ಹರಿಯಾಣ: ಕಾಂಗ್ರೆಸ್ ಹಿಂದಿಕ್ಕಿ ಮುನ್ನಡೆ‌ ಕಾಯ್ದುಕೊಂಡ‌ ಬಿಜೆಪಿ| ರೋಚಕ ಫೈಂಟಿಂಗ್ ನಲ್ಲಿ ಕಾಂಗ್ರೆಸ್/ ಬಿಜೆಪಿ

ಸಮಗ್ರ ನ್ಯೂಸ್: ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಫೈಟ್ ಶುರುವಾಗಿದೆ.

Ad Widget ... ..

ಆರಂಭದಲ್ಲಿ ಕಾಂಗ್ರೆಸ್‌ (Congress) ಮುನ್ನಡೆಯಲ್ಲಿದ್ದರೆ ಈಗ ಬಿಜೆಪಿ (BJP) ಅಲ್ಪ ಮುನ್ನಡೆ ಸಾಧಿಸಿದೆ.ಬೆಳಗ್ಗೆ 10 ಗಂಟೆಯ ಟ್ರೆಂಡ್‌ ವೇಳೆ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ 46 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಕಾಂಗ್ರೆಸ್‌ 41 ಕ್ಷೇತ್ರ ಹಾಗೂ ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

Ad Widget

ಹರಿಯಾಣದಲ್ಲಿ 90 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಬಹುಮತಕ್ಕೆ 46 ಸ್ಥಾನಗಳ ಅಗತ್ಯವಿದೆ. ಬಿಜೆಪಿ 2014 ರಿಂದ ಅಧಿಕಾರದಲ್ಲಿತ್ತು. 2014ರ ಚುನಾವಣೆಯಲ್ಲಿ ಬಿಜೆಪಿ 47 ರಲ್ಲಿ ಜಯಗಳಿಸಿದರೆ ಕಾಂಗ್ರೆಸ್‌ 15 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

Leave a Comment

Your email address will not be published. Required fields are marked *