ಲಾರಿ- ಕ್ಯಾಂಟರ್ ಢಿಕ್ಕಿ| 8 ಎಮ್ಮೆಗಳ ಸಹಿತ ಓರ್ವ ಸ್ಥಳದಲ್ಲೇ ಸಾವು, ಮೂವರು ಗಂಭೀರ|

ವಿಜಯಪುರ: ಲಾರಿ-ಕ್ಯಾಂಟರ್ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಬಳಿ ಹೆದ್ದಾರಿಯಲ್ಲಿ ಮಂಗಳವಾರ ನಡೆದಿದೆ.

Ad Widget ... ..

ಎಮ್ಮೆಗಳನ್ನು ತುಂಬಿಕೊಂಡು ಹುಬ್ಬಳ್ಳಿಯಿಂದ ಸೋಲಾಪುರ ಕಡೆಗೆ ಹೊರಟಿದ್ದ ಕ್ಯಾಂಟರ್ ಹಾಗೂ ವಿಜಯಪುರದಿಂದ ಹುಬ್ಬಳ್ಳಿ ಕಡೆಗೆ ಸರಕು ತುಂಬಿಕೊಂಡು ಹೊರಟಿದ್ದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.

Ad Widget

ಕ್ಯಾಂಟರ್ ನಲ್ಲಿದ್ದ ಎಂಟು ಎಮ್ಮೆಗಳೂ ಅಪಘಾತದ ರಭಸಕ್ಕೆ ವಾಹನದ ಒಳಗೇ ಜೀವ ಕಳೆದುಕೊಂಡಿವೆ. ಲಾರಿಯಲ್ಲಿ ಸಿಲುಕಿದವರನ್ನು ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಹೊರತೆಗೆಯುವ ಕಾರ್ಯಾಚರಣೆ ನಡೆಸಿದರು. ಗಂಭೀರ ಗಾಯಗೊಂಡಿರುವ ಕೆಲವರನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *