Editor

ಗರ್ಭಿಣಿಯರಿಗೆ ಲಸಿಕೆ ನೀಡಲು ಗ್ರೀನ್ ಸಿಗ್ನಲ್

ನವದೆಹಲಿ: ದೇಶದ ಎಲ್ಲಾ ಗರ್ಭಿಣಿಯರಿಗೆ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಲಸಿಕೆ ಗರ್ಭಿಣಿಯರಿಗೆ ಉಪಯುಕ್ತವಾಗಲಿದೆ ಮತ್ತು ಅದನ್ನು ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ್ ಹೇಳಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಗರ್ಭಿಣಿಯರಿಗೆ ಲಸಿಕೆ ನೀಡಲು ಅನುಮತಿಸಿತ್ತು. ಆದರೆ ಭಾರತದಲ್ಲಿ ವೈದ್ಯಕೀಯ ಪ್ರಯೋಗ ದತ್ತಾಂಶದ ಕೊರತೆ ಇತ್ತು ಎಂದು ಹೇಳಲಾಗಿತ್ತು. ಇದೀಗ ವೈಜ್ಞಾನಿಕ ಪುರಾವೆ ಗಳನ್ನು ಅಧ್ಯಯನ ಮಾಡುವ […]

ಗರ್ಭಿಣಿಯರಿಗೆ ಲಸಿಕೆ ನೀಡಲು ಗ್ರೀನ್ ಸಿಗ್ನಲ್ Read More »

ಮಾಸ್ಕ್ ಇಲ್ಲದೇ‌ ಬ್ಯಾಂಕ್ ಪ್ರವೇಶಿಸಿದ ಗ್ರಾಹಕ, ಸೆಕ್ಯೂರಿಟಿ ಗಾರ್ಡ್ ನಿಂದ ಫೈರಿಂಗ್

ಉತ್ತರ ಪ್ರದೇಶ: ಮಾಸ್ಕ್ ಧರಿಸಿದೆ ಬ್ಯಾಂಕ್ ಒಳಪ್ರವೇಶಿಸಲು ಯತ್ನಿಸಿದ ಗ್ರಾಹಕನ ಮೇಲೆ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಗ್ರಾಹಕ ರಾಜೇಶ್ ಕುಮಾರ್ ಬರೇಲಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಗೆ ಆಗಮಿಸಿದ್ದಾನೆ. ಬ್ಯಾಂಕ್‌ನಲ್ಲಿನ ಕೆಲಸಕ್ಕೆ 11.30ಕ್ಕೆ ಆಗಮಿಸಿದ ರಾಜೇಶ್ ಕುಮಾರ್ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಮಾಸ್ಕ್ ಧರಿಸಿದೆ ಒಳ ಪ್ರವೇಶಿಸಲು ಸಾಧ್ಯವಿಲ್ಲ ಎಂದಿದ್ದಾನೆ.ಸೆಕ್ಯೂರಿಟಿ ಗಾರ್ಡ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಹಕ ನೇರವಾಗಿ ಬ್ಯಾಂಕ್ ಒಳ ಪ್ರವೇಶಿಸಲು

ಮಾಸ್ಕ್ ಇಲ್ಲದೇ‌ ಬ್ಯಾಂಕ್ ಪ್ರವೇಶಿಸಿದ ಗ್ರಾಹಕ, ಸೆಕ್ಯೂರಿಟಿ ಗಾರ್ಡ್ ನಿಂದ ಫೈರಿಂಗ್ Read More »

ಬೆತ್ತಲಾಗಿ ನಿಂತು ಮಹಿಳೆಯರಿಗೆ ವಿಡಿಯೋ ಕಾಲ್ | ನಿತ್ಯ ಬ್ಲಾಕ್’ಮೇಲ್ ಮಾಡುವುದೇ ಈತನ ಕೆಲಸ

ಲಖನೌ: ಅಪರಿಚಿತ ಮಹಿಳೆಯರಿಗೆ ಬೆತ್ತಲಾಗಿ ನಿಂತು ವಿಡಿಯೋ ಕಾಲ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಯುವಕನೊಬ್ಬನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ನಿರಂತರವಾಗಿ ಯುವಕನ ಉಪಟಳದಿಂದ ಬೇಸತ್ತಿದ್ದ ಮಹಿಳೆಯರು ಉತ್ತರಪ್ರದೇಶದ ಮಹಿಳಾ ಸಹಾಯವಾಣಿಯೊಂದಕ್ಕೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿ ಶುವ್ ಕುಮಾರ್ ವರ್ಮಾ ಎಂಬಾತನನ್ನು ಬಂಧಿಸಿದ್ದಾರೆ. ಬಿಎ ಪದವೀಧರನಾಗಿರುವ ಈತ ಸ್ಟೇಷನರಿ ಅಂಗಡಿಯೊಂದನ್ನು ನಡೆಸುತ್ತಿದ್ದ. ನಿತ್ಯ ಕೆಲಸ ಮುಗಿದ ಮೇಲೆ ಮನೆಗೆ ತೆರಳಿ ಯಾವುದಾದರೂ ಮೊಬೈಲ್ ನಂಬರ್ ಟೈಪ್ ಮಾಡಿ ಟ್ರೂಕಾಲರ್ ಮೂಲಕ ಪರೀಕ್ಷಿಸುತ್ತಿದ್ದ. ನಂಬರ್

ಬೆತ್ತಲಾಗಿ ನಿಂತು ಮಹಿಳೆಯರಿಗೆ ವಿಡಿಯೋ ಕಾಲ್ | ನಿತ್ಯ ಬ್ಲಾಕ್’ಮೇಲ್ ಮಾಡುವುದೇ ಈತನ ಕೆಲಸ Read More »

ರೇಖಾ ಕದಿರೇಶ್ ಹತ್ಯೆ ಆರೋಪಿಗಳ ಮೇಲೆ ಫೈರಿಂಗ್

ಬೆಂಗಳೂರು: ನಿನ್ನೆ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೆಂಗಳೂರಿನ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರ ಕೊಲೆ ಪ್ರಕರಣದ ಆರೋಪಿಗಳನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯ ಪ್ರಮುಖ ಆರೋಪಿಗಳಾದ ಪೀಟರ್ ಮತ್ತು ಸೂರ್ಯ ಎಂಬ ಇಬ್ಬರು ನಗರದ ಸುಮನಹಳ್ಳಿ ಎಂಬಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿದ್ದಾರೆ. ಆರೋಪಿಗಳನ್ನು ಕಂಡ ಕೂಡಲೇ ಪೊಲೀಸರು ಶರಣಾಗುವಂತೆ ತಿಳಿಸಿದ್ದಾರೆ. ಆದರೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿ ಸಿದ್ದಾರೆ. ಈ ವೇಳೆ ಪೊಲೀಸರು ಸ್ವರಕ್ಷಣೆಗಾಗಿ ಪೀಟರ್ ಮತ್ತು ಸೂರ್ಯ

ರೇಖಾ ಕದಿರೇಶ್ ಹತ್ಯೆ ಆರೋಪಿಗಳ ಮೇಲೆ ಫೈರಿಂಗ್ Read More »

ಪ್ರೀತಿಸಿ ಮದುವೆಯಾಗಿ ಎರಡು ಮಕ್ಕಳಾಗಿದೆ | ಇದೀಗ ಜಾತಿ ನೆಪ ಹೇಳಿ ಬೇರೆ ಮದುವೆಯಾದ ಪತಿ

ಕೋಲಾರ: ಪ್ರೀತಿಸಿ ಮದುವೆಯಾಗಿ ಎರಡು ಮಕ್ಕಳಾದ ಬಳಿಕ ಜಾತಿ ಹೆಸರಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಮತ್ತೊಂದು ಮದುವೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. 5 ವರ್ಷದ ಹಿಂದೆ ಬಂಗಾರಪೇಟೆ ತಾಲೂಕಿನ ದೊಡ್ಡ ಚಿನ್ನಹಳ್ಳಿಯ ಸುನಿಲ್, ಚಿಕ್ಕ ಅಂಕಂಡಹಳ್ಳಿಯ ಕಾವ್ಯಾ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ 4 ವರ್ಷದ ಹಾಗೂ 9 ತಿಂಗಳ ಎರಡು ಗಂಡು ಮಕ್ಕಳಿವೆ. ಈ ಮಧ್ಯೆ ಪತಿ ತನ್ನ ತಾಯಿಯ ಮನೆಗೆ ಹೋಗಿ ಬರುತ್ತಿದ್ದು, ಮನೆಯವರ ಮಾತು ಕೇಳಿರುವ ಸುನಿಲ್, ಮತ್ತೊಂದು

ಪ್ರೀತಿಸಿ ಮದುವೆಯಾಗಿ ಎರಡು ಮಕ್ಕಳಾಗಿದೆ | ಇದೀಗ ಜಾತಿ ನೆಪ ಹೇಳಿ ಬೇರೆ ಮದುವೆಯಾದ ಪತಿ Read More »

ಕಡಬ: ಕಾರುಗಳ ನಡುವೆ ಅಪಘಾತ | ಇಬ್ಬರು ಗಂಭೀರ

ಕಡಬ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ-ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಗೋಳಿತ್ತಡಿ ಕುಂಡಾಜೆ ಎಂಬಲ್ಲಿ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಕಾರುಗಳೆರಡು ಜಖಂಗೊಂಡಿದೆ. ಗಾಯಗೊಂಡವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಡಬ: ಕಾರುಗಳ ನಡುವೆ ಅಪಘಾತ | ಇಬ್ಬರು ಗಂಭೀರ Read More »

ತುಳುವ ಯುವಕರ ದನಿಯಾದ ಸಂಸದ ಪ್ರಜ್ವಲ್ ರೇವಣ್ಣ

ಹಾಸನ: ಮಂಗಳೂರಿನ ಎಂಆರ್ಪಿಎಲ್ ನಲ್ಲಿ ಸ್ಥಳೀಯರಿಗೆ ಯಾವುದೇ ಆದ್ಯತೆ ನೀಡದೆ ಉತ್ತರ ಭಾರತದ ಯುವಕರನ್ನು ಕೆಲಸಕ್ಕೆ ನೇಮಿಸಿಕೊಂಡ ಬಗ್ಗೆ ಆಕ್ರೋಶ ಹೊರಹಾಕಿರುವ ಹಾಸನ ಕ್ಷೇತ್ರದ ಯುವ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಸ್ಥಳೀಯರಿಂದ ಮತ್ತು ರಾಜ್ಯ ಸರ್ಕಾರದಿಂದ ಮಂಗಳೂರಿನಲ್ಲಿ ಭೂಮಿ ಪಡೆದು ಎತ್ತರಕ್ಕೆ ಬೆಳೆದಿರುವ ಸಂಸ್ಥೆ ಎಂಆರ್ಪಿಎಲ್. ತುಳುನಾಡ ಜನರ ಸಹಯೋಗದಲ್ಲಿ ಬೆಳೆದು ಇಲ್ಲಿನ ಯುವಕರನ್ನು ಎಂಆರ್ಪಿಎಲ್ ಕಡೆಗಣಿಸಿರುವುದು ಸರಿಯಲ್ಲ. ಇದು ಪ್ರಾದೇಶಿಕತೆಯ ಭಾವನೆಗೆ ದ್ರೋಹ ಮಾಡಿದೆ. ಮುಂದಿನ ನೇಮಕಾತಿ ವೇಳೆ ತುಳುನಾಡನ್ನು ಕಡೆಗಣಿಸಿದರೆ

ತುಳುವ ಯುವಕರ ದನಿಯಾದ ಸಂಸದ ಪ್ರಜ್ವಲ್ ರೇವಣ್ಣ Read More »

ಮಹಿಳೆಯರ ಮುಂದೆ ಬೆತ್ತಲಾಗಿ ಅಸಭ್ಯ ವರ್ತನೆ | ಅಪ್ಪನ ಜೊತೆ ಮಕ್ಕಳೂ ಅರೆಸ್ಟ್

ಚಾಮರಾಜನಗರ: ಕುಡಿದ ಮತ್ತಿನಲ್ಲಿ ನರೇಗಾ ಕೆಲಸ ಮಾಡುತ್ತಿದ್ದ ಮಹಿಳೆಯರ ಎದುರು ಬೆತ್ತಲಾದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಇಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಆತನ ಇಬ್ಬರು ಮಕ್ಕಳನ್ನೂ ಬಂಧಿಸಲಾಗಿದೆ. ಜಿಲ್ಲೆಯ ಪುನಜನೂರು ಗ್ರಾಮದ ತಾಂಡವಮೂರ್ತಿ ಎಂಬಾತ ಗ್ರಾಮದಲ್ಲಿ ನರೇಗಾ ಕೆಲಸ ಮಾಡುತ್ತಿದ್ದ ಮಹಿಳೆಯ ಜೊತೆ ವಾಗ್ವಾದಕ್ಕಿಳಿದಿದ್ದ. ಈ ವೇಳೆ ಕುಡಿದಮತ್ತಿನಲ್ಲಿದ್ದ ಆತನ ಪಂಚೆ ಜಾರಿಬಿದ್ದಿದೆ. ಆ ಬಳಿಕ ಆತ ಒಳಗಿದ್ದ ಒಳ ಉಡುಪನ್ನು ಜಾರಿಸಿ ಮಹಿಳೆಯರ ಎದುರು ಅಸಭ್ಯವಾಗಿ ವರ್ತಿಸಿದ್ದಾನೆ. ಸ್ಥಳದಲ್ಲಿದ್ದ ಕೆಲವರು

ಮಹಿಳೆಯರ ಮುಂದೆ ಬೆತ್ತಲಾಗಿ ಅಸಭ್ಯ ವರ್ತನೆ | ಅಪ್ಪನ ಜೊತೆ ಮಕ್ಕಳೂ ಅರೆಸ್ಟ್ Read More »

ಕ್ಷೇತ್ರದ ಜನ ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ | ನಾನು ಯಾವತ್ತೂ, ಯಾರನ್ನೂ ಕಡೆಗಣಿಸಿಲ್ಲ | ಕಿಡಿಕಾರಿದ ಭೋಜೇಗೌಡರಿಗೆ ಪ್ರತಿಕ್ರಿಯೆಸಿದ ಎಸ್. ಅಂಗಾರ

ಚಿಕ್ಕಮಗಳೂರು: ತನ್ನ ವಿರುದ್ಧ ಕಿಡಿಕಾರಿದ ಭೋಜೆಗೌಡರಿಗೆ, ಕ್ಷೇತ್ರದ ಜನ ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ. ನಾನು ಯಾವತ್ತೂ, ಯಾರನ್ನೂ ಕಡೆಗಣಿಸಿಲ್ಲ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಪ್ರತಿಕ್ರಿಯೆ ನೀಡಿದರು. ತಮ್ಮ ಮೇಲಿನ ಆರೋಪಕ್ಕೆ ತಾಲೂಕಿನ ಸಖರಾಯಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ಪಕ್ಷದ, ಯಾವುದೇ ಜನಪ್ರತಿನಿಧಿಯನ್ನು ಕಡೆಗಣಿಸಿಲ್ಲ. ಯಾವುದೇ ಸಭಾ ಕಾರ್ಯಕ್ರಮ ಮಾಡಿಲ್ಲ. ನನ್ನ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಬಗ್ಗೆ ಸ್ಥಳ ಪರಿಶೀಲನೆ ಮಾಡಿದ್ದೇನೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ಮೇಲೆ

ಕ್ಷೇತ್ರದ ಜನ ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ | ನಾನು ಯಾವತ್ತೂ, ಯಾರನ್ನೂ ಕಡೆಗಣಿಸಿಲ್ಲ | ಕಿಡಿಕಾರಿದ ಭೋಜೇಗೌಡರಿಗೆ ಪ್ರತಿಕ್ರಿಯೆಸಿದ ಎಸ್. ಅಂಗಾರ Read More »

ಮನೆ ಗೋಡೆ ಕುಸಿದು ಓರ್ವ ಸಾವು | ಇನ್ನೋರ್ವ ಗಂಭೀರ

ಕಾರವಾರ: ಮನೆ ದುರಸ್ತಿ ವೇಳೆ ಗೋಡೆ ಕುಸಿದು ಕಾರ್ಮಿಕ ಸಾವನ್ನಪ್ಪಿದ್ದು, ಇನ್ನೋರ್ವ ಕಾರ್ಮಿಕನ ಸ್ಥಿತಿ ಗಂಭೀರವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸದಾಶಿವಘಡದ ವೈಶ್ಯವಾಡದಲ್ಲಿ ನಡೆದಿದೆ. ಹುಚ್ಚಪ್ಪ (35) ಸ್ಥಳದಲ್ಲೇ ಸಾವು ಕಂಡ ಕಾರ್ಮಿಕನಾಗಿದ್ದು, ಗೋಡೆಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಇನ್ನೋರ್ವ ಕಾರ್ಮಿಕನನ್ನು ಅಗ್ನಿಶಾಮ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಇಂದು ಸದಾಶಿವಘಡದ ತುಳಸಿ ಬಾಯಿ ಅವರ ಮನೆಯ ದುರಸ್ತಿ ಕಾರ್ಯ ಮಾಡಲು ಕಾರ್ಮಿಕರು ತೆರಳಿದ್ದರು. ಈ ವೇಳೆ ಗೋಡೆ ಕೆಡವುವಾಗ ಘಟನೆ ನಡೆದಿದೆ. ಈ

ಮನೆ ಗೋಡೆ ಕುಸಿದು ಓರ್ವ ಸಾವು | ಇನ್ನೋರ್ವ ಗಂಭೀರ Read More »