ಇಳಿಕೆ ಕಂಡ ಚಿನ್ನ, ಬೆಳ್ಳಿ ಧಾರಣೆ| ಇಂದಿನ ಮಾರುಕಟ್ಟೆ ದರ ಹೀಗಿದೆ…

ಸಮಗ್ರ ನ್ಯೂಸ್: ಸೋಮವಾರ (ಸೆ.30) ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಳಿಕೆ ಕಂಡಿವೆ. 22 ಕ್ಯಾರಟ್​ನ ಆಭರಣ ಚಿನ್ನದ ಬೆಲೆ ಗ್ರಾಮ್​ಗೆ 7,095 ರೂ ಇದ್ದದ್ದು 7,080 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 7,724 ರೂ ಇದೆ. ಬೆಳ್ಳಿ ಬೆಲೆಯಲ್ಲಿ ಅಲ್ಪ ಇಳಿಕೆ ಆಗಿದೆ.

Ad Widget ... ..

ಕಳೆದ ವಾರ ಭಾರೀ ಏರಿಕೆ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆಗಳು ಶನಿವಾರದಿಂದ ಇಳಿಕೆ ಕಾಣುತ್ತಿವೆ. ಇಂದು ಸೋಮವಾರವೂ ಈ ಟ್ರೆಂಡ್ ಮುಂದುವರಿದಿದೆ. ಚಿನ್ನದ ಬೆಲೆ ಗ್ರಾಮ್​ಗೆ 15 ರೂನಷ್ಟು ಅಗ್ಗವಾಗಿದೆ. ಬೆಳ್ಳಿ ಬೆಲೆ 10 ಪೈಸೆಯಷ್ಟು ಕಡಿಮೆ ಆಗಿದೆ. ವಿದೇಶಗಳಲ್ಲಿ ಬಹುತೇಕ ಯಥಾಸ್ಥಿತಿ ಇದೆ. ಕೆಲವೆಡೆ ಮಾತ್ರ ಏರಿಳಿತಗಳಾಗಿವೆ.

Ad Widget

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 70,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,240 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,490 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 70,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,810 ರುಪಾಯಿಯಲ್ಲಿ ಇದೆ.

Leave a Comment

Your email address will not be published. Required fields are marked *