ಸಮಗ್ರ ನ್ಯೂಸ್: ಸುಮಚರಣಂ ನಾಟ್ಯಾಲಯ ಭರತನಾಟ್ಯ ತರಗತಿಯು ಆ.2 ವಿಜಯದಶಮಿಯಂದು ಬೆಳ್ಳಾರೆ ಯಲ್ಲಿ ಪ್ರಾರಂಭವಾಗಲಿದೆ.
ಭರತನಾಟ್ಯ ತರಗತಿಯು ಎರಡು ಕಡೆಗಳಲ್ಲಿ ನಡೆಯಲಿದ್ದು, ಬೆಳ್ಳಾರೆಯ ಶ್ರೀ ಸದಾಶಿವ ಶಿಶುಮಂದಿರ ಮತ್ತು ಅಂಕತ್ತಡ್ಕ ಅಲಕಾ ಮನೆಯಲ್ಲಿ.
ತರಗತಿಯ ವಿವರಗಳು:
- ಪ್ರತೀ ಭಾನುವಾರ ಬೆಳಗ್ಗೆ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತದೆ.
- ನೃತ್ಯಕ್ಕೆ ಸಂಬಂಧಪಟ್ಟ
• ವ್ಯಾಯಾಮ
• ಅಡವು (steps)
• ಸಂಗೀತ
• ಅಭಿನಯ
• ಹಸ್ತ ಮುದ್ರಿಕೆಗಳು
• ಭೇದಗಳು - ಶ್ಲೋಕ ಹಾಗೂ ಗೀತೆಗಳಿಗೆ ನೃತ್ಯ (Basics ಕಲಿತ ನಂತರ).
- ಭರತನಾಟ್ಯಂನ Junior / Senior ಪರೀಕ್ಷೆಗೆ ಅಗತ್ಯವಿರುವಂತಹ theory, practical ಮತ್ತು notes ತಯಾರಿ. ನಮ್ಮ ತರಗತಿಯ ವಿಶೇಷತೆಗಳು:
- ವೈಯಕ್ತಿಕ ಗಮನ.
- ಮೈಸೂರು ಶೈಲಿಯ ಭರತನಾಟ್ಯ.
- ಸೇರಿದ 1 – 2 ವರ್ಷದಲ್ಲಿ ಜೂನಿಯರ್ ಪರೀಕ್ಷೆ.(ಹೊಸಬರಿಗೆ)
- ಜೂನಿಯರ್ ಆದವರಿಗೆ , 2 ವರ್ಷದಲ್ಲಿ ಸೀನಿಯರ್ ಪರೀಕ್ಷೆ ಕಟ್ಟಿಸಲಾಗುವುದು.
- 18 ವರ್ಷ ಮೇಲ್ಪಟ್ಟವರು ನೇರವಾಗಿ ಸೀನಿಯರ್ ಪರೀಕ್ಷೆ ತೆಗೆದುಕೊಳ್ಳಬಹುದು.( ಹೊಸಬರಾದರೂ ಜೂನಿಯರ್ ಅಗತ್ಯವಿರುವುದಿಲ್ಲ).
- ಸೀನಿಯರ್ ಮೊದಲೇ ಆಗಿದ್ದಲ್ಲಿ ವಿದ್ವತ್ ತರಗತಿ ನಡೆಸಲಾಗುವುದು.(2 ವರ್ಷದಲ್ಲಿ ಪರೀಕ್ಷೆಗೆ ತಯಾರಿ ಮಾಡಲಾಗುತ್ತದೆ )
ವಿದುಷಿ. ಸುರಕ್ಷಾ ಕೆ ಆರ್ ,
ಇವರು ತನ್ನ ಮೂರನೇ ವರ್ಷದಿಂದ ಭರತನಾಟ್ಯ ಅಭ್ಯಾಸ ಶುರುಮಾಡಿರುತ್ತಾರೆ, ವಿದುಷಿ ಜಯಶ್ರೀ ಮತ್ತು ವಿದುಷಿ ಸುಮನ ರಾಮಚಂದ್ರ ಅವರಲ್ಲಿ ಭರತನಾಟ್ಯ ಕಲಿತಿರುತ್ತಾರೆ. ಹಾಗೂ ಸಂಗೀತವನ್ನು ವಿದುಷಿ ಉಮಾ ನಾಗರಾಜ್ ಅವರಲ್ಲಿ ಕಲಿತಿರುತ್ತಾರೆ.
ಕಳೆದ 5 ವರ್ಷಗಳಿಂದ 100ಕ್ಕು ಹೆಚ್ಚು ವಿದ್ಯಾರ್ಥಿಗಳಿಂದ ಚಿಕ್ಕಮಗಳೂರಿನಲ್ಲಿ ನೃತ್ಯ ತರಗತಿ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತ ಬಂದಿರುತ್ತಾರೆ. ಸುಮಾರು 5೦ ವಿದ್ಯಾರ್ಥಿಗಳು ಈ ವರೆಗೆ ಹೊರಬಂದಿರುತ್ತಾರೆ, ಈಗ ಚಿಕ್ಕಮಗಳೂರು ತರಗತಿಯನ್ನು online ಮೂಲಕ ಮುಂದುವರೆಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ 9110650132
9535454938







