Editor

ರಸಗೊಬ್ಬರಗಳ ಮೇಲಿನ ಸಬ್ಸಿಡಿ ಏರಿಕೆಗೆ ಕೇಂದ್ರದ ತೀರ್ಮಾನ

ಸಮಗ್ರ ನ್ಯೂಸ್: ದೇಶದ ರೈತರಿಗೆ ಪ್ರಧಾನಿ ಮೋದಿ ಸರ್ಕಾರದಿಂದ ಬಂಪರ್‌ ಸುದ್ದಿ ಸಿಕ್ಕಿದೆ. ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಲು ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ವೇಳೆ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಇದರಿಂದಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗಬಹುದೆಂಬ ಆತಂಕಕ್ಕೊಳಗಾಗಿದ್ದ ರೈತ ಸಮುದಾಯಕ್ಕೆ ಈ ಸುದ್ದಿ ನೆಮ್ಮದಿ ತಂದಿದೆ. ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ

ರಸಗೊಬ್ಬರಗಳ ಮೇಲಿನ ಸಬ್ಸಿಡಿ ಏರಿಕೆಗೆ ಕೇಂದ್ರದ ತೀರ್ಮಾನ Read More »

ಕಣ್ಣಾ‌ಮುಚ್ಚಾಲೆ ಆಡಿ ಕಣ್ಣು‌ಮುಚ್ಚಿದ ಬಾಲಕಿಯರು| ಐಸ್ ಕ್ರೀಂ ಬಾಕ್ಸ್ ನೊಳಗೆ ಅವಿತು ಉಸಿರುಗಟ್ಟಿ ಸಾವು

ಸಮಗ್ರ ನ್ಯೂಸ್: ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಐಸ್‌ಕ್ರೀಂ ಪೆಟ್ಟಿಗೆಯೊಳಗೆ ಅಡಗಿ ಕುಳಿತು ಕೊಳ್ಳಲು ಮುಂದಾಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ನಡೆದಿದೆ. ನಾಗರಾಜು ಮತ್ತು ಚಿಕ್ಕದೇವಮ್ಮ ಎಂಬುವರ ಪುತ್ರಿ ಭಾಗ್ಯ (12), ರಾಜನಾಯಕ ಮತ್ತು ಗೌರಮ್ಮ ಎಂಬುವರ ಪುತ್ರಿ ಕಾವ್ಯ (7) ಮೃತ ಬಾಲಕಿಯರು. ಮೃತ ಬಾಲಕಿಯರಾದ ಭಾಗ್ಯ ಹಾಗೂ ಕಾವ್ಯ ಬುಧವಾರ ಬೆಳಿಗ್ಗೆ ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣ ಆಟವಾಡುತ್ತಿದ್ದರು. ಈ ವೇಳೆ ಕಣ್ಣಾಮುಚ್ಚಾಲೆ ಆಟವಾಡುವ ಸಂದರ್ಭ ಐಸ್ ಕ್ರೀಮ್

ಕಣ್ಣಾ‌ಮುಚ್ಚಾಲೆ ಆಡಿ ಕಣ್ಣು‌ಮುಚ್ಚಿದ ಬಾಲಕಿಯರು| ಐಸ್ ಕ್ರೀಂ ಬಾಕ್ಸ್ ನೊಳಗೆ ಅವಿತು ಉಸಿರುಗಟ್ಟಿ ಸಾವು Read More »

ಕೊರೊನಾ ಸೀಸನ್ 4; ರಾಜ್ಯ ಸಾರಿಗೆಯಲ್ಲೂ ಟಫ್ ರೂಲ್ಸ್ ಜಾರಿ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕೊರೊನಾ ಹೆಚ್ಚಳ ಬೆನ್ನಲ್ಲೇ, ಸಾರಿಗೆಯಲ್ಲೂ` ಟಫ್‌ ರೂಲ್ಸ್ ಜಾರಿಗೆ ತರಲು ಇದಾಗಲೆ ಮುಂದಾಗಿದೆ. ಸಾರಿಗೆಯಲ್ಲಿ ನಿರ್ದಿಷ್ಟ ಪ್ರಯಾಣಿಕರ ಸಂಚಾರಕ್ಕೆ ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮೆಟ್ರೋ ಸಂಚಾರಕ್ಕೂ ಟಫ್‌ ರೂಲ್ಸ್ ಮಾಡಲಾಗಿದ್ದು, ಪ್ರಯಾಣಿಕರಿಗೆ ಮಾಸ್ಕ್‌ ಸ್ಯಾನಿಟೈಸರ್‌ ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.ದಬಲ್‌ ದೋಸ್‌ ವ್ಯಾಕ್ಸಿನೇಷನ್‌ ಸರ್ಟಿಫಿಕೆಟ್‌ ಕಡ್ಡಾಯಗೊಳಿಸಲಾಗುತ್ತದೆ. ಅಲ್ಲದೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನಿಲ್ದಾಣಗಳಲ್ಲಿ ದಿನಕ್ಕೆ 2 ಬಾರಿ ಸ್ಯಾನಿಟೈಜರ್‌ ಮಾಡಬೇಕು. ತುರ್ತು ಸಂದರ್ಭಗಳಲ್ಲಿ ಮಾತ್ರ 60 ವರ್ಷ ಮೇಲ್ಪಟ್ಟವರಿಗೆ

ಕೊರೊನಾ ಸೀಸನ್ 4; ರಾಜ್ಯ ಸಾರಿಗೆಯಲ್ಲೂ ಟಫ್ ರೂಲ್ಸ್ ಜಾರಿ ಸಾಧ್ಯತೆ Read More »

12ರ ಬಾಲಕನಿಂದ 5ವರ್ಷದ ಬಾಲಕಿಯ ಅತ್ಯಾಚಾರ

ಸಮಗ್ರ ನ್ಯೂಸ್: 12 ವರ್ಷದ ಬಾಲಕನೊಬ್ಬ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಜಾರ್ಖಂಡ್ ನ ಖುಂತಿ‌ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿ ತನ್ನ ಮನೆಯ ಸಮೀಪದ ಅಂಗಡಿಯೊಂದಕ್ಕೆ ತಂಪು ಪಾನೀಯ ಖರೀದಿಸಲು ಹೋದಾಗ ಅಲ್ಲಿ ಒಬ್ಬನೇ ಇದ್ದ ಹುಡುಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅವರು ಹೇಳಿದ್ದಾರೆ. ಕಳೆದ‌ ಶನಿವಾರ ತೋರ್ಪಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಜಿಲ್ಲೆಯಾದ್ಯಂತ ಬೆಚ್ಚಿಬೀಳಿಸಿದೆ. ಘಟನೆ ಸಂಬಂಧ ಬಾಲಕನನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ

12ರ ಬಾಲಕನಿಂದ 5ವರ್ಷದ ಬಾಲಕಿಯ ಅತ್ಯಾಚಾರ Read More »

ಪ್ರಧಾನಿ ನೇತೃತ್ವದಲ್ಲಿ ಸಿಎಂಗಳ ಸಭೆ| ಕೊರೊನಾ ನಡುವೆಯು ಪೆಟ್ರೋಲ್ ಡೀಸೇಲ್ ದರ ಇಳಿಸುವಂತೆ ಪ್ರಧಾನಿ ಮನವಿ|

ಸಮಗ್ರ ನ್ಯೂಸ್: ಕೊರೊನಾ ಸವಾಲು ಇನ್ನೂ ಮುಗಿದಿಲ್ಲ. ಶಾಲೆ ಆರಂಭದ ಹೊತ್ತಲ್ಲಿ ಕರೊನಾ 4ನೇ ಅಲೆಯ ಭೀತಿ ಹುಟ್ಟಿದೆ.ದೇಶದ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ರಾಜ್ಯಗಳಲ್ಲಿ ಪೆಟ್ರೋಲ್​, ಡಿಸೇಲ್​ ದರ ಕಡಿಮೆ ಮಾಡಲೂ ಪ್ರಧಾನಿ ಮನವಿಯನ್ನು ಮಾಡಿಕೊಂಡಿದ್ದಾರೆ.ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಆತಂಕ ಹಿನ್ನೆಲೆ ಬುಧವಾರ ಬೆಳಗ್ಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್​ ಸಭೆ ನಡೆಸಿದ ಪ್ರಧಾನಿ ಮೋದಿ ಈಗಾಗಲೇ ಆರೋಗ್ಯ ಕ್ಷೇತ್ರದಲ್ಲಿ

ಪ್ರಧಾನಿ ನೇತೃತ್ವದಲ್ಲಿ ಸಿಎಂಗಳ ಸಭೆ| ಕೊರೊನಾ ನಡುವೆಯು ಪೆಟ್ರೋಲ್ ಡೀಸೇಲ್ ದರ ಇಳಿಸುವಂತೆ ಪ್ರಧಾನಿ ಮನವಿ| Read More »

ಸುಳ್ಯ: ನದಿಯಲ್ಲಿ ಮುಳುಗಿ ಬಾಲಕ ಸಾವು

ಸಮಗ್ರ ನ್ಯೂಸ್: ಹೊಳೆಯಲ್ಲಿ ಸ್ನಾನ ಮಾಡಲೆಂದು ಹೋದ ಸಂದರ್ಭದಲ್ಲಿ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅರಂತೋಡು ಗ್ರಾಮದ ಕುಕ್ಕುಂಬಳ ಎಂಬಲ್ಲಿ ಇಂದು ಸಂಜೆ ವರದಿಯಾಗಿದೆ. ಮೃತಪಟ್ಟ ಬಾಲಕನನ್ನು ಮಂಗಳೂರಿನ ಮನ್ವಿತ್(12) ಎಂದು ಗುರುತಿಸಲಾಗಿದೆ. ಅರಂತೋಡಿನ ಬಾಲಕೃಷ್ಣ ಶೆಟ್ಟಿಯವರ ಪುತ್ರಿಯನ್ನು ಮಂಗಳೂರಿಗೆ ವಿವಾಹ ಮಾಡಿಕೊಡಲಾಗಿದ್ದು, ಅವರ ಮಗ ಮನ್ವಿತ್ ಅಜ್ಜನ ಮನೆಗೆ ಬಂದ ಸಂದರ್ಭದಲ್ಲಿ ಕುಕ್ಕುಂಬಳ ಎಂಬಲ್ಲಿ ಸ್ನಾನ ಮಾಡಲೆಂದು ನೀರಿಗಿಳಿದು ಮೃತಪಟ್ಟರೆಂದು ತಿಳಿದುಬಂದಿದೆ. ಮೃತದೇಹವನ್ನು ಶರತ್, ನಿಧೀಶ್, ತಾಜ್ ಅರಂತೋಡು, ಮುನೀರ್ ನೀರಿನಿಂದ ಹೊರತೆಗೆಯಲು ಸಹಕರಿಸಿದರು.

ಸುಳ್ಯ: ನದಿಯಲ್ಲಿ ಮುಳುಗಿ ಬಾಲಕ ಸಾವು Read More »

ಸುಳ್ಯ: ಮನೆಯಿಂದಲೇ ಮೊಬೈಲ್ ಕದ್ದೊಯ್ದ ಕಿರಾತಕ ಕಳ್ಳ

ಬೆಳ್ಳಾರೆಯ ನೆಟ್ಟಾರು ಮನೆಯಿಂದ ಮೊಬೈಲ್ ಕದ್ದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ ಘಟನೆ ಎ.25 ರಂದು ನಡೆದಿದೆ. ಮದ್ಯಾಹ್ನದ ಸಮಯಕ್ಕೆ ನೆಟ್ಟಾರಿನ ಮಹಮ್ಮದ್ ಕುಂಞ ಯವರ ಮನೆಯ ಎದುರು ಬಾಗಿಲನ್ನು ಸರಿಸಿ ಮನೆಯ ಒಳಗೆ ಹೋಗಿ ಸುಮಾರು 8000 ಮೌಲ್ಯದ ಎರಡು ಸ್ಯಾಮ್ ಸಾಂಗ್ ಮೊಬೈಲ್ ಎ.24 ರಂದು ಕದ್ದೊಯ್ದಿದ್ದಾರೆ ಎಂದು ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳ್ಳತನ ಮಾಡಿದ ಆರೋಪಿ ಉಮೈದ್ರಾತ್ರಿ ಸಮಯಕ್ಕೆ ಸ್ವತ್ತು ಸಮೇತ ಸಂಪ್ಯ ಪೊಲೀಸ ರು ವಶಕ್ಕೆ ಪಡೆದಿದ್ದಾರೆ.

ಸುಳ್ಯ: ಮನೆಯಿಂದಲೇ ಮೊಬೈಲ್ ಕದ್ದೊಯ್ದ ಕಿರಾತಕ ಕಳ್ಳ Read More »

ಇಂದು‌(ಎ.27) ಸಿಎಂ ಬಸವರಾಜ ಬೊಮ್ಮಾಯಿ ಕರಾವಳಿ ಪ್ರವಾಸ

ಸಮಗ್ರ ನ್ಯೂಸ್: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು (ಎ.27) ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೂಡುಬಿದಿರೆ ತಾಲೂಕು ಆಡಳಿತ ಸೌಧ ಉದ್ಘಾಟನೆ, ಮೂಡುಬಿದಿರೆ ತಾಲೂಕು ಪತ್ರಕರ್ತರ ಸಂಘದ ನೂತನ ಪತ್ರಕರ್ತರ ಭವನ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಸಿಎಂ ಬೊಮ್ಮಾಯಿ ಮೂಡುಬಿದಿರೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ – ಮಂಗಳೂರು ಉತ್ತರ ಉಪವಿಭಾಗದ ನಿರ್ದೇಶನದಂತೆ ಮೂಡುಬಿದಿರೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಇಂದು‌(ಎ.27) ಸಿಎಂ ಬಸವರಾಜ ಬೊಮ್ಮಾಯಿ ಕರಾವಳಿ ಪ್ರವಾಸ Read More »

ಹಾಲಿನ ಬೆಲೆ ಕನಿಷ್ಠ 3 ರೂ ಗೆ ಹೆಚ್ಚಳಕ್ಕೆ, ಮುಖ್ಯಮಂತ್ರಿಗೆ ಮನವಿ

ಸಮಗ್ರ ನ್ಯೂಸ್: ಪ್ರತಿ ಲೀಟರ್ ಹಾಲಿಗೆ ಕನಿಷ್ಠ 3 ರೂ. ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೋರಿದ್ದಾರೆ. ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿಗಳು, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿ ಬಹುತೇಕ ಎಲ್ಲ ವೆಚ್ಚಗಳು ಶೇ.30 ಹೆಚ್ಚಾಗಿರುವುದನ್ನು ಪರಿಗಣಿಸಿ ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನ ದರವನ್ನು ಹೆಚ್ಚಳ ಅನಿವಾರ್ಯವಾಗಿದೆ ಎಂದು ಸಿಎಂ ಬಳಿ ವಿನಂತಿಸಿಕೊಂಡಿದ್ದಾರೆ. ನಂದಿನಿ ಹಾಲಿನ ಮಾರಾಟ ದರಕ್ಕೆ ತುಲನೆ ಮಾಡಿದಾಗ ಇತರೇ ಸಂಸ್ಥೆಗಳ ದರವು ಪ್ರತಿ

ಹಾಲಿನ ಬೆಲೆ ಕನಿಷ್ಠ 3 ರೂ ಗೆ ಹೆಚ್ಚಳಕ್ಕೆ, ಮುಖ್ಯಮಂತ್ರಿಗೆ ಮನವಿ Read More »

ಮಂಗಳೂರು: ಧರ್ಮದಂಗಲ್ ನಡುವೆಯೂ ಸಾಮರಸ್ಯದ ಬೀಜ ಬಿತ್ತಿದ ಹಿಂದೂ ನವವಿವಾಹಿತ| ಮಸೀದಿಯಲ್ಲಿ ಮುಸ್ಲಿಂ ಗೆಳೆಯರಿಗಾಗಿ ಇಪ್ತಾರ್ ಆಯೋಜನೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್ ದಿನಕ್ಕೊಂದು ತಿರುವು ಪಡೆಯತ್ತಿದೆ. ಹಿಜಾಬ್‌ನಿಂದ ಆರಂಭವಾದ ವೈಮನಸ್ಸು ಹಲಾಲ್, ವ್ಯಾಪಾರ ಬಹಿಷ್ಕಾರವನ್ನು ದಾಟಿ ಬಂಗಾರ ಖರೀದಿಯವರೆಗೂ ಬಂದು ನಿಂತಿದೆ. ಈ ಘಟನೆಯ ಆತಂಕ‌ದ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯದ ಘಟನೆ ನಡೆದಿದೆ. ತನ್ನ ಮದುವೆಗೆ ಬಂದರೂ ಉಪವಾಸ ನಿಮಿತ್ತ ಊಟ ಮಾಡದೇ ಹಿಂದಿರುಗಿದ ಮುಸ್ಲಿಂ ಗೆಳೆಯರಿಗೋಸ್ಕರ ಹಿಂದೂ ಯುವಕ ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿ, ನೂರಾರು ಮಂದಿಗೆ ಊಟ ಹಾಕಿದ ಮಾದರಿ ಕಾರ್ಯ ದಕ್ಷಿಣ ಕನ್ನಡ

ಮಂಗಳೂರು: ಧರ್ಮದಂಗಲ್ ನಡುವೆಯೂ ಸಾಮರಸ್ಯದ ಬೀಜ ಬಿತ್ತಿದ ಹಿಂದೂ ನವವಿವಾಹಿತ| ಮಸೀದಿಯಲ್ಲಿ ಮುಸ್ಲಿಂ ಗೆಳೆಯರಿಗಾಗಿ ಇಪ್ತಾರ್ ಆಯೋಜನೆ Read More »