ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜುಲೈ 19ರಿಂದ 28, 2026ರ ವರೆಗೆ ​ಗ್ರಹಗತಿಗಳ ಸಂಚಾರ ಮತ್ತು ಸಂಯೋಗದ ಆಧಾರ ಮೇಲೆ ಅಂದುಕೊಂಡ ಕಾರ್ಯಕ್ಕೆ ಸಣ್ಣ ತೊಂದರೆ, ಬೇಸರಿಸದೇ ಮುಂದೆ ಸಾಗುವುದು, ಬೆನ್ನ ಹಿಂದೆ ಕುಚೋದ್ಯ, ಪ್ರಾಮಾಣಿಕತೆ ಪ್ರಶ್ನೆ, ಲಾಭ ನಷ್ಟದ ಲೆಕ್ಕಾಚಾರ ಮುಂತಾದವು ಇವೆಲ್ಲ ಈ ವಾರದಲ್ಲಿ ಕಾಣಿಸಿಕೊಳ್ಳಲಿದೆ. ಈ ವಾರ ಯಾವ ರಾಶಿಗೆ ಶುಭ? ಯಾರಿಗೆ ಲಾಭ? ನೋಡೋಣ ಬನ್ನಿ…

Ad Widget ... .. Ad Widget .

ಮೇಷ:
ಕರ್ಕಾಟಕ ಸಂಕ್ರಮಣ ಆರಂಭವಾಗಿ ಶುಕ್ರವಾರದಿಂದ ದಕ್ಷಿಣಾಯನ ಪುಣ್ಯ ಕಾಲ ಆರಂಭ ಆಗಿದೆ. ಅಲ್ಲಿಗೆ ಸೂರ್ಯನು ಕರ್ಕಾಟಕ ರಾಶಿಗೆ ಬಂದು ಗುರುವಿನ ಜೊತೆ ಕೂಡಿಕೊಂಡಿದ್ದಾನೆ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭ ಆಗಿ ಹೊಸ ಹಾದಿ ಹಿಡಿಯುತ್ತದೆ. ಮೇಷ ರಾಶಿಯವರು ಸೂರ್ಯನಾರಾಯಣನನ್ನು ಪೂಜಿಸಿ ಕೆಲಸ ಕಾರ್ಯದಲ್ಲಿ ಪ್ರಗತಿ ಕಾಣಬಹುದು.

Ad Widget

ವೃಷಭ:
ಸೂರ್ಯ ಮತ್ತು ಗುರು ಮೂರನೇ ಮನೆಯಲ್ಲಿ ಇದ್ದು ವಿವೇಕ ವಿವೇಚನೆಯಿಂದ ಆಗದ ಕೆಲಸಗಳನ್ನು ಕೂಡ ಸಾಧಿಸಬಹುದು. ಕುಜನಿಗೆ ಇಂದು ಸ್ಕಂದ ಷಷ್ಠಿ ಇರುವುದರಿಂದ ರಾಜಕಾರಣಿಗಳು ವಿದ್ಯಾರ್ಥಿಗಳು ಪ್ರಜ್ಞಾವಂತರಾಗಿ ಇರಲು ಅನುವು ಮಾಡಿಕೊಡುತ್ತಾನೆ. ತೊಗರಿ ಬೇಳೆ ದಾನ ನೀಡಿ.

ಮಿಥುನ:
ಎರಡನೇ ಮನೆಯಲ್ಲಿ ಗುರು ಬಂದು ಸೇರಿ ದಿಕ್ಕನ್ನು ಬದಲಿಸಿ ಧೈರ್ಯ ತುಂಬಿರುತ್ತಾನೆ. ಸೂರ್ಯನು ಅಲ್ಲಿಗೆ ಬಂದು ತೇಜೋಮಯವಾದ ಬೆಳಕನ್ನು ಹರಿಸಿ ಜೀವನದ ಮಾರ್ಗದಲ್ಲಿ ನಿಮ್ಮನ್ನು ಕತ್ತಲಿನಿಂದ ಬೆಳಕಿಗೆ ತರುವುದರಲ್ಲಿ ಸಂದೇಹ ಬೇಡ. ಷಣ್ಮುಖನನ್ನು ಪ್ರಾರ್ಥಿಸಿ. ಬ್ರಹ್ಮಚಾರಿ ವಟುವಿಗೆ ಬಿಳಿ ವಸ್ತ್ರ, ಹಣ್ಣು ಕೊಟ್ಟು ಸುಬ್ರಹ್ಮಣ್ಯನ ಪೂರ್ಣ ಅನುಗ್ರಹ ಪಡೆಯಿರಿ.

ಕಟಕ:
ಗುರು ಉಚ್ಚ. ಗ್ರಹಗಳು ಉಚ್ಚರಾಶಿಯಲ್ಲಿದ್ದಾಗ ವಿಶೇಷ ಫಲ ನೀಡುತ್ತಾನೆ. ಗೋ ಮಾತೆಯನ್ನು ಪೂಜಿಸಿದರೆ ಏನು ಫಲ ಸಿಗುವುದೋ ಅದೇ ಫಲ ಸಿಕ್ಕು ಅನುಕೂಲ ಉಂಟಾಗುತ್ತದೆ. ಕಾಮಧೇನುವಿಗೆ 16ಪ್ರದಕ್ಷಿಣೆ ಹಾಕಿ ನಮಸ್ಕರಿಸಿ.

ಸಿಂಹ:
ಹತ್ತನೇ ಮನೆಯಲ್ಲಿ ಅಂಗಾರಕನು, ದ್ವಾದಶ ಗುರು, ಅಲ್ಪ ಮಟ್ಟಿಗಾದರೂ ದೈವವನ್ನು ನಂಬಿ ಅವರ ಅನುಗ್ರಹ ಪಡೆದರೆ ಎಂತಹ ಕಷ್ಟ ಸಾಧ್ಯ ಕೆಲಸವನ್ನೂ ಮಾಡಬಹುದು. ಆಪತ್ತಿನಿಂದ ದೂರವಾಗಬಹುದು. ಸೂರ್ಯ ಅಷ್ಟಕ ಪಾರಾಯಣ ಮಾಡಿ. ಅರ್ಕ ಪುಷ್ಪ (ಎಕ್ಕೆ ಹೂ)ದಿಂದ ಪೂಜಿಸಿ.

ಕನ್ಯಾ:
ಹನ್ನೊಂದನೇ ಮನೆಯಲ್ಲಿ ಗುರು, ಸೂರ್ಯ, ಸಪ್ತಮದಲ್ಲಿ ಶನಿ. ಕಾರ್ಯಾಚರಣೆಯಲ್ಲಿ ಗೊಂದಲ. ಏನು ಮಾಡಬೇಕೆಂದು ಕೆಲವೊಮ್ಮೆ ಆಲೋಚನೆ ಮಾಡುವುದರಲ್ಲೇ ಸುಸಮಯ ಕಳೆದು ಹೋಗುತ್ತದೆ. ದೈವವನ್ನು ನಂಬಿ ದೃಢವಾದ ಭಕ್ತಿಯಿಂದ ಗುರುಗಳ ಮೇಲೆ ವಿಶ್ವಾಸ ಇಟ್ಟರೆ ಅವರೇ ನಿಮ್ಮನ್ನು ಹರಸುತ್ತಾರೆ. ಸಪ್ತಮ ಶನಿ ಇದ್ದು ಆರೋಗ್ಯದ ಬಗ್ಗೆ ಎಚ್ಚರವಿರಲಿ.

ತುಲಾ:
ಗ್ರಹ ಸ್ಥಿತಿ ಅತ್ಯಂತ ಶುಭಕರವಾಗಿದೆ. ಆದರೆ ಸುಮ್ಮನೆ ಕೈ ಕಟ್ಟಿ ಕುಳಿತರೆ ಏನೂ ಮಾಡಲಾಗದು. ಮನುಷ್ಯ ಪ್ರಯತ್ನ ಹಾಗೂ ಶುದ್ಧ ಸಂಕಲ್ಪ ಇರಬೇಕು. ಮಾಡುವ ಕೆಲಸ ಜಾಗರೂಕತೆಯಿಂದ ಮಾಡಿದರೆ ನೀವು ದಡ ಮುಟ್ಟಿ ಕೀರ್ತಿ, ಲಾಭ, ಸಂತೋಷ ವೃದ್ಧಿ ಮಾಡಿಕೊಳ್ಳಬಹುದು. ದೈವ ಬಲಕ್ಕೆ ಇಷ್ಟ ದೇವರನ್ನು ಪೂಜಿಸಿ.

ವೃಶ್ಚಿಕ:
ಒಂಭತ್ತನೇ ಮನೆಯಲ್ಲಿ ಗುರು, ಸೂರ್ಯ ಇರುವುದರಿಂದ ಆಕಾಶಕ್ಕೆ ಹಾರಿ ಮುಗಿಲನ್ನು ಮುಟ್ಟಬಹುದು. ಇಂತಹ ದೈವವು ಬಂದಿರುವುದರಿಂದ ಆಲೋಚನೆ ಸಕಾರಾತ್ಮಕವಾಗಿರಲು ವಾಸುಕಿ ನಾಗರಾಜ ದೇವರನ್ನು ಪೂಜಿಸಿ. ಜೀವನದ ವೇಗವು ನಿಮಗೆ ಬೇಕಾದ ಸೌಲಭ್ಯ ಕೊಟ್ಟು ಶೀಘ್ರವಾಗಿ ದಡ ತಲುಪುತ್ತೀರಿ.

ಧನಸ್ಸು:
ನಿರ್ವಿಘ್ನವಾಗಿ ಕೆಲಸ ಸಾಗಬೇಕಾದರೆ ಗುರು ಗಣೇಶನನ್ನು ಪೂಜಿಸಬೇಕು. ಕತ್ತಲಿನಿಂದ ಬೆಳಕನ್ನು ತೋರಿಸಿ ಶರವೇಗದಲ್ಲಿ ನಿಮ್ಮ ಬಾಳಿನ ಕಷ್ಟಗಳನ್ನು ದೂರ ಮಾಡಿ ಕಲ್ಲು ಮುಳ್ಳಿನ ದಾರಿಯನ್ನು ಮಲ್ಲಿಗೆಯಿಂದ ಸಿಂಗರಿಸಿ ಬೇಕಾದ ಸ್ಥಳಕ್ಕೆ ಕೊಂಡೊಯ್ಯುತ್ತಾನೆ. ನಿಮ್ಮ ಗುರುಭಕ್ತಿ ಪರೀಕ್ಷಿಸುವ ಕಾಲ. ದೃಢವಾದ ಗುರು ಭಕ್ತಿ, ವಿಶ್ವಾಸ ಇರಲಿ

ಮಕರ:
ಸಪ್ತಮದಲ್ಲಿ ಗುರು ಇದ್ದು, ಅಲ್ಲೇ ಸೂರ್ಯನೂ ಇದ್ದು ದೇವರೇ ಸಾಕ್ಷಾತ್ ಆಗಿ ಬಂದು ಬೆಳಕನ್ನು, ಗುರು ಬಲವನ್ನು ಕೊಡುತ್ತಾನೆ. ಅದರ ಪ್ರಯೋಜನ ನೀವು ಪಡೆಯಬಹುದು. ನಿಮ್ಮ ಕೆಲಸ ಸಾಧಿಸಿಕೊಳ್ಳಬಹುದು. ದೇವರ ಧ್ಯಾನ ಮಾಡಿ ಪ್ರಾತಃಕಾಲದಲ್ಲಿ ದೇವರನ್ನು ಪೂಜಿಸಿ. ಸ್ವತಂತ್ರ ವಿಚಾರಗಳಿಗೆ ನಿಮ್ಮ ಬುದ್ಧಿಯನ್ನು ಉಪಯೋಗಿಸಿ. ಬುಧ ಅಷ್ಟೋತರ ಪಠಿಸಿ.

ಕುಂಭ:
ಆರನೇ ಮನೆಯಲ್ಲಿ ಗುರು, ರವಿ, ಎರಡರಲ್ಲಿ ಶನಿ ಗುರು ಮನೆಯಲ್ಲಿ ಇದ್ದಾನೆ. ಯಾವ ಗ್ರಹಗಳು ಇಲ್ಲಿ ಬೇಕಾದರೂ ಇರಲಿ, ಮನಸಿನಲ್ಲಿ ಏನೇ ಚಿಂತನೆ ಇರಲಿ, ಯಾವ ಕೆಟ್ಟ ವಿಚಾರ ತಲೆಗೆ ಹಾಕಿಕೊಳ್ಳದೆ ಸರಿಯಾಗಿ ಆಲೋಚಿಸಿದರೆ ಒಂದೊಮ್ಮೆ ಗ್ರಹ ಬಲ ಇಲ್ಲದಿದ್ದರೂ ಎಲ್ಲವನ್ನೂ ಮೀರಿದ ದೈವ ಬಲವೇ ನಿಮ್ಮನ್ನು ಕಾಪಾಡುತ್ತದೆ. ನಿತ್ಯ ಪ್ರಾರ್ಥನೆ ಮಾಡಿದರೆ ದುಡ್ಡಿನ ಕೊರತೆ ಇಲ್ಲ.

ಮೀನ :
ಶನಿ ಒಬ್ಬನನ್ನು ಪ್ರಾರ್ಥನೆ ಮಾಡಿದರೆ ನೀವು ಬೇಕಾದ್ದನ್ನು ಪಡೆಯಬಹುದು. ತಾಮ್ರದ ತಟ್ಟೆಯಲ್ಲಿ ಭರ್ತಿಯಾಗಿ ಎಳ್ಳು ತುಂಬಿ ದಕ್ಷಿಣೆ ಇಟ್ಟು ದಾನ ನೀಡಿ. ನೀಲಿ ವರ್ಣದ ಪುಷ್ಪದಿಂದ ಶಿವನಿಗೆ ಆರ್ಚಿಸಿ. ದೇವರ ದೀಪಕ್ಕೆ ಅತ್ಯಂತ ಶುದ್ಧವಾದ ತಿಲ ತೈಲ ದಾನ ಮಾಡಿದರೆ ನಿಮ್ಮನ್ನು ಹಿಡಿಯುವವರು, ನಿಮ್ಮನ್ನು ಬಗ್ಗುಬಡಿಯುವ ಜನರು ದೂರ ಓಡಿ ಹೋಗುತ್ತಾರೆ. ಧೃಡವಾದ ಸಂಕಲ್ಪ ಇರಬೇಕು.

Leave a Comment

Your email address will not be published. Required fields are marked *