ರಾಜ್ಯದಲ್ಲಿ ಇಂದಿನಿಂದ ಮತದಾರರ ಪಟ್ಟಿ ಪರಿಷ್ಕರಣೆ(SIR) ಆರಂಭ| ಬಿಎಲ್ಒ ಗಳು ಮನೆಗೆ ಬಂದಾಗ ಹೀಗೆ ಮಾಡಿ…

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದ್ದು, ಬಿಎಲ್‌ಒಗಳು (BLO) ಜುಲೈ 29ರವರೆಗೆ ರಾಜ್ಯದ ಮನೆ ಮನೆಗೆ ಭೇಟಿ ನೀಡಿ ಮತಪಟ್ಟಿ ಪರಿಷ್ಕರಣೆಯ ಎನ್ಯುಮರೇಷನ್ ಫಾರ್ಮ್ ನೀಡಲಿದ್ದಾರೆ. ಮತದಾರರು ಫಾರ್ಮ್ ಭರ್ತಿ ಮಾಡಿ, ಸಹಿ ಮಾಡಿ ಬಿಎಲ್‌ಒಗಳಿಗೆ ಮರಳಿ ನೀಡಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Ad Widget ... .. Ad Widget .

ಇಂದಿನಿಂದ ಜುಲೈ 29ರ ವರೆಗೆ ಮನೆ ಮನೆಗೆ ತೆರಳಿ ಬಿಎಲ್‌ಒಗಳು ಮತದಾರರಿಗೆ Enumeration form ಕೊಡಲಿದ್ದಾರೆ. ಎಲ್ಲಾ ಬಿಎಲ್‌ಒಗಳಿಗೆ ಫಾರ್ಮ್ ವಿತರಿಸಲಾಗಿದೆ. ಮನೆ ಮನೆಗೆ ತೆರಳಿ ಬಿಎಲ್‌ಒಗಳು ಎರಡು ಪ್ರತಿ ಫಾರ್ಮ್ ಅನ್ನು ಮತದಾರರಿಗೆ ವಿತರಿಸಲಿದ್ದಾರೆ. 59,050 BLOಗಳು ತಮ್ಮ ಮೊಬೈಲ್‌ನಲ್ಲಿ ಲಾಗ್ ಇನ್ ಆಗಿ ಪ್ರಕ್ರಿಯೆ ಆರಂಭಿಸಲಿದ್ದಾರೆ.

Ad Widget

ಮತದಾರರು ಅಧಿಕಾರಿಗಳು ಕೊಡುವ ಎನ್ಯುಮರೇಟ್ ಫಾರ್ಮ್ ಭರ್ತಿ ಮಾಡಿ, ಸಹಿ ಮಾಡಿದ್ದರೆ ಮಾತ್ರ ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಇರಲಿದೆ‌. Enumeration form ನ್ನು ಕನ್ನಡ ಅಥವಾ ಇಂಗ್ಲಿಷ್‌ ನಲ್ಲಿ ಭರ್ತಿ ಮಾಡಬಹುದು. ಬೇರೆ ಭಾಷೆಯಲ್ಲಿ ಭರ್ತಿ ಮಾಡುವಂತಿಲ್ಲ. ಮಾಹಿತಿಯಲ್ಲಿ ವ್ಯತ್ಯಯವಿದ್ದರೆ ಅಂಥವರಿಗೆ ನೋಟಿಸ್ ನೀಡಲಾಗುವುದು. ನೋಟಿಸ್ ಬಂದ ಬಳಿಕ ದಾಖಲೆಗಳನ್ನು ಕೊಡಬೇಕು. ಆಗಸ್ಟ್ 5ರ ಬಳಿಕ ಅಗತ್ಯ ಇದ್ದರೆ ಮಾತ್ರ ದಾಖಲೆಗಳನ್ನು ಕೇಳಲಾಗುವುದು. ಅಲ್ಲಿಯವರೆಗೆ ಮತದಾರರಿಂದ ಯಾವುದೇ ದಾಖಲೆಗಳನ್ನು ಪಡೆಯಲಾಗುವುದಿಲ್ಲ. ಯಾರೂ ಬಿಎಲ್ ಒಗಳಿಗೆ ದಾಖಲೆಗಳನ್ನು ಕೊಡಬೇಡಿ. ನೋಟಿಸ್ ಬಂದರೆ ಮಾತ್ರ ದಾಖಲೆ ಕೇಳಲಾಗುತ್ತದೆ.

BLOಗಳು ಮನೆಗೆ ಭೇಟಿ ಕೊಟ್ಟಾಗ ನೇರಳೆ ಬಣ್ಣ/ ಕೆಂಪು ಬಣ್ಣದ ಸ್ಟಿಕ್ಕರ್ ಅಂಟಿಸಲಾಗುತ್ತೆ. BLOಗಳು ಎನ್ಯೂಮರೇಷನ್ ಫಾರ್ಮ್ ಕೊಟ್ಟಿದ್ರೆ ನೇರಳೆ ಬಣ್ಣದ ಸ್ಟಿಕ್ಕರ್ ಅಂಟಿಸ್ತಾರೆ. ಮನೆ ಬಾಗಿಲು ಬಂದ್​​ ಆಗಿದ್ರೆ ಇದ್ರೆ ಕೆಂಪು‌ ಕಲರ್​ನ ವೃತ್ತಾಕಾರದ ಸ್ಟಿಕ್ಕರ್ ಅಂಟಿಸಲಾಗುತ್ತೆ. ರೆಡ್ ಕಲರ್ ಸ್ಟಿಕ್ಕರ್ ನಲ್ಲಿ ಮುಂದೆ ಯಾವಾಗ ಬರ್ತಾರೆ ಸೇರಿದಂತೆ ಪ್ರಮುಖ ಮಾಹಿತಿ ಇರುತ್ತೆ. ಅಧಿಕಾರಿಗಳು ಮನೆಗೆ ಬಂದಾಗ ಸದಸ್ಯರು ಇರದಿದ್ದರೆ ಆನ್​​ಲೈನ್​​ನಲ್ಲೂ ಅರ್ಜಿ ಸಲ್ಲಿಸಬಹುದು.

30.06.2026ರಿಂದ 29.07.2026ರ ವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.

Leave a Comment

Your email address will not be published. Required fields are marked *