Editor

ಬೆಳ್ತಂಗಡಿ: ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾದ ದೆವ್ವ!!

ಸಮಗ್ರ ನ್ಯೂಸ್: ಕೆಲವರು ದೆವ್ವ, ಭೂತ ಇದ್ಯಾವುದನ್ನು ನಂಬಲ್ಲ. ಅದ್ಯಾವುದೂ ಭೂಮಿ ಮೇಲೆ ಇಲ್ಲ. ಸತ್ತ ಮೇಲೆ ಎಲ್ಲರೂ ಮಣ್ಣಲ್ಲಿ ಹೂತು ಹೋಗುತ್ತೇವೆ ಎನ್ನುತ್ತಾರೆ. ಇನ್ನು ಕೆಲವರು ದೆವ್ವಗಳು ಇವೆ ಎಂಬ ಬಲವಾದ ನಂಬಿಕೆಗಳನ್ನು ಹೊಂದಿರುತ್ತಾರೆ. ಕೆಲ ಅನುಭವವಗಳನ್ನೂ ವ್ಯಕ್ತಪಡಿಸುವುದು ಸಾಮಾನ್ಯ. ಸದ್ಯ ದ.ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದಲ್ಲಿ ಇಂಥಹುದ್ದೇ ಘಟನೆ ನಡೆದಿದೆ. ದೆವ್ವದ ಕಾಟಕ್ಕೆ ಇಡೀ ಕುಟುಂಬವೇ ಭಯದಲ್ಲೇ ಕಳೆದ ಮೂರು ತಿಂಗಳಿನಿಂದ ಜೀವನ ಸಾಗಿಸುತ್ತಿದ್ದು, ಆತಂಕದಲ್ಲಿ ಮುಳುಗಿದ್ದಾರೆ. ಮಾಲಾಡಿ ಗ್ರಾಮದ ಉಮೇಶ್

ಬೆಳ್ತಂಗಡಿ: ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾದ ದೆವ್ವ!! Read More »

ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿ ಬಿಡುಗಡೆ| ‘ವಿಶ್ವಗುರು’ವಿನ ದೇಶಕ್ಕೆ ಯಾವ ಸ್ಥಾನ ಗೊತ್ತಾ?

ಸಮಗ್ರ ನ್ಯೂಸ್: ಫೋರ್ಬ್ಸ್‌ ಸಂಸ್ಥೆಯಾಗಿ ವಿಶ್ವದ ಟಾಪ್‌ 10 ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತ ಸ್ಥಾನ ಪಡೆದುಕೊಂಡಿಲ್ಲ. ಈ ಪಟ್ಟಿಯಲ್ಲಿ ಯುಎಸ್‌ಎ ಅಗ್ರಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಚೀನಾ ಇದೆ ಹಾಗೂ ರಷ್ಯಾ ಮೂರನೇ ಸ್ಥಾನ ಪಡೆದುಕೊಂಡಿದೆ. ನಾಯಕತ್ವ, ಆರ್ಥಿಕ ಪ್ರಭಾವ, ರಾಜಕೀಯ ಶಕ್ತಿ, ಉತ್ತಮ ಅಂತರರಾಷ್ಟ್ರೀಯ ಮೈತ್ರಿಗಳು ಮತ್ತು ಮಿಲಿಟರಿ ಶಕ್ತಿ ಸೇರಿದಂತೆ ಹಲವಾರು ನಿರ್ಣಾಯಕ ಅಂಶಗಳ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಪಟ್ಟಿಯನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಕರ್ನಾಟಕ

ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿ ಬಿಡುಗಡೆ| ‘ವಿಶ್ವಗುರು’ವಿನ ದೇಶಕ್ಕೆ ಯಾವ ಸ್ಥಾನ ಗೊತ್ತಾ? Read More »

ಸುಳ್ಯ ಅಂಜಲಿ ಮಾಂಟೆಸ್ಸರಿ ಸ್ಕೂಲ್ ನ ವಾರ್ಷಿಕ ದಿನಾಚರಣೆ

ಅಂಜಲಿ ಮಾಂಟೆಸ್ಸರಿ ಸ್ಕೂಲ್ ನ ವಾರ್ಷಿಕ ದಿನಾಚರಣೆಯು ಫೆ.6 ರಂದು ಸುಳ್ಯದ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಯ ಅಧ್ಯಕ್ಷರಾದ ಸದಾನಂದ ಮಾವಾಜಿ ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶುಭಕರ ಬಿ. ಸಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಡೆನ್ ಶಿಕ್ಷಣ ಸಂಸ್ಥೆ ಬೆಂಗಳೂರು ಇದರ ನಿರ್ದೇಶಕರಾದ ಎನ್ ಆರ್ ಹರಿಕುಮಾರ್ ಹಾಗೂ ಗೌರವ ಅತಿಥಿಯಾಗಿ ಚಂದ್ರಶೇಖರ್ ಪೇರಲು ಮತ್ತು ಕೆ.ಟಿ ವಿಶ್ವನಾಥ ವಹಿಸಿದ್ದರು. ಕಾರ್ಯಕ್ರಮದ

ಸುಳ್ಯ ಅಂಜಲಿ ಮಾಂಟೆಸ್ಸರಿ ಸ್ಕೂಲ್ ನ ವಾರ್ಷಿಕ ದಿನಾಚರಣೆ Read More »

ಮಂಜೇಶ್ವರ: ಬಸ್ ನಲ್ಲಿ ಕಳ್ಳತನ ಮಾಡಿದ ಮೂವರು ಮಹಿಳೆಯರ ಬಂಧನ

ಸಮಗ್ರ ನ್ಯೂಸ್: ಬಸ್ಸಿನಲ್ಲಿ ಪ್ರಯಾಣಿಕರ ಹಣ ಹಾಗೂ ಮೊಬೈಲ್ ಫೋನ್ ಕಳವುಗೈದ ಆರೋಪದಲ್ಲಿ ಮೂವರು ಮಹಿಳೆಯರನ್ನು ಮಂಜೇಶ್ವರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳವಾರ ಮಧ್ಯಾಹ್ನ ಕರ್ನಾಟಕ ಸಾರಿಗೆ ನಿಗಮದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕುಂಜತ್ತೂರಿನ ತಾರಾಮಣಿ ಎಂಬವರ ಮೊಬೈಲ್ ಫೋನ್, ಎಂಟು ಸಾವಿರ ರೂ.ನಗದು ಒಳಗೊಂಡ ಬ್ಯಾಗನ್ನು ಕಳವಾಗಿತ್ತು. ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿವಿಧ ಸ್ಥಳ ಗಳಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಂತೆ ಪೊಲೀಸರು ಶಂಕಿತ

ಮಂಜೇಶ್ವರ: ಬಸ್ ನಲ್ಲಿ ಕಳ್ಳತನ ಮಾಡಿದ ಮೂವರು ಮಹಿಳೆಯರ ಬಂಧನ Read More »

ಕಾರಿಗೆ ಡಿಕ್ಕಿ ಹೊಡೆದ ಗೂಡ್ಸ್ ಆಟೋ| ಚಾಲಕನ ಜೊತೆ ವಾಗ್ವಾದ ಮಾಡಿದ ರಾಹುಲ್ ದ್ರಾವಿಡ್

ಸಮಗ್ರ ನ್ಯೂಸ್: ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್, ಮಂಗಳವಾರ ಸಂಜೆ ಬೆಂಗಳೂರಿನ ರಸ್ತೆಯೊಂದರಲ್ಲಿ ತಮ್ಮ ಕಾರಿಗೆ ಡಿಕ್ಕಿ ಹೊಡೆದ ಆಟೋ ಚಾಲಕನೊಂದಿಗೆ ವಾಗ್ವಾದದಲ್ಲಿ ತೊಡಗಿದ್ದು, ಇದರ ವಿಡಿಯೋ ವೈರಲ್‌ ಆಗಿದೆ. ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ರಾಹುಲ್ ದ್ರಾವಿಡ್ ಅವರ ಕಾರು ಮತ್ತು ಗೂಡ್ಸ್ ಆಟೋ ನಡುವೆ ಸಣ್ಣ ಅಪಘಾತ ಸಂಭವಿಸಿತ್ತು. ಟ್ರಾಫಿಕ್‌ನಲ್ಲಿ ಸಿಲುಕಿದ್ದಾಗ ಆಟೋ ರಿಕ್ಷಾ ಹಿಂಬದಿಯಿಂದ ದ್ರಾವಿಡ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ದ್ರಾವಿಡ್,

ಕಾರಿಗೆ ಡಿಕ್ಕಿ ಹೊಡೆದ ಗೂಡ್ಸ್ ಆಟೋ| ಚಾಲಕನ ಜೊತೆ ವಾಗ್ವಾದ ಮಾಡಿದ ರಾಹುಲ್ ದ್ರಾವಿಡ್ Read More »

ಪುತ್ತೂರು: ಮನೆ ನೆಲಸಮ‌ ಮಾಡಿದ್ದು ನಾವಲ್ಲ – ಅಶೋಕ್ ರೈ

ಸಮಗ್ರ ನ್ಯೂಸ್: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿದ್ದ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಅವರ ಮನೆ ನೆಲಸಮ ಘಟನೆಗೆ ಸಂಬಂಧಿಸಿದಂತೆ ನೆಲಸಮವಾದ ಪ್ರದೇಶಕ್ಕೆ ಶಾಸಕ ಅಶೋಕ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಮನೆ ನೆಲಸಮ ಮಾಡಿರುವುದರ ಹಿಂದೆ ದೇವಸ್ಥಾನದ ಆಡಳಿತ ಮಂಡಳಿ ಇಲ್ಲ, ಯಾರೋ ಭಕ್ತರುಮಾಡಿರುವ ಸಾಧ್ಯತೆಯಿದೆ, ಈ ಹಿಂದೆ ನನಗೆ ಹಲವು ಭಕ್ತರು ಮನೆಗಳನ್ನು ತೆರವುಗೊಳಿಸುವಂತೆ ಒತ್ತಡ ಹಾಕಿದ್ದರು. ಆದರೆ ಮಾತುಕತೆಯ ಮೂಲಕವೇ ಮನೆ ತೆರವುಗೊಳಿಸುವ ಉದ್ದೇಶ ನನ್ನಲ್ಲಿತ್ತು,

ಪುತ್ತೂರು: ಮನೆ ನೆಲಸಮ‌ ಮಾಡಿದ್ದು ನಾವಲ್ಲ – ಅಶೋಕ್ ರೈ Read More »

ಬಸ್ – ಬೈಕ್ ನಡುವೆ ಭೀಕರ ಅಪಘಾತ| ಮಕ್ಕಳು ಸೇರಿ ಒಂದೇ ಕುಟುಂಬದ ಮೂವರು ಸಾವು; ಇಬ್ಬರು ಗಂಭೀರ

ಸಮಗ್ರ ನ್ಯೂಸ್: ಬೈಕಿಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಮೂವರು ಪುಟಾಣಿ ಮಕ್ಕಳ ಸಹಿತ ಒಂದೇ ಕುಟುಂಬದ ಐವರು ಮೃತಪಟ್ಟ ದಾರುಣ ಘಟನೆ ಸುರಪುರ ತಾಲೂಕಿನ ತಿಂಥಣಿ ಬಳಿ ಮಧ್ಯಾಹ್ನ ಸಂಭವಿಸಿದೆ. ತಿಂಥಣಿ ಗ್ರಾಮದ ಕಮಾನ್ ಬಳಿ ಶ್ರೀರಂಗಪಟ್ಟಣ- ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಲಿಂಗಸೂಗೂರು ಕಡೆಯಿಂದ ಚಿಂಚೋಳಿ ಕಡೆಗೆ ಹೊರಟಿದ್ದ ಖಾಸಗಿ ಬಸ್ಸೊಂದು ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಲ್ಲಿ ಚಲಿಸುತ್ತಿದ್ದ ಬೈಕಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ

ಬಸ್ – ಬೈಕ್ ನಡುವೆ ಭೀಕರ ಅಪಘಾತ| ಮಕ್ಕಳು ಸೇರಿ ಒಂದೇ ಕುಟುಂಬದ ಮೂವರು ಸಾವು; ಇಬ್ಬರು ಗಂಭೀರ Read More »

ಪ್ರಯಾಗದಲ್ಲಿ‌‌ ಪುಣ್ಯ ಸ್ನಾನ ಮಾಡಿದ‌ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ಇಂದು ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಪ್ರಯಾಗ್‌ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಪವಿತ್ರ ಗಂಗಾ ಜಲಕ್ಕೆ ಅರ್ಥ್ಯ ಬಿಟ್ಟು ಸುತ್ತು ಬಂದು, ನೀರಿನ ಮಧ್ಯೆ ನಿಂತು ರುದ್ರಾಕ್ಷಿ ಮಾಲೆ ಹಿಡಿದುಕೊಂಡು ಧ್ಯಾನ ಮಾಡಿದರು. ಜ. 13 ರಿಂದ ಪ್ರಾರಂಭವಾದ ಮಹಾ ಕುಂಭಮೇಳವು ಫೆ. 26 ಮಹಾಶಿವರಾತ್ರಿಯವರೆಗೆ 44 ದಿನ ನಡೆಯಲಿದೆ. ಇದು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೇಳವಾಗಿದ್ದು. ಪ್ರಪಂಚದಾದ್ಯಂತ ಭಕ್ತರನ್ನು

ಪ್ರಯಾಗದಲ್ಲಿ‌‌ ಪುಣ್ಯ ಸ್ನಾನ ಮಾಡಿದ‌ ಪ್ರಧಾನಿ ಮೋದಿ Read More »

ರಾಜ್ಯದಲ್ಲಿ‌ ಪೌತಿ ಖಾತೆ ಅಭಿಯಾನ| ಮನೆ ಬಾಗಿಲಿಗೇ ಬಂದು ನೋಂದಣಿ ಪ್ರಕ್ರಿಯೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಲವು ಪ್ರಕರಣಗಳಲ್ಲಿ ಜಮೀನುಗಳ ಖಾತೆಗಳು ಇನ್ನೂ ನಿಧನ ಹೊಂದಿದವರ ಹೆಸರಿನಲ್ಲೇ ಇರುವ ಕಾರಣ, ಪೌತಿ ಖಾತೆ ಅಭಿಯಾನದ ಮೂಲಕ ವಾರಸುದಾರರ ಹೆಸರಿಗೆ ಜಮೀನು ನೋಂದಣಿ ಮಾಡುವ ಕಾರ್ಯಕ್ಕೆ ಕಂದಾಯ ಇಲಾಖೆ ಮುಂದಾಗಿದೆ. ಮಂಗಳವಾರ ನಗರದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ, ಈ ಹಿಂದೆ ಪೌತಿ ಖಾತೆ ಅಭಿಯಾನ ರಾಜ್ಯದಲ್ಲಿ ನಡೆದಿತ್ತಾದರೂ ನಿರೀಕ್ಷಿತ ಮಟ್ಟದಲ್ಲಿ ಜಾರಿಗೆ ಬಂದಿಲ್ಲ. ಹೀಗಾಗಿ, ಮೃತರ ಹೆಸರಿನಲ್ಲಿ ಉಳಿದಿರುವ ಜಮೀನಿನ ದಾಖಲೆಗಳನ್ನು ವಾರಸುದಾರರಿಗೆ ವರ್ಗಾವಣೆ ಮಾಡುವ

ರಾಜ್ಯದಲ್ಲಿ‌ ಪೌತಿ ಖಾತೆ ಅಭಿಯಾನ| ಮನೆ ಬಾಗಿಲಿಗೇ ಬಂದು ನೋಂದಣಿ ಪ್ರಕ್ರಿಯೆ Read More »

ಗೃಹಲಕ್ಷ್ಮಿ ಹಣ ಕೂಡಿಟ್ಟು ಸರ್ಕಾರಿ ಶಾಲೆಗೆ ದೇಣಿಗೆ ನೀಡಿದ ಆಶಾ ಕಾರ್ಯಕರ್ತೆ

ಸಮಗ್ರ ನ್ಯೂಸ್: ಆಶಾ ಕಾರ್ಯಕರ್ತೆಯೊಬ್ಬರು ಗೃಹಲಕ್ಷ್ಮಿ ಯೋಜನೆ ಹಣ ಕೂಡಿಟ್ಟು 24 ಸಾವಿರ ಹಣವನ್ನು ಶಾಲೆಗೆ ಅಭಿವೃದ್ದಿಗೆ ನೀಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಐರಣಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಆಶಾ ಕಾರ್ಯಕರ್ತೆ ಗಂಗಮ್ಮ ಲಗುಬಿಗಿ ಅವರು ಸರ್ಕಾರ ಗೃಹಲಕ್ಷ್ಮಿ ಯೋಜನೆ ಹಣವನ್ನು ಉಳಿಸಿ 24,000 ಹಣವನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ದಿಗೆ ನೀಡಿದ್ದಾರೆ. ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಕಂಡು ಬಂತು. ದೂರದ ಶುದ್ದ ಘಟಕದಿಂದ ನೀರು ತರುತ್ತಿದ್ದರು. ಮಕ್ಕಳಿಗೆ

ಗೃಹಲಕ್ಷ್ಮಿ ಹಣ ಕೂಡಿಟ್ಟು ಸರ್ಕಾರಿ ಶಾಲೆಗೆ ದೇಣಿಗೆ ನೀಡಿದ ಆಶಾ ಕಾರ್ಯಕರ್ತೆ Read More »