ಮರಬಿದ್ದು ಚಾರ್ಮಾಡಿ ಘಾಟ್ ನಲ್ಲಿ ಸಂಚಾರ ಸ್ಥಗಿತ

Ad Widget ... ..

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73 ರ ಚಾರ್ಮಾಡಿ ಘಾಟ್ ನಲ್ಲಿ ಇಂದು ಮುಂಜಾನೆ ಮರ ಬಿದ್ದು ರಸ್ತೆ ತಡೆ ಉಂಟಾದ ಘಟನೆ ನಡೆದಿದೆ.

Ad Widget

ತಕ್ಷಣ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಕಾರದಿಂದ ಮರ ತೆರವುಗೊಳಿಸುವ ಕಾರ್ಯ ನಡೆಸಿದರು. ಅತೀ ಹೆಚ್ಚಿನ ವಾಹನಗಳು ಸಂಚರಿಸುವ ಮುಂಜಾನೆ ವೇಳೆ ಈ ಘಟನೆ ನಡೆದ ಕಾರಣ ಎರಡು ಕಡೆ ರಸ್ತೆ ತಡೆ ಉಂಟಾಯಿತು.

ಮುಂಜಾನೆ 8.45 ರ ಸುಮಾರಿಗೆ ಮರ ಬಿದ್ದಿದ್ದು, ಇದೀಗ ತೆರವು ಕಾರ್ಯ ಯಶಸ್ವಿಯಾಗಿದೆ. ಸುಮಾರು 100 ಕ್ಕೂ ಅಧಿಕ ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿತ್ತು. ಸ್ಥಳೀಯರು ಹಾಗೂ ಹಲವು ಸಮಾಜ ಸೇವಕರು ತಕ್ಷಣ ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸಿದರು.

Leave a Comment

Your email address will not be published. Required fields are marked *