ಬೆಂಗಳೂರಿನಲ್ಲಿ ಭೀಕರ ಅಪಘಾತ| ಬೆಳ್ತಂಗಡಿಯ ಯುವಕ‌ ದುರ್ಮರಣ

ಸಮಗ್ರ ನ್ಯೂಸ್: ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿ ನ. 8ರ ಬೆಳಗಿನ ಜಾವ ನಡೆದ ಬೈಕ್ ಮತ್ತು ಲಾರಿ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಸನಾತನಿ ಮನೆ ನಿವಾಸಿ ವಸಂತ ಗೌಡರ ಪುತ್ರ, ಯುವಕ ತುಷಾರ್ ಗೌಡ (22) ಅವರು ದುರ್ಮರಣ ಹೊಂದಿದ್ದಾರೆ.

Ad Widget ... ..

ತುಷಾರ್ ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಎಂ.ಬಿ.ಎ. ವಿದ್ಯಾರ್ಥಿಯಾಗಿದ್ದರು. ಆತನ ತಂದೆ ವಸಂತ ಗೌಡ, ತಾಯಿ ಅನುಗ್ರಹ ಶಾಲೆಯ ಶಿಕ್ಷಕಿ ವಿನಯಲತಾ, ತಂಗಿ ತುಷಿತಾರನ್ನು ಅಗಲಿದ್ದಾರೆ.

Ad Widget

ಈ ಪ್ರಕರಣದ ಕುರಿತು ಬೆಂಗಳೂರಿನ ಯಲಹಂಕ ನ್ಯೂ ಟೌನ್ ಟ್ರಾಫಿಕ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಹ ಸವಾರ ಬೆಳಾಲಿನ ಸರುಳಿ ನಿವಾಸಿ ದಾಮೋದರ ಗೌಡರ ಮಗ ಸೃಜನ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Comment

Your email address will not be published. Required fields are marked *