ಬೆಂಗಳೂರು: ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮವಾದ ‘ಸರಿಗಮಪ’, ಹೊಸ ರೂಪದಲ್ಲಿ ಮತ್ತೊಮ್ಮೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದೆ. ಇದೇ 18ರಿಂದ ಈ ಕಾರ್ಯಕ್ರಮವು ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಒಂದಿಷ್ಟು ಬದಲಾವಣೆಗಳಾಗಿವೆ.
ಈ ಹಿಂದಿನ ವರ್ಷಗಳಲ್ಲಿ ತೀರ್ಪಗಾರರಾಗಿ ವಿಜಯಪ್ರಕಾಶ್, ಅರ್ಜುನ್ ಜನ್ಯ ಮತ್ತು ರಾಜೇಶ್ ಕೃಷ್ಣನ್ ಇದ್ದರು. ಮಹಾಗುರುಗಳಾಗಿ ಹಂಸಲೇಖ ಇದ್ದರು.
ಈ ಬಾರಿ ರಾಜೇಶ್ ಕೃಷ್ಣನ್ ಬದಲಿಗೆ ಹಂಸಲೇಖ, ಅರ್ಜುನ್ ಜನ್ಯ ಮತ್ತು ವಿಜಯ ಪ್ರಕಾಶ್ ತೀರ್ಪಗಾರರಾಗಿರಲಿದ್ದಾರೆ. ಇನ್ನು, ಇಷ್ಟು ವರ್ಷ ಸ್ಪರ್ಧಿಗಳಿಗೆ ಮೆಂಟರ್ ಆಗಿದ್ದ ಸುಚೇತನ್ ರಂಗಸ್ವಾಮಿ ಜತೆಗೆ ಐವರು ಜನಪ್ರಿಯ ಗಾಯಕ-ಗಾಯಕಿಯರು ಜತೆಯಾಗಿದ್ದಾರೆ. ಹೇಮಂತ್, ನಂದಿತಾ, ಇಂದೂ ನಾಗರಾಜ್, ಅನುರಾಧಾ ಭಟ್ ಮತ್ತು ಲಕ್ಷ್ಮೀ ನಾಗರಾಜ್ ಸಹ ಸೇರ್ಪಡೆಗೊಂಡಿದ್ದು, ಬರೋಬ್ಬರಿ 36 ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.