Ad Widget .

ಎರಡು ವರ್ಷ ಹನಿಮೂನ್ ಮಾಡಿಕೊಂಡ ದಂಪತಿ| ಹೀಗೂ ಉಂಟೇ…?

ಮದುವೆಯಾದ ಮೇಲೆ ಎಲ್ಲ ದಂಪತಿ ಹನಿಮೂನ್ ಗೆ ಹೋಗ್ತಾರೆ. ಮದುವೆಯಾದ ಕೆಲ ದಿನಗಳ ನಂತರ ಒಂದು ವಾರ ಹನಿಮೂನ್ ಗೆ ಹೋಗುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಂದು ದಂಪತಿ ಒಂದು ವಾರವಲ್ಲ, ಒಂದು ತಿಂಗಳಲ್ಲ ಬರೋಬ್ಬರಿ 2 ವರ್ಷ ಹನಿಮೂನ್ ಗೆ ಹೋಗಿದ್ದರು. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬರೀ ಪತಿ-ಪತ್ನಿಯಲ್ಲ ಮಗ ಹಾಗೂ ಸಾಕು ನಾಯಿ ಕೂಡ ಹನಿಮೂನ್ ಗೆ ಬಂದಿದ್ದರು ಎಂಬುದು ಇನ್ನೊಂದು ವಿಶೇಷ. 2 ವರ್ಷ ಹನಿಮೂನ್ ಆಚರಿಸಿದ ದಂಪತಿ ಹೆಸರು ರಾಸ್ ಮತ್ತು ಸಾರಾ. ಇವರು 2019 ರಲ್ಲಿ ಮದುವೆಯಾಗಿದ್ದಾರೆ. ಹನಿಮೂನ್ ಹೆಸರಿನಲ್ಲಿ ಪ್ರಪಂಚ ಸುತ್ತಲು ಪ್ಲಾನ್ ಮಾಡಿದ್ದರು.

Ad Widget . Ad Widget . Ad Widget .

ಮೊದಲು ಕೆಲಸ ಬಿಟ್ಟ ದಂಪತಿ ನಂತ್ರ ಮನೆಯನ್ನು ಬಾಡಿಗೆಗೆ ನೀಡಿದ್ರು. ದಂಪತಿ ತಮ್ಮ 3 ವರ್ಷದ ಮಗ ಮತ್ತು ಅವರ ನೆಚ್ಚಿನ ನಾಯಿಯನ್ನು ಹನಿಮೂನ್ ಗೆ ಕರೆದೊಯ್ದಿದ್ದರು. ಮೂರು ವರ್ಷದ ಮಗ ಈಗ ಐದು ವರ್ಷದವನಾಗಿದ್ದಾನೆ.

ಇವರು ಫ್ರಾನ್ಸ್ ನಿಂದ ಸ್ವಿಟ್ಜರ್‌ಲ್ಯಾಂಡ್, ಇಟಲಿ, ಸ್ಪೇನ್, ಟರ್ಕಿ ಮತ್ತು ಬಲ್ಗೇರಿಯಾ ಸುತ್ತಿ ಬಂದಿದ್ದಾರೆ. ಪ್ರತಿ ದಿನ ಹೊಸ ಅನುಭವ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ. ಜೂನ್ ನಲ್ಲಿ ಬ್ರಿಟನ್ ಗೆ ವಾಪಸ್ ಆಗಿರುವ ಕುಟುಂಬ ಹಳೆಯ ದಿನಗಳನ್ನು ಮೆಲುಕು ಹಾಕ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ನಾವು ಸಮುದ್ರ ತೀರದಲ್ಲಿ ಕಳೆದೆವು ಎನ್ನುವ ಸಾರಾ, ಅದೊಂದು ಸುಂದರ ಅನುಭವ ಎಂದಿದ್ದಾರೆ.

Leave a Comment

Your email address will not be published. Required fields are marked *