ಉಪ್ಪಿನಂಗಡಿ: ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ; ಸವಾರ ಗಂಭೀರ

ಸಮಗ್ರ ನ್ಯೂಸ್: ಸರ್ಕಾರಿ ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ್ದು, ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಉಪ್ಪಿನಂಗಡಿ – ಪುತ್ತೂರು ಹೆದ್ದಾರಿಯ ಬೇರಿಕೆ ಸಮೀಪ ಸಂಭವಿಸಿದೆ.

Ad Widget ... ..

ಉಪ್ಪಿನಂಗಡಿಯಿಂದ ಪುತ್ತೂರಿಗೆ ಹೋಗುತ್ತಿದ್ದ ಸರ್ಕಾರಿ ಬಸ್ ಹಾಗೂ ಅದೇ ಕಡೆ ಸಾಗುತ್ತಿದ್ದ ಸ್ಕೂಟಿ ನಡುವೆ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ನಿಯಂತ್ರಣ ತಪ್ಪಿದ ಸ್ಕೂಟಿ ಸವಾರ ಬಸ್ ನ ಚಕ್ರದಡಿಗೆ ಬಿದ್ದಿದ್ದು, ಆತನ ಕೈನ ಮೇಲೆ ಬಸ್ ಚಕ್ರ ಹರಿದು, ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Ad Widget

Leave a Comment

Your email address will not be published. Required fields are marked *