ಭಾರೀ ಕುಸಿತ ಕಂಡ ಮೋದಿ ಜನಪ್ರಿಯತೆ – ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಬಹಿರಂಗ

Ad Widget ... ..

ನವದೆಹಲಿ: ಆಗಸ್ಟ್ 16 ಬಿಡುಗಡೆಯಾದ ಇಂಡಿಯಾ ಟುಡೇ “ಮೂಡ್ ಆಫ್ ದಿ ನೇಷನ್” ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ರೇಟಿಂಗ್ ಒಂದು ವರ್ಷದಲ್ಲಿ 66% ರಿಂದ 24% ಕ್ಕೆ ಇಳಿದಿದೆ.

Ad Widget

ದೇಶದಲ್ಲಿ ಕೋವಿಡ್ ಬಿಕ್ಕಟ್ಟನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೇ ಇರುವುದು ಪ್ರಧಾನಿ ಮೋದಿಯವರ ಜನಪ್ರಿಯತೆ ಕುಸಿತಕ್ಕೆ ಪ್ರಾಥಮಿಕ ಕಾರಣ ಎಂದು ಹೇಳಲಾಗಿದೆ.

“ಕೊರೊನಾ ಮೊದಲ ಅಲೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕಾಗಿ ಮೋದಿಯವರನ್ನು ಜನವರಿ 2021 ರಲ್ಲಿ ಪ್ರಶಂಸಿಸಲಾಗಿತ್ತು. ಇದಕ್ಕಾಗಿ ಶೇಕಡಾ 73% ರಷ್ಟು ಜನಪ್ರಿಯತೆ ಗಳಿಸಿದ್ದರು. ಆದರೆ, ಎರಡನೇ ಅಲೆಯನ್ನು ಸರಿಯಾಗಿ ನಿರ್ವಹಿಸದ ಕಾರಣ ಅವರ ಜನಪ್ರಿಯತೆಯ ಅಂಕಿ ಅಂಶವು 49% ಕ್ಕೆ ಇಳಿದಿದೆ” ಎಂದು ಇಂಡಿಯಾ ಟುಡೇ ವರದಿ ಹೇಳಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ 27% ರಷ್ಟು ಜನರು ಚುನಾವಣಾ ರ್‍ಯಾಲಿಗಳು ಸೇರಿದಂತೆ ದೊಡ್ಡ ಸಭೆ-ಸಮಾರಂಭಗಳು ಭಾರತದಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಕಾರಣವೆಂದು ಹೇಳಿದ್ದಾರೆ. ಸುಮಾರು 26% ಜನರು ಕೋವಿಡ್ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿದ್ದರಿಂದ ಕೊರೊನಾ ಅಲೆ ಹೆಚ್ಚಾಯಿತು ಎಂದು ಹೇಳಿದ್ದಾರೆ.

ದೇಶದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿರುವವರರ ಡೇಟಾ ಮತ್ತು ಕೊರೊನಾ ಸಾವುಗಳ ಡೇಟಾ ಬಗ್ಗೆ ಸರ್ಕಾರಿ ದತ್ತಾಂಶದಲ್ಲಿ ತಿಳಿಸಿರುವುದಕ್ಕಿಂತ ಹೆಚ್ಚಿನ ಕೇಸ್‌ಗಳು ಮತ್ತು ಸಾವುಗಳಾಗಿವೆ ಎಂದು 71% ರಷ್ಟು ಜನರು ಹೇಳಿದ್ದಾರೆ, ಇನ್ನು ಶೇಕಡಾ 44% ಜನರು ಈ ಆರೋಗ್ಯ ಬಿಕ್ಕಟ್ಟು ಉಂಟಾಗಲು ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕಾರಣವೆಂದು ಹೇಳಿದ್ದಾರೆ.

ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ, 29% ರಷ್ಟು ಜನರು ಬೆಲೆ ಏರಿಕೆ ಮತ್ತು ಹಣದುಬ್ಬರವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರದ ದೊಡ್ಡ ವೈಫಲ್ಯವೆಂದು ತಿಳಿಸಿದ್ದಾರೆ. ಸುಮಾರು 23% ರಷ್ಟು ಜನರು ನಿರುದ್ಯೋಗ ದರವು ಮೋದಿ ಸರ್ಕಾರದ ಎರಡನೇ ಅತಿದೊಡ್ಡ ವೈಫಲ್ಯ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮೋದಿ ನಂತರ ಪ್ರಧಾನಿ ಸ್ಥಾನಕ್ಕೆ ಶೇಕಡಾ 11% ರಷ್ಟು ಜನರು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 10% ರೇಟಿಂಗ್ ಹೊಂದಿದ್ದು, ಪ್ರಧಾನಿ ಸ್ಥಾನಕ್ಕೆ ಮೂರನೇ ಅತ್ಯಂತ ಜನಪ್ರಿಯ ಮುಖವಾಗಿ ಹೊರಹೊಮ್ಮಿದ್ದಾರೆ.

Leave a Comment

Your email address will not be published. Required fields are marked *