Editor

ಲೋಕಸಭೆಯಲ್ಲಿ ಕೃಷಿ ಕಾನೂನು ಮಸೂದೆ ರದ್ದು ಚರ್ಚೆಯಿಲ್ಲದೇ ಅಂಗೀಕಾರ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡನೆ ಮಾಡಿದ ಸರ್ಕಾರ ಯಾವುದೇ ಚರ್ಚೆ ನಡೆಸದೆ ಅಂಗೀಕಾರ ಮಾಡಿದೆ. ವಿರೋಧ ಪಕ್ಷಗಳು ಕೃಷಿ ಕಾಯ್ದೆಗಳ ಅಪಾಯಗಳು ಬಗ್ಗೆ ಚರ್ಚೆ ಮಾಡಲು ಬಯಸಿದ್ದರು. ಅದಕ್ಕಾಗಿ ಪ್ರತಿಭಟನೆ ನಡೆಸಿದರು. ಅದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಅಧಿವೇಶನವನ್ನು ಮುಂದೂಡಲಾಗಿತ್ತು. ಮಸೂದೆ ಕುರಿತು ಅವಕಾಶ ನೀಡದ ಸ್ಪೀಕರ್ ಓಂ ಬಿರ್ಲಾರವರು ಲೋಕಸಭೆಯಲ್ಲಿ ಅಂಗೀಕರಿಸಿದ್ದಾರೆ. ರಾಜ್ಯಸಭೆಯ ಅಧಿವೇಶನದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡೀಸ್‌ರವರಿಗೆ ಶ್ರಧ್ಧಾಂಜಲಿ

ಲೋಕಸಭೆಯಲ್ಲಿ ಕೃಷಿ ಕಾನೂನು ಮಸೂದೆ ರದ್ದು ಚರ್ಚೆಯಿಲ್ಲದೇ ಅಂಗೀಕಾರ Read More »

ಲಾಕ್ ಡೌನ್ ಕುರಿತು ಸುಳ್ಳುಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ- ಸಚಿವ ಡಾ| ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಬಗ್ಗೆ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ, ಈ ಬಗ್ಗೆ ಜನತೆ ಗಾಬರಿಪಡುವ ಅಗತ್ಯವಿಲ್ಲ , ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಲಾಕ್ ಡೌನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಕೋವಿಡ್ ರೂಪಾಂತರಿತ ಹೊಸ ತಳಿ ಒಮಿಕ್ರಾನ್ ವಿಚಾರವನ್ನು ಮುಂದಿಟ್ಟು ಲಾಕ್ ಡೌನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗೊಂದಲಮಯ, ತಪ್ಪು

ಲಾಕ್ ಡೌನ್ ಕುರಿತು ಸುಳ್ಳುಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ- ಸಚಿವ ಡಾ| ಸುಧಾಕರ್ Read More »

ಹಸುವನ್ನು ಕಾಡಿಗೆ ಬಿಡಲು ತೆರಳಿದವನಿಗೆ ಗುಂಡಿಕ್ಕಿದ ಬೇಟೆಗಾರರು..!

ಸಿದ್ದಾಪುರ: ಬೇಟೆ ಆಡಲು ಬಂದಿದ್ದವರ ನಾಡ ಬಂದೂಕಿನಿಂದ ಗುಂಡು ಹಾರಿ ವ್ಯಕ್ತಿಯೊಬ್ಬನಿಗೆ ಗಾಯವಾದ ಘಟನೆ ತಾಲೂಕಿನ ಗವಿನಸರದಲ್ಲಿ ನಡೆದಿದೆ. ಮಹೇಶ್ ಪೂಜಾರಿ ಗುಂಡು ತಗುಲಿದ ವ್ಯಕ್ತಿ. ಮಹೇಶ್ ಹಸುವನ್ನು ಮೇಯುವುದಕ್ಕಾಗಿ ಬಿಡಲು ಕಾಡಿಗೆ ಹೋಗಿದ್ದ. ಈ ವೇಳೆ ಈತನಿಗೆ ಕಾಡಿನಲ್ಲಿ ಭೇಟೆ ಆಡಲು ಬಂದಿದ್ದ ಅಪರಿಚಿತರು ಪ್ರಾಣಿ ಎಂದು ಗುಂಡು ಹಾರಿಸಿದ್ದು ಕಾಲಿಗೆ ಗಾಯವಾಗಿದೆ ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿ ಪಂಡಿತ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಸುವನ್ನು ಕಾಡಿಗೆ ಬಿಡಲು ತೆರಳಿದವನಿಗೆ ಗುಂಡಿಕ್ಕಿದ ಬೇಟೆಗಾರರು..! Read More »

ಓಮಿಕ್ರಾನ್ ಇಫೆಕ್ಟ್| ಶೀಘ್ರದಲ್ಲೇ ಮತ್ತಷ್ಟು ಇಳಿಕೆಯಾಗಲಿದೆ ಇಂಧನ‌ ದರ|

ಡಿಜಿಟಲ್ ಡೆಸ್ಕ್: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ರಿಲೀಫ್ ಸಿಗುವ ನಿರೀಕ್ಷೆಯಿದೆ. ಓಮಿಕ್ರಾನ್ ಪರಿಣಾಮ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 5 ರೂ.ವರೆಗೆ ಇಳಿಕೆಯಾಗಬಹುದು ಎನ್ನಲಾಗಿದೆ. ಜಾಗತಿಕ ಪರಿಸ್ಥಿತಿಯಿಂದಾಗಿ ಕಚ್ಚಾ ತೈಲದ ಬೆಲೆಯಲ್ಲಿ ದೊಡ್ಡ ಕುಸಿತದ ನಂತರ ಇಂಧನ ತಜ್ಞರು ಈ ಅಂದಾಜುಗಳನ್ನು ಮಾಡಿದ್ದಾರೆ. ಹೀಗಾಗಿ ಬೆಲೆ ಏರಿಕೆ ಬಿಸಿಯಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಲಾಭ ದೊರಕುವ ಸಾಧ್ಯತೆ ಇದೆ. ಈ ನಡುವೆ ಕೊರೊನಾ ವೈರಸ್‌ನ ಹೊಸ ರೂಪಾಂತರವಾದ ಒಮಿಕ್ರಾನ್ ರೂಪಾಂತರದ ತಳಿ

ಓಮಿಕ್ರಾನ್ ಇಫೆಕ್ಟ್| ಶೀಘ್ರದಲ್ಲೇ ಮತ್ತಷ್ಟು ಇಳಿಕೆಯಾಗಲಿದೆ ಇಂಧನ‌ ದರ| Read More »

ಇಂದಿನಿಂದ ಸಂಸತ್ತು ಚಳಿಗಾಲ ಅಧಿವೇಶನ| ಹಲವು ಪ್ರಮುಖ ಮಸೂದೆಗಳು ಮಂಡನೆ‌ ಸಾಧ್ಯತೆ|

ನವದೆಹಲಿ: ಈ ವರ್ಷದ ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಶುರುವಾಗಲಿದೆ. ಡಿಸೆಂಬರ್​ 23ರ ವರೆಗೆ ನಡೆಯಲಿರುವ ಅಧಿವೇಶನದಲ್ಲಿ 29ಕ್ಕೂ ಹೆಚ್ಚು ಮಸೂದೆಗಳು ಮಂಡನೆಯಾಗೋ ಸಾಧ್ಯತೆ ಇದೆ. ಪ್ರಮುಖವಾಗಿ ಕೃಷಿ ಕಾನೂನು ರದ್ದು, ಕ್ರಿಪ್ಟೋ ಕರೆನ್ಸಿ ನಿಯಂತ್ರಣ, ಕೆಲ ಸರ್ಕಾರಿ ಬ್ಯಾಂಕ್​ ಖಾಸಗೀಕರಣ, ಡ್ರಗ್ಸ್​​ ನಿಯಂತ್ರಣ ಸೇರಿ ಹಲವು ಮಹತ್ವದ ಮಸೂದೆಗಳು ಈ ಬಾರಿ ಮಂಡನೆಯಾಗಲಿವೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ವ್ಯವಸ್ಥಿತ ಅಧಿವೇಶನ ನಡೆಸುವ ಸಲುವಾಗಿ ಸರ್ವಪಕ್ಷಗಳ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಆದರೆ ಪ್ರಧಾನಿ ಮೋದಿ

ಇಂದಿನಿಂದ ಸಂಸತ್ತು ಚಳಿಗಾಲ ಅಧಿವೇಶನ| ಹಲವು ಪ್ರಮುಖ ಮಸೂದೆಗಳು ಮಂಡನೆ‌ ಸಾಧ್ಯತೆ| Read More »

ಇಂದಿನಿಂದ ಧರ್ಮಸ್ಥಳದಲ್ಲಿ ಲಕ್ಷದೀಪ ಸಂಭ್ರಮ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ನ. 29 (ಸೋಮವಾರ) ರಿಂದ ಡಿ. 4ರ ವರೆಗೆ ನೆರವೇರಲಿದೆ. ಈ ಪ್ರಯುಕ್ತ ದೇವಸ್ಥಾನ, ಬೀಡು, ಮುಖ್ಯಧ್ವಾರ, ವಸತಿಗೃಹ, ಉದ್ಯಾನವನ, ಸಭಾಂಗಣ ಸಹಿತ ಕ್ಷೇತ್ರವನ್ನು ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಲಾಗಿದೆ. ಡಿ. 2ರಂದು ಗುರುವಾರ ಸಂಜೆ 5ಕ್ಕೆ ಅಮೃತವರ್ಷಿಣಿ ಸಭಾ ಭವನದಲ್ಲಿ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನವನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಉದ್ಘಾಟಿಸುವರು. ನ. 29ರಿಂದ ಹೊಸಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ,

ಇಂದಿನಿಂದ ಧರ್ಮಸ್ಥಳದಲ್ಲಿ ಲಕ್ಷದೀಪ ಸಂಭ್ರಮ Read More »

ಕೊರೊನಾ ಹೆಚ್ಚಳ ಹಿನ್ನಲೆ| ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಬ್ರೇಕ್|

ಬೆಂಗಳೂರು: ರಾಜ್ಯದಲ್ಲಿ ಕರೋನ ಕೇಸ್‌ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳ ಕಾರ್ಯಕ್ರಮಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬ್ರೇಕ್‌ ಹಾಕುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಮೈಸೂರು, ಧಾರವಾಡ ಮತ್ತು ಬೆಂಗಳೂರಿನಲ್ಲಿ ಇತ್ತೀಚಿನ ಕೋವಿಡ್ -19 ಕೇಸ್‌ ಹೆಚ್ಚಳವಾದ ಹಿನ್ನಲೆಯಲ್ಲಿ, ಕರ್ನಾಟಕ ಸರ್ಕಾರವು ಭಾನುವಾರ ಶಿಕ್ಷಣ ಸಂಸ್ಥೆಗಳಲ್ಲಿ ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ನಂತರ ಕರ್ನಾಟಕ ಸರ್ಕಾರವು ತನ್ನ ಸಲಹೆಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮ್ಮೇಳನಗಳು, ವಿಚಾರಗೋಷ್ಠಿಗಳು, ಶೈಕ್ಷಣಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ಎರಡು ತಿಂಗಳ

ಕೊರೊನಾ ಹೆಚ್ಚಳ ಹಿನ್ನಲೆ| ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಬ್ರೇಕ್| Read More »

‘ ಅಧಿಕಾರಕ್ಕಾಗಿ ಅಂಟಿಕೊಂಡು ಕೂರಲ್ಲ, ಜನಸೇವೆಯೇ ನನ್ನ ಉದ್ದೇಶ’| ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಹೇಳಿಕೆ|

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ 83ನೇ ಸಂಚಿಕೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ಡಿಸೆಂಬರ್ ಆರಂಭವಾಗಲಿದ್ದು, ದೇಶ ನೌಕಾಪಡೆಯ ದಿನ ಮತ್ತು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸುತ್ತಿದೆ. ಡಿಸೆಂಬರ್ 16 ರಂದು ದೇಶವು 1971 ರ ಯುದ್ಧದ ಸುವರ್ಣಮಹೋತ್ಸವ ಆಚರಿಸಲಿದ್ದು, ಈ ಸಂದರ್ಭದಲ್ಲಿ ದೇಶದ ಭದ್ರತಾ ಪಡೆಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯ. ನಾವು ವೀರಯೋಧರನ್ನು ಹುತಾತ್ಮ ಯೋಧರನ್ನು ಸ್ಮರಿಸೋಣ ಎಂದು ಹೇಳಿದ್ದಾರೆ. ಪ್ರಕೃತಿ ಸಂರಕ್ಷಣೆ

‘ ಅಧಿಕಾರಕ್ಕಾಗಿ ಅಂಟಿಕೊಂಡು ಕೂರಲ್ಲ, ಜನಸೇವೆಯೇ ನನ್ನ ಉದ್ದೇಶ’| ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಹೇಳಿಕೆ| Read More »

ಒಮಿಕ್ರಾನ್ ಸೋಂಕಿನ ರೋಗ ಲಕ್ಷಣಗಳೇನು ಗೊತ್ತಾ..?

ಕೊರೊನಾ ವೈರಸ್ ಜಗತ್ತಿನ ಚಿತ್ರಣವನ್ನು ಬದಲಿಸಿದೆ. ಹೊಸ ಹೊಸ ರೂಪಾಂತರಗಳು ಆತಂಕಕ್ಕೆ ಕಾರಣವಾಗ್ತಿದೆ. ಡೆಲ್ಟಾ ವೈರಸ್ ಮೂಲಕ ಕೊರೊನಾ ಎರಡನೇ ಅಲೆ ಸಾಕಷ್ಟು ವಿನಾಶಕ್ಕೆ ಕಾರಣವಾಗಿತ್ತು, ಈಗ ಒಮಿಕ್ರಾನ್ ಮತ್ತೊಂದು ಅನಾಹುತಕ್ಕೆ ಮುನ್ನುಡಿ ಬರೆಯುತ್ತಿದೆ. ಒಮಿಕ್ರಾನ್ ರೂಪಾಂತರದ ಮೊದಲ ಪ್ರಕರಣ ದಕ್ಷಿಣ ಆಫ್ರಿಕಾದಲ್ಲಿ ವರದಿಯಾಗಿದೆ. ಹಾಂಕಾಂಗ್ ಮತ್ತು ಬೆಲ್ಜಿಯಂನಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಸಂಸ್ಥೆ ಇದ್ರ ಬಗ್ಗೆ ಎಚ್ಚರಿಕೆ ನೀಡಿದೆ. ಈ ರೂಪಾಂತರವು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ. ಈಗಾಗಲೇ ಚೇತರಿಸಿಕೊಂಡಿರುವ ಕೊರೊನಾ ರೋಗಿಗಳಲ್ಲಿ ಮರುಸೋಂಕಿನ

ಒಮಿಕ್ರಾನ್ ಸೋಂಕಿನ ರೋಗ ಲಕ್ಷಣಗಳೇನು ಗೊತ್ತಾ..? Read More »

ಸ್ವಂತ ಅಣ್ಣನಿಂದಲೇ ಗರ್ಭಿಣಿಯಾದ ತಂಗಿ..!

ಮೈಸೂರು: ಅಣ್ಣನಿಂದ ತಂಗಿ ಗರ್ಭಿಣಿಯಾದ ಘಟನೆ ಮೈಸೂರಿನ ಗಿರಿದರ್ಶಿನಿ ನಗರದಲ್ಲಿ ಬೆಳಕಿಗೆ ಬಂದಿದೆ. ತಂದೆ-ತಾಯಿ ಕಳೆದುಕೊಂಡಿದ್ದ ಬಾಲಕಿಗೆ ಇಬ್ಬರು ಅಣ್ಣಂದಿರು ಮತ್ತು ಇಬ್ಬರು ಅಕ್ಕಂದಿರು ಇದ್ದಾರೆ. ಆದರೆ ಅಕ್ಕಂದಿರಿಗೆ ಮದುವೆಯಾಗಿದ್ದು, ಹಾಗಾಗಿ ಅಣ್ಣಂದಿರೊಂದಿಗೆ ವಾಸವಾಗಿದ್ದಳು. ಆರೋಪಿಯ ಆದರೆ ಅಲ್ಲಿ ಒಬ್ಬಾತ ಸ್ವಂತ ತಂಗಿ ಮೇಲೆ ಮೂರು ತಿಂಗಳಿನಿಂದ ಅತ್ಯಾಚಾರ ಎಸಗಿದ್ದಾನೆ. ಈ ಹಿನ್ನಲೆ ಬಾಲಕಿಯನ್ನು ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬಾಲಕಿ ಗರ್ಭಿಣಿ ಆಗಿರುವುದು ಕಂಡು ಬಂದಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ

ಸ್ವಂತ ಅಣ್ಣನಿಂದಲೇ ಗರ್ಭಿಣಿಯಾದ ತಂಗಿ..! Read More »