Ad Widget

ಬಹು ನಿರೀಕ್ಷಿತ ಸ್ಕೋಡಾ ಕುಶಾಕ್ ಕಾರು ಬಿಡುಗಡೆ- ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ಕೋಡಾ ಆಟೋ ಇಂಡಿಯಾ ಕಂಪನಿಯು ಬಹು ನಿರೀಕ್ಷಿತ ಕುಶಾಕ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸ್ಕೋಡಾ ಕುಶಾಕ್ MQB A0 INಪ್ಲಾಟ್‌ಫಾರ್ಮ್ನಿಂದ ಹೊರಹೊಮ್ಮಿದ ಮೊದಲ ಮಾದರಿಯಾಗಿದೆ. ಇದು ಫೋಕ್ಸ್ವ್ಯಾಗನ್ ಗ್ರೂಪ್‌ನ ಎಂಕ್ಯೂಬಿ ಸ್ಕೇಲೆಬಲ್ ಆರ್ಕಿಟೆಕ್ಚರ್‌ನ ಸ್ಥಳೀಯ ಆವೃತ್ತಿಯಾಗಿದ್ದು, ಇದನ್ನು ಭಾರತೀಯ ಮಾರುಕಟ್ಟೆಗೆಂದೇ ಅಭಿವೃದ್ಧಿಪಡಿಸಲಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget

ಕುಶಾಕ್ ಆಕ್ಟಿವ್, ಆಂಬಿಷನ್ ಮತ್ತು ಸ್ಟೈಲ್ ಎಂಬ ಮೂರು ಮಾದರಿಗಳಲ್ಲಿ ದೊರೆಯಲಿದೆ. ಕುಶಾಕ್ ಕಾರಿನ ಬೆಲೆ10.50 ಲಕ್ಷದಿಂದ 17.60 ಲಕ್ಷದವರೆಗೆ (ಎಕ್ಸ್ಶೋರೂಂ, ದೆಹಲಿ) ಇದೆ.

Ad Widget . Ad Widget .

ಸ್ಕೋಡಾ ಕುಶಾಕ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರ ದೊರೆಯಲಿದ್ದು, 1.0-ಲೀಟರ್, ಮೂರು-ಸಿಲಿಂಡರ್ ಟರ್ಬೊ ಟಿಎಸ್ಐ ಎಂಜಿನ್ 115 ಹೆಚ್‌ಪಿ ಶಕ್ತಿ ಮತ್ತು 178 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ 1.5-ಲೀಟರ್, ನಾಲ್ಕು ಸಿಲಿಂಡರ್ ಟಿಎಸ್‌ಐ ಟರ್ಬೊಎಂಜಿನ್ 150 ಎಚ್‌ಪಿ ಶಕ್ತಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆಯನ್ನು ಕುಶಾಕ್ ಹೊಂದಿದೆ.

ಬಟರ್ ಪ್ಲೈ ಗ್ರಿಲ್‌ ಹೊಂದಿರುವ ಕುಶಾಕ್ ಕಾರು ನೋಡಲು ಆಕರ್ಷಕವಾಗಿದೆ. ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ ಲ್ಯಾಂಪ್, 17-ಇಂಚಿನ ಅಲಾಯ್ ವ್ಹೀಲ್, ಇಂಟಿಗ್ರೆಟೆಡ್ ರೂಫ್ ರೈಲ್ಸ್‌ನೊಂದಿಗೆ ಬಲಿಷ್ಠವಾಗಿ ಕಾಣುತ್ತದೆ. ಕುಶಾಕ್ 4225 ಮಿ.ಮೀ ಉದ್ದ, 1760 ಮಿ.ಮೀ ಅಗಲ ಮತ್ತು 1612 ಮಿ.ಮೀ ಎತ್ತರವನ್ನು ಹೊಂದಿದ್ದರೆ, ಇದರ ವೀಲ್‌ಬೇಸ್ 2651 ಮಿ.ಮೀ ಮತ್ತು ಗ್ರೌಂಡ್ ಕ್ಲಿಯರೆನ್ಸ್ 188 ಮಿ.ಮೀ ಇದೆ.

ಕುಶಾಕ್ ಕಾರಿನ ಒಳಾಂಗಣ ವಿನ್ಯಾಸ ಕೂಡಾ ಆಕರ್ಷಕವಾಗಿದ್ದು, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಸೌಲಭ್ಯ ಹೊಂದಿರುವ ೧೦ ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟೆಡ್ ಕಾರ್ ತಂತ್ರಜ್ಞಾನ, ಲೆದರೆಟ್ ಸೀಟುಗಳು, ವೆಂಟಿಲೇಟೆಡ್ ಮುಂಭಾಗದ ಆಸನಗಳು, ಆಂಬಿಯೆAಟ್ ಲೈಟಿಂಗ್, ಹವಾಮಾನ ನಿಯಂತ್ರಣಕ್ಕೆ ಟಚ್ ಬಟನ್, ಇನ್-ಕಾರ್ ವೈ-ಫೈ, ವೈರ್‌ಲೆಸ್ ಚಾರ್ಜರ್, ಸನ್‌ರೂಫ್, ಇತ್ಯಾದಿಯನ್ನು ಹೊಸ ಎಸ್‌ಯುವಿ ಹೊಂದಿದೆ.

ಆರು ಏರ್‌ಬ್ಯಾಗ್‌ಗಳು, ಇಎಸ್ಸಿ, ಎಬಿಎಸ್ ವಿಥ್ ಇಬಿಡಿ, ಟಿಸಿಎಸ್, ರಿಯರ್-ಪಾರ್ಕಿಂಗ್ ಕ್ಯಾಮೆರಾ, ಆಟೋ ಹೆಡ್‌ಲ್ಯಾಂಪ್‌ಗಳು ಮತ್ತು ವೈಪರ್‌ಗಳು, ಮಲ್ಟಿ-ಡಿಸ್ಕ್ ಬ್ರೇಕಿಂಗ್ ಸಿಸ್ಟಮ್, ಟೈರ್ ಪ್ರೆಶರ್ ಮಾನಿಟರ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಸೇರಿದಂತೆ ಹಲವು ಸುರಕ್ಷತಾ ಸೌಲಭ್ಯಗಳಿವೆ.

ಹೊಸ ಕಾಂಪ್ಯಾಕ್ಟ್ ಎಸ್‌ಯುವಿ ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ನಿಸ್ಸಾನ್ ಕಿಕ್ಸ್, ಎಂಜಿ ಹೆಕ್ಟರ್ ಮತ್ತು ಟಾಟಾ ಹ್ಯಾರಿಯರ್ ಕಾರುಗಳ ಜೊತೆ ಸ್ಪರ್ಧಿಸಲಿದೆ.

Leave a Comment

Your email address will not be published. Required fields are marked *