Health Tips| ಪೇರಲೆ ಎಲೆಯಲ್ಲಿದೆ ನಿಮ್ಮ ಕೂದಲಿಗೆ ಕಲರ್| ಈ ರೀತಿಯಲ್ಲಿ ಬಳಸಿ ನೋಡಿ…

ಸಮಗ್ರ ನ್ಯೂಸ್: ಬಿಳಿ ಕೂದಲನ್ನು ಮರೆಮಾಚಲು ಹೇರ್‌ ಡೈಬಲದು ಕೆಲವು ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಪೇರಲ ಹಣ್ಣಿನ ಗಿಡದ ಎಲೆಗಳು ಕೂದಲಿಗೆ ಅತ್ಯುತ್ತಮವಾಗಿವೆ. ಪೇರಲ ಎಲೆಗಳು ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಇದರಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಇರುತ್ತದೆ.

Ad Widget ... ..

ಕೂದಲು ಮತ್ತು ಚರ್ಮಕ್ಕೆ ಪೇರಲ ಎಲೆ ಪ್ರಯೋಜನಕಾರಿ ಆಗಿದೆ. ಕೂದಲಿಗೆ ಪೇರಲ ಎಲೆಗಳನ್ನು ನೀವು ಹಲವು ವಿಧಗಳಲ್ಲಿ ಬಳಸಬಹುದು. ಪೇರಲ ಎಲೆಗಳನ್ನು ಕೂದಲಿಗೆ ಹೇಗೆ ಬಳಸಬೇಕು ಮತ್ತು ಇದರ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

Ad Widget

15 ರಿಂದ 20 ಪೇರಲ ಎಲೆಗಳನ್ನು ತೊಳೆದು ಒಣಗಿಸಿ. ಮಿಕ್ಸರ್‌ನಲ್ಲಿ ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ನಿಮ್ಮ ಕೂದಲಿಗೆ ಹಚ್ಚಿ. ಬೆರಳುಗಳಿಂದ ಮಸಾಜ್ ಮಾಡಿ. 30-40 ನಿಮಿಷಗಳ ಕಾಲ ಬಿಡಿ. ಬಳಿಕ ತಲೆಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಇದನ್ನು ಹಚ್ಚುವುದರಿಂದ ಬಿಳಿ ಕೂದಲು ಕ್ರಮೇಣ ಕಪ್ಪಾಗುವುದು ಜೊತೆಗೆ ತಲೆಹೊಟ್ಟು ತೊಲಗುವುದು.

ಪೇರಲ ಎಲೆಗಳನ್ನು ತೊಳೆದು, ಬ್ಲೆಂಡರ್‌ಗೆ ಹಾಕಿ ದಪ್ಪ ಪೇಸ್ಟ್ ತಯಾರಿಸಿ. ಈಗ ಈರುಳ್ಳಿ ರಸ ತೆಗೆದುಕೊಳ್ಳಿ. ಪೇರಲ ಎಲೆಗಳ ಪೇಸ್ಟ್ ಮತ್ತು ತೆಂಗಿನ ಎಣ್ಣೆಯನ್ನು ಈರುಳ್ಳಿ ರಸದೊಂದಿಗೆ ಬೆರೆಸಿ ತಲೆಗೆ ಹಚ್ಚಿ. ಅರ್ಧ ಗಂಟೆಯ ನಂತರ ತೊಳೆಯಿರಿ.

ಪೇರಲ ಎಲೆಗಳನ್ನು ತೊಳೆಯಿರಿ. ಒಂದು ಲೀಟರ್ ನೀರಿನಲ್ಲಿ 15 ರಿಂದ 20 ನಿಮಿಷಗಳ ಕಾಲ ಕುದಿಸಿ, ತಣ್ಣಗಾಗಿಸಿ. ತಣ್ಣಗಾದ ನಂತರ ಅದನ್ನು ಶೋಧಿಸಿ. ಸ್ಪ್ರೇ ಬಾಟಲಿಯ ಸಹಾಯದಿಂದ ಕೂದಲಿನ ಬೇರುಗಳಿಗೆ ಹಚ್ಚಿ. 10 ನಿಮಿಷಗಳ ಕಾಲ ಮಸಾಜ್ ಮಾಡಿ. ಸ್ವಲ್ಪ ಹೊತ್ತು ಬಿಟ್ಟು ಕೂದಲನ್ನು ತೊಳೆಯಿರಿ.

(ವಿ.ಸೂ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ)

Leave a Comment

Your email address will not be published. Required fields are marked *