ರೇಣುಕಾಸ್ವಾಮಿ ಕೊಲೆ ಪ್ರಕರಣ| ವಿಚಾರಣೆ ಮುಗಿಸಿ ಮರಳುವ ವೇಳೆ ದರ್ಶನ್ ನ ಹೊಸ ನಂಬರ್ ಕೇಳಿ ಪಡಕೊಂಡ ಪವಿತ್ರಾ

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆದ ವಿಚಾರಣೆಗೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 16 ಜನ ಆರೋಪಿಗಳು ಕೋರ್ಟ್‌ಗೆ ಹಾಜರಾದರು. ಈ ವೇಳೆ ಕೋರ್ಟ್ ವಿಚಾರಣೆ ಮುಗಿಯುವವರೆಗೆ ಗಪ್ ಚುಪ್ ಆಗಿದ್ದ ದರ್ಶನ್ ಮತ್ತು ಪವಿತ್ರಾ ಗೌಡ ಅವರು, ಕೊನೆಗೆ ವಿಚಾರಣೆ ಮುಗಿಸಿ ಹೊರಗೆ ಹೋಗುವಾಗ ನಟಿ ಪವಿತ್ರಾ ಕೈ ಹಿಡಿದು ಕೇಳಿದ್ದಕ್ಕೆ ತನ್ನ ಹೊಸ ನಂಬರ್ ಕೊಟ್ಟಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget .

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ 17 ಜನರನ್ನು ಪೊಲೀಸರು ಬಂಧಿಸಿದ್ದರು. ಈಗಾಗಲೇ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಜಾಮೀನು ನೀಡುವಾಗ ಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿತ್ತು. ಅವುಗಳ ಪೈಕಿ ಕೋರ್ಟ್​ಗೆ ಹಾಜರಿ ಹಾಕಬೇಕು ಎಂಬುದು ಕೂಡ ಪ್ರಮುಖ ಷರತ್ತಾಗಿತ್ತು. ಅದರಂತೆ ಪವನ್ ಹೊರತುಪಡಿಸಿ ಮತ್ತೆಲ್ಲಾ ಆರೋಪಿಗಳು ಕೋರ್ಟ್​ಗೆ ಹಾಜರಿ ಹಾಕಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕೋರ್ಟ್​ನಲ್ಲಿ ದರ್ಶನ್ ಹಾಗೂ ಪವಿತ್ರಾ ಅಕ್ಕ-ಪಕ್ಕ ಇದ್ದರು. ಕೋರ್ಟ್​ನಿಂದ ಹೊರಹೋಗುವಾಗ ಜನ ಜಂಗುಳಿ ಇತ್ತು. ಈ ಕಾರಣಕ್ಕೆ ದರ್ಶನ್ ಹಾಗೂ ಪವಿತ್ರಾ ಕೈ ಕೈ ಹಿಡಿದು ಬಂದ ಬಗ್ಗೆ ವರದಿ ಆಗಿದೆ. ಇನ್ನು, ಪವಿತ್ರಾ ಹಠ ಮಾಡಿದ್ದಕ್ಕೆ ದರ್ಶನ್ ಅವರು ತಮ್ಮ ಮೊಬೈಲ್​ ಸಂಖ್ಯೆಯನ್ನೂ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಜುಲೈ 10ಕ್ಕೆ ವಿಚಾರಣೆ ಮುಂದೂಡಲಾಗಿದೆ. ಅಂದು ಎಲ್ಲ ಆರೋಪಿಗಳು ಹಾಜರಿ ಹಾಕಲು ಕೋರ್ಟ್​ ಸೂಚಿಸಿದೆ.

Leave a Comment

Your email address will not be published. Required fields are marked *