ಲಕ್ಷದ ಸನಿಹಕ್ಕೆ ಬಂಗಾರದ ದರ| ಇಂದಿನ ಧಾರಣೆ ಎಷ್ಟಿದೆ ಗೊತ್ತಾ?

ಸಮಗ್ರ ನ್ಯೂಸ್: ಬಂಗಾರದ ದರ ಏ. 1ರಂದು ಹೊಸ ದಾಖಲೆಯ ಎತ್ತರಕ್ಕೇರಿದೆ. ಪ್ರತಿ 10 ಗ್ರಾಮ್‌ ಚಿನ್ನದ ದರ ಬರೋಬ್ಬರಿ 91,000 ರೂ.ಗೆ ಜಿಗಿದಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ನ ಪ್ರತಿ ಗ್ರಾಮ್‌ ಬಂಗಾರದ ದರ 9,284 ರುಪಾಯಿಗೆ ಏರಿಕೆಯಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget .

ಜಾಗತಿಕ ಆರ್ಥಿಕ ಪರಿಸ್ಥಿತಿಯ ಅನಿಶ್ಚಿತತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಘೋಷಿಸಿರುವ ಟಾರಿಫ್‌ ವಾರ್ ಜತೆಗೆ ಹಣದುಬ್ಬರ ಕೂಡ ಪ್ರಭಾವ ಬೀರಿದೆ. ನಾನಾ ದೇಶಗಳ ಸೆಂಟ್ರಲ್‌ ಬ್ಯಾಂಕ್‌ಗಳು ಕೂಡ ಬಂಗಾರದ ಖರೀದಿಯನ್ನು ಹೆಚ್ಚಿಸಿವೆ. ವಿಶ್ಲೇಷಕರ ಪ್ರಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ ಪ್ರತಿ ಔನ್ಸಿಗೆ 3,500 ಡಾಲರ್‌ ಮಟ್ಟಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಂಗಳವಾರ ದಿಲ್ಲಿಯಲ್ಲಿ ಪ್ರತಿ 8 ಗ್ರಾಂ 24 ಕ್ಯಾರೆಟ್ ಚಿನ್ನದ ದರ 62,128 ರೂ. ಇದ್ದರೆ, ಪ್ರತಿ 8 ಗ್ರಾಂ ಆಭರಣ ಚಿನ್ನ(22 ಕ್ಯಾರೆಟ್)ದ ದರ 58,224 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ ಪ್ರತಿ 8 ಗ್ರಾಂ 24 ಕ್ಯಾರೆಟ್ ಚಿನ್ನದ ದರ 60,552 ರೂ.ಗೆ ತಲುಪಿದ್ದರೆ, 22 ಕ್ಯಾರೆಟ್ ನ ಆಭರಣ ಚಿನ್ನದ ಬೆಲೆ 56,832 ರೂ.ಗೆ ಏರಿಕೆ ಕಂಡಿದೆ.

Leave a Comment

Your email address will not be published. Required fields are marked *