ಪ್ಯಾನ್ ಇಂಡಿಯಾದತ್ತ ಸಮೀರ್ ಎಂ.ಡಿ ಮಾಡಿದ ‘ಧರ್ಮಸ್ಥಳ ಹಾರರ್’ ವಿಡಿಯೋ| ತೆಲುಗಿನ ಕ್ರಾಂತಿ ವ್ಲಾಗರ್ಸ್ ನಲ್ಲಿ ಕೂಡಾ ಪ್ರಸಾರ
ಸಮಗ್ರ ನ್ಯೂಸ್: ಯೂಟ್ಯೂಬರ್ ಸಮೀರ್ ಎಂಡಿ ತಮ್ಮ ಧೂತ ಸಮೀರ್ ಯುಟ್ಯೂಬ್ ಚಾನೆಲ್‌ನಲ್ಲಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆಯ ಕುರಿತಾಗಿ ಮಾಡಿದ ವಿಡಿಯೊ ಸದ್ಯ ಪ್ರಕರಣದ ಕುರಿತು ಜನರಲ್ಲಿದ್ದ ಅಭಿಪ್ರಾಯಗಳನ್ನೇ ಉಲ್ಟಾ ಮಾಡಿಬಿಟ್ಟಿದೆ. ‘ಊರಿನ ದೊಡ್ಡವರೇ ಈ ಕೊಲೆ ಮಾಡಿದವರಾ?’ ಎಂಬ ಶೀರ್ಷಿಕೆಯಡಿ ವಿಡಿಯೊ ಮಾಡಿದ್ದ ಸಮೀರ್ ಸೌಜನ್ಯ ಮಾತ್ರವಲ್ಲದೇ ಮಾವುತ ನಾರಾಯಣ, ಆತನ ತಂಗಿ ಯಮುನಾ, ಶಿಕ್ಷಕಿ ವೇದವಲ್ಲಿ ಹೀಗೆ ಇನ್ನೂ ಕೆಲ ಪ್ರಕರಣಗಳ ಬಗ್ಗೆ ವಿವರಿಸಿ ಇವೆಲ್ಲದ್ದಕ್ಕೂ ಊರ ಗೌಡ್ರ ಕುಟುಂಬದ ಲಿಂಕ್ ಇತ್ತು









