ಆಸ್ತಿ ವಿಚಾರದಲ್ಲಿ ಕಲಹ| ಒಂದೇ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಲೆ

Ad Widget ... ..

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರು ಸಹೋದರರನ್ನು ಹತ್ಯೆ ಮಾಡಲಾಗಿದೆ.

Ad Widget

ಮಾರಕಾಸ್ತ್ರಗಳಿಂದ ಕೊಚ್ಚಿ ಒಂದೇ ಕುಟುಂಬದ ಸಹೋದರರನ್ನು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಮಧುರಖಂಡಿ ಗ್ರಾಮದ ತೋಟದ ಮನೆಯಲ್ಲಿ ಇದ್ದ ಹನುಮಂತ ಉದಗಟ್ಟಿ(45) ಮಲ್ಲಪ್ಪ ಉದಗಟ್ಟಿ(35), ಬಸಪ್ಪ ಉದಗಟ್ಟಿ(37) ಈಶ್ವರ ಉದಗಟ್ಟಿ(35) ಅವರನ್ನು ಕೊಲೆ ಮಾಡಲಾಗಿದೆ.

ತೋಟದ ಮನೆಯಲ್ಲಿ ಈ ನಾಲ್ವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆನ್ನಲಾಗಿದ್ದು, ಪುಟಾಣಿ ಎಂಬುವರ ಮನೆಯವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಜಮಖಂಡಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment

Your email address will not be published. Required fields are marked *