Editor

ವಿಜಯನಗರ: ಗಾಯಾಳುಗಳನ್ನು ಸಾಗಿಸಲು ತಮ್ಮ ಕಾರನ್ನೇ ಬಿಟ್ಟು ಕೊಟ್ಟ ಶೋಭಾ ಕರಂದ್ಲಾಜೆ| ಕೇಂದ್ರ ಸಚಿವೆಯ ನಡೆಗೆ ವ್ಯಾಪಕ ಮೆಚ್ಚುಗೆ

ಸಮಗ್ರ ನ್ಯೂಸ್: ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆ ಸಾಗಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾನವೀಯತೆ ಮೆರೆದಿದ್ದಾರೆ. ವಿಜಯನಗರದ ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯ ಕಾರಿಣಿಯಲ್ಲಿ ಭಾಗವಹಿಸಲು ಶೋಭಾ ಕರಂದ್ಲಾಜೆ ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಅಪಘಾತವಾಗಿರುವುದನ್ನು ಕಂಡಿದ್ದಾರೆ. ಈ ವೇಳೆ ಶೋಭಾ ಅವರು, ಕೂಡಲೇ ಕಾರು ನಿಲ್ಲಿಸಿ ತಮ್ಮ ಕಾರನ್ನು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಬಿಟ್ಟು ಕೊಟ್ಟಿದ್ದಾರೆ. ಗಾಯಗೊಂಡಿದ್ದ ಸವಾರರ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವೆ, ತಮ್ಮ ವಾಹನದ ಮೂಲಕ

ವಿಜಯನಗರ: ಗಾಯಾಳುಗಳನ್ನು ಸಾಗಿಸಲು ತಮ್ಮ ಕಾರನ್ನೇ ಬಿಟ್ಟು ಕೊಟ್ಟ ಶೋಭಾ ಕರಂದ್ಲಾಜೆ| ಕೇಂದ್ರ ಸಚಿವೆಯ ನಡೆಗೆ ವ್ಯಾಪಕ ಮೆಚ್ಚುಗೆ Read More »

ಸುಳ್ಯ ಮೂಲದ ದಂಪತಿ ಮೈಸೂರಿನಲ್ಲಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಸುಳ್ಯ ಸಮೀಪದ ಕುಕ್ಕಾಜೆಕಾನ ಮೂಲದ ದಂಪತಿ ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎ.16ರಂದು ನಡೆದಿದೆ. ಸೋಣಂಗೇರಿ, ಮಂಗಳೂರು ಮೊದಲಾದೆಡೆ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆಗಿದ್ದ ಕುಕ್ಕಾಜೆಕಾನದ ಮಾಧವ ನಾಯ್ಕ್ ರವರು 3 ವರ್ಷಗಳ ಹಿಂದೆ ಪತ್ನಿ, ಪುತ್ರಿ ಸಮೇತ ಮೈಸೂರಿಗೆ ಹೋಗಿ ಅಲ್ಲಿ ನೆಲೆಸಿದ್ದರು. ಎ.16 ರಂದು ಮಾಧವ ನಾಯ್ಕ್ (56) ಮತ್ತು ಅವರ ಪತ್ನಿ ಉಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ. ಮೈಸೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಹಜರು ನಡೆಸಿದ ಬಳಿಕ

ಸುಳ್ಯ ಮೂಲದ ದಂಪತಿ ಮೈಸೂರಿನಲ್ಲಿ ಆತ್ಮಹತ್ಯೆ Read More »

ಸರೋವರದಲ್ಲೊಂದು ಸುಳಿ| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಫೋಟೋ|

ಸಮಗ್ರ ಡಿಜಿಟಲ್ ಡೆಸ್ಕ್: ಸರೋವರದಲ್ಲಿ ತಿರುಗುತ್ತಿರುವ ಸುಳಿಯ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಯುಎಸ್‌ನ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿದ್ಯಮಾನವು ಇತ್ತೀಚೆಗೆ ಪೂರ್ವ ನಾಪಾ ಕಣಿವೆಯಲ್ಲಿರುವ ಲೇಕ್ ಬೆರ್ರಿಸ್ಸಾ ಜಲಾಶಯದಲ್ಲಿ ಕಂಡುಬoದಿದೆ. ಪೋರ್ಟಲ್ ಟು ಹೆಲ್ ಹಲವು ವರ್ಷಗಳಿಂದ ಪ್ರೇಕ್ಷಕರನ್ನು ಭಯ ಪಡೆಸುತ್ತಿದೆ. ಇದು 2018 ಮತ್ತು 2019ರಲ್ಲಿ 72 ಅಡಿ ಅಗಲದ ದೈತ್ಯ ರಂಧ್ರ ಕಂಡುಬoದಿತ್ತು. ಸರೋವರದಲ್ಲಿ ನೀರಿನ ಮಟ್ಟವು ತುಂಬಾ ಹೆಚ್ಚಾದ ನಂತರ ಈ ರಂಧ್ರ ಸಂಭವಿಸಿದೆ. ಹೆಚ್ಚುವರಿ ನೀರು

ಸರೋವರದಲ್ಲೊಂದು ಸುಳಿ| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಫೋಟೋ| Read More »

ಉಡುಪಿ : ಶಾರ್ಟ್ ಸರ್ಕ್ಯೂಟ್ ನಿಂದ ಭಾರೀ ಅಗ್ನಿದುರಂತ ; ಲಕ್ಷಾಂತರ ರೂ. ನಷ್ಟ

ಸಮಗ್ರ ನ್ಯೂಸ್ : ಉಡುಪಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಗ್ನಿ ದುರಂತವೊಂದು ನಡೆದಿದ್ದು, ಮಣಿಪಾಲದ ವೆಷ್ಟೇಕ್ ಎಂಟರ್​ಪ್ರೈಸಸ್​ನಲ್ಲಿ ಭಾರೀ ನಷ್ಟ ಸಂಭವಿಸಿದೆ. ರಾತ್ರಿ ವೇಳೆ ವೆಷ್ಟೇಕ್ ಎಂಟರ್​ಪ್ರೈಸಸ್​ನಲ್ಲಿ ಶಾರ್ಟ್​ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕಿಸಲಾಗಿದೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಮುಂಜಾನೆವರೆಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿದೆ ಎಂದು ತಿಳಿದುಬಂದಿದೆ.

ಉಡುಪಿ : ಶಾರ್ಟ್ ಸರ್ಕ್ಯೂಟ್ ನಿಂದ ಭಾರೀ ಅಗ್ನಿದುರಂತ ; ಲಕ್ಷಾಂತರ ರೂ. ನಷ್ಟ Read More »

OTT ಗೆ ಬರಲು ಕೆಜಿಎಫ್ 2 ಸಿದ್ಧ…

ಸಮಗ್ರ ನ್ಯೂಸ್: ವಿಶ್ವದಾದ್ಯಂತ ಯಶ್ ನಟನೆಯ KGF 2 ಚಿತ್ರ ಬಿಡುಗಡೆಗೊಂಡಿದ್ದು, 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕನ್ನಡ ಚಿತ್ರರಂಗದಲ್ಲೆ ದಾಖಲೆ ಹರಿಸುವಂತೆ ಚಿತ್ರತಂಡ ಮಾಡಿದ್ದು, ಪ್ರತಿದಿನ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಹವಾ ಹೆಚ್ಚಿದೆ. ಕೆಜಿಎಫ್ 2 ಚಿತ್ರ ಸದ್ಯ ಒಟಿಟಿಯಲ್ಲಿ ಬರಲು ಅದಾಗಲೇ ಸಜ್ಜು ಮಾಡಿದೆ. ಕೆಲವೆ ದಿನಗಳಲ್ಲಿ ಒಟಿಟಿಯಲ್ಲಿ ಬರಲಿದೆ ಎಂಬ ಮಾಹಿತಿಯು ಹೊರಬಿದ್ದಿದೆ. ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದ್ದು, ದೊಡ್ಡ ಮೊತ್ತಕ್ಕೆ ಕೆಜಿಎಫ್ 2 ಅನ್ನು ಅಮೆಜಾನ್ ಪ್ರೈಮ್ ತೆಗೆದುಕೊಂಡಿದೆ.

OTT ಗೆ ಬರಲು ಕೆಜಿಎಫ್ 2 ಸಿದ್ಧ… Read More »

ಹನುಮ ಜಯಂತಿ ಮೇಲೆ ಕಲ್ಲು ತೂರಾಟ.., ತನಿಖೆ ನಡೆಸುತ್ತಿರುವ ಪೋಲಿಸ್ ಸಿಬ್ಬಂದಿ

ಸಮಗ್ರ ನ್ಯೂಸ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹನುಮ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ್ದು 9 ಜನರನ್ನು ಬಂಧಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ವಾಯುವ್ಯ ಭಾಗದ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಶನಿವಾರ ಹನುಮ ಜಯಂತಿಯ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ 9 ಜನರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹನುಮಜಯಂತಿ ಶೋಭಾಯಾತ್ರೆಗೆ ಕಲ್ಲು ತೂರಾಟ ಮಾಡಿದು ಮಾತ್ರ ವಲ್ಲದೆ, ಗುಂಡಿನ ದಾಳಿಯು ನಡೆಸಲಾಗಿದೆ. 6 ಪೊಲೀಸರು ಸೇರಿ ಹಲವರಿಗೆ ಗಾಯಗಳಾಗಿದ್ದು, 14 ಜನ ಅರೆಸ್ಟ್ ಮಾಡಲಾಗಿದೆ.ಜೊತೆಗೆ

ಹನುಮ ಜಯಂತಿ ಮೇಲೆ ಕಲ್ಲು ತೂರಾಟ.., ತನಿಖೆ ನಡೆಸುತ್ತಿರುವ ಪೋಲಿಸ್ ಸಿಬ್ಬಂದಿ Read More »

ಪತಿಯ ಸಾವಿನ‌ ಸುದ್ದಿ ಸಹಿಸದ ಸತಿ| ಮಗುವನ್ನು ಕೊಂದು ಸಾವಿಗೆ ಶರಣಾದ ಪತ್ನಿ

ಸಮಗ್ರ ನ್ಯೂಸ್: ಪತಿ ಇಲ್ಲದೆ ಬದುಕೇ ಇಲ್ಲ ಎಂಬ ನಿರ್ಧಾರಕ್ಕೆ ಬಂದ ಮಹಿಳೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಮುದ್ದಾದ ಮಗುವನ್ನು ಕೊಂದು ತಾನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ರಾಯಚೂರಿನಲ್ಲಿ ನಡೆದಿದೆ. ಮಂಗಳೂರು ನಗರದಲ್ಲಿ ಅಪಘಾತದಲ್ಲಿ ಪತಿ ಸಾವನ್ನಪ್ಪಿದ್ದಾನೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ಶೃತಿ ಆಘಾತಕ್ಕೊಳಗಾಗಿದ್ದಾಳೆ. ರಾಯಚೂರಿನಲ್ಲಿದ್ದ ಶೃತಿ ತನ್ನ 6 ತಿಂಗಳ ಮಗುವನ್ನು ನೇಣುಹಾಕಿ ಹತ್ಯೆಗೈದು ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. ಮಂಗಳೂರಿನ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾಧರ ಬಿ.

ಪತಿಯ ಸಾವಿನ‌ ಸುದ್ದಿ ಸಹಿಸದ ಸತಿ| ಮಗುವನ್ನು ಕೊಂದು ಸಾವಿಗೆ ಶರಣಾದ ಪತ್ನಿ Read More »

ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಅಯೋಧ್ಯಾ ನಗರ ಶ್ರೀರಾಮನ ಜನ್ಮಸ್ಥಳವಾಗಿದ್ದು, ಹಾಗಾಗಿಯೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. 2024 ರ ಸಂಕ್ರಾಂತಿಯಂದು ರಾಮ ಮಂದಿರವನ್ನು ಉದ್ಘಾಟಿಸುವ ಸಾಧ್ಯತೆಯಿದೆ ಎಂದು ರಾಮ ಜನ್ಮಭೂಮಿ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾಹಿತಿ ನೀಡಿದ್ದಾರೆ. ರಾಮನ ಮೂರ್ತಿ ಪ್ರತಿಷ್ಟಾಪಿಸಲು ಸಿದ್ದತೆಗಳು ನಡೆಯುತ್ತಿದೆ. 2024 ರಲ್ಲಿ ಉದ್ಘಾಟಿಸುವ ಸಾದ್ಯತೆ ಇದೆ ಎಂದಿದ್ದಾರೆ.

ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್ Read More »

ಕಲಬುರಗಿ ಖಾಸಗಿ ಬಸ್ – ಟ್ಯಾಂಕರ್ ನಡುವೆ ಭೀಕರ ಅಪಘಾತ; ಮೂವರು ಗಂಭೀರ

ಸಮಗ್ರ ನ್ಯೂಸ್: ಖಾಸಗಿ ಬಸ್-ಟ್ಯಾಂಕರ್ ನಡುವೆ ಭೀಕರ ಅಪಘಾತ ನಡೆದಿದ್ದು ಮೂವರ ಸ್ಥಿತಿ ಗಂಭೀರ, ಹಲವು ಪ್ರಯಾಣಿಕರಿಗೆ ಗಾಯಗಳಾದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಕಲಬುರ್ಗಿಯ ಹುಮನಾಬಾದ್ ರಿಂಗ್ ರಸ್ತೆಯ ಹೊರವಲಯದಲ್ಲಿ ಖಾಸಗಿ ಬಸ್ ಹಾಗೂ ಸಿಮೆಂಟ್ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಎರಡೂ ವಾಹನಗಳು ಪಲ್ಟಿಯಾದ ಪರಿಣಾಮ, ಮೂವರು ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿ ತಲುಪಿದ್ದಾರೆ. ಅಲ್ಲದೇ ಹಲವರಿಗೆ ಸಣ್ಣ ಪುಟ್ಟ ಗಾಯವಾಗಿರೋದಾಗಿ ತಿಳಿದು ಬಂದಿದೆ. ಇನ್ನೂ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ

ಕಲಬುರಗಿ ಖಾಸಗಿ ಬಸ್ – ಟ್ಯಾಂಕರ್ ನಡುವೆ ಭೀಕರ ಅಪಘಾತ; ಮೂವರು ಗಂಭೀರ Read More »

ಉಕ್ರೇನ್ ರಾಜಧಾನಿ ಸುತ್ತಮುತ್ತ ನೂರಾರು ಮೃತ ದೇಹ..

ರಷ್ಯಾ ಉಕ್ರೇನ್ ಯುದ್ದ ದೇಶದೆಲ್ಲೆಡೆ ಭಯ ಬೀಳಿಸಿದೆ. ರಷ್ಯಾ ಸೇನೆ ವಾಪಸಾತಿ ನಂತರ ಉಕ್ರೇನ್ ರಾಜಧಾನಿ ಕೈವ್ ಸುತ್ತಮುತ್ತ 900ಕ್ಕೂ ಹೆಚ್ಚು ನಾಗರಿಕ ದೇಹಗಳು ಪತ್ತೆಯಾಗಿದ್ದು. ಅವರಲ್ಲಿ ಹೆಚ್ಚಿನವರು ಮಾರಣಾಂತಿಕವಾಗಿ ಗುಂಡು ಹಾರಿಸಿದ್ದರಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ರಾಜಧಾನಿಯ ಪ್ರಾದೇಶಿಕ ಪೊಲೀಸ್ ಪಡೆಯ ಮುಖ್ಯಸ್ಥ ಕೈವ್ ಸುತ್ತಲೂ ಶವಗಳನ್ನು ಬೀದಿಗಳಲ್ಲಿ ಬಿಡಲಾಗಿದೆ ಹಾಗೆ ತಾತ್ಕಾಲಿಕ ಸಮಾಧಿ ಮಾಡಲಾಗಿದೆ. ಶೇ.95 ಮಂದಿ ಗುಂಡೇಟಿನ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ರಷ್ಯನ್ ಪಡೆಗಳು ಉಕ್ರೇನ್‍ನ ಸೇನೆಯನ್ನಷ್ಟೇ ಅಲ್ಲ,

ಉಕ್ರೇನ್ ರಾಜಧಾನಿ ಸುತ್ತಮುತ್ತ ನೂರಾರು ಮೃತ ದೇಹ.. Read More »