಟರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಸಂತ್ರಸ್ತೆ ತನ್ನ ಪತಿಯೊಂದಿಗೆ ಗಾಜಿಯಾಬಾದ್ ಪ್ರದೇಶದಲ್ಲಿ ವಾಸವಾಗಿದ್ದು ಕೆಲವು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯಿಂದ

ಚಲಿಸುತ್ತಿದ್ದ ಕಾರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ವಿವಾಹಿತೆ| ಅನಾಮಿಕ ಕರೆಗೆ ಬಲಿಯಾದ ಸಂತ್ರಸ್ತೆ| Read More »

ದೇವಾಲಯಗಳಲ್ಲಿ ಆನೆಗಳನ್ನು ಬಳಸುವುದಕ್ಕೆ ಹೈಕೋರ್ಟ್ ವಿರೋಧ

ಬೆಂಗಳೂರು: ನಗರದ ವಿದ್ಯಾರಣ್ಯಪುರದ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ಕೆ ಬಳಸಲು ಆನೆಯನ್ನು ಇರಿಸಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್‌, ಆನೆಗಳು ಕಾಡಿನಲ್ಲಿ ಇರಬೇಕು ಹೊರತು ದೇವಸ್ಥಾನದಲ್ಲಿ ಅಲ್ಲ.ಪೂಜಾ ಕಾರ್ಯಕ್ರಮಕ್ಕೆ ಆನೆಗಳನ್ನು ಬಳಸಿಕೊಳ್ಳುವುದು ಕ್ರೌರ್ಯವೇ ಆಗುತ್ತದೆ ಎಂದು ತೀಕ್ಷ್ಣವಾಗಿ ಹೇಳಿತು. ಈ ಕುರಿತು ಸಲ್ಲಿಸಿದ್ದ ಅರ್ಜಿಯು ಮುಖ್ಯ ನ್ಯಾ. ಎ.ಎಸ್.ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನವು ಖಾಸಗಿ ದೇವಾಲಯವಾಗಿದೆ.

ದೇವಾಲಯಗಳಲ್ಲಿ ಆನೆಗಳನ್ನು ಬಳಸುವುದಕ್ಕೆ ಹೈಕೋರ್ಟ್ ವಿರೋಧ Read More »

ಉಡುಪಿ: ಸಿಡಿಲು ಬಡಿದು ಇಬ್ಬರು ಗಂಭೀರ

ಉಡುಪಿ: ಗದ್ದೆ‌ ಬದಿಯಲ್ಲಿ ನಡೆದುಕೊಂಡು ಹೋಗುತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಪರ್ಕಳದ ಪರೀಕದಲ್ಲಿ ಸಂಭವಿಸಿದೆ. ಉಡುಪಿಯಲ್ಲಿ ಶುಕ್ರವಾರ ಬೆಳಗ್ಗೆಯಿಂದ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುತ್ತಿದೆ. ಸಿಡಿಲು ಅಪ್ಪಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಉಡುಪಿ: ಸಿಡಿಲು ಬಡಿದು ಇಬ್ಬರು ಗಂಭೀರ Read More »

ಹಣದಾಸೆಗೆ ಗಾಂಜಾ ಮಾರಾಟ ಮಾಡುತ್ತಿದ್ದ 19ರ ಪೋರ ಬಂಧನ

ನೆಲಮಂಗಲ: 19 ವರ್ಷದ ಯುವಕನೊಬ್ಬ ಹಣದಾಸೆಗೆ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೋಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕಡಬಗೆರೆ ಬಳಿಯ ಜನಪ್ರಿಯ ನಿವಾಸಿ ಹರಿ ಗೋವಿಂದರಾಜು(19) ಬಂಧಿತ ಆರೋಪಿ. ಖಚಿತ ಮಾಹಿತಿ ತಿಳಿದು ಪೋಲೀಸರು ದಾಳಿ ಮಾಡಿದ್ದರು. ಈ ವೇಳೆ ಬೆಂಗಳೂರು ಹೊರವಲಯ ನೆಲಮಂಗಲದ ಇಂದಿರಾನಗರದಲ್ಲಿ ಯುವಕನನ್ನು ಬಂಧಿಸಿದಿದ್ದಾರೆ. ಬರೋಬ್ಬರಿ 600 ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ, ನ್ಯಾಯಾಲಯದ ವಶಕ್ಕೆ ನೀಡಿದ್ದಾರೆ. ಹೆಚ್ಚಿನ ತನಿಖೆಯನ್ನು ಪೋಲೀಸರು ಮುಂದುವರಿಸಿದ್ದಾರೆ.

ಹಣದಾಸೆಗೆ ಗಾಂಜಾ ಮಾರಾಟ ಮಾಡುತ್ತಿದ್ದ 19ರ ಪೋರ ಬಂಧನ Read More »

ನೀನು ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು -ಮಹಿಳಾ ಪತ್ರಕರ್ತೆಗೆ ಉಲ್ಟಾ ಹೊಡೆದ ತಾಲಿಬಾನಿಗಳು

ಕಾಬೂಲ್: ನೀನು ಮಹಿಳೆ ಹಾಗಾಗಿ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು ಎಂದು ಹೇಳಿ ಮಹಿಳಾ ಪತ್ರಕರ್ತೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತದಲ್ಲಿರುವ ತಾಲಿಬಾನಿಗಳು ಉಲ್ಟಾ ಹೊಡೆದಿದ್ದಾರೆ. ನಾವು ಬದಲಾಗಿದ್ದೇವೆ, ಮಹಿಳೆಯರು ಉದ್ಯೋಗಕ್ಕೆ ತೆರಳಲು ಅನುಮತಿ ನೀಡುತ್ತೇವೆ ಎಂದಿದ್ದ ತಾಲಿಬಾನಿಗಳ ನಿಜ ರೂಪ ಇದೀಗ ನಿಧಾನವಾಗಿ ಬಹಿರಂಗಗೊಳ್ಳುತ್ತಿದೆ. ಅಫ್ಘಾನಿಸ್ತಾನದಲ್ಲಿ ಪ್ರಭುತ್ವ ಸ್ಥಾಪಿಸಿದ ಬಳಿಕ ಸರ್ಕಾರಿ ಸ್ವಾಮ್ಯದ ವಾಹಿನಿಗಳಲ್ಲಿ ಮಹಿಳಾ ಪತ್ರಕರ್ತರು ಕೆಲಸಕ್ಕೆ ಬರದಂತೆ ತಾಲಿಬಾನ್ ಸೂಚಿಸಿದೆ ಎಂದು ಖಖಿಂ RTA Pashto ನಿರೂಪಕಿ ಶಬ್ನಮ್ ದವ್ರನ್ ಹೇಳಿದ್ದಾರೆ. ಮಾಧ್ಯಮಕ್ಕೆ ಸಂದರ್ಶನ ನೀಡಿದ

ನೀನು ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು -ಮಹಿಳಾ ಪತ್ರಕರ್ತೆಗೆ ಉಲ್ಟಾ ಹೊಡೆದ ತಾಲಿಬಾನಿಗಳು Read More »