Editor

ಅಮೇರಿಕಾದ ಉಪಾಧ್ಯಕ್ಷರಿಗೂ ಬಂತು ಕೊರೋನಾ

ಸಮಗ್ರ ನ್ಯೂಸ್: ಭಾರತವು ಕೊರೋನಾ ನಾಲ್ಕನೆಯ‌ ಅಲೆಯ ಭೀತಿಯಲ್ಲಿದ್ದರೆ ಅತ್ತ ವಿಶ್ವದ ಬಲಾಢ್ಯ ಅಮೇರಿಕಕ್ಕೂ ಇದರ ಚಿಂತೆ ಶುರುವಾದಂತೆ ಕಾಣಿಸುತ್ತಿದೆ. ಅಮೇರಿಕಾದ ಉಪಾಧ್ಯಕ್ಷೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಅದು ಲಕ್ಷಣರಹಿತವಾಗಿದ್ದು ಆರೋಗ್ಯಕರವಾಗಿದ್ದಾರೆ. ಇದುವರೆಗಿನ ಮಾಹಿತಿಯ ಪ್ರಕಾರ ಅವರು ಅಮೇರಿಕಾ ಅಧ್ಯಕ್ಷರ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟಿಲ್ಲ ಎಂದು ಶ್ವೇತಭವನ ಪ್ರಕಟಣೆ ತಿಳಿಸಿದೆ

ಅಮೇರಿಕಾದ ಉಪಾಧ್ಯಕ್ಷರಿಗೂ ಬಂತು ಕೊರೋನಾ Read More »

ಕೋವಿಡ್ ಜನಕ ಚೀನಾದಲ್ಲಿ ಮತ್ತೊಂದು ರೋಗ ಪತ್ತೆ?

ಸಮಗ್ರ ನ್ಯೂಸ್: ಜಗತ್ತು ಕೋವಿಡ್ ಭೀತಿಯಿಂದ ಹೊರಬರುವ ಮೊದಲೇ ಚೀನಾದಿಂದ ಬಂದ ಮತ್ತೊಂದು ಆಘಾತಕಾರಿ ಸುದ್ದಿ ಆರೋಗ್ಯದ ಕಾಳಜಿಯನ್ನು ಹೆಚ್ವಿಸುವಂತೆ ಮಾಡಿದೆ. ಕೋವಿಡ್ ಜನಕ ಚೀನಾದಲ್ಲಿ ಹಕ್ಕಿಜ್ವರದ ತಳಿಯಾಗಿರುವ H3N8 ಚೀನಾದಲ್ಲಿ ಮಾನವರಲ್ಲಿ ಪತ್ತೆಯಾಗಿದೆ. ಚೀನಾದ ಆರೋಗ್ಯ ಇಲಾಖೆಯ ವರದಿಗಳ ಪ್ರಕಾರ ನಾಲ್ಕು ವರ್ಷದ ಮಗುವಿನಲ್ಲಿ ಈ ಸೋಂಕು ಪತ್ತೆಯಾಗಿದ್ದು, ಯಾವುದೇ ಪ್ರಾಥಮಿಕ ಸಂಪರ್ಕಕ್ಕೆ ಹರಡಿಲ್ಲ ಎಂಬುದು‌ ತೃಪ್ತಿಕರ ಸಂಗತಿಯಾಗಿದೆ.

ಕೋವಿಡ್ ಜನಕ ಚೀನಾದಲ್ಲಿ ಮತ್ತೊಂದು ರೋಗ ಪತ್ತೆ? Read More »

ಸರಕಾರಿ ಸ್ವಾಮ್ಯದ ಎಲ್‌ಐಸಿ ಪ್ರತಿ ಶೇರಿಗೆ ₹902-₹949 ಬೆಲೆ?

ಸಮಗ್ರ ನ್ಯೂಸ್: ಐಪಿಒದ ಮೂಲಕ ಬಂಡವಾಳ ಕ್ರೋಢೀಕರಣ ಯೋಜಿಸಿರುವ ಎಲ್‌ಐಸಿ ಶೇರು ಮಾರುಕಟ್ಟೆಗೆ ಮೇ 4ರಂದು ಲಗ್ಗೆ ಇಡಲಿದೆ‌. ವರದಿಗಳ ಪ್ರಕಾರ ಪ್ರತಿ ಶೇರಿಗೆ ₹902-₹949 ಬೆಲೆ ನಿರ್ಧರಿಸುವ ಸಾಧ್ಯತೆಯಿದೆ. ತನ್ನ ವಿಮಾದಾರ ಶೇರು ಖರೀದಿಸುವುದನ್ನು ಬೆಂಬಲಿಸುವ ಸಲುವಾಗಿ ₹60 ವಿನಾಯಿತಿ ಲಭ್ಯವಾಗಲಿದೆ.

ಸರಕಾರಿ ಸ್ವಾಮ್ಯದ ಎಲ್‌ಐಸಿ ಪ್ರತಿ ಶೇರಿಗೆ ₹902-₹949 ಬೆಲೆ? Read More »

ಕೇರಳದಲ್ಲಿ ಕಾರು ಚಲಾಯಿಸಲೂ ಹೆಲ್ಮೆಟ್ ಬೇಕಂತೆ; ಚಾಲಕನಿಗೆ ದಂಡ ವಿಧಿಸಿದ ಪೊಲೀಸರು

ಸಮಗ್ರ ನ್ಯೂಸ್: ಹೆಲ್ಮೆಟ್ ಧರಿಸದ ಕಾರಣ ಕಾರು ಮಾಲೀಕರಿಗೆ 500 ರೂ.ಗಳ ದಂಡ ವಿಧಿಸಿದ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ. ಮಾರುತಿ ಆಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಾತ್ರ ಅಜಿತ್ ಎ ಎಂಬವರಿಗೆ ಕೇರಳ ಟ್ರಾಫಿಕ್ ಪೊಲೀಸರು 500 ರೂ.ಗಳ ದಂಡ ವಿಧಿಸಿದ್ದು, ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ‘ಡ್ರೈವಿಂಗ್ ಅಥವಾ ಸವಾರ ತಲೆಗೆ ಹೆಲ್ಮೆಟ್ ಧರಿಸಿಲ್ಲ’ ಎಂಬ ಕಾರಣಕ್ಕೆ 500 ರೂ.ಗಳ ದಂಡ ಪಾವತಿಸಿದ್ದು, ಕೇರಳ ಪೊಲೀಸರಿಗೆ ಯಾರು ಹೆಲ್ಮೆಟ್ ಧರಿಸಬೇಕೆಂಬುದೇ ಮರೆತುಹೋಗಿದೆ. ಡಿಸೆಂಬರ್ 7, 2021

ಕೇರಳದಲ್ಲಿ ಕಾರು ಚಲಾಯಿಸಲೂ ಹೆಲ್ಮೆಟ್ ಬೇಕಂತೆ; ಚಾಲಕನಿಗೆ ದಂಡ ವಿಧಿಸಿದ ಪೊಲೀಸರು Read More »

ರಥೋತ್ಸವ ವೇಳೆ ಕರೆಂಟ್ ಶಾಕ್; ಹತ್ತು ಮಂದಿ ಸಾವು|

ಸಮಗ್ರ ನ್ಯೂಸ್: ರಥೋತ್ಸವದ ವೇಳೆ ಘೋರ ದುರಂತವೊಂದು ಸಂಭವಿಸಿದ್ದು, ವಿದ್ಯುತ್ ಹರಿದು 10 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಂಜಾವೂರು ಕಲಿಮೇಡು ದೇವಸ್ಥಾನದಲ್ಲಿ ನಡೆದಿದೆ. ತಂಜಾವೂರಿನ ದೇವಾಲಯದ ರಥೋತ್ಸವದ ವೇಳೆ ವಿದ್ಯುತ್ ಹರಿದು 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ದೇವಾಲಯದ ರಥೋತ್ಸವದ ವಿದ್ಯುತ್ ವೈರ್ ಗೆ ಡಿಕ್ಕಿ ಹೊಡೆದ ಪರಿಣಾಮ 10 ಜನರು ಮೃತಪಟ್ಟಿದ್ದು, ಗಾಯಗೊಂಡ ಮೂವರನ್ನು ತಂಜಾವೂರು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ರಥೋತ್ಸವ ವೇಳೆ ಕರೆಂಟ್ ಶಾಕ್; ಹತ್ತು ಮಂದಿ ಸಾವು| Read More »

ಸಿಎಂ ಬೊಮ್ಮಯಿ ಮೇಲೆ ದಾಳಿಗೆ ಯತ್ನಿಸಿದ ಎತ್ತು

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮೇಲೆ ಎತ್ತು‌‌ ದಾಳಿಗೆ ಯತ್ನಿಸಿದ್ದು, ಸಿಎಂ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಳಿಕೋಟೆ ತಾಲೂಕಿನ ಕೊಡಗನೂರ ಗ್ರಾಮಕ್ಕೆ ಭೇಟಿ ನೀಡಿದ ಸಿಎಂಗೆ ಬರಮಾಡಿ‌ ರೈತರು ಜೋಡೆತ್ತುಗಳನ್ನು ನೀಡಿದರು. ಬಳಿಕ ಎತ್ತುಗಳಿಗೆ ಪೂಜಿಸೋ ವೇಳೆಯಲ್ಲಿ ಬೆದರಿ ಕೋಪಗೊಂಡು‌ ಎತ್ತು ತಿವಿಯುವ ಹಂತಕ್ಕೆ ಬಂದಿತ್ತು. ಘಟನೆಯಲ್ಲಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಬೊಮ್ಮಾಯಿ ಪಾರಾಗಿದ್ದಾರೆ. ಅಲ್ಲಿಯೇ ಇದ್ದಂತ ಎಎಸ್ಪಿಯವರು ಎತ್ತಿನ ಕೊಂಬನ್ನು ಇಡಿದು, ಬೊಮ್ಮಾಯಿಯನ್ನು ತಿವಿತದಿಂದ ಪಾರು ಮಾಡಿದರು. ಕೆಲ ಕಾಲ ಈ ಘಟನೆಯಿಂದ ಸ್ಥಳದಲ್ಲಿ ಆತಂಕ

ಸಿಎಂ ಬೊಮ್ಮಯಿ ಮೇಲೆ ದಾಳಿಗೆ ಯತ್ನಿಸಿದ ಎತ್ತು Read More »

ಸುಳ್ಯ: ಮರ್ಕಂಜ‌ ಗ್ರಾಮಸ್ಥರ ನಿದ್ದೆಗೆಡಿಸಿದ ಅಳವುಪಾರೆ ಗಣಿಗಾರಿಕೆ| ಸ್ಥಳೀಯ ವಸತಿ ಪ್ರದೇಶದಲ್ಲಿ ದಿನವೂ ಡೈನಮೈಟ್ ಸ್ಪೋಟ| ವಸತಿ ಪ್ರದೇಶದಲ್ಲಿ ಗಣಿಗಾರಿಕೆಗೆ ಪರ್ಮಿಷನ್ ಕೊಟ್ಟು ಕೈತೊಳೆದುಕೊಂಡ ಗಣಿ ಅಧಿಕಾರಿಗಳು

ಸಮಗ್ರ ನ್ಯೂಸ್: ದಿನ ಬೆಳಗಾದರೆ ಎದೆಯೊಡೆಯುವ ಡೈನಮೈಟ್ ಸದ್ದು. ಆಗಸದೆತ್ತರ ಚಿಮ್ಮುವ ಕಗ್ಗಲ್ಲ ಧೂಳು. ಸ್ಪೋಟದ ರಭಸಕ್ಕೆ ಬಿರುಕು ಬಿಡುತ್ತಿರುವ ಮನೆಯ ಗೋಡೆಗಳು. ಇದು ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಅಳವುಪಾರೆ ಪ್ರದೇಶದಲ್ಲಿ ನಿತ್ಯ ಕಂಡುಬರುತ್ತಿರುವ ದೃಶ್ಯ. ಊರವರ ವಿರೋಧವಿದ್ದರೂ ತಲೆ ಎತ್ತಿದ ಗಣಿಗಾರಿಕೆಯಿಂದ ಇದೀಗ ಹತ್ತಿರದ ಮನೆಗಳಿಗೆ ಹಾನಿಯುಂಟಾಗಿದ್ದು, ಡೈನಮೈಟ್ ಸದ್ದು ಸ್ಥಳೀಯ ಜನರ‌ ನಿದ್ದೆಗೆಡಿಸಿದೆ. ವಿಡಿಯೋಗಾಗಿ‌ ಕೆಳಗಿನ ಲಿಂಕ್ ಒತ್ತಿರಿ… https://m.facebook.com/story.php?story_fbid=368216975253480&id=100061955421424 ಮರ್ಕಂಜ ಗ್ರಾಮದ ಆಳವುಪಾರೆ ಎಂಬಲ್ಲಿ ಕಳೆದ ಒಂದು ವರ್ಷದಿಂದ

ಸುಳ್ಯ: ಮರ್ಕಂಜ‌ ಗ್ರಾಮಸ್ಥರ ನಿದ್ದೆಗೆಡಿಸಿದ ಅಳವುಪಾರೆ ಗಣಿಗಾರಿಕೆ| ಸ್ಥಳೀಯ ವಸತಿ ಪ್ರದೇಶದಲ್ಲಿ ದಿನವೂ ಡೈನಮೈಟ್ ಸ್ಪೋಟ| ವಸತಿ ಪ್ರದೇಶದಲ್ಲಿ ಗಣಿಗಾರಿಕೆಗೆ ಪರ್ಮಿಷನ್ ಕೊಟ್ಟು ಕೈತೊಳೆದುಕೊಂಡ ಗಣಿ ಅಧಿಕಾರಿಗಳು Read More »

ಬುಡಕಟ್ಟು ಜನಾಂಗದವರ ನಡುವೆ ಮಾರಾಮಾರಿ

ಸಮಗ್ರ ನ್ಯೂಸ್: ಬುಡಕಟ್ಟು ಜನಾಂಗದವರ ಮಧ್ಯೆ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಮಾರಾಮಾರಿಯಲ್ಲಿ ಬರೋಬ್ಬರಿ 175ಕ್ಕೂ ಹೆಚ್ಚು ಜನರ ಬಲಿಯಾಗಿದೆ. ಅರಬ್ಬರು ಮತ್ತು ಆಫ್ರಿಕನ್ ಮಸಲಿತ್ ಬುಡಕಟ್ಟುಗಳ ನಡುವೆ ಉಂಟಾದ ಹಿಂಸಾಚಾರ ಮುಂದುವರೆದಿದ್ದು, ನೂರಾರು ಜನರನ್ನು ಬಲಿ ಪಡೆದಿದೆ. ಐದು ದಿನಗಳಲ್ಲಿ 175ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಬುಡಕಟ್ಟು ಜನಾಂಗದ ಮಾರಾಮಾರಿ ತಡೆಯಲು ಸೂಡಾನ್ ಸರ್ಕಾರ ಪಶ್ಚಿಮ, ಧಾರ್‍ಪುರ್ ಪ್ರಾಂತ್ಯಕ್ಕೆ ಮತ್ತಷ್ಟು ಸೇನಾಪಡೆಗಳನ್ನು ನಿಯೋಜಿಸಿದೆ. ರಾಜಧಾನಿ ಜಿನೇನಾದಿಂದ 80ಕಿ.ಮೀ. ಪೂರ್ವಕ್ಕೆ ಕ್ರೆನಿನ್ ಪಟ್ಟಣದಲ್ಲಿ ಅರಬ್ಬರು ಮತ್ತು ಆಫ್ರಿಕನ್

ಬುಡಕಟ್ಟು ಜನಾಂಗದವರ ನಡುವೆ ಮಾರಾಮಾರಿ Read More »

ಹಿಂದೂ ದೇವರಿಗೆ ಅವಮಾನ|ಒಳ ಚಡ್ಡಿ, ಬ್ರಾ ದಲ್ಲಿ ಶಿವ ವಿಷ್ಣು ಫೋಟೋ ಪ್ರಿಂಟ್ ಮಾಡಿದ ಸಹಾರಾ‌ ರಾಯ್!!

ಸಮಗ್ರ ನ್ಯೂಸ್ ಡೆಸ್ಕ್ : ಒಳ ಚಡ್ಡಿ, ಬ್ರಾ ಅಲ್ಲಿ ಶಿವ ವಿಷ್ಣು ಪ್ರಿಂಟ್ ಮಾಡಿ ಮಾರ್ಕೆಟಿಂಗ್ ಮಾಡುತ್ತಿರುವ ಫೋಟೋ ಇದೀಗ ವೈರಲ್ ಆಗಿದ್ದು ಹಿಂದೂಗಳ ಆಕ್ರೋಶಕ್ಕೆ ಕಾರಣ ವಾಗಿದೆ. ಸಹಾರ ರಾಯ್ ಸ್ವಿಮ್ಮಿ ಎಂಬ ಕಂಪನಿ ಇದಾಗಿದ್ದು ಹಿಂದೂ ದೇವರಗಳನ್ನು ಅವಮಾನ ಮಾಡಿರುವುದು ಎದ್ದು ಕಾಣುತ್ತದೆ. ಇದರ ಫೋಟೋ ಗಳು ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಹಿಂದೂ ಗಳು ಈ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಹಿಂದೂ ದೇವರಿಗೆ ಅವಮಾನ|ಒಳ ಚಡ್ಡಿ, ಬ್ರಾ ದಲ್ಲಿ ಶಿವ ವಿಷ್ಣು ಫೋಟೋ ಪ್ರಿಂಟ್ ಮಾಡಿದ ಸಹಾರಾ‌ ರಾಯ್!! Read More »

ಮಂಗಳೂರು: ಠಾಣೆಯಲ್ಲೇ ಹೊಡೆದಾಡಿಕೊಂಡ ಪೊಲೀಸ್ ಸಿಬ್ಬಂದಿ

ಓರ್ವ ಆಸ್ಪತ್ರೆಗೆ ದಾಖಲು ಸಮಗ್ರ ನ್ಯೂಸ್: ಮಂಗಳೂರು ನಗರದ ಸಂಚಾರ ಪಶ್ಚಿಮ ಠಾಣೆಯಲ್ಲಿ ಸೋಮವಾರ ಬೆಳಗ್ಗೆ ಹಿರಿಯ ಮತ್ತು ಕಿರಿಯ ಪೊಲೀಸ್ ಸಿಬ್ಬಂದಿಯ ಮಧ್ಯೆ ಹೊಡೆದಾಟ ನಡೆದಿದ್ದು, ಗಾಯಾಳು ಹಿರಿಯ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ. ಸೋಮವಾರ ಬೆಳಗ್ಗಿನ ಗಸ್ತು ಕರ್ತವ್ಯಕ್ಕೆ ಸಂಬಂಧಿಸಿ ಠಾಣೆಗೆ ಆಗಮಿಸಿದ ಕಿರಿಯ ಸಿಬ್ಬಂದಿ, ಹಿರಿಯ ಸಿಬ್ಬಂದಿಯ ಮಧ್ಯೆ ರೇಗಾಡಿ ಹಲ್ಲೆ ನಡೆಸಿದ್ದಾರೆ . ಬಳಿಕ ಅಲ್ಲಿದ್ದ ಇತರ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಹಿಂದೆಯೂ ಕಿರಿಯ ಸಿಬ್ಬಂದಿಯ

ಮಂಗಳೂರು: ಠಾಣೆಯಲ್ಲೇ ಹೊಡೆದಾಡಿಕೊಂಡ ಪೊಲೀಸ್ ಸಿಬ್ಬಂದಿ Read More »