ಮೊಬೈಲ್ ಗ್ರಾಹಕರಿಗೆ ಮತ್ತೆ ಶಾಕ್ ನೀಡಲು‌‌ ಸಜ್ಜಾದ ಟೆಲಿಕಾಂ ಕಂಪನಿಗಳು| ರೀಚಾರ್ಜ್ ದರದಲ್ಲಿ ಶೇ12 ರಿಂದ 15ರಷ್ಟು‌ ಏರಿಕೆ ಸಾಧ್ಯತೆ

ಸಮಗ್ರ ನ್ಯೂಸ್: ಭಾರತದ ಮೊಬೈಲ್ ಗ್ರಾಹಕರು ಮತ್ತೊಂದು ಹಂತದ ರೀಚಾರ್ಜ್ ದರ ಏರಿಕೆಗೆ ಸಜ್ಜಾಗಬೇಕಾಗಬಹುದು. ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗಳು ಮುಂದಿನ ಮೂರರಿಂದ ನಾಲ್ಕು ತಿಂಗಳುಗಳಲ್ಲಿ ತಮ್ಮ ಸೇವಾ ದರಗಳನ್ನು ಶೇಕಡಾ 12 ರಿಂದ 15 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಪ್ರಮುಖ ಬ್ರೋಕರೇಜ್ ಸಂಸ್ಥೆಯಾದ ಸೆಂಟ್ರಮ್ ಇನ್‌ಸ್ಟಿಟ್ಯೂಷನಲ್ ರಿಸರ್ಚ್ ಅಂದಾಜಿಸಿದೆ.

Ad Widget ... .. Ad Widget .

ಮಾರುಕಟ್ಟೆಯಲ್ಲಿ ಸದ್ಯ ಕೆಲವೇ ಕೆಲವು ಕಂಪನಿಗಳು ಉಳಿದುಕೊಂಡಿರುವುದರಿಂದ ಬೆಲೆ ಏರಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದು ಸಂಸ್ಥೆಯು ತನ್ನ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದೆ.
​ಜೂನ್ ತ್ರೈಮಾಸಿಕದಲ್ಲಿ ಖಾಸಗಿ ಟೆಲಿಕಾಂ ಆಪರೇಟರ್‌ಗಳು ಸಾಧಾರಣ ಬೆಳವಣಿಗೆಯನ್ನು ಕಾಣಲಿದ್ದಾರೆ ಎಂದು ವರದಿ ಹೇಳಿದೆ.

Ad Widget

ಗ್ರಾಹಕರು ಸತತವಾಗಿ 2G ನೆಟ್‌ವರ್ಕ್‌ನಿಂದ 4G ಮತ್ತು 5G ನೆಟ್‌ವರ್ಕ್‌ಗಳಿಗೆ ಬದಲಾಗುತ್ತಿರುವುದು, ಪೋಸ್ಟ್‌ಪೇಯ್ಡ್ ಚಂದಾದಾರರ ಸಂಖ್ಯೆಯಲ್ಲಿನ ಹೆಚ್ಚಳ ಮತ್ತು ಈ ತ್ರೈಮಾಸಿಕದಲ್ಲಿ ಹೆಚ್ಚಿನ ದಿನಗಳು ಇರುವುದು ಕಂಪನಿಗಳ ಪ್ರತಿ ಗ್ರಾಹಕರಿಂದ ಬರುವ ಸರಾಸರಿ ಆದಾಯವನ್ನು ಶೇಕಡಾ 1 ರಿಂದ 1.5 ರಷ್ಟು ಹೆಚ್ಚಿಸಲಿದೆ. ಮಾರುಕಟ್ಟೆಯ ಪಾಲನ್ನು ವಿಸ್ತರಿಸಿಕೊಳ್ಳುವಲ್ಲಿ ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಕಂಪನಿಗಳು ಮುನ್ನಡೆ ಸಾಧಿಸಲಿದ್ದು, ವೊಡಾಫೋನ್ ಐಡಿಯಾ (Vi) ತೀವ್ರ ಪೈಪೋಟಿ ಎದುರಿಸಬೇಕಾಗಬಹುದು.

ಮುಂಬರುವ ದಿನಗಳಲ್ಲಿ ರಿಲಯನ್ಸ್ ಜಿಯೋ ಸುಮಾರು 70 ಲಕ್ಷ ಮತ್ತು ಭಾರ್ತಿ ಏರ್‌ಟೆಲ್ 50 ಲಕ್ಷ ಹೊಸ ಗ್ರಾಹಕರನ್ನು ತನ್ನದಾಗಿಸಿಕೊಳ್ಳುವ ನಿರೀಕ್ಷೆಯಿದೆ. ಆದರೆ, ಇದೇ ಅವಧಿಯಲ್ಲಿ ವೊಡಾಫೋನ್ ಐಡಿಯಾ ಕೇವಲ 2 ಲಕ್ಷ ಗ್ರಾಹಕರನ್ನು ಮಾತ್ರ ಸೇರ್ಪಡೆಗೊಳಿಸಿಕೊಳ್ಳಬಹುದು ಎಂದು ಸೆಂಟ್ರಮ್ ವರದಿ ತಿಳಿಸಿದೆ.
​ದೇಶಾದ್ಯಂತ 4G ಮತ್ತು 5G ತಂತ್ರಜ್ಞಾನದ ಬಳಕೆ ತೀವ್ರವಾಗಿ ಹರಡುತ್ತಿರುವುದರಿಂದ ಮೊಬೈಲ್ ಡೇಟಾ ಬಳಕೆ ಗಣನೀಯವಾಗಿ ಹೆಚ್ಚಾಗಲಿದೆ. ಈಗಾಗಲೇ ಜಿಯೋ ಮತ್ತು ಏರ್‌ಟೆಲ್ ಸಂಸ್ಥೆಗಳು ದೇಶದ ಶೇಕಡಾ 90 ಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ 5G ಸೇವೆಗಳನ್ನು ತಲುಪಿಸಿದ್ದು, ಹೆಚ್ಚಿನ 5G ಸಾಧನಗಳನ್ನು ತಮ್ಮ ನೆಟ್‌ವರ್ಕ್‌ಗೆ ಜೋಡಿಸುವತ್ತ ಗಮನ ಹರಿಸುತ್ತಿವೆ.

Leave a Comment

Your email address will not be published. Required fields are marked *