ನವರಾತ್ರಿ ಮೊದಲ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಹರ್ಷಿಕಾ ಪೂಣಚ್ಚ..

ಸಮಗ್ರ ನ್ಯೂಸ್: ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮನೆಗೆ ಸೆಪ್ಟೆಂಬರ್ 3ರಂದು ಮಗುವಿನ ಆಗಮನ ಆಗಿದೆ. ಈ ಖುಷಿ ಸುದ್ದಿಯನ್ನು ದಂಪತಿ ರಿವೀಲ್ ಮಾಡಿದ್ದಾರೆ. ಹರ್ಷಿಕಾಗೆ ಹೆಣ್ಣುಮಗು ಜನಿಸಿದ್ದು, ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಹೆಣ್ಣು ಮಗುವಿನ ಆಗಮನದಿಂದ ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಸಂತಸಗೊಂಡಿದ್ದಾರೆ.

Ad Widget ... ..

ಇನ್ನೂ ಮುಖ್ಯವಾಗಿ ನವರಾತ್ರಿಯ ಮೊದಲ ದಿನವೇ ಹೆಣ್ಣು ಮಗು ಜನಿಸಿದೆ ಅನ್ನೋದು ಕುಟುಂಬದ ಖುಷಿ ಹೆಚ್ಚಿಸಿದೆ. ಹರ್ಷಿಕಾ ಪೂಣಚ್ಚ & ಭುವನ್ ಅವರದ್ದು ಪ್ರೇಮ ವಿವಾಹವಾಗಿದ್ದು, ಕಳೆದ ವರ್ಷ ಆಗಸ್ಟ್ 24ರಂದು ವಿವಾಹ ಆಗಿದ್ದರು. ಸಾಕಷ್ಟು ಬೇಬಿ ಬಂಪ್ ಫೋಟೊಶೂಟ್‌ ಮಾಡಿಸಿದ್ದರು. ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Ad Widget

ಕೆಲ ದಿನಗಳ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಹರ್ಷಿಕಾ ಪೂಣಚ್ಚ ಬೇಬಿ ಶವರ್ ಪಾರ್ಟಿ ನಡೆದಿತ್ತು. ಗಣಿ-ಶಿಲ್ಪಾ ಕುಟುಂಬಕ್ಕೆ ಹರ್ಷಿಕಾ ಬಹಳ ಆಪ್ತರು. ಆಗಾಗ್ಗೆ ಅವರ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚಿತ್ರರಂಗದ ಸ್ನೇಹಿತರ ಜೊತೆ ಹರ್ಷಿಕಾ ಸಹ ಭಾಗಿ ಆಗುತ್ತಿರುತ್ತಾರೆ. ಹಾಗಾಗಿ ಶಿಲ್ಪಾ ಗಣೇಶ್ ನೇತೃತ್ವದಲ್ಲಿ ಬೇಬಿ ಶವರ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

Leave a Comment

Your email address will not be published. Required fields are marked *