ಭಜನಾ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಕಲಾವಿದ ವೇದಿಕೆಯಲ್ಲೇ `ಹೃದಯಾಘಾತ’ದಿಂದ ಸಾವು.!

ಸಮಗ್ರ ನ್ಯೂಸ್:ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ಅ 26 ರಂದು ರಾತ್ರಿ ಏರ್ಪಡಿಸಿದ್ದ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಲಾವಿದರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Ad Widget ... ..

ಹೌದು, ಮೂರು ದಿನಗಳ ಕಾಲ ನಡೆದ ವೀರ ರಾಣಿ ಕಿತ್ತೂರು ಚೆನ್ನಮ್ಮನ ವಿಜಯೋತ್ಸವದ ನಿಮಿತ್ತ ಚೆನ್ನಮ್ಮನ ಕಿತ್ತೂರು ಕೋಟೆ ಆವರಣದಲ್ಲಿನ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಜನಾ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಿತ್ತೂರು ತಾಲೂಕಿನ ಬಸಾಪುರ ಗ್ರಾಮದ ಈರಪ್ಪ ಫಕೀರಪ್ಪ ಬಬಲಿ(48) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Ad Widget

ವೇದಿಕೆಯಲ್ಲಿ ತಂಡದೊಂದಿಗೆ ಭಾಗಿಯಾಗಿದ್ದ ಈರಪ್ಪ ಅವರು ಸ್ಪರ್ಧೆ ಮುಗಿಸಿ ವೇದಿಕೆಯಿಂದ ನಿರ್ಗಮಿಸುವಾಗ ತೀವ್ರ ಹೃದಯಘಾತದಿಂದ ಕುಸಿತುಬಿದ್ದಿದ್ದಾರೆ.ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆ ತಲುಪುವುಷ್ಟರಲ್ಲಿ ಮೃತಪಟ್ಟಿದ್ಧಾರೆ.

Leave a Comment

Your email address will not be published. Required fields are marked *