ಕಲಬುರಗಿ: ಮೊಬೈಲ್ ಬೆಳಕಲ್ಲೇ ಹೆರಿಗೆ ಮಾಡಿಸಿದ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ| ಖರ್ಗೆ ಸಾಹೇಬ್ರೇ ಇದೇನಾ ನಿಮ್ಮೂರ ಅಭಿವೃದ್ಧಿ!?
ಸಮಗ್ರ ನ್ಯೂಸ್: ಹಲವು ಸ್ವರೂಪದ ಅಪವಾದ ಹಾಗೂ ರಗಳೆಗಳಿಂದಲೇ ಸುದ್ದಿಗೆ ಗ್ರಾಸವಾಗುತ್ತಿರುವ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ಇಡೀ ರಾತ್ರಿ ಏಕಾಏಕಿ ವಿದ್ಯುತ್ ಕೈ ಕೊಟ್ಟ ಪರಿಣಾಮ ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಕಾರ್ಯನಿರ್ವಹಿಸಿದ ಘಟನೆ ನಡೆದಿದೆ. ಗುಲ್ಬರ್ಗ ಇನ್ಸ್ಟಿಟ್ಯೂಟ್‍ಆಫ್ ಮೆಡಿಕಲ್ ಸೈನ್ಸ್ (ಜಿಮ್ಸ್) ಆಸ್ಪತ್ರೆಯ ತಾಯಿ ಮಕ್ಕಳ ವಿಭಾಗದಲ್ಲಿ ವಿದ್ಯುತ್ ಕೈ ಕೊಟ್ಟಿದ್ದರಿಂದ ವಿಭಾಗದ ವೈದ್ಯರು ಹಾಗೂ ಸಿಬ್ಬಂದಿ ಕತ್ತಲಲ್ಲೇ ರಾತ್ರಿ ಪಾಳಿಯ ಚಟುವಟಿಕೆ ನಿರ್ವಹಿಸಬೇಕಾಯಿತು. ಈ ಮಧ್ಯೆ, ಸಾವಿರಾರು ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ […]










