100ನೇ ರಾಕೇಟ್ ಉಡಾಯಿಸಿ ಯಶಸ್ವಿ ಮೈಲಿಗಲ್ಲು ಸ್ಥಾಪಿಸಿದ ಇಸ್ರೋ

ಸಮಗ್ರ ನ್ಯೂಸ್: ತನ್ನ ನೂರನೇ ರಾಕೆಟ್‌ ಉಡಾವಣೆ ಮಾಡುವ ಮೂಲಕ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಭೂ, ವೈಮಾನಿಕ ಮತ್ತು ಸಮುದ್ರ ಸಂಚರಣೆ ಮತ್ತು ನಿಖರವಾದ ಕಷಿಗೆ ಸಹಾಯ ಮಾಡುವ ಉಪಗ್ರಹದ ಉಡಾವಣೆಯೊಂದಿಗೆ ಇಸ್ರೋ ಇಂದು ತನ್ನ 100 ನೇ ಉಡಾವಣೆ ಮಾಡುವಲ್ಲಿ ಯಶಸ್ವಿಯಾಗಿದೆ.

. Ad Widget . Ad Widget

ಇಸ್ರೋ ಅಧ್ಯಕ್ಷರಾಗಿ ವಿ ನಾರಾಯಣನ್‌ ಅವರು ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ 100ನೇ ಉಡಾವಣೆ ಯಶಸ್ವಿಯಾಗುತ್ತಿದ್ದಂತೆ ಸಹ ವಿಜ್ಞಾನಿಗಳು ಅವರನ್ನು ಅಪ್ಪಿಕೊಂಡು ಅಭಿನಂದಿಸಿದರು.

. Ad Widget . . Ad Widget . Ad Widget

ಈ ವರ್ಷದ 2025 ರ ಮೊದಲ ಉಡಾವಣೆ ಯಶಸ್ವಿಯಾಗಿ ನೆರವೇರಿದೆ ಎಂದು ಇಸ್ರೋದ ಬಾಹ್ಯಾಕಾಶ ನಿಲ್ದಾಣದಿಂದ ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ, ಜಿಎಸ್‌‍ಎಲ್‌ವಿ -ಎಫ್‌ 15 ಉಡಾವಣಾ ವಾಹನವು ನ್ಯಾವಿಗೇಷನ್‌ ಉಪಗ್ರಹ ಎನ್‌ವಿಎಸ್‌‍ -02 ಅನ್ನು ಉದ್ದೇಶಿತ (ಜಿಟಿಓ) ಕಕ್ಷೆಯಲ್ಲಿ ನಿಖರವಾಗಿ ಕಳುಹಿಸಲಾಗಿದೆ ಎಂದು ನಾರಾಯಣನ್‌ ತಿಳಿಸಿದ್ದಾರೆ. ಈ ಮಿಷನ್‌ ನಮ ಲಾಂಚ್‌ಪ್ಯಾಡ್‌ಗಳಿಂದ 100 ನೇ ಉಡಾವಣೆಯಾಗಿದೆ, ಇದು ಭಾರತದ ಅತ್ಯಂತ ಮಹತ್ವದ ಮೈಲಿಗಲ್ಲು ಎಂದು ಇಸ್ರೋ ಮುಖ್ಯಸ್ಥರು ಸೇರಿಸಿದ್ದಾರೆ.

Leave a Comment

Your email address will not be published. Required fields are marked *