Editor

ಮಹಾರಾಷ್ಟ್ರದಲ್ಲಿ ರಾಜ್ಯದ ಅಡಿಕೆ ಸಾಗಾಟ‌ ಲಾರಿಗಳ ಜಪ್ತಿ| ದಾಖಲೆ ನೀಡಿದಲ್ಲಿ ಬಿಡುಗಡೆಗೆ ಕ್ರಮ – ಅಶೋಕ್ ರೈ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಸಾಗಾಟವಾಗುತ್ತಿದ್ದ ಸುಮಾರು 70 ಅಡಿಕೆ ತುಂಬಿದ ಲಾರಿಗಳನ್ನು ಅಲ್ಲಿನ ಸರ್ಕಾರಿ ಅಧಿಕಾರಿಗಳು ವಶಕ್ಕೆ ಪಡೆದು, ಅಡಿಕೆಯನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿರುವ ಗಂಭೀರ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಸೂಕ್ತ ದಾಖಲೆಗಳನ್ನು ನೀಡಿದಲ್ಲಿ ಮುಖ್ಯಮಂತ್ರಿಗಳ ಮೂಲಕ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭರವಸೆ ನೀಡಿದ್ದಾರೆ. ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು, “ನಮ್ಮ ಜಿಲ್ಲೆಯಿಂದ ಹೋದ 70 ಅಡಿಕೆ […]

ಮಹಾರಾಷ್ಟ್ರದಲ್ಲಿ ರಾಜ್ಯದ ಅಡಿಕೆ ಸಾಗಾಟ‌ ಲಾರಿಗಳ ಜಪ್ತಿ| ದಾಖಲೆ ನೀಡಿದಲ್ಲಿ ಬಿಡುಗಡೆಗೆ ಕ್ರಮ – ಅಶೋಕ್ ರೈ Read More »

ಸುಳ್ಯ: ವಿದ್ಯುತ್ ಕಂಬದ ಸಹಿತ ಕಾಂಕ್ರೀಟ್ ಕಾಮಗಾರಿ| ವಿಲಕ್ಷಣ ಘಟನೆಗೆ ಕಾರಣವಾದ ಈ ರಸ್ತೆ!!

ಸಮಗ್ರ ನ್ಯೂಸ್: ರಸ್ತೆ ಬದಿ ಹಾದು ಹೋಗುವ ‌ವಿದ್ಯುತ್ ಕಂಬಗಳ ಸಹಿತ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಿದ ವಿಲಕ್ಷಣ ಘಟನೆ ಸುಳ್ಯದಲ್ಲಿ ಬೆಳಕಿಗೆ ಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಗುಲ್ಲೆಬ್ಬಿಸುತ್ತಿದೆ. ಸುಳ್ಯದ ಪ.ಪೂ ಕಾಲೇಜು ಬಳಿಯಿಂದ ಶಾಸ್ತ್ರಿ ಸರ್ಕಲ್‌ಗೆ ಹೋಗುವ ಒಳರಸ್ತೆಯಿದು. ಇಲ್ಲಿ ಸ್ಥಳೀಯ ಆಡಳಿತ ರಸ್ತೆಯನ್ನು ಅಭಿವೃದ್ಧಿ ಮಾಡಲು ಕಾಂಕ್ರಿಟೀಕರಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಗುತ್ತಿಗೆದಾರ ಹಾಗೂ ಇಂಜಿನಿಯರ್ ರ ಜುಗಲ್ ಬಂದಿಗೆ ರಸ್ತೆಯ ಬದಿಯ ವಿದ್ಯುತ್ ಕಂಬಗಳನ್ನು ಸೇರಿಸಿ ರಸ್ತೆ‌ ನಿರ್ಮಿಸಲಾಗಿದೆ. ರಸ್ತೆಗೆ ಡಿವೈಡರ್ ಹಾಕಿದಂತೆ ಕಂಬಗಳು ಕಾಣುತ್ತಿದ್ದು

ಸುಳ್ಯ: ವಿದ್ಯುತ್ ಕಂಬದ ಸಹಿತ ಕಾಂಕ್ರೀಟ್ ಕಾಮಗಾರಿ| ವಿಲಕ್ಷಣ ಘಟನೆಗೆ ಕಾರಣವಾದ ಈ ರಸ್ತೆ!! Read More »

ರಾಜ್ಯದಲ್ಲಿ ಪಾನ್ ಮಸಾಲಾ, ಗುಟ್ಕಾ ನಿಷೇಧ!? ಸಿಎಂ ಡಿಕೆಶಿ ಹೀಗ್ಯಾಕಂದ್ರು?

ಸಮಗ್ರ ನ್ಯೂಸ್: ‘ಪಾನ್‌ ಮಸಾಲಾ, ಗುಟ್ಕಾದಲ್ಲಿ ಸ್ವಲ್ಪ ನಶೆ ಅಥವಾ ಅಮಲು ಪದಾರ್ಥವನ್ನೂ ಬೆರೆಸಲಾಗುತ್ತಿದೆ ಎಂಬ ಮಾಹಿತಿ ನನಗೆ ಬರುತ್ತಿದೆ. ಅದೇನಾದರೂ ನಿಜವೇ ಆಗಿದ್ದರೆ ರಾಜ್ಯದಲ್ಲಿ ಎಲ್ಲಾ ರೀತಿಯ ಪಾನ್‌ ಮಸಾಲಾ, ಗುಟ್ಕಾ ಪದಾರ್ಥಗಳನ್ನು ನಿಷೇಧಿಸಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 31ನೇ ಸಂಸ್ಥಾಪನಾ ದಿನಾಚರಣೆ ಹಾಗೂ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಶಾ ಮುಕ್ತ

ರಾಜ್ಯದಲ್ಲಿ ಪಾನ್ ಮಸಾಲಾ, ಗುಟ್ಕಾ ನಿಷೇಧ!? ಸಿಎಂ ಡಿಕೆಶಿ ಹೀಗ್ಯಾಕಂದ್ರು? Read More »

ಬಗೆದಷ್ಟು ಹೊರಬರುತ್ತಿದೆ ರಾಮಮಂದಿರ ಹುಂಡಿಹಣ ಕಳವು ಸಾಕ್ಷ್ಯ| ದಾಖಲೆಗಳ ನಾಶಕ್ಕೆ ಪ್ರಯತ್ನಿಸಿದ ಆರೋಪಿಗಳು

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಬಹುಕೋಟಿ ಮೌಲ್ಯದ ಕಳ್ಳತನ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಹೊಸ ಮತ್ತು ಆಘಾತಕಾರಿ ಸಾಕ್ಷ್ಯಗಳು ಬೆಳಕಿಗೆ ಬಂದಿವೆ. ತನಿಖಾ ಸಂಸ್ಥೆಗಳು ಮುಖ್ಯ ಆರೋಪಿಗಳು ಹಾಗೂ ಅವರ ನಿಕಟವರ್ತಿಗಳ ಬ್ಯಾಂಕ್ ಖಾತೆಗಳು ಮತ್ತು ಆಸ್ತಿಪಾಸ್ತಿಗಳನ್ನು ಪರಿಶೀಲಿಸಿದಾಗ, ಕಳ್ಳತನ ನಡೆದ ಕೆಲವೇ ದಿನಗಳಲ್ಲಿ ಅವರ ಆಸ್ತಿ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಸುಮಾರು 100 ಪಟ್ಟು ಹೆಚ್ಚಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಅದೇ ವೇಳೆ, ಡಿಜಿಟಲ್ ಸಾಕ್ಷ್ಯಗಳನ್ನು ನಾಶಪಡಿಸಲು ಆರೋಪಿಗಳು ಸಂಚು ರೂಪಿಸಿದ್ದರೆಂಬ

ಬಗೆದಷ್ಟು ಹೊರಬರುತ್ತಿದೆ ರಾಮಮಂದಿರ ಹುಂಡಿಹಣ ಕಳವು ಸಾಕ್ಷ್ಯ| ದಾಖಲೆಗಳ ನಾಶಕ್ಕೆ ಪ್ರಯತ್ನಿಸಿದ ಆರೋಪಿಗಳು Read More »

ಉಪ್ಪಿನಂಗಡಿ: ಜೀವನದಿ ನೇತ್ರಾವತಿಗೆ ನೇರವಾಗಿ ಸೇರುತ್ತಿದೆ ವಸತಿ, ಶೌಚಾಲಯಗಳ ತ್ಯಾಜ್ಯ ನೀರು!! ಕಣ್ಮುಚ್ಚಿ ಕುಳಿತ ಆರೋಗ್ಯ ಇಲಾಖೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಜೀವ ನದಿ ನೇತ್ರಾವತಿ ನದಿಯಲ್ಲಿ ಈ ಬಾರಿ ಮುಂಗಾರು ಮಳೆಯ ನೀರು ಹರಿಯದಿದ್ದರೂ ವಸತಿ ಸಮುಚ್ಚಯಗಳ ಶೌಚಾಲಯದ ತ್ಯಾಜ್ಯ ಸೇರಿದಂತೆ ಮಲಿನ ನೀರು ಹರಿಯುತ್ತಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಈ ಬಗ್ಗೆ ನದಿಯ ಒಡಲಿನಲ್ಲಿ ವಸತಿ ಸಮುಚ್ಚಯದಿಂದ ಹರಿದು ಬಂದು ಸಂಗ್ರಹವಾಗಿರುವ ಮಲಿನ ನೀರು ಹರಿಯುವ ನದಿಯನ್ನು ಸೇರುತ್ತಿರುವ ದೃಶ್ಯವನ್ನು ಸೆರೆ ಹಿಡಿದಿರುವ ಉಪ್ಪಿನಂಗಡಿ ನೆಲ ಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೈಲಾರ್ ರಾಜಗೋಪಾಲ ಭಟ್ ಜಿಲ್ಲೆಯ ಜೀವ ನದಿಯನ್ನು ಈ

ಉಪ್ಪಿನಂಗಡಿ: ಜೀವನದಿ ನೇತ್ರಾವತಿಗೆ ನೇರವಾಗಿ ಸೇರುತ್ತಿದೆ ವಸತಿ, ಶೌಚಾಲಯಗಳ ತ್ಯಾಜ್ಯ ನೀರು!! ಕಣ್ಮುಚ್ಚಿ ಕುಳಿತ ಆರೋಗ್ಯ ಇಲಾಖೆ Read More »

ಬಿರುಸುಗೊಂಡ ಮುಂಗಾರು| ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಮಾರುತಗಳು ಮತ್ತಷ್ಟು ಚುರುಕುಗೊಂಡಿದ್ದು, ವರುಣನ ಅಬ್ಬರ ಜೋರಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆ ಲಭ್ಯವಾಗಿದ್ದು, ಹವಾಮಾನ ಇಲಾಖೆಯು ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಜುಲೈ 2ರವರೆಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಜೂನ್ 30ರಂದು ಪ್ರಮುಖವಾಗಿ ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು,

ಬಿರುಸುಗೊಂಡ ಮುಂಗಾರು| ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜೂನ್ 29 ರಿಂದ ಜುಲೈ 5ರ ವರೆಗಿನ ವಾರದಲ್ಲಿ ಗ್ರಹಗತಿಗಳ ಬದಲಾವಣೆಯೊಂದಿಗೆ ಎಲ್ಲಾ 12 ರಾಶಿಗಳ ಜೀವನದಲ್ಲಿ ಮಹತ್ವದ ಏರಿಳಿತಗಳನ್ನು ತರಲಿದೆ. ಈ ವಾರ ಯಾರಿಗೆ ಅದೃಷ್ಟ ಒಲಿಯಲಿದೆ? ಯಾರು ಜಾಗರೂಕರಾಗಿರಬೇಕು? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. ಮೇಷ ರಾಶಿ:ವಾರದ ಆರಂಭವು ಸಂತೋಷ ಮತ್ತು ಸಕಾರಾತ್ಮಕತೆಯಿಂದ ಕೂಡಿರಲಿದೆ. ಒಡಹುಟ್ಟಿದವರು ಮತ್ತು ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಸುಧಾರಣೆ ಕಂಡುಬರಲಿದ್ದು, ಹಿರಿಯ ಅಧಿಕಾರಿಗಳ ಬೆಂಬಲ ಸಿಗಲಿದೆ. ಈ ವಾರದಲ್ಲಿ ಇತರರ ಅಭಿಪ್ರಾಯಗಳ ಮೇಲೆ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಪ್ರಾನ್ಸ್ ನಲ್ಲಿ ನಾಗರಿಕ ವಿಮಾನ ಪತನ| ಕನಿಷ್ಟ 11 ಮಂದಿ‌ ಸಾವು

ಸಮಗ್ರ ನ್ಯೂಸ್: ಈಶಾನ್ಯ ಫ್ರಾನ್ಸ್‌ನಲ್ಲಿ ನಾಗರಿಕ ವಿಮಾನ ಅಪಘಾತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಭಾನುವಾರ ಈಶಾನ್ಯ ಫ್ರಾನ್ಸ್‌ನ ನ್ಯಾನ್ಸಿ ಬಳಿಯ ಟೊಂಬ್ಲೇನ್ ಪಟ್ಟಣದಲ್ಲಿ ನಾಗರಿಕ ವಿಮಾನ ಅಪಘಾತಕ್ಕೀಡಾಗಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಸ್ಕೈಡೈವಿಂಗ್ ಪ್ರವಾಸದಲ್ಲಿದ್ದ ಜನರ ಗುಂಪೊಂದು ವಿಮಾನದಲ್ಲಿತ್ತು. ಟೊಂಬ್ಲೇನ್‌ನಲ್ಲಿರುವ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಕ್ಕೆ ಬರದಂತೆ ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ ಎಂದು ಫ್ರೆಂಚ್ ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪೂರ್ವ ಫ್ರೆಂಚ್ ಪಟ್ಟಣವಾದ ಟೊಂಬ್ಲೇನ್ ಬಳಿ ಭಾನುವಾರ ನಾಗರಿಕ ವಿಮಾನ ಅಪಘಾತಕ್ಕೀಡಾಗಿದ್ದು,

ಪ್ರಾನ್ಸ್ ನಲ್ಲಿ ನಾಗರಿಕ ವಿಮಾನ ಪತನ| ಕನಿಷ್ಟ 11 ಮಂದಿ‌ ಸಾವು Read More »

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರಿಂದ ಖಾಸಗಿ ಶಿಕ್ಷಣ ಸಂಸ್ಥೆಗೆ ಸರ್ಕಾರದ ಅನುದಾನ ಬಳಕೆ| ಕಡಬ ಕಾಂಗ್ರೆಸ್ ನಿಂದ ಗಂಭೀರ ಆರೋಪ

ಸಮಗ್ರ ನ್ಯೂಸ್: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ರಾಜ್ಯ ಸರ್ಕಾರದಿಂದ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ 25 ಕೋಟಿ ರೂಪಾಯಿ ಅನುದಾನದ ಹಂಚಿಕೆಯಲ್ಲಿ ಅಕ್ರಮ ಹಾಗೂ ರಾಜಕೀಯ ಪಕ್ಷಪಾತ ನಡೆದಿದೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಕಡಬದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ, ಸುಳ್ಯ ಶಾಸಕರ ವಿವೇಚನಾ ಅನುದಾನವನ್ನು ಕ್ಷೇತ್ರದ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರಿಂದ ಖಾಸಗಿ ಶಿಕ್ಷಣ ಸಂಸ್ಥೆಗೆ ಸರ್ಕಾರದ ಅನುದಾನ ಬಳಕೆ| ಕಡಬ ಕಾಂಗ್ರೆಸ್ ನಿಂದ ಗಂಭೀರ ಆರೋಪ Read More »

ಅಯೋಧ್ಯೆ: ರಾಮಮಂದಿರದಲ್ಲಿ ಬರೋಬ್ಬರಿ 70 ಬಾರಿ‌ ಹುಂಡಿ ಕಳ್ಳತನ| 7.5 ಕೋಟಿ ಎಗರಿಸಿದ ಕಳ್ಳರ ಗ್ಯಾಂಗ್

ಸಮಗ್ರ ನ್ಯೂಸ್: ದೇಶದ ಕೋಟ್ಯಂತರ ಹಿಂದೂಗಳ ಭಕ್ತಿಯ ಕೇಂದ್ರವಾಗಿರುವ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬೆಚ್ಚಿಬೀಳಿಸುವ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಹಲವು ತಿಂಗಳುಗಳಿಂದ ಸಂಘಟಿತ ತಂಡವೊಂದು ( ಹಣ ಎಣಿಸುವ ಗ್ಯಾಂಗ್)‌ ರಾಮಮಂದಿರದ ಹುಂಡಿಯಿಂದ ಹಣ ಕಳವು ಮಾಡುತ್ತಿದ್ದು, ಸುಮಾರು ₹7.5 ಕೋಟಿ ಎಗರಿಸಿರುವ ಆರೋಪ ಎದುರಾಗಿದೆ. ಪ್ರಕರಣದ ತನಿಖೆ ವೇಳೆ ಆರೋಪಿಗಳು ಅತ್ಯಂತ ವ್ಯವಸ್ಥಿತವಾಗಿ ಕಳ್ಳತನ ನಡೆಸಿರುವುದು ಬಹಿರಂಗವಾಗಿದೆ. ದೇವಸ್ಥಾನದ ಭದ್ರತಾ ವ್ಯವಸ್ಥೆಯನ್ನು ಚಾಣಾಕ್ಷತನದಿಂದ ಬಳಸಿಕೊಂಡು, ಸಿಸಿಟಿವಿ ಕ್ಯಾಮೆರಾಗಳ ಕಣ್ತಪ್ಪಿಸಿ ಹಲವು ಬಾರಿ ಹಣ

ಅಯೋಧ್ಯೆ: ರಾಮಮಂದಿರದಲ್ಲಿ ಬರೋಬ್ಬರಿ 70 ಬಾರಿ‌ ಹುಂಡಿ ಕಳ್ಳತನ| 7.5 ಕೋಟಿ ಎಗರಿಸಿದ ಕಳ್ಳರ ಗ್ಯಾಂಗ್ Read More »