Editor

ಎನ್‌ಆರ್ ಪುರ: ಕಾಡಾನೆ ದಾಳಿಗೆ ಮಹಿಳೆ ಬಲಿ

ಸಮಗ್ರ ನ್ಯೂಸ್: ಕಾಫಿನಾಡಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಇದೀಗ ಮತ್ತೊಬ್ಬ ಕಾರ್ಮಿಕ ಮಹಿಳೆ ಕಾಡಾನೆ ದಾಳಿಯಿಂದ ದಾರುಣವಾಗಿ ಸಾವನ್ನಪ್ಪಿದ್ದಾರೆ. ಎನ್.ಆರ್.ಪುರ ತಾಲೂಕಿನ ಕತ್ತಲೇಖಾನ್ ಎಸ್ಟೇಟ್ ನಲ್ಲಿ ಈ ಘಟನೆ ನಡೆದಿದೆ. ವಿನೋದಾ (39) ಮೃತ ಕಾರ್ಮಿಕ ಮಹಿಳೆಯಾಗಿದ್ದಾರೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ಮೂಲದ ವಿನೋದಾ ಬಾಯಿ, ಕೂಲಿಗಾಗಿ ವಿಜಯನಗರ ಜಿಲ್ಲೆಯಿಂದ ತಮ್ಮ ಕುಟುಂಬದೊಂದಿಗೆ ವಲಸೆ ಬಂದಿದ್ದರು. ಇಂದು ಬೆಳಗ್ಗೆ ಕಾಫಿ ಹಣ್ಣು ಕೊಯ್ಯುವಾಗ ತೋಟದಲ್ಲಿದ್ದ ಕಾಡಾನೆ ಏಕಾಏಕಿ ದಾಳಿ ಮಾಡಿದ್ದು, ಪರಿಣಾಮವಾಗಿ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ

ಎನ್‌ಆರ್ ಪುರ: ಕಾಡಾನೆ ದಾಳಿಗೆ ಮಹಿಳೆ ಬಲಿ Read More »

ದೆಹಲಿ ವಿಧಾನಸಭಾ ಚುನಾವಣೆ| ಮೂಲೆ ಸೇರಿದ ಪೊರಕೆ; ಹ್ಯಾಟ್ರಿಕ್ ಸೊನ್ನೆ ಸುತ್ತಿದ ಕೈ| ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಕಹಳೆ

ಸಮಗ್ರ ನ್ಯೂಸ್: 2025 ರ ದೆಹಲಿ ಚುನಾವಣೆಯ ಫಲಿತಾಂಶಗಳ ಚಿತ್ರಣ ಸ್ಪಷ್ಟವಾಗಿದೆ. 27 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಬಿಜೆಪಿಯ ಬೃಹತ್ ಗೆಲುವಿನೊಂದಿಗೆ, ಆಮ್ ಆದ್ಮಿ ಪಕ್ಷದ ದೆಹಲಿ ಅಧ್ಯಾಯವು ಕೊನೆಯಾಗಿದೆ. ನವದೆಹಲಿ ಕ್ಷೇತ್ರದಿಂದ ಅರವಿಂದ್ ಕೇಜ್ರಿವಾಲ್ ಮತ್ತು ಜಂಗ್ಪುರದಿಂದ ಮನೀಶ್ ಸಿಸೋಡಿಯಾ ಚುನಾವಣೆಯಲ್ಲಿ ಸೋತಿದ್ದಾರೆ. ಆಪ್​ಗೆ ಇರುವ ಇರುವ ಒಂದೇ ಒಂದು ಸಮಾಧಾನಕರ ವಿಚಾರವೆಂದರೆ ಮುಖ್ಯಮಂತ್ರಿ ಅತಿಶಿ ಕಲ್ಕಾಜಿ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಇಲ್ಲಿಯವರೆಗಿನ ಫಲಿತಾಂಶಗಳನ್ನು ನೋಡಿದರೆ, ಬಿಜೆಪಿ 47 ಸ್ಥಾನಗಳಲ್ಲಿ ಮುನ್ನಡೆ

ದೆಹಲಿ ವಿಧಾನಸಭಾ ಚುನಾವಣೆ| ಮೂಲೆ ಸೇರಿದ ಪೊರಕೆ; ಹ್ಯಾಟ್ರಿಕ್ ಸೊನ್ನೆ ಸುತ್ತಿದ ಕೈ| ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಕಹಳೆ Read More »

ದೆಹಲಿ ವಿಧಾನಸಭಾ ಚುನಾವಣೆ| ಮಾಜಿ ಸಿಎಂ ಕೇಜ್ರಿವಾಲ್ ಗೆ ಹೀನಾಯ ಸೋಲು

ಸಮಗ್ರ ನ್ಯೂಸ್: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಗೆ ಸೋಲಾಗಿದೆ ಎಂದು ತಿಳಿದುಬಂದಿದೆ. ಎಎಪಿ ನಾಯಕ ಮಾಜಿ ಸಿಎಂ ಕೇಜ್ರಿವಾಲ್ ಗೆ ಸೋಲಾಗಿದ್ದು, ದೆಹಲಿಯಲ್ಲಿ ಭಾರಿ ಮುಖಭಂಗ ಆಗಿದೆ. ದೇಶದ ಗಮನ ಸೆಳೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ನಡೆಯುತ್ತಿದ್ದು ಆಡಳಿತರೂಢ ಆಪ್ ಮೂರನೇ ಬಾರಿ ಅಧಿಕಾರಿಗಳ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿತ್ತು ಆದರೆ ಚುನಾವಣಾ ಫಲಿತಾಂಶದಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ.

ದೆಹಲಿ ವಿಧಾನಸಭಾ ಚುನಾವಣೆ| ಮಾಜಿ ಸಿಎಂ ಕೇಜ್ರಿವಾಲ್ ಗೆ ಹೀನಾಯ ಸೋಲು Read More »

ಸ್ಯಾಂಡಲ್ ವುಡ್ ನಟ ಗಿರಿ ದಿನೇಶ್ ಇನ್ನಿಲ್ಲ

ಸಮಗ್ರ ನ್ಯೂಸ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ನವಗ್ರಹ’ ಸಿನಿಮಾದಲ್ಲಿ ‘ಶೆಟ್ಟಿ’ ಪಾತ್ರದಲ್ಲಿ ನಟಿಸಿದ್ದ ಗಿರಿ ದಿನೇಶ್ ಹೃದಯಾಘಾತದಿಂದ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ಗಿರಿ ದಿನೇಶ್ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿತು. ಏಕಾಏಕಿ ಕುಸಿದು ಬಿದ್ದ ಗಿರಿ ದಿನೇಶ್ ಅವರನ್ನು ಕೂಡಲೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಗಿರಿ ದಿನೇಶ್ ನಿಧನರಾಗಿದ್ದಾರೆ. ಗಿರಿ ದಿನೇಶ್ ಅವರು ನವಗ್ರಹ, ವಜ್ರ ಹಾಗೂ ‘ಚಮ್ಕಾಯ್ಸಿ ಚಿಂದಿ ಉಡಾಯ್ಸಿ’ ಚಿತ್ರಗಳಲ್ಲಿ

ಸ್ಯಾಂಡಲ್ ವುಡ್ ನಟ ಗಿರಿ ದಿನೇಶ್ ಇನ್ನಿಲ್ಲ Read More »

ದೆಹಲಿ ವಿಧಾನಸಭಾ ಚುನಾವಣೆ| ಆರಂಭಿಕ ಮುನ್ನಡೆ ಕಾಯ್ದುಕೊಂಡ ಬಿಜೆಪಿ

ಸಮಗ್ರ ನ್ಯೂಸ್: ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಅಂಚೆ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಪಡೆದುಕೊಂಡಿದೆ. ಬಿಗಿ ಭದ್ರತೆಯ ನಡುವೆ 19 ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಇನ್ನು ಕಲ್ಕಾಜಿ ಕ್ಷೇತ್ರದ ಎಎಪಿ ಅಭ್ಯರ್ಥಿಯೂ ಆಗಿರುವ ದೆಹಲಿ ಸಿಎಂ ಅತಿಶಿಯವರು ಮಹಾರಾಣಿ ಬಾಗ್‌ನಲ್ಲಿರುವ ಮೀರಾಬಾಯಿ ಡಿಎಸ್‌ಇಯು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದಾರೆ. ಮತ ಎಣಿಕೆ ಕೇಂದ್ರದಲ್ಲೇ ತೀವ್ರ ಆತಂಕಕ್ಕೆ ಒಳಗಾಗಿರುವ ಅತಿಶಿಯವರು ಪದೇ ಪದೇ ಅಧಿಕಾರಿಗಳಿಂದ ಮಾಹಿತಿ

ದೆಹಲಿ ವಿಧಾನಸಭಾ ಚುನಾವಣೆ| ಆರಂಭಿಕ ಮುನ್ನಡೆ ಕಾಯ್ದುಕೊಂಡ ಬಿಜೆಪಿ Read More »

ಅಪ್ರಾಪ್ತೆ ಮೇಲೆ ದೌರ್ಜನ್ಯ ಆರೋಪ| ಮಾಜಿ ಸಿಎಂ ಬಿಎಸ್ ವೈಗೆ ನಿರಾಳ

ಸಮಗ್ರ ನ್ಯೂಸ್: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪ್ರಕರಣವನ್ನು ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ ಪೀಠವು ತೀರ್ಪು ಪ್ರಕಟಿಸಿದ್ದು, ನ್ಯಾ.ಎಂ ನಾಗಪ್ರಸನ್ನ ಅವರು ಬಿ ಎಸ್ ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ನೀಡಿ ಆದೇಶ ಹೊರಡಿಸಿದರು. ವಿಚಾರಣೆ ಆರಂಭವಾದ ಬಳಿಕ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನ್ಯಾ.ಎಂ ನಾಗಪ್ರಸನ್ನ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ನಿರೀಕ್ಷಣಾ

ಅಪ್ರಾಪ್ತೆ ಮೇಲೆ ದೌರ್ಜನ್ಯ ಆರೋಪ| ಮಾಜಿ ಸಿಎಂ ಬಿಎಸ್ ವೈಗೆ ನಿರಾಳ Read More »

ನಟ ಸೋನುಸೂದ್ ಗೆ ಬಂಧನ ಭೀತಿ

ಸಮಗ್ರ ನ್ಯೂಸ್: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಪಂಜಾಬ್ನ ಲುಧಿಯಾನದ ಕ್ರಿಮಿನಲ್ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ. 10 ಲಕ್ಷ ರೂ.ಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹೇಳಲು ಕರೆಸಲಾಗಿದ್ದ ಸೂದ್ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಲುಧಿಯಾನದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಮಣ್ಪ್ರೀತ್ ಕೌರ್ ಈ ವಾರಂಟ್ ಹೊರಡಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಸೋನು ಸೂದ್ ಅವರಿಗೆ ಸಮನ್ಸ್ (ಗಳು) ಅಥವಾ ವಾರಂಟ್ (ಗಳು) ನೀಡಲಾಗಿದೆ, ಆದರೆ ಅವರು ಹಾಜರಾಗಲು ವಿಫಲರಾಗಿದ್ದಾರೆ

ನಟ ಸೋನುಸೂದ್ ಗೆ ಬಂಧನ ಭೀತಿ Read More »

ರಜೆ ನಿರಾಕರಿಸಿದ್ದಕ್ಕೆ ಮೇಲಾಧಿಕಾರಿಗಳಿಗೆ ಚಾಕುವಿನಿಂದ ಇರಿದ ಭೂಪ!!

ಸಮಗ್ರ ನ್ಯೂಸ್: ರಜೆಯನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡ ಸರ್ಕಾರಿ ನೌಕರನೊಬ್ಬ ತನ್ನ ಮೇಲಧಿಕಾರಿ ಸೇರಿದಂತೆ ನಾಲ್ವರಿಗೆ ಚಾಕು ಇರಿದಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಿನ್ನೆ (ಫೆ.06) ನಡೆದಿದೆ. ಅಮಿತ್ ಕುಮಾರ್ ಸರ್ಕಾರ್ ಎಂಬಾತ ಕೋಲ್ಕತದ ನ್ಯೂ ಟೌನ್ ಟೆಕ್ನಿಕಲ್ ಬಿಲ್ಡಿಂಗ್‌ನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ರಜೆಯ ಅವಶ್ಯಕತೆ ಇದ್ದ ಕಾರಣ ಅಮಿತ್​ ಸರ್ಕಾರ್, ರಜೆ ನೀಡುವಂತೆ ಮಾಡಿದ್ದರು. ಆದರೆ, ಅವರ ಮೇಲಧಿಕಾರಿ ರಜೆ ಅರ್ಜಿಯನ್ನು ತಿರಸ್ಕರಿಸಿದರು. ಇದಾದ ಬಳಿಕ ನಿನ್ನೆ ಮಧ್ಯಾಹ್ನ 12 ಗಂಟೆ

ರಜೆ ನಿರಾಕರಿಸಿದ್ದಕ್ಕೆ ಮೇಲಾಧಿಕಾರಿಗಳಿಗೆ ಚಾಕುವಿನಿಂದ ಇರಿದ ಭೂಪ!! Read More »

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್|ತನಿಖೆಯನ್ನು ಸಿಬಿಐಗೆ ವಹಿಸಲು ಹೈಕೋರ್ಟ್ ನಿರಾಕರಣೆ

ಸಮಗ್ರ ನ್ಯೂಸ್: ಮುಡಾ ಪ್ರಕರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರ್ನಾಟಕ ಹೈಕೋರ್ಟ್‌ ಬಿಗ್‌ ರಿಲೀಫ್‌ ಸಿಕ್ಕಿದೆ. ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಹೈಕೋರ್ಟ್‌ ಏಕಸದಸ್ಯ ಪೀಠ ಶುಕ್ರವಾರ (ಫೆ.07) ನಿರಾಕರಿಸಿದೆ. ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧದ ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಪ್ರಕರಣದ ಮೂಲ ದೂರದಾರ ಹಾಗೂ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಜ. 27ರಂದು ಪೂರ್ಣಗೊಳಿಸಿ ಕಾದಿರಿಸಿರುವ ತೀರ್ಪನ್ನು

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್|ತನಿಖೆಯನ್ನು ಸಿಬಿಐಗೆ ವಹಿಸಲು ಹೈಕೋರ್ಟ್ ನಿರಾಕರಣೆ Read More »

ಧರ್ಮಸ್ಥಳ: ಡಿ. ವೀರೇಂದ್ರ ಹೆಗ್ಗಡೆ ಸಹೋದರನಿಗೆ ಬಿಗ್ ಶಾಕ್| 7.59 ಎಕ್ರೆ ಕೃಷಿ ಭೂಮಿ ಅನುದಾನ ರದ್ದುಗೊಳಿಸಿ ಕೋರ್ಟ್ ಆದೇಶ

ಸಮಗ್ರ ನ್ಯೂಸ್: ರಾಜ್ಯಸಭಾ ಸಂಸದ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ಹೆಗಡೆ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೀಡಿದ್ದ 7.59 ಎಕರೆ ಕೃಷಿ ಭೂಮಿಯ ಅನುದಾನವನ್ನು ರದ್ದುಗೊಳಿಸಿ ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯ ಆದೇಶ ಹೊರಡಿಸಿದೆ. ಮೈಸೂರು ಭೂ ಮಂಜೂರಾತಿ ನಿಯಮಗಳು, 1969 ರ ಅಡಿಯಲ್ಲಿ 1972 ರಲ್ಲಿ ಹರ್ಷೇಂದ್ರ ಅವರಿಗೆ ಭೂಮಿಯನ್ನು ನೀಡಲಾಗಿತ್ತು. ಆಗ ಸಲ್ಲಿಸಿದ ಅಫಿಡವಿಟ್‌ನಲ್ಲಿ, ವಾರ್ಷಿಕ 1,200 ರೂ. ಆದಾಯವಿರುವ ‘ಭೂರಹಿತ’

ಧರ್ಮಸ್ಥಳ: ಡಿ. ವೀರೇಂದ್ರ ಹೆಗ್ಗಡೆ ಸಹೋದರನಿಗೆ ಬಿಗ್ ಶಾಕ್| 7.59 ಎಕ್ರೆ ಕೃಷಿ ಭೂಮಿ ಅನುದಾನ ರದ್ದುಗೊಳಿಸಿ ಕೋರ್ಟ್ ಆದೇಶ Read More »