Editor

ಪೇಜಾವರ ಶ್ರೀ, ಬಿಳಿಗಿರಿ ರಂಗನಾಥ ಸ್ವಾಮಿ ಕುರಿತು ವಿವಾದಾತ್ಮಕ ಹೇಳಿಕೆ| ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆಯಾಚನೆಗೆ ಆಗ್ರಹ|

ಬೆಂಗಳೂರು : ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ವಿವಾದ ಸೃಷ್ಟಿಸಿದೆ. ದಲಿತರನ್ನು ಒಳಗೊಳ್ಳುವಿಕೆ ಕುರಿತು ಉಡುಪಿ ಪೇಜಾವರ ಮಠದ ಸ್ವಾಮೀಜಿ ನಡೆಸಿದ ಪಾದಯಾತ್ರೆಗಳು, ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ನಡೆಸಿದ ಗ್ರಾಮ ವಾಸ್ತವ್ಯ ಹಾಗೂ ಬಿಳಿಗಿರಿ ರಂಗನಾಥಸ್ವಾಮಿ ಕುರಿತು ಹಂಸಲೇಖ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಪೇಜಾವರ ಸ್ವಾಮಿಗಳು ದಲಿತ ಮನೆಯಲ್ಲಿ ಇದ್ದು ಬಂದಿದ್ದರು ಎಂದು ಇತ್ತೀಚೆಗೆ ನೋಡಿದೆ. ಅವರು ಮನೆಯಲ್ಲಿ ಕೋಳಿ ಕೊಟ್ಟರೆ ತಿನ್ನೋಕಾಗುತ್ತ?

ಪೇಜಾವರ ಶ್ರೀ, ಬಿಳಿಗಿರಿ ರಂಗನಾಥ ಸ್ವಾಮಿ ಕುರಿತು ವಿವಾದಾತ್ಮಕ ಹೇಳಿಕೆ| ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆಯಾಚನೆಗೆ ಆಗ್ರಹ| Read More »

ನೆಲ್ಯಾಡಿ : ತಾವರೆಗಾಗಿ ಪ್ರಾಣ ಕಳೆದುಕೊಂಡ ವಿಧ್ಯಾರ್ಥಿನಿ

ನೆಲ್ಯಾಡಿ: ಕೆರೆಗೆ ತಾವರೆ ಹೂವನ್ನು ಕೀಳಲು ಹೋಗಿ ವಿಧ್ಯಾರ್ಥಿನಿಯೊಬ್ಬಳು ಸಾವನಪ್ಪಿರುವ ಘಟನೆ ಕೊಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ನಡೆದಿದೆ. ಮೃತ ವಿಧ್ಯಾರ್ಥಿನಿಯನ್ನು ಅಂಬರ್ಜೆ ನಿವಾಸಿ ಮೋಹನ ಎಂಬವರ ಪುತ್ರಿ ಶ್ರೇಯಾ (18) ಎಂದು ಗುರುತಿಸಲಾಗಿದೆ. ಈಕೆ ರಾಮಕುಂಜೇಶ್ವರ ಪ.ಪೂ. ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದಳು. ಶ್ರೇಯಾ ಇಂದು ಬೆಳಗ್ಗೆ ತಮ್ಮ ಮನೆ ಸಮೀಪದ ಕೆರೆಗೆ ತಾವರೆ ಹೂ ಬಿಡಲೆಂದು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮನೆಯಿಂದ

ನೆಲ್ಯಾಡಿ : ತಾವರೆಗಾಗಿ ಪ್ರಾಣ ಕಳೆದುಕೊಂಡ ವಿಧ್ಯಾರ್ಥಿನಿ Read More »

ನಾಳೆಯಿಂದ ಶಬರಿಮಲೆ ಭಕ್ತರ ದರ್ಶನಕ್ಕೆ ಮುಕ್ತ| ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ|

ತಿರುವನಂತಪುರಂ: ಎರಡು ತಿಂಗಳ ಕಾಲ ನಡೆಯುವ ಮಂಡಲ ಪೂಜೆ ಹಾಗೂ ಮಕರವಿಳಕ್ಕು ದರ್ಶನಕ್ಕಾಗಿ ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ಸೋಮವಾರ ಸಂಜೆ ತೆರೆಯಲಾಗುವುದು ಮತ್ತು ಮಂಗಳವಾರದಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನವು ಮಂಡಲಪೂಜೆಗಾಗಿ ಡಿಸೆಂಬರ್ 26 ರವರೆಗೆ ತೆರೆದಿರುತ್ತದೆ ಮತ್ತು ಮಕರವಿಳಕ್ಕು ಉತ್ಸವಕ್ಕಾಗಿ ಜನವರಿ 20 ರವರೆಗೆ ದರ್ಶನಕ್ಕೆ ಅವಕಾಶ ನೀಡಲು ಡಿಸೆಂಬರ್ 30 ರಂದು ಮತ್ತೆ ತೆರೆಯಲಾಗುತ್ತದೆ. ನವೆಂಬರ್ 16 ರಂದು ಪಾದಯಾತ್ರೆ ಆರಂಭವಾಗಲಿದ್ದು, ಸೋಮವಾರ ಸಂಜೆ 5 ಗಂಟೆಗೆ ಪ್ರಧಾನ ಅರ್ಚಕ (ತಂತ್ರಿ) ಕಂದರಾರು

ನಾಳೆಯಿಂದ ಶಬರಿಮಲೆ ಭಕ್ತರ ದರ್ಶನಕ್ಕೆ ಮುಕ್ತ| ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ| Read More »

ದುಬೈನಲ್ಲಿ ಮಿಂಚುತ್ತಿರುವ ತುಳುನಾಡಿನ ಕಿಶೋರ್ ಶೆಟ್ಟಿ

ಮಂಗಳೂರು: ಕರ್ನಾಟಕದಿಂದ ಅದರಲ್ಲೂ ತುಳುನಾಡಿನ ಅನೇಕರು ಉದ್ಯೋಗ ಶಿಕ್ಷಣ ವ್ಯಾಪಾರ ಹೀಗೆ ಅನೇಕ ಉದ್ದೇಶಗಳಿಗಾಗಿ ಗಲ್ಫ್ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಹೂಡಿದ್ದಾರೆ. ಹೀಗೆ ಅನೇಕರು ತಮ್ಮ ದುಡಿಮೆಯ ಮೂಲಕ ಯಶಸ್ಸನ್ನು ಸಂಪಾದಿಸಿ ತಮ್ಮ ಊರಿನಲ್ಲಿ ಅವಶ್ಯಕತೆ ಇರುವವರಿಗೆ ಸಹಾಯ ವನ್ನು ಮಾಡುತ್ತಿದ್ದಾರೆ. ಹೀಗೆ ತೆರೆ ಮರೆಯಲ್ಲಿ ನಿಂತು ತನ್ನಿಂದ ಆದಷ್ಟು ಸಮಾಜ ಸೇವೆಯನ್ನು ಮಾಡುತ್ತಿರುವವರಲ್ಲಿ ಕಾರ್ಕಳ ಕುಂಟಾಡಿ ಮೂಲದ ಇದೀಗ ದುಬೈನಲ್ಲಿ ಕಳೆದ ಹತ್ತು ವರ್ಷದಿಂದ ವಾಸವಾಗಿರುವ ಕಿಶೋರ್ ಶಿವರಾಮ್ ಶೆಟ್ಟಿ ಕೂಡ ಒಬ್ಬರು. ಉಡುಪಿಯ ಕಾರ್ಕಳ ಮೂಲದ

ದುಬೈನಲ್ಲಿ ಮಿಂಚುತ್ತಿರುವ ತುಳುನಾಡಿನ ಕಿಶೋರ್ ಶೆಟ್ಟಿ Read More »

ವಾಮಾಚಾರ ಆರೋಪ| ಎಮ್ಮೆ ಜೊತೆ ಠಾಣೆ ಮೆಟ್ಟಿಲೇರಿದ ರೈತ|

ಭೋಪಾಲ್: ಇಲ್ಲಿನ ಭಿಂಡ್ ಜಿಲ್ಲೆಯ ರೈತನೊಬ್ಬ ತನ್ನ ಎಮ್ಮೆಯೊಂದಿಗೆ ಪೊಲೀಸ್ ಠಾಣೆಗೆ ಹೋಗಿ ತನ್ನ ಎಮ್ಮೆ ಹಾಲು ಕೊಡಲು ನಿರಾಕರಿಸುತ್ತಿದೆ ಹಾಗೂ ಅದು ವಾಮಾಚಾರದ ಪ್ರಭಾವದಲ್ಲಿದೆ ಎಂದು ಶಂಕಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ. ಈ ವಿಷಯದ ಕುರಿತು ಶನಿವಾರ ನಯಗಾಂವ್ ಗ್ರಾಮದಲ್ಲಿ ರೈತನೊಬ್ಬ ಪೊಲೀಸರಿಂದ ಸಹಾಯ ಕೋರುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕಳೆದ ಕೆಲವು ದಿನಗಳಿಂದ ತನ್ನ ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ಗ್ರಾಮದ ಬಾಬುಲಾಲ್ ಜಾಟವ್ (45) ಶನಿವಾರ ನಯಗಾಂವ್ ಪೊಲೀಸ್ ಠಾಣೆಯಲ್ಲಿ

ವಾಮಾಚಾರ ಆರೋಪ| ಎಮ್ಮೆ ಜೊತೆ ಠಾಣೆ ಮೆಟ್ಟಿಲೇರಿದ ರೈತ| Read More »

ಟಿ.20 ವಿಶ್ವಕಪ್| ಕಪ್ ನಮ್ದೇ ಎಂದ ಕಾಂಗರೂ ಪಡೆ| ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ|

ದುಬೈ: ಇಂದು T20 ನ ಹೊಸ ಚಾಂಪಿಯನ್ ಆಗಿ ಆಸ್ಟ್ರೇಲಿಯಾ ಹೊರಹೊಮ್ಮಿದೆ. ಐದು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಕ್ರಿಕೆಟ್‌ನ ಅತ್ಯಂತ ಕಡಿಮೆ ಸ್ವರೂಪವು ಅದರ ಹೊಚ್ಚ ಹೊಸ ಚಾಂಪಿಯನ್ ಅನ್ನು ಪಡೆದಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು. ನಾಯಕ ವಿಲಿಯಮ್ಸನ್ ಕೇವಲ 48 ಎಸೆತಗಳಲ್ಲಿ 85 ರನ್ ಗಳಿಸಿ ಬಿರುಸಿನ ಆಟವಾಡಿದರು. ಅವರನ್ನು ಬಿಟ್ಟರೆ ಯಾವುದೇ ಬ್ಯಾಟ್ಸ್‌ಮನ್‌ಗಳು ಅಂತಹ ಪ್ರಭಾವ

ಟಿ.20 ವಿಶ್ವಕಪ್| ಕಪ್ ನಮ್ದೇ ಎಂದ ಕಾಂಗರೂ ಪಡೆ| ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ| Read More »

ನಾವೆಲ್ಲ ಜೀವಕ್ಕೆ ವಿಮೆ ಮಾಡ್ಸಿದ್ರೆ ಇಲ್ಲೊಬ್ಬಳು ಯಾವ್ದಕ್ಕೆ ವಿಮೆ ಮಾಡ್ಸಿದಾಳೆ ಗೊತ್ತಾ?

ನ್ಯೂಸ್ ಡೆಸ್ಕ್: ನಾವು ನಮ್ಮ ಜೀವಕ್ಕೆ, ಮನೆಗೆ, ಕಾರಿಗೆ ವಿಮೆ ಮಾಡಿಸುತ್ತೇವೆ. ಯಾಕೆಂದರೆ ಅದು ಹಾಳಾದರೆ, ರಿಪೇರಿ ವೆಚ್ಚಕ್ಕೆ ಬೇಕಾಗುತ್ತದೆ ಎಂಬ ಮುಂಜಾಗ್ರತೆ. ಜೀವಕ್ಕಾದರೆ ನಮ್ಮನ್ನು ಅವಲಂಭಿಸಿದ ಇನ್ನೊಬ್ಬರಿಗೆ ಉಪಯೋಗ ಆಗ್ಲಿ ಅಂತ. ಆದರೆ ಯಾವತ್ತಾದ್ರೂ ಯಾರಾದರೂ ಪೃಷ್ಠಕ್ಕೆ ಅಥವಾ ನಿತಂಬಕ್ಕೆ ವಿಮೆ ಮಾಡಿಸಿದ್ದನ್ನು ಕೇಳಿದ್ದೀರಾ?! ಹಾಗಿದ್ರೆ ಈ ಕಥೆ ಓದಿನೋಡಿ… ಬ್ರೆಜಿಲ್‌ನ 35 ವರ್ಷದ ಮಾಡೆಲ್‌ ನ್ಯಾಥಿ ಕಿಹಾರಾ ಅವರು ತಮ್ಮ ಹಿಂಬದಿಗೆ ಬರೋಬ್ಬರಿ 13 ಕೋಟಿ ರೂ.ಮೊತ್ತದ ವಿಮೆ ಮಾಡಿಸಿದ್ದಾರೆ. ಅವರ ಪೃಷ್ಠವು 126

ನಾವೆಲ್ಲ ಜೀವಕ್ಕೆ ವಿಮೆ ಮಾಡ್ಸಿದ್ರೆ ಇಲ್ಲೊಬ್ಬಳು ಯಾವ್ದಕ್ಕೆ ವಿಮೆ ಮಾಡ್ಸಿದಾಳೆ ಗೊತ್ತಾ? Read More »

ಬಂಟ್ವಾಳ: ಭೀಕರ ಅಪಘಾತಕ್ಕೆ ಇಬ್ಬರು ಯುವಕರು ಬಲಿ| ಮತ್ತಿಬ್ಬರು ಗಂಭೀರ

ಬಂಟ್ವಾಳ : ರಾ.ಹೆ.75ರ ತುಂಬೆ ರಾಮಲಕಟ್ಟೆಯ ಬಳಿ ಕ್ಯಾಟರಿಂಗ್ ವೊಂದರ ಆಹಾರ ಸಾಗಾಟದ ಪಿಕ್ ಅಪ್ ಮರಕ್ಕೆ ಢಿಕ್ಕಿ ಹೊಡೆದು ಅದರಲ್ಲಿದ್ದ ಇಬ್ಬರು ಯುವಕರು ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ ಉಪ್ಪಿನಂಗಡಿ ನಿವಾಸಿಗಳಾದ ಚೇತನ್ (25) ಹಾಗೂ ಆಶಿತ್ (21) ಮೃತಪಟ್ಟಿದ್ದಾರೆ. ಸಿಂಚನ್ ಹಾಗೂ ಸುದೀಪ್ ಗಾಯಗೊಂಡಿದ್ದಾರೆ. ಕಾರ್ಯಕ್ರಮ ಮುಗಿಸಿ ಮಂಗಳೂರು ಕಡೆಯಿಂದ ಆಗಮಿಸುತ್ತಿದ್ದ ಪಿಕ್ ಅಪ್ ಮರಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡವರನ್ನು ತುಂಬೆ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಇಬ್ಬರು ಅದಾಗಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ

ಬಂಟ್ವಾಳ: ಭೀಕರ ಅಪಘಾತಕ್ಕೆ ಇಬ್ಬರು ಯುವಕರು ಬಲಿ| ಮತ್ತಿಬ್ಬರು ಗಂಭೀರ Read More »

ಶಬರಿಮಲೆ ಪ್ರಸಾದ ತಯಾರಿಕೆ ಅನ್ಯಧರ್ಮೀಯನಿಗೆ ಗುತ್ತಿಗೆ| ಮಣಿಕಂಠನ ಪಾಯಸ ಡಬ್ಬಿಯಲ್ಲಿ ಅರಬ್ ಹೆಸರು| ಅಯ್ಯಪ್ಪನ ಪ್ರಸಾದ ಅಲ್ಲಪ್ಪಾ…!

ತಿರುವನಂತಪುರ : ಕೇರಳದ ಪ್ರಸಿದ್ದ ಯಾತ್ರಾಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಾನವು ಭಕ್ತರ ದರ್ಶನಕ್ಕೆ ತೆರೆದುಕೊಂಡಿದೆ. ಕೊರೊನಾ ಹಾವಳಿಯಿಂದ ಕಳೆದ ವರ್ಷ ಶಬರಿಮಲೆಗೆ ಯಾತ್ರೆ ಮಾಡಿದವರ ಸಂಖ್ಯೆ ತೀರಾ ಕಡಿಮೆಯಿದ್ದು ಈ ಬಾರಿ ಹೆಚ್ಚಿನ ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದೆ. ಈ ಬಾರಿ ದರ್ಶನಕ್ಕೆ ಕನಿಷ್ಟ ನಿಯಮಗಳೊಂದಿಗೆ ಅವಕಾಶ ನೀಡಲಾಗಿದ್ದು,ಮಾಲಾಧಾರಣೆ ಆರಂಭಗೊಂಡಿದೆ. ಈ ನಡುವೆ ಅಯ್ಯಪ್ಪ ಸ್ವಾಮಿಯ ಪ್ರಸಿದ್ಧ ‘ಆರಾವಣಾ ಪಾಯಸಮ್’ನಲ್ಲಿ ಅರಬಿ ಹೆಸರು ಹಾಗೂ ಹಲಾಲ್ ಪ್ರಮಾಣಪತ್ರ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಹಿಂದೂ ಧರ್ಮಕ್ಷೇತ್ರದ ಪ್ರಸಾದದಲ್ಲಿ

ಶಬರಿಮಲೆ ಪ್ರಸಾದ ತಯಾರಿಕೆ ಅನ್ಯಧರ್ಮೀಯನಿಗೆ ಗುತ್ತಿಗೆ| ಮಣಿಕಂಠನ ಪಾಯಸ ಡಬ್ಬಿಯಲ್ಲಿ ಅರಬ್ ಹೆಸರು| ಅಯ್ಯಪ್ಪನ ಪ್ರಸಾದ ಅಲ್ಲಪ್ಪಾ…! Read More »

ಬಸ್ ನಿಲ್ದಾಣದಲ್ಲಿ ಗುಂಪುಘರ್ಷಣೆ| ಓರ್ವ ಗಂಭೀರ|

ಚಿಕ್ಕಮಗಳೂರು: ಬಸ್​ ನಿಲ್ದಾಣದಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮೂಡಿಗೆರೆ ಬಸ್​ ನಿಲ್ದಾಣದಲ್ಲಿ ಎರಡು ಗುಂಪುಗಳ ನಡುವೆ ಏಕಾಏಕಿ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಓರ್ವ ಯುವಕನ ತಲೆಗೆ ಗಂಭೀರ ಗಾಯವಾಗಿದೆ. ಯುವಕರ ವರ್ತನೆ ಕಂಡು ಸ್ಥಳದಲ್ಲಿದ್ದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಬಸ್​ ನಿಲ್ದಾಣದಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಭದ್ರತೆ ಇಲ್ಲ ಎನ್ನುವಂತಾಗಿದೆ. ನಿಲ್ದಾಣದಲ್ಲಿ ಇರುವ ಸಿಸಿ ಕ್ಯಾಮರಗಳು ಕೆಟ್ಟುನಿಂತಿವೆ. ಕೂಡಲೇ ಸಿಸಿಟಿವಿ

ಬಸ್ ನಿಲ್ದಾಣದಲ್ಲಿ ಗುಂಪುಘರ್ಷಣೆ| ಓರ್ವ ಗಂಭೀರ| Read More »