Editor

ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್‌ ಬಿದ್ದು ಯುವಕ ಮೃತ್ಯು

ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್‌ ಆಕಸ್ಮಿಕವಾಗಿ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ನ.13ರ ಶನಿವಾರದಂದು ಅತ್ತಾವರದಲ್ಲಿ ನಡೆದಿದೆ. ಮೃತರನ್ನು ಜೆಪ್ಪು ನಿವಾಸಿ ಹಮೀದ್‌ ಎಂಬವರ ಪುತ್ರ ಅಬ್ದರ್ರಹ್ಮಾನ್‌ ರಿಲ್ವಾನ್‌ (30) ಎಂದು ಗುರುತಿಸಲಾಗಿದೆ. ಶನಿವಾರ ರಾಜಸ್ಥಾನದಿಂದ ಅತ್ತಾವರಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ಲಾರಿ ಬಂದಿತ್ತು. ಈ ಸಂದರ್ಭ ಕಟ್ಟಡದ ರೈಟರ್‌ ಆಗಿದ್ದ ರಿಲ್ವಾನ್‌ ಅವರಲ್ಲಿ ಗ್ರಾನೈಟ್‌‌‌‌‌ನ ಫೋಟೋ ತೆಗೆಯಲು ಕಟ್ಟಡದ ಸೂಪರ್‌‌ ವೈಸರ್‌‌‌ ಸೂಚಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ರಿಲ್ವಾನ್‌ ಫೋಟೋ ತೆಗೆಯಲು ಲಾರಿಯ ಹಿಂಬದಿಗೆ ತೆರಳಿದ್ದಾರೆ ಎನ್ನಲಾಗಿದೆ. ಈ

ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್‌ ಬಿದ್ದು ಯುವಕ ಮೃತ್ಯು Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಮತ್ತು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆ ಇಲ್ಲಿದೆ. ಮೇಷ: ಗ್ರಹಗಳ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಬಿಟ್ ಕಾಯಿನ್ ನಲ್ಲಿ ಕೋಟಿ ಕೋಟಿ ಅವ್ಯವಹಾರ| ಚೌಕೀದಾರನಿಂದ ಕಳ್ಳರ ರಕ್ಷಣೆ| ಕಾಂಗ್ರೆಸ್ ಸಿಡಿಸಿದ ‘ಕಾಯಿನ್ ಬಾಂಬ್’

ನವದೆಹಲಿ: ಇದು ಭಾರತದ ಅತಿದೊಡ್ಡ ಬಿಟ್‌ಕಾಯಿನ್ ಹಗರಣ ಎಂದು ಕರೆದಿರುವ ಕಾಂಗ್ರೆಸ್ ವಕ್ತಾರ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು, ಕರ್ನಾಟಕದ ಬಿಜೆಪಿ ಸರ್ಕಾರವು ನ್ಯಾಯಯುತ ತನಿಖೆ ನಡೆಸುವ ಬದಲು ‘ಆಪರೇಷನ್ ಬಿಟ್‌ಕಾಯಿನ್ ಹಗರಣವನ್ನು ಮುಚ್ಚಿಹಾಕಲು’ ಯತ್ನಿಸುತ್ತಿದೆ ಎಂದು ಶನಿವಾರ ಆರೋಪಿಸಿದ್ದಾರೆ. ಬಿಟ್‌ಕಾಯಿನ್ ಹಗರಣದ ತನಿಖೆಯನ್ನು ಕೈಬಿಡಲು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಹೇಳುವ ಮೂಲಕ ತನಿಖೆಯನ್ನು ಕೈಬಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು

ಬಿಟ್ ಕಾಯಿನ್ ನಲ್ಲಿ ಕೋಟಿ ಕೋಟಿ ಅವ್ಯವಹಾರ| ಚೌಕೀದಾರನಿಂದ ಕಳ್ಳರ ರಕ್ಷಣೆ| ಕಾಂಗ್ರೆಸ್ ಸಿಡಿಸಿದ ‘ಕಾಯಿನ್ ಬಾಂಬ್’ Read More »

ಬಿಸ್ಲೆ ಘಾಟ್ ನಲ್ಲಿ ಮರಕ್ಕೆ ಢಿಕ್ಕಿ ಹೊಡೆದ‌ ಕಾರು| ಚಾಲಕ‌ ಗಂಭೀರ

ಸುಬ್ರಹ್ಮಣ್ಯ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಜೆ ಬಿಸ್ಲೆ ಘಾಟ್ ನಲ್ಲಿ ನಡೆದಿದೆ. ಗಂಭೀರ ಗಾಯಗೊಂಡಿರುವ ಗಾಯಾಳುವನ್ನು ಮಂಗಳೂರು ನಿವಾಸಿ ರವಿ ಎಂದು ಗುರುತಿಸಲಾಗಿದೆ. ಬಿಸಿಲೆ ಘಾಟ್ ನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಾಲಕ ರವಿಯವರ ಕಾಲು ಮುರಿತಕ್ಕೆ ಒಳಗಾಗಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ

ಬಿಸ್ಲೆ ಘಾಟ್ ನಲ್ಲಿ ಮರಕ್ಕೆ ಢಿಕ್ಕಿ ಹೊಡೆದ‌ ಕಾರು| ಚಾಲಕ‌ ಗಂಭೀರ Read More »

ಬಿಜೆಪಿ ಮತ್ತು ಆರ್‌ಎಸ್ಎಸ್ ಐಸಿಸ್ ನಂತೆ..!? ಮಾಜಿ ಮುಖ್ಯಮಂತ್ರಿಯಿಂದ ಗಂಭೀರ ಆರೋಪ|

ನವದೆಹಲಿ: ಹಿಂದುತ್ವ ಮತ್ತು ಹಿಂದೂ ಧರ್ಮವನ್ನು ಬಿಜೆಪಿ ಹೈಜಾಕ್ ಮಾಡುತ್ತಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶನಿವಾರ ಆರೋಪಿಸಿದ್ದಾರೆ. ಇವರನ್ನು ಐಸಿಸ್ ನಂತಹ ಸಂಘಟನೆ ಧರ್ಮದ ಹೆಸರಿನಲ್ಲಿ ಜನರ ವಿರುದ್ಧ ಹೋರಾಡಿ ಕೊಂದವರಿಗೆ ಹೋಲಿಸಬಹುದು ಎಂದು ಹೇಳಿದರು. ಪಿಡಿಪಿ ಕಚೇರಿಯಲ್ಲಿ ಇಂದು ಮಾತನಾಡಿದ ಮೆಹಬೂಬಾ ಮುಫ್ತಿ, ಸಲ್ಮಾನ್ ಖುರ್ಷಿದ್ ಅವರು ಐಸಿಸ್ ನಂತಹ ಭಯೋತ್ಪಾದಕ ಸಂಘಟನೆಗಳಿಗೆ ಆರ್ ಎಸ್ ಎಸ್ ಅನ್ನು ಹೋಲಿಸಿದಾಗ, ಧರ್ಮದ ಹೆಸರಿನಲ್ಲಿ ಜನರ ವಿರುದ್ಧ

ಬಿಜೆಪಿ ಮತ್ತು ಆರ್‌ಎಸ್ಎಸ್ ಐಸಿಸ್ ನಂತೆ..!? ಮಾಜಿ ಮುಖ್ಯಮಂತ್ರಿಯಿಂದ ಗಂಭೀರ ಆರೋಪ| Read More »

ಮಂಗಳೂರು: ನಾಗಬಿಂಬದ ಕಲ್ಲು ಹಾನಿಗೆಡಹಿದ ಕಿಡಿಗೇಡಿಗಳು| ಆರೋಪಿಗಳನ್ನು ಬಂಧಿಸದಿದ್ದರೆ ಕೋಡಿಕಲ್ ಬಂದ್ ಎಚ್ಚರಿಕೆ|

ಮಂಗಳೂರು: ನಗರದ ಕೋಡಿಕಲ್‌ ನಾಗಬನದ ಕಲ್ಲನ್ನು ಎಸೆದಿರುವ ಕಿಡಿಗೇಡಿಗಳನ್ನು ಬಂಧಿಸದೇ ಇರುವ ಪೊಲೀಸ್ ಕ್ರಮವನ್ನು ಖಂಡಿಸಿ ಇಂದು ಕೋಡಿಕಲ್‌ನ ನಾಗಬನದ ಬಳಿ ವಿಎಚ್ ಪಿ ಹಾಗೂ ಸ್ಥಳೀಯ ನಾಗರೀಕರು ಪ್ರತಿಭಟನೆ ನಡೆಸಿದರು. ನಾಳೆ ಸಂಜೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಕೋಡಿಕಲ್ ಬಂದ್ ಮಾಡುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದ್ದಾರೆ ಕೋಡಿಕಲ್ ನಾಗಬನದಲ್ಲಿನ 13 ನಾಗಕಲ್ಲಿನಲ್ಲಿ ಒಂದು ಬಿಂಬವನ್ನು ಕಿಡಿಗೇಡಿಗಳು ಎಸೆದು ಅಪವಿತ್ರಗೊಳಿಸಿದ್ದರು. ಘಟನೆ ನಡೆದು ಕೆಲವು ದಿನಗಳು ಕಳೆದರೂ ಕೂಡ ಇಲ್ಲಿಯವರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಸಫಲವಾಗಿಲ್ಲ. ಈ

ಮಂಗಳೂರು: ನಾಗಬಿಂಬದ ಕಲ್ಲು ಹಾನಿಗೆಡಹಿದ ಕಿಡಿಗೇಡಿಗಳು| ಆರೋಪಿಗಳನ್ನು ಬಂಧಿಸದಿದ್ದರೆ ಕೋಡಿಕಲ್ ಬಂದ್ ಎಚ್ಚರಿಕೆ| Read More »

ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ| ಸಾವಿಗೆ ಕಾರಣನಾದವನ ಹೆಸರು ಬರೆದಿದ್ದೆಲ್ಲಿ ಗೊತ್ತಾ?

ಕೋಲ್ಕತ್ತಾ: ಎರಡು ತಿಂಗಳ ಗರ್ಭಿಣಿಯಾಗಿದ್ದ 20 ವರ್ಷದ ಮಹಿಳೆಯೊಬ್ಬರು ಕಿರುಕುಳಕ್ಕೆ ಒಳಗಾಗಿ ಟಾಲಿಗಂಜ್ ರಸ್ತೆಯ ತನ್ನ ನಿವಾಸದಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ತನ್ನ ಅತ್ತೆಯೇ ಕಾರಣ ಎಂದು ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಪೂಜಾ ಚಂದಾ ಎನ್ನಲಾಗಿದ್ದು ತನ್ನ ಸಾವಿಗೆ ತನ್ನ ಅತ್ತೆ ಶೀಲಾ ಕಾರಣ ಎಂದು ಆರೋಪಿಸಿ ತನ್ನ ಎಡ ಅಂಗೈಯಲ್ಲಿ ಆತ್ಮಹತ್ಯೆ ಪತ್ರವನ್ನು ಬರೆದುಕೊಂಡಿದ್ದಾರೆ. ಟೋಲಿಗಂಜ್ ಪ್ರದೇಶದಲ್ಲಿ ಮೊಬೈಲ್ ಅಂಗಡಿ ಹೊಂದಿರುವ ಸಂಜೋಯ್ ಚಂದ್ರ ಅವರನ್ನು ಕೇವಲ ಒಂದು ವರ್ಷದ ಹಿಂದೆ ಪೂಜಾ

ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ| ಸಾವಿಗೆ ಕಾರಣನಾದವನ ಹೆಸರು ಬರೆದಿದ್ದೆಲ್ಲಿ ಗೊತ್ತಾ? Read More »

ಮಣಿಪುರದಲ್ಲಿ ಉಗ್ರರ ಅಟ್ಟಹಾಸಕ್ಕೆ 7 ಮಂದಿ ಬಲಿ

ಮಣಿಪುರ: ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಕಮಾಂಡಿಂಗ್ ಆಫೀಸರ್ ಬೆಂಗಾವಲು ಪಡೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಕಮಾಂಡಿಂಗ್​ ಅಧಿಕಾರಿಯ ಕುಟುಂಬದವರು ಸೇರಿ 7 ಮಂದಿ ಸೈನಿಕರು ಹತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಣಿಪುರದ ಮ್ಯಾನ್ಮಾರ್ ಗಡಿಯ ಚುರಾಚಂದಪುರ ಜಿಲ್ಲೆಯಲ್ಲಿ ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ ಎಂದು ವರದಿ ತಿಳಿಸಿದೆ. ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಅಸ್ಸಾಂ ರೈಫಲ್ಸ್‌ಗೆ ಸೇರಿದ ಸೇನಾ ವಾಹನದ ಮೇಲೆ ಉಗ್ರರ ಗುಂಪೊಂದು ದಾಳಿ

ಮಣಿಪುರದಲ್ಲಿ ಉಗ್ರರ ಅಟ್ಟಹಾಸಕ್ಕೆ 7 ಮಂದಿ ಬಲಿ Read More »

ರಾಜ್ಯದಲ್ಲಿ ಮತ್ತೊಂದು ವಾರ ಮಳೆಕಾಟ

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ನವೆಂಬರ್ 17ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅದನ್ನು ಹೊರತುಪಡಿಸಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿಯಲ್ಲಿ ಮಳೆಯಾಗಲಿದೆ.

ರಾಜ್ಯದಲ್ಲಿ ಮತ್ತೊಂದು ವಾರ ಮಳೆಕಾಟ Read More »

ಮುಂದುವರಿದ ದುಬಾರಿ ದುನಿಯಾ| ಮದ್ಯ, ಬಟ್ಟೆ, ಎಲೆಕ್ಟ್ರಾನಿಕ್ ‌ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ|

ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್ ಎದುರಾಗಲಿದೆ. ಎಲೆಕ್ಟ್ರಾನಿಕ್ಸ್ ವಸ್ತುಗಳು, ಮದ್ಯ ಮತ್ತು ಜವಳಿ ಉತ್ಪನ್ನಗಳ ದರ ಶೀಘ್ರದಲ್ಲೇ ಶೇಕಡ 8 ರಿಂದ 10 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗಿರುವ ಕಾರಣ ಈ ವಲಯದ ಉತ್ಪಾದಕ ಕಂಪನಿಗಳು ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿವೆ. ಇದರ ಪರಿಣಾಮ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಖಾದ್ಯತೈಲ, ದಿನಸಿ ವಸ್ತುಗಳು, ಪೆಟ್ರೋಲ್ ಮತ್ತು ಡೀಸೆಲ್, ಪ್ಯಾಕೇಜ್ಡ್ ಫುಡ್ ಸೇರಿದಂತೆ

ಮುಂದುವರಿದ ದುಬಾರಿ ದುನಿಯಾ| ಮದ್ಯ, ಬಟ್ಟೆ, ಎಲೆಕ್ಟ್ರಾನಿಕ್ ‌ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ| Read More »