ಬಳ್ಪ: ಕೈಗೆಟುಕದ ಖಾಸಗಿ ಮೊಬೈಲ್ ಟವರ್‌ ಸಿಗ್ನಲ್ : ಗ್ರಾಹಕರಿಗೆ ನಿರಾಸೆ

Ad Widget ... ..

ಬಳ್ಪ: ಆದರ್ಶ ಗ್ರಾಮ ಬಳ್ಪದ ಎಡೋಣಿ-ಪಾದೆ ಬಳಿಯಲ್ಲಿ ಉದ್ಘಾಟನೆಗೊಂಡ ನೂತನ ಜಿಯೋ ಟವರ್‌ ಮೂಲಕ ಮೊಬೈಲ್ ಸಿಗ್ನಲ್‌ ಲಭ್ಯವಾಗಬಹುದು ಎಂದು ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ಈಗ ನಿರಾಸೆಯಾಗಿದೆ.

Ad Widget

ಉದ್ಘಾಟನೆಗೊಂಡ ಜಿಯೋ ಟವರ್‌ ಮೂಲಕ ಬಳ್ಪ ಪೇಟೆಯಲ್ಲಿಯೇ ಸರಿಯಾಗಿ ಸಿಗ್ನಲ್‌ ಸಿಗುತ್ತಿಲ್ಲ ಮಾತ್ರವಲ್ಲ ತೀರಾ ಗ್ರಾಮೀಣ ಪ್ರದೇಶ ಎಂದು ಗುರುತಿಸಲಾಗಿದ್ದ ಎಡೋಣಿ-ಪಾದೆ ಪರಿಸರಿಂದ ಸ್ವಲ್ಪ ದೂರದಲ್ಲಿಯೇ ಇರುವ ಮಲ್ಕಜೆ, ಏರಣಗುಡ್ಡೆ ಪ್ರದೇಶದಲ್ಲಿ ಸಿಗ್ನಲ್‌ ಲಭ್ಯವಾಗುತ್ತಿಲ್ಲ ಎಂದು ಗ್ರಾಹಕರು ನಿರಾಸೆ ವ್ಯಕ್ತಪಡಿಸಿದ್ದಾರೆ.

ಎಡೋಣಿಯಿಂದ ಸ್ವಲ್ಪ ದೂರವರೆಗೆ ಸಿಗ್ನಲ್‌ ಲಭ್ಯವಾಗುತ್ತದೆ, ಈ ಹಿಂದೆಯೇ ಆ ಪ್ರದೇಶದಲ್ಲಿ ಸಿಗ್ನಲ್‌ ಇತ್ತು. ಈಗ ಹೊಸದಾಗಿ ಟವರ್‌ ಆದ ಬಳಿಕ ಮಲ್ಕಜೆಯವರೆಗೆ ಸಿಗ್ನಲ್‌ ಲಭ್ಯವಾಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದೆವು. ಇದೀಗ ನಿರಾಸೆಯಾಗಿದೆ ಎಂದು ಮೊಬೈಲ್‌ ಗ್ರಾಹಕ ಬಿಟ್ಟಿ ಬಿ ನೆಡುನೀಲಂ ಹೇಳಿದ್ದಾರೆ. ತಕ್ಷಣವೇ ಸಂಬಂಧಿತ ಕಂಪನಿಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಗ್ರಾಮೀಣ ಭಾಗಗಳಲ್ಲೂ ಸಿಗ್ನಲ್‌ ಸಿಗುವಂತಾಗಬೇಕು ಎಂದು ಬಿಟ್ಟಿ ಬಿ ನೆಡುನೀಲಂ ಹೇಳಿದ್ದಾರೆ.

ಓಟ್ಟಾರೆ ಟವರ್‌ ಸ್ಥಾಪನೆಯಾಗಿದ್ದರೂ ಸಿಗ್ನಲ್ ಸಿಗದಿರುವುದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ

Leave a Comment

Your email address will not be published. Required fields are marked *