Editor

ಪುಂಜಾಲಕಟ್ಟೆ: ಸಿಡಿಲಿಗೆ ಓರ್ವ ಬಲಿ

ಸಮಗ್ರ ನ್ಯೂಸ್: ಸಿಡಿಲು ಬಡಿದು ಯುವಕಯೋರ್ವ ಮೃತಪಟ್ಟ ಘಟನೆ ಪಾಂಡವರಕಲ್ಲು ಎಂಬಲ್ಲಿ ನಡೆದಿದೆ. ಪಾಂಡವರಕಲ್ಲು ನಿವಾಸಿ ಲೋಕೇಶ್ ಎಂಬವರು ಮೃತ ವ್ಯಕ್ತಿ.ಕೂಲಿ ಕೆಲಸ ಮಾಡುತ್ತಿದ್ದ ಲೋಕೇಶ್ ಅವರು ರಜೆಯಲ್ಲಿದ್ದರು.ಮನೆಯಲ್ಲಿ ಮಧ್ಯಾಹ್ನ ಊಟ ಮುಗಿಸಿ ಮಲಗಿದ್ದ ವೇಳೆ ಸುಮಾರು ಮೂರು ಗಂಟೆಯ ವೇಳೆ ಬಡಿದ ಸಿಡಲಿನ ಆಘಾತಕ್ಕೆ ಇವರು ಮೃತಪಟ್ಟದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಪುಂಜಾಲಕಟ್ಟೆ: ಸಿಡಿಲಿಗೆ ಓರ್ವ ಬಲಿ Read More »

ಕಡಬ: ಶಿಲಾಯುಗ ಸಂಸ್ಕೃತಿಯ ಗುಹಾ ಸಮಾಧಿ ಪತ್ತೆ|

ಬೃಹತ್ ಶಿಲಾಯುಗ ಸಂಸ್ಕೃತಿಯು, ಕರ್ನಾಟಕವೂ ಒಳಗೊಂಡಂತೆ ದಕ್ಷಿಣ ಭಾರತದ ಒಂದು ಪ್ರಮುಖ ಇತಿಹಾಸಪೂರ್ವ ಯುಗದ ಸಂಸ್ಕೃತಿಯಾಗಿದೆ. ಇದು ಸಮಾಧಿ ಪ್ರಧಾನ ಸಂಸ್ಕೃತಿಯಾಗಿದ್ದು, ತನ್ನ ವೈವಿಧ್ಯಮಯ ಸಮಾಧಿಗಳಿಂದಲೇ ಚಿರಪರಿಚಿತವಾಗಿದೆ. ಕರ್ನಾಟಕದ ಪಶ್ಚಿಮ ಕರಾವಳಿ ಮತ್ತು ಕೇರಳದಲ್ಲಿ ಈ ಸಂಸ್ಕೃತಿಗೆ ಸಂಬಂಧಿಸಿದ ವಿಶಿಷ್ಠ ಮಾದರಿಯ ಗುಹಾ ಸಮಾಧಿಗಳನ್ನು ಕೆಂಪು ಮುರಕಲ್ಲಿನಲ್ಲಿ ಅಗೆದು ಮಾಡಲಾಗಿದೆ. ಇಂತಹ ಒಂದು ಅಪರೂಪದ ಗುಹಾ ಸಮಾಧಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ, ರಾಮಕುಂಜ ಗ್ರಾಮದ ಆತೂರು-ಕುಂಡಾಜೆಯ ರ‍್ಕಾರಿ ಗೇರುಬೀಜದ ತೋಟದಲ್ಲಿ ಕಂಡು ಬಂದಿದೆ ಎಂದು

ಕಡಬ: ಶಿಲಾಯುಗ ಸಂಸ್ಕೃತಿಯ ಗುಹಾ ಸಮಾಧಿ ಪತ್ತೆ| Read More »

ನ್ಯೂಯಾರ್ಕ್: ಎಲಾನ್ ಮಸ್ಕ್ ಪಾಲಾದ ಟ್ವಿಟರ್|

ಸಮಗ್ರ ನ್ಯೂಸ್: ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರು ಸಾಮಾಜಿಕ ಜಾಲತಾಣ ಟ್ವೀಟರ್ ಕಂಪನಿಯನ್ನು ಸುಮಾರು 3 ಲಕ್ಷ ಕೋಟಿ ರೂ.ಗೆ ಖರೀದಿ ಮಾಡಿದ್ದು, ಒಪ್ಪಂದ ಅಂತಿಮಗೊಂಡಿದೆ ಎಂದು ಟ್ವೀಟರ್ ಘೋಷಣೆ ಮಾಡಿದೆ. ಮಸ್ಕ್ ಈಗಾಗಲೇ ಶೇ.9.1 ರಷ್ಟು ಷೇರುಗಳನ್ನು ಹೊಂದುವ ಮೂಲಕ ಅತಿ ದೊಡ್ಡ ಷೇರುದಾರ ಎನಿಸಿಕೊಂಡಿದ್ದರು ಹಾಗೂ ಟ್ವೀಟರ್ ಗಳನ್ನು ಖರೀದಿಸಲು ಏಪ್ರಿಲ್ 14 ರಂದು 3 ಲಕ್ಷ ಕೋಟಿ ರೂ. ಮೊತ್ತದ ಆಫರ್ ನೀಡಿದ್ದರು. ಅಲ್ಲದೆ ತಮ್ಮ ಶೇ. 9 ಪಾಲನ್ನು

ನ್ಯೂಯಾರ್ಕ್: ಎಲಾನ್ ಮಸ್ಕ್ ಪಾಲಾದ ಟ್ವಿಟರ್| Read More »

ಮತ್ತೆ 16 ಯೂಟ್ಯೂಬ್ ‌ಚಾನೆಲ್ ಗಳಿಗೆ ಕೇಂದ್ರದಿಂದ ‌ನಿಷೇಧ; ಕಾರಣ?

ಸಮಗ್ರ ನ್ಯೂಸ್: ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆಯು ಇಂದು ಮತ್ತೆ 16 ಯೂಟ್ಯೂಬ್ ಚಾನೆಲ್‌ಗಳ ಪ್ರಸಾರವನ್ನು ನಿಷೇಧಿಸಿದೆ. ರಾಷ್ಟ್ರದ ಸಮಗ್ರತೆ, ಕೋಮು ಸೌಹಾರ್ದ ಕದಡುವ ತಪ್ಪು ಮಾಹಿತಿಯನ್ನು ಹಂಚುವ ಕಾರಣ ನೀಡಿ ಈ ಚಾನೆಲ್‌ಗಳ ಪ್ರಸಾರವನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.

ಮತ್ತೆ 16 ಯೂಟ್ಯೂಬ್ ‌ಚಾನೆಲ್ ಗಳಿಗೆ ಕೇಂದ್ರದಿಂದ ‌ನಿಷೇಧ; ಕಾರಣ? Read More »

ಭೀಕರ ಪ್ರಾಕೃತಿಕ ದುರಂತ| ಸಿಡಿಲು ಬಡಿದು ಛಿದ್ರಗೊಳ್ತು ಮಹಿಳೆಯ‌ ದೇಹ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಭೀಕರ ಪ್ರಾಕೃತಿಕ ದುರಂತವೊಂದು ಸಂಭವಿಸಿದ್ದು, ಇಬ್ಬರು ಸಿಡಿಲಿನಿಂದಾಗಿ ಸಾವಿಗೀಡಾಗಿದ್ದಾರೆ. ಇಂದು ಮಧ್ಯಾಹ್ನ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ತೆಲಗಿ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್ ಹಣಮಂತ ಸತ್ತಿಗೇರಿ (40) ಸಿಡಿಲಪ್ಪಳಿಸಿದ ಪರಿಣಾಮವಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಇದರ ಬೆನ್ನಿಗೆ ಬೆಳಗಾವಿಯಲ್ಲೂ ಅಂಥದ್ದೇ ಒಂದು ಪ್ರಕರಣ ನಡೆದಿದೆ. ಬೆಳಗಾವಿ ಜಿಲ್ಲೆಯ ಕೆಲವೆಡೆ ಇಂದು ಗುಡುಗು-ಸಿಡಿಲು ಸಮೇತ ಭಾರಿ ಮಳೆಯಾಗಿದ್ದು, ಭಾರಿ ಸಿಡಿಲೊಂದು ರೈತ ಮಹಿಳೆಯನ್ನು ಬಲಿ ಪಡೆದಿದೆ. ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದ ಮಲ್ಲಮ್ಮ

ಭೀಕರ ಪ್ರಾಕೃತಿಕ ದುರಂತ| ಸಿಡಿಲು ಬಡಿದು ಛಿದ್ರಗೊಳ್ತು ಮಹಿಳೆಯ‌ ದೇಹ Read More »

ಸಕ್ರಿಯ ಕೋವಿಡ್ ಪ್ರಕರಣಗಳ ಹೆಚ್ಚಳ| ಹೊಸ ಮಾರ್ಗಸೂಚಿ ಪ್ರಕಟ

ಸಮಗ್ರ ನ್ಯೂಸ್: ದೇಶಾದ್ಯಂತ ಕೋವಿಡ್‌ನ ನಾಲ್ಕನೆಯ ಅಲೆಯು ಹಬ್ಬುವ ಭೀತಿ ಆವರಿಸಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಕರ್ನಾಟಕ ಕೋವಿಡ್ ಟಾಸ್ಕ್‌ಫೋರ್ಸ್‌ನ ಸಲಹೆಯಂತೆ ಕರ್ನಾಟಕ ಸರಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಹೊಸ ಮಾರ್ಗಸೂಚಿಗಳು ಹೀಗಿವೆ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ.ಸಾರ್ವಜನಿಕ ಸ್ಥಳದಲ್ಲಿ ದೈಹಿಕ ಅಂತರ ಪಾಲನೆ ಕಡ್ಡಾಯ.ಪ್ರಯಾಣದ ವೇಳೆ ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಬೇಕು.ಕರ್ತವ್ಯದ ವೇಳೆ ಮಾಸ್ಕ್ ಧರಿಸಿ ನಿಯಮ ಪಾಲಿಸಬೇಕು.ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡವನ್ನು ವಿಧಿಸಲಾಗುತ್ತದೆ. ಸಮಗ್ರ ಸಮಾಚಾರ ಕಳಕಳಿ: ಸಾಂಕ್ರಾಮಿಕ ಹರಡುವ ಮುನ್ನ ಎಚ್ಚರಿಕೆ

ಸಕ್ರಿಯ ಕೋವಿಡ್ ಪ್ರಕರಣಗಳ ಹೆಚ್ಚಳ| ಹೊಸ ಮಾರ್ಗಸೂಚಿ ಪ್ರಕಟ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಎ.25 ರಿಂದ 30ರ ವರೆಗಿನ ದ್ವಾದಶ ರಾಶಿಗಳ ವಾರಭವಿಷ್ಯ ಹೀಗಿದೆ. ಮೇಷ: ಬೇಜವಾಬ್ದಾರಿ ಮಾತುಗಳಿಂದ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅನಗತ್ಯ ಸಿಟ್ಟಿನಿಂದ ಆಗುವ ನಷ್ಟ ತಪ್ಪಿಸಲು ಸಮಾಧಾನದಿಂದ ಇರುವುದು ಒಳ್ಳೆಯದು. ನ್ಯಾಯಾಲಯದಲ್ಲಿನ ವ್ಯವಹಾರಗಳನ್ನು ಸ್ವಲ್ಪ ಮುಂದೂಡುವುದು ಒಳ್ಳೆಯದು. ಲೇವಾದೇವಿ ಮಾಡುವವರಿಗೆ ಬಾಕಿ ಹಣಗಳು ಬಂದು ಸಂತಸವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಮಹಿಳೆಯರಿಗೆ ಸಂತಸಪಡುವ ಸುದ್ದಿಯೊಂದು ಕೇಳಿಬರುತ್ತದೆ. ಸಂಸಾರದಲ್ಲಿ ಕಿರಿಕಿರಿಗಳು ಆರಂಭವಾಗಬಹುದು. ಹಣಕಾಸು ಹೂಡಿಕೆಯ ಬಗ್ಗೆ ಸರಿಯಾಗಿ

ದ್ವಾದಶ ರಾಶಿಗಳ ವಾರಭವಿಷ್ಯ Read More »

ರಾಜ್ಯದಲ್ಲಿ ಇನ್ನೂ ಮುಂದೆ ಮಾಸ್ಕ್ ಕಡ್ಡಾಯ| ಸಿಎಂ ಸಭೆಯಲ್ಲಿ ನಿರ್ಣಯ

ಸಮಗ್ರ ನ್ಯೂಸ್: ಕೊರೊನಾ ಹೆಚ್ಚುತ್ತಿರುವ ಕಾರಣದಿಂದ ರಾಜ್ಯ ಸರ್ಕಾರ ಇನ್ನೂ ಮುಂದೆ ಮಾಸ್ಕ್ ಕಡ್ಡಾಯ ಎಂದು ಘೋಷಿಸಿದೆ.ಇಂದು ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಲಸಿಕೆ ಮೇಲೆ ಗಮನಹರಿಸಲಾಗುವುದು ಹಾಗೆ ಹೊರ ದೇಶಗಳಿಂದ ಬರುವವರ ಮೇಲೆ ನಿಗಾವಹಿಸಲಾಗುವುದು ಎಂದಿದ್ದಾರೆ. ಈ ಕುರಿತಂತೆ ಶೀಘ್ರದಲ್ಲೇ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಇನ್ನೂ ಮುಂದೆ ಮಾಸ್ಕ್ ಕಡ್ಡಾಯ| ಸಿಎಂ ಸಭೆಯಲ್ಲಿ ನಿರ್ಣಯ Read More »

ಶಾಲೆಯಲ್ಲಿ ಪ್ರಾಂಶುಪಾಲ ಮತ್ತು ಶಿಕ್ಷಕಿಯ ಕಾಮಕ್ರೀಡೆ| ಗ್ರಾಮಸ್ಥರ ಸ್ಟಿಂಗ್ ಆಪರೇಷನ್ ನಲ್ಲಿ ಸಿಕ್ಕಿಬಿದ್ದ “ಲವ್ ಗುರು” ಅಮಾನತು!

ಸಮಗ್ರ ನ್ಯೂಸ್: ಪ್ರೌಢಶಾಲೆಯ ಪ್ರಾಂಶುಪಾಲ ಶಾಲೆಯಲ್ಲೇ ಶಿಕ್ಷಕಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದು, ಅಮಾನತುಗೊಂಡಿರುವ ಘಟನೆ ಛತ್ತೀಸ್ ಗಡ ಜಿಲ್ಲೆಯ ಕಂಕೇರ್ ನಲ್ಲಿ ನಡೆದಿದೆ. ಗ್ರಾಮದ ಕೆಲವರು ಕುಟುಕು ಕಾರ್ಯಾಚರಣೆ ನಡೆಸಿ ಶಿಕ್ಷಕನ ಕಾಮಚೇಷ್ಟೆಯನ್ನು ವಿಡಿಯೋ ಮಾಡಿದ್ದಾರೆ. ಪ್ರಾಂಶುಪಾಲ ಮತ್ತು ಮಹಿಳಾ ಸಿಬ್ಬಂದಿಯ ಈ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಶಾಲೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಈ ಹಿಂದೆಯೇ ಕೆಲ ಗ್ರಾಮಸ್ಥರು ಆರೋಪಿಸಿದ್ದರು. ಇದೀಗ ಅವರೇ ವಿಡಿಯೋ ಸೆರೆ ಹಿಡಿದು ಕೃತ್ಯ ಬಯಲು

ಶಾಲೆಯಲ್ಲಿ ಪ್ರಾಂಶುಪಾಲ ಮತ್ತು ಶಿಕ್ಷಕಿಯ ಕಾಮಕ್ರೀಡೆ| ಗ್ರಾಮಸ್ಥರ ಸ್ಟಿಂಗ್ ಆಪರೇಷನ್ ನಲ್ಲಿ ಸಿಕ್ಕಿಬಿದ್ದ “ಲವ್ ಗುರು” ಅಮಾನತು! Read More »

ಸಾಲಗಾರರ ಹೆಸರು ವಾಟ್ಸ್ಯಾಪ್ ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾದ ಯುವಕ!

ಸಮಗ್ರ ನ್ಯೂಸ್: ಸಾಲಬಾಧೆ ತಾಳಲಾರದೆ ಯುವಕನೋರ್ವ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಶಿವಪುರದ ಕಲ್ಲುಕಟ್ಟೆ ಕೆರೆಯಲ್ಲಿ ಸೋಮವಾರ ನಡೆದಿದೆ.ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದ ವಿಜಯ್ (27) ಮೃತ ದುರ್ದೈವಿ. ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ತಾನು ಕೊಡಬೇಕಿರುವ ಸಾಲದ ಮಾಹಿತಿ ಹಾಗೂ ನನ್ನ ಸಾವಿಗೆ ನಾನೇ ಕಾರಣ, ನಮ್ಮ ಜಮೀನು ಮಾರಿ ಸಾಲಗಾರರಿಗೆ ನೀಡಿ ಎಂದು ಬರೆದುಕೊಂಡಿದ್ದಾನೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಶವವನ್ನು ಮೇಲೆತ್ತುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜೊತೆಗೆ ಗುಂಡ್ಲುಪೇಟೆ ಪೊಲೀಸರು

ಸಾಲಗಾರರ ಹೆಸರು ವಾಟ್ಸ್ಯಾಪ್ ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾದ ಯುವಕ! Read More »