ಡ್ರಗ್ಸ್ ಕೇಸ್ ಪ್ರಕರಣ| ಮತ್ತೆ ಆ್ಯಕ್ಟಿವ್ ಆದ ಅನುಶ್ರೀ| ನನ್ನ ತಂಟೆಗೆ ಬಂದ್ರೆ ಸುಮ್ನಿರಲ್ಲ ಎಂದಿದ್ಯಾಕೆ ಕಿರುತೆರೆ ಸ್ಟಾರ್?

Ad Widget ... ..

ಡ್ರಗ್​ ಕೇಸ್​ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ ಬೆನ್ನಲ್ಲೇ ಅನುಶ್ರೀ ಹೆಸರು ಮುನ್ನೆಲೆಗೆ ಬಂದಿದೆ. ಅಲ್ಲದೆ, ಅವರು ಮುಂಬೈಗೆ ಹಾರಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ. ‘ಡ್ರಗ್ಸ್​ ಸೇವನೆ, ಖರೀದಿ ಪ್ರಕರಣದಲ್ಲಿ ನನ್ನ ವಿಚಾರಣೆ ನಡೆಸಿರಲಿಲ್ಲ. ಕಳೆದ ವರ್ಷ ವಿಚಾರಣೆಗೆ ಕರೆದಾಗ ಕಾನೂನು ರೀತಿ ಎಲ್ಲವನ್ನೂ ಹೇಳಿದ್ದೇನೆ. ನಾನು ಸೋಮವಾರ ಮುಂಬೈಗೆ ವೈಯಕ್ತಿಕ ಕೆಲಸದ ನಿಮಿತ್ತ ಹೋಗಿದ್ದೆ. ಅಂದೇ ನಾನು ರಿಟರ್ನ್​ ಟಿಕೆಟ್​ ಕೂಡ ಬುಕ್ ಮಾಡಿದ್ದೆ. ನಾನು ಎಲ್ಲೂ ಹಾರಿ ಹೋಗಿರಲಿಲ್ಲ’ ಎಂದಿದ್ದಾರೆ ಅವರು.

Ad Widget

ಅನುಶ್ರೀ ವಿರುದ್ಧ ಬಿಗ್​ ಬಾಸ್​ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರ್ಗಿ ಸಾಕಷ್ಟು ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದರು. ಈ ವಿಚಾರದಲ್ಲೂ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ. ‘ಪ್ರಶಾಂತ್​ ಸಂಬರಗಿ ಅವರು ಕಾನೂನು ಮೂಲಕ ಹೋಗಲಿ. ನಮ್ಮ ಸಮಾಜದಲ್ಲಿ ಕಾನೂನು ಇದೆ. ಎಲ್ಲ ವಿಚಾರಗಳಿಗೆ ಆಗಲೂ ಉತ್ತರ ಕೊಟ್ಟಿದ್ದೇನೆ, ಈಗಲೂ ಉತ್ತರ ಕೊಡುತ್ತಿದ್ದೇನೆ’ ಎಂದಿದ್ದಾರೆ ಅನುಶ್ರೀ.

‘ಆರೋಪಿಗಳು ಏನು ಬೇಕಾದರೂ ಆರೋಪ ಮಾಡಲಿ. ಅದಕ್ಕೆ ತಲೆಕೆಡಸಿಕೊಳ್ಳುವುದಿಲ್ಲ. ವಿಚಾರಣೆ ವೇಳೆ ಕೇಳಿದ ಪ್ರಶ್ನೆಗಳ ಬಗ್ಗೆ ಮಾಹಿತಿ ನೀಡೋಕೆ ಸಾಧ್ಯವಿಲ್ಲ. ನನಗೆ ಯಾವುದೇ ಪ್ರಭಾವಿಗಳ ಬೆಂಬಲವೂ ಇಲ್ಲ. ನಾನು ಕಳೆದ 3 ವರ್ಷದಿಂದ ಇದೇ ಮನೆಯಲ್ಲಿ ಇದ್ದೇನೆ. ಬಾಡಿಗೆ ಬಗ್ಗೆ ನಮ್ಮ ಮನೆ ಮಾಲೀಕರ ಬಳಿ ಕೇಳಬಹುದು. ಮಂಗಳೂರಿನ ಕದ್ರಿಯಲ್ಲಿ ಒಂದು ಮನೆ ಇದೆ. ಆದರೆ ಆ ಮನೆಯ ಮೇಲೆ ಸಾಲವಿದೆ’ ಎಂದು ಅನುಶ್ರೀ ಹೇಳಿದ್ದಾರೆ.

‘ನನ್ನ ಬಗ್ಗೆ ಮಾತಾಡುವ ನೂರಾರು ಜನಕ್ಕೆ ಉತ್ತರಿಸಲು ಸಾಧ್ಯವಿಲ್ಲ. ನನ್ನ ವಿರುದ್ಧ ಮಾಡುತ್ತಿರುವ ಎಲ್ಲ ಆರೋಪಗಳು ಸುಳ್ಳು. ಯಾವಾಗ ವಿಚಾರಣೆಗೆ ಕರೆದರೂ ನಾನು ಹೋಗುತ್ತೇನೆ. ಚಾರ್ಜ್​ಶೀಟ್ ಬಗ್ಗೆ ನನಗೆ ಏನೇನೂ ಗೊತ್ತಿಲ್ಲ. ಕಿಶೋರ್ ಶೆಟ್ಟಿಯನ್ನು 12 ವರ್ಷದ ಹಿಂದೆ ನೋಡಿದ್ದೆ. 13 ವರ್ಷ ಹಿಂದೆ ಅವರು ಕೊರಿಯೋಗ್ರಾಫರ್ ಆಗಿದ್ರು. ಆ ರಿಯಾಲಿಟಿ ಶೋನಲ್ಲಿ ನಾನು ವಿನ್ನರ್ ಆಗಿದ್ದೆ. ಆಗ ಪ್ರಾಕ್ಟೀಸ್​ ಮಾಡಲು ಎಲ್ಲರೂ ಒಂದೇ ಕಡೆ ಇದ್ದೆವು’ ಎಂದು ಅನುಶ್ರೀ ಕಿಶೋರ್​ ಶೆಟ್ಟಿ ಪರಿಚಯ ಆಗಿದ್ದು ಹೇಗೆ ಎಂದು ವಿವರಸಿದ್ದಾರೆ.

‘ನಾನು ಸಿಂಪಲ್ ಪರ್ಸನ್. ಯಾವ ಪಬ್​, ಬಾರ್, ಪಾರ್ಟಿಗಳಿಗೆ ಹೋಗಲ್ಲ. ಈ ಎಲ್ಲ ಘಟನೆಗಳಿಂದ ನಾನು ಮತ್ತಷ್ಟು ಗಟ್ಟಿಯಾಗಿದ್ದೇನೆ. ಈ ಬೆಳವಣಿಗೆಯಿಂದ ನನ್ನ ತಾಯಿಗೆ ಏನಾದರೂ ಆದರೆ ಅವರು ಎಷ್ಟೇ ಪ್ರಭಾವಿ ಆಗಿದ್ದರೂ ಸುಮ್ಮನೆ ಬಿಡಲ್ಲ’ ಎಂದು ಎಚ್ಚರಿಸಿದ್ದಾರೆ.

Leave a Comment

Your email address will not be published. Required fields are marked *