ಕೊಂಚ ಕುಸಿತ ಕಂಡ ಬಂಗಾರದ ದರ| ಇಂದಿನ ಬೆಲೆ ಎಷ್ಟು?

ಸಮಗ್ರ ನ್ಯೂಸ್: ಸತತ ಏರಿಕೆ ಆಗುತ್ತಾ ಹೋಗಿದ್ದ ಚಿನ್ನದ ಬೆಲೆ ಕೊಂಚ ಇಳಿಕೆ‌ ಕಂಡಿದೆ. ಇಂದು ಗ್ರಾಮ್​​ಗೆ ಬರೋಬ್ಬರಿ 160 ರೂಗಳಷ್ಟು ಇಳಿಕೆ ಕಂಡಿದೆ. ಅಂದರೆ ನೂರು ಗ್ರಾಮ್ ಚಿನ್ನದ ಬೆಲೆ 16,000 ರೂಗಳಷ್ಟು ತಗ್ಗಿದೆ.

Ad Widget ... ..

8,560 ರೂ ಇದ್ದ ಆಭರಣ ಚಿನ್ನದ ಬೆಲೆ 8,400 ರೂಗೆ ಇಳಿಕೆ ಆಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆಯೂ ಚಿನ್ನದ ಬೆಲೆ ತಗ್ಗಿದೆ. ಬೆಳ್ಳಿ ಬೆಲೆಯಂತೂ ಇನ್ನೂ ವೇಗವಾಗಿ ಕುಸಿತ ಕಂಡಿದೆ. ಒಮ್ಮೆಗೇ ಗ್ರಾಮ್​​ಗೆ 4 ರೂನಷ್ಟು ಇಳಿಕೆ ಆಗಿದೆ. ನಿನ್ನೆ ಸಂಜೆಯೂ 2 ರೂ ಇಳಿಕೆಯಾಗಿತ್ತು ಬೆಳ್ಳಿ ಬೆಲೆ. ಒಂದೇ ದಿನದ ಅಂತರದಲ್ಲಿ 6 ರೂಗಳಷ್ಟು ಇಳಿಕೆಯಾಗಿದೆ.

Ad Widget

ಮಾರ್ಚ್ 31ರ ಬಳಿಕ ಅತ್ಯಂತ ಕಡಿಮೆ ಬೆಲೆಯಲ್ಲಿ ಬೆಳ್ಳಿ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 84,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 91,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 84,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,900 ರುಪಾಯಿಯಲ್ಲಿ ಇದೆ.

Leave a Comment

Your email address will not be published. Required fields are marked *