ನಿರೂಪಕಿ ಅನುಶ್ರೀ ಮದುವೆ ಫಿಕ್ಸ್| ಮುಂದಿನ ತಿಂಗಳೇ ಕಲ್ಯಾಣೋತ್ಸವ| ಹುಡುಗ ಯಾರು ಗೊತ್ತಾ?

ಸಮಗ್ರ ನ್ಯೂಸ್: ಖ್ಯಾತ ನಿರೂಪಕಿ ನಟಿ ಅನುಶ್ರೀ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕೆಲ ವರ್ಷಗಳಿಂದ ಅನುಶ್ರೀ ಮದುವೆ ಯಾವಾಗ ಅನ್ನೋರಿಗೆ ಸಿಹಿಸುದ್ದಿ ಸಿಕ್ಕಿದೆ. ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಆಗಸ್ಟ್ 28ಕ್ಕೆ ಮದುವೆ ಆಗಲಿದ್ದಾರೆ. ಕೊಡಗು ಮೂಲದ ಕಾರ್ಪೋರೇಟ್ ಉದ್ಯಮಿ ಜೊತೆ ಅನುಶ್ರೀ ಮದುವೆ ನಡೆಯಲಿದೆ.

. Ad Widget . Ad Widget . Ad Widget

ಆಗಸ್ಟ್ 28ಕ್ಕೆ ಅನುಶ್ರೀ ಮದುವೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ. ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆ ಅವರು ವಿವಾಹ ಆಗುತ್ತಿದ್ದಾರೆ. ಹಾಗಾದರೆ ಇದು ಲವ್ ಮ್ಯಾರೇಜಾ? ಅಲ್ಲಾ ಪಕ್ಕಾ ಅರೇಂಜ್ ಮ್ಯಾರೇಜ್ ಎನ್ನುತ್ತಿವೆ ಮೂಲಗಳು. ಕುಟುಂಬದವರು ನೋಡಿದ ಹುಡುಗನ ಜೊತೆ ಅನುಶ್ರೀ ವಿವಾಹ ಆಗುತ್ತಿದ್ದಾರಂತೆ. ಬೆಂಗಳೂರಿನಲ್ಲೇ ಈ ವಿವಾಹ ಗ್ರಾಂಡ್‌ಆಗಿ ನೆರವೇರಲಿದೆ ಎನ್ನಲಾಗುತ್ತಿದೆ.

. Ad Widget .

ಕೆಲ ಫೇಕ್‌ ಸೋಶಿಯಲ್‌ ಮೀಡಿಯಾ ಪೇಜ್‌ಗಳು ಅನುಶ್ರೀ ಆ ನಟನ ಜೊತೆ ಮದುವೆ ಆಗಲಿದ್ದಾರೆ, ಈ ನಟನ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿಸುತ್ತಿತ್ತು. ಆಗೆಲ್ಲ ಅನುಶ್ರೀ ಅವರೇ “ಇದೆಲ್ಲ ಸುಳ್ಳು” ಎಂದು ಹೇಳುತ್ತಿದ್ದರು. ಸಾಕಷ್ಟು ಜನರ ಜೊತೆ ಅನುಶ್ರೀ ಹೆಸರು ಥಳುಕು ಹಾಕಿಕೊಂಡಿತ್ತು. ಆರಂಭದಲ್ಲಿ ಸ್ಪಷ್ಟನೆ ನೀಡುತ್ತಿದ್ದ ಅನುಶ್ರೀ, ಆಮೇಲೆ ಇದೇ ವಿಷಯವನ್ನು ಹಾಸ್ಯವಾಗಿ ತಗೊಂಡಿದ್ದೂ ಇದೆ.

ಈ ಬಾರಿ ನಾನು ಮದುವೆ ಆಗ್ತೀನಿ, ಈ ವರ್ಷವೇ ಮದುವೆ ನಡೆಯುತ್ತದೆ” ಎಂದು ಅನುಶ್ರೀ ಅವರು ʼಸರಿಗಮಪʼ ಸೇರಿದಂತೆ ʼಮಹಾನಟಿʼ ಶೋನಲ್ಲಿ ಸಾಕಷ್ಟು ಬಾರಿ ಹೇಳಿದ್ದರು. ಅದೀಗ ನಿಜವಾಗ್ತಿದೆ. ಈ ಬಗ್ಗೆ ಅನುಶ್ರೀ ಅವರು ಅಧಿಕೃತ ಹೇಳಿಕೆ ನೀಡಬೇಕಿದೆ. ಅಂದಹಾಗೆ ಅನುಶ್ರೀ ಅವರ ತಂದೆ ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೋಗಿದ್ದರು. ಆ ಬಳಿಕ ಅವರ ತಾಯಿಯೇ ಅನುಶ್ರೀಯನ್ನು, ಅವರ ತಮ್ಮನನ್ನು ಸಾಕಿದ್ದರು. ಅನುಶ್ರೀ ಅವರು ಮಂಗಳೂರಿನವರಾಗಿದ್ದು, ಆ ಬಳಿಕ ದುಡಿಯಲು ಆರಂಭಿಸಿದರು. ಈಗ ಇಡೀ ಕುಟುಂಬದ ಜವಾಬ್ದಾರಿಯನ್ನು ಅವರೇ ಹೊತ್ತಿಕೊಂಡಿದ್ದಾರೆ.

Leave a Comment

Your email address will not be published. Required fields are marked *